For Quick Alerts
ALLOW NOTIFICATIONS  
For Daily Alerts

ಎಳ್ಳು ಉಂಡೆ ರೆಸಿಪಿ

Posted By: Divya pandith
|

ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸು ಎಳ್ಳುಂಡೆ. ಬಹುತೇಕವಾಗಿ ಇದನ್ನು ಗಣೇಶ ಚತುರ್ಥಿ, ದೀಪಾವಳಿ, ಜನ್ಮಾಷ್ಟಮಿ ಸೇರಿದಂತೆ ಅನೇಕ ಹಬ್ಬಗಳಲ್ಲಿ ನೈವೇದ್ಯಕ್ಕಾಗಿ ಮಾಡುತ್ತಾರೆ. ಇದಕ್ಕೆ ಚಿಗಳಿ ಎಂತಲೂ ಕರೆಯುತ್ತಾರೆ. ತಮಿಳುನಾಡಿನಲ್ಲಿ ಇದನ್ನು ಎಲುರುಂಡೈ ಎಂದು ಕರೆಯುತ್ತಾರೆ. ಈ ಸಿಹಿ ಉಂಡೆಯಲ್ಲಿ ಕ್ಯಾಲ್ಸಿಯಂ ಮತ್ತು ಐರನ್ ಬಹಳ ಸಮೃದ್ಧವಾಗಿರುತ್ತವೆ.

ಇದು ಸಿಹಿಯಾದ ತಿನಿಸಾದ್ದರಿಂದ ಮಕ್ಕಳು ಇದನ್ನು ಸವಿಯಲು ಇಷ್ಟಪಡುತ್ತಾರೆ. ಇದು ದೇಹದಲ್ಲಿ ಹೆಚ್ಚು ಉಷ್ಣತೆಯನ್ನು ಸೃಷ್ಟಿಸುವುದರಿಂದ ಅತಿಯಾಗಿ ತಿನ್ನಬಾರದು. ಇದನ್ನು ಮಾಡಲು ಹೆಚ್ಚು ಸಮಯ ಹಿಡಿಯುವುದಿಲ್ಲವಾದ್ದರಿಂದ ಹಬ್ಬಗಳ ಗಡಿಬಿಡಿಯಲ್ಲಿ ಬಹುಬೇಗ ತಯಾರಿಸಬಹುದು. ಶ್ರಾವಣ ಮಾಸದ ಹಬ್ಬದ ಆಚರಣೆಗೆ ಈ ಸಿಹಿಯನ್ನು ತಯಾರಿಸುವ ಉತ್ಸಾಹದಲ್ಲಿದ್ದರೆ ಇಲ್ಲಿದೆ ನೋಡಿ ವೀಡಿಯೋ ಹಾಗೂ ಚಿತ್ರ ಬರಹದ ಹಂತ ಹಂತವಾದ ವಿವರಣೆ.

chigali recipe
ಎಳ್ಳು ಉಂಡೆ | ಎಳ್ಳು ಉಂಡೆ ರೆಸಿಪಿ ಮಾಡುವ ವಿಧಾನ | ಸ್ಟೆಪ್ ಬೈ ಸ್ಟೆಪ್ ಎಳ್ಳು ಉಂಡೆ ರೆಸಿಪಿ
ಎಳ್ಳು ಉಂಡೆ | ಎಳ್ಳು ಉಂಡೆ ರೆಸಿಪಿ ಮಾಡುವ ವಿಧಾನ | ಸ್ಟೆಪ್ ಬೈ ಸ್ಟೆಪ್ ಎಳ್ಳು ಉಂಡೆ ರೆಸಿಪಿ
Prep Time
5 Mins
Cook Time
15M
Total Time
20 Mins

Recipe By: ಕಾವ್ಯಶ್ರೀ ಎಸ್.

Recipe Type: ಸಿಹಿ ತಿಂಡಿ

Serves: 8-10 ಉಂಡೆ

Ingredients
  • ಬಿಳಿ ಎಳ್ಳು - 1 ಕಪ್

    ಬೆಲ್ಲ - 1 ಕಪ್

    ಶೇಂಗಾ/ ಕಡಲೇ ಕಾಯಿ - 1/4 ಕಪ್

Red Rice Kanda Poha
How to Prepare
  • 1. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಳ್ಳನ್ನು ಹಾಕಿ ಹುರಿಯಿರಿ.

    2. ಎಣ್ಣೆಯನ್ನು ಸೇರಿಸದೇ, ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು.

    3. ನಂತರ ಉರಿಯನ್ನು ಆರಿಸಿ, ಹುರಿದ ಎಳ್ಳನ್ನು ಆರಲು ಇಡಿ.

    4. ನಂತರ ಅದೇ ಪಾತ್ರೆಯಲ್ಲಿ ಶೇಂಗಾ/ಕಡಲೇ ಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಪರಿಮಳ ಬಂದಮೇಲೆ ನಿಲ್ಲಿಸಿ.

