For Quick Alerts
ALLOW NOTