Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
'ಚಿಲ್ಲಿ ಚಿಕನ್', ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
ನಮ್ಮ ಬಾಯಿ ರುಚಿಯನ್ನು ತಣಿಸಲು ನಾವು ಹಲವಾರು ಖಾದ್ಯಗಳನ್ನು ಸಿದ್ಧಪಡಿಸುತ್ತೇವೆ. ಅದು ಸಸ್ಯಾಹಾರವೇ ಇರಲಿ ಮಾಂಸಾಹಾರವೇ ಇರಲಿ ತಿನ್ನಲು ರುಚಿಕರವಾಗಿದ್ದರೆ ಮಾತ್ರವೇ ಅದು ಪ್ರತಿಯೊಬ್ಬರ ಮನವನ್ನು ಗೆಲ್ಲುತ್ತದೆ. ನೀವು ಮಾಂಸಾಹಾರವನ್ನು ತರಕಾರಿಗಳನ್ನು ಹಾಕಿ ಕೂಡ ತಯಾರಿಸಿ ಅದಕ್ಕೆ ವಿಭಿನ್ನ ರುಚಿಯನ್ನು ನೀಡಬಹುದು. ಹೌದು ಇಂದಿನ ಲೇಖನದಲ್ಲಿ ಬೋನ್‌ಲೆಸ್ ಚಿಕನ್ ಬಳಸಿಕೊಂಡು ಅದಕ್ಕೆ ತರಕಾರಿಗಳನ್ನು ಬಳಸಿ ವಿಭಿನ್ನವಾದ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
ಇಂಡೋ-ಚೈನೀಸ್ ಡಿಶ್ ಆಗಿರುವ ಇದು ತಾಜಾ ಮತ್ತು ಸವಿಯಲು ಮಜವಾಗಿದೆ. ಬೋನ್‌ಲೆಸ್ ಚಿಕನ್ ಇಲ್ಲದಿದ್ದ ಪಕ್ಷದಲ್ಲಿ ನೀವು ಬೋನ್ ಇರುವ ಚಿಕನ್ ಮೂಲಕ ಕೂಡ ಈ ರೆಸಿಪಿಯನ್ನು ಮಾಡಬಹುದಾಗಿದೆ. ಇದಕ್ಕೆ ಹಾಕುವ ಗರಂ ಮಸಾಲೆ ಮತ್ತು ತರಕಾರಿಗಳಿಂದ ಇವು ವಿಭಿನ್ನಾಗಿದೆ. ಹಾಗಿದ್ದರೆ ಬನ್ನಿ ಇದನ್ನು ತಯಾರಿಸುವ ವಿಧಾನವನ್ನು ಇಲ್ಲಿ ಕಲಿತುಕೊಳ್ಳೋಣ.

Recipe By: ಶೆಫ್ ಅನುರಾಗ್ ಬಸು
Recipe Type: ಸ್ನ್ಯಾಕ್ಸ್
Serves: 2
-
ಮೂಳೆರಹಿತ ಕೋಳಿಮಾಂಸ : 350 ಗ್ರಾಂ (ಚಿಕ್ಕ ಚೌಕಾಕಾರದಲ್ಲಿ ಕತ್ತರಿಸಿದ್ದು)
ಮೊಟ್ಟೆ: 1 (ಗೊಟಾಯಿಸಿದ್ದು)
ಶುಂಠಿ ಪೇಸ್ಟ್ : ½ ಚಿಕ್ಕಚಮಚ
ಬೆಳ್ಳುಳ್ಳಿ ಪೇಸ್ಟ್ : ½ ಚಿಕ್ಕ ಚಮಚ
ಎಣ್ಣೆ : ಹುರಿಯಲು ಅಗತ್ಯವಿರುವಷ್ಟು
ಉಪ್ಪು ರುಚಿಗನುಸಾರ
ಈರುಳ್ಳಿ : ಎರಡು ಕಪ್ (ದಪ್ಪನಾಗಿ ಹೆಚ್ಚಿದ್ದು)
ಸೋಯಾ ಸಾಸ್ : ಒಂದು ದೊಡ್ಡ ಚಮಚ
ಹಸಿಮೆಣಸು : ಎರಡು : ಮೊದಲು ನಡುವೆ ಸೀಳಿ ಬೀಜಗಳನ್ನೆಲ್ಲಾ ನಿವಾರಿಸಿ ದೊಡ್ಡದಾಗಿ ತುಂಡುಮಾಡಿ.