    5. ಉರಿಯನ್ನು ಆರಿಸಿ, ಹುರಿದ ಕಡಲೇ ಕಾಯಿಯನ್ನು ಆರಲು ಇಡಿ.

    6. ಹುರಿದುಕೊಂಡ ಎಳ್ಳು ಮತ್ತು ಶೇಂಗಾ ಎರಡನ್ನು ಒಮ್ಮೆಲೇ ಮಿಕ್ಸಿಗೆ ಹಾಕಿ.

    7. ಒಟ್ಟಿಗೆ ರುಬ್ಬಿಕೊಳ್ಳಿ.

    8. ಇದಕ್ಕೆ ಬೆಲ್ಲವನ್ನು ಸೇರಿಸಿ ಪುನಃ ರುಬ್ಬಿ.

    9. ರುಬ್ಬಿಕೊಂಡ ಮಿಶ್ರಣವನ್ನು ಒಂದು ಬೌಲ್‍ಗೆ ವರ್ಗಾಯಿಸಿ.

    10. ಮಿಶ್ರಣದಿಂದ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಯನ್ನು ಕಟ್ಟಿ.

Instructions
  • 1. ಎಳ್ಳು ಮತ್ತು ಬೆಲ್ಲ ಸಮಪ್ರಮಾಣದಲ್ಲಿರಬೇಕು. ಹಾಗೊಮ್ಮೆ ನಿಮಗೆ ಅತಿ ಹೆಚ್ಚು ಸಿಹಿ ಬೇಕೆಂದರೆ ಹೆಚ್ಚು ಬೆಲ್ಲವನ್ನು ಸೇರಿಸಿಕೊಳ್ಳಬಹುದು.
  • 2. ಶೇಂಗಾ/ಕಡಲೇ ಕಾಯಿ ಒಂದು ಆಯ್ಕೆ. ಇದನ್ನು ಸೇರಿಸದೆಯೂ ಮಾಡಬಹುದು. ಸೇರಿಸಿದರೆ ರುಚಿ ಹೆಚ್ಚುವುದು.
Nutritional Information
  • ಸರ್ವಿಂಗ್ ಸೈಜ್ - 1 ಬೌಲ್
  • ಕ್ಯಾಲೋರೀಸ್ - 144 ಕ್ಯಾಲ್
  • ಫ್ಯಾಟ್ - 5.6 ಗ್ರಾಂ
  • ಪ್ರೋಟೀನ್ - 5.1 ಗ್ರಾಂ
  • ಕಾರ್ಬೋಹೈಡ್ರೇಟ್ - 18.2 ಗ್ರಾಂ
  • ಸಕ್ಕರೆ - 7.3 ಗ್ರಾಂ
  • ಫೈಬರ್ - 2.1 ಗ್ರಾಂ

ಎಳ್ಳು ಉಂಡೆ ರೆಸಿಪಿ ಮನೆಯಲ್ಲಿ ಮಾಡುವುದು ಹೇಗೆ

1. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಳ್ಳನ್ನು ಹಾಕಿ ಹುರಿಯಿರಿ.

chigali recipe

2. ಎಣ್ಣೆಯನ್ನು ಸೇರಿಸದೇ, ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು.

chigali recipe

3. ನಂತರ ಉರಿಯನ್ನು ಆರಿಸಿ, ಹುರಿದ ಎಳ್ಳನ್ನು ಆರಲು ಇಡಿ.

chigali recipe

4. ನಂತರ ಅದೇ ಪಾತ್ರೆಯಲ್ಲಿ ಶೇಂಗಾ/ಕಡಲೇ ಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಪರಿಮಳ ಬಂದಮೇಲೆ ನಿಲ್ಲಿಸಿ.

chigali recipe
chigali recipe

5. ಉರಿಯನ್ನು ಆರಿಸಿ, ಹುರಿದ ಕಡಲೇ ಕಾಯಿಯನ್ನು ಆರಲು ಇಡಿ.

chigali recipe

6. ಹುರಿದುಕೊಂಡ ಎಳ್ಳು ಮತ್ತು ಶೇಂಗಾ ಎರಡನ್ನು ಒಮ್ಮೆಲೇ ಮಿಕ್ಸಿಗೆ ಹಾಕಿ.

chigali recipe

7. ಒಟ್ಟಿಗೆ ರುಬ್ಬಿಕೊಳ್ಳಿ.

chigali recipe

8. ಇದಕ್ಕೆ ಬೆಲ್ಲವನ್ನು ಸೇರಿಸಿ ಪುನಃ ರುಬ್ಬಿ.

chigali recipe
chigali recipe

9. ರುಬ್ಬಿಕೊಂಡ ಮಿಶ್ರಣವನ್ನು ಒಂದು ಬೌಲ್‍ಗೆ ವರ್ಗಾಯಿಸಿ.

chigali recipe

10. ಮಿಶ್ರಣದಿಂದ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಯನ್ನು ಕಟ್ಟಿ.

chigali recipe
[ 4 of 5 - 26 Users]
X
Desktop Bottom Promotion