ಶಿರ್ಕಾ: ಎರಡು ದೊಡ್ಡಚಮಚ
ನೀರು: ಅಗತ್ಯಕ್ಕೆ ತಕ್ಕಷ್ಟು
-
1. ಚಿಕನ್, ಮೊಟ್ಟೆ, ಕೋರ್ನ್ ಫ್ಲೋರ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಬೌಲ್‌ನಲ್ಲಿ ಕಲಸಿಕೊಳ್ಳಿ.
2. ಈಗ, 2 ಚಮಚ ಉಪ್ಪು, ನೀರನ್ನು ಬಳಸಿಕೊಂಡು ಚಿಕನ್ ಅನ್ನು ಮಸಾಲೆಯೊಂದಿಗೆ ಕಲಸಿ
3. 30 ನಿಮಿಷ ಹಾಗೆಯೇ ಬಿಡಿ.
4. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ.
5.ಈಗ ಚಿಕನ್ ತುಂಡುಗಳನ್ನು ಹುರಿದುಕೊಳ್ಳಿ ಮತ್ತು ಸುವಾಸನೆ ಬರಲಿ
6. ಚಿಕನ್ ಚೆನ್ನಾಗಿ ಬೇಯುವವರೆಗೆ ಇದನ್ನು ಬೇಯಿಸಿಕೊಳ್ಳಿ
7. ಎಣ್ಣೆ ಹೀರುವ ಪೇಪರ್‌ನ ಮೇಲೆ ಕರಿದ ಚಿಕನ್ ಅನ್ನು ಇರಿಸಿಕೊಳ್ಳಿ ಹೀಗೆ ಮಾಡುವುದರಿಂದ ಹೆಚ್ಚುವರಿ ಎಣ್ಣೆ ನಿವಾರಣೆಯಾಗುತ್ತದೆ
8. ವೋಕ್‌ನಲ್ಲಿ 2 ಚಮಚ ಎಣ್ಣೆ ತೆಗೆದುಕೊಳ್ಳಿ
9. ಈರುಳ್ಳಿಯನ್ನು ಎಣ್ಣೆಗೆ ಹಾಕಿ ಕರಿದುಕೊಳ್ಳಿ
10. ಹಸಿಮೆಣಸು ಮಿಶ್ರ ಮಾಡಿ
11. ಉಪ್ಪು, ಸೋಯ ಸಾಸ್, ವಿನೇಗರ್ ಮತ್ತು ಕರಿದ ಚಿಕನ್ ಅನ್ನು ಸೇರಿಸಿ
12. ಬಿಸಿಯಾಗಿ ಬಡಿಸಿ ಮತ್ತು ಹಸಿಮೆಣಸಿನ ಅಲಂಕಾರ ಮಾಡಿ
- 1. ಬೋನ್‌ನೊಂದಿಗೆ ಚಿಲ್ಲಿ ಚಿಕನ್ ಅನ್ನು ನೀವು ತಯಾರಿಸಬಹುದು.
- 2. ಗ್ರೇವಿಯೊಂದಿಗೆ ಕೂಡ ಚಿಲ್ಲಿ ಚಿಕನ್ ಅನ್ನು ತಯಾರಿಸಬಹುದು.
- ಬಡಿಸುವ ಗಾತ್ರ - 1 ಕಪ್
- ಕ್ಯಾಲೋರಿ - 277 ಕ್ಯಾಲೊ
- ಕೊಬ್ಬು - 21 ಗ್ರಾಂ
- ಕಾರ್ಬೊಹೈಡ್ರೇಟ್ಸ್ - 21 ಗ್ರಾಂ
- ಸಕ್ಕರೆ - 4.4 ಗ್ರಾಂ
- ಡಯೆಟರಿ ಫೈಬರ್ - 2.8 ಗ್ರಾಂ



Click it and Unblock the Notifications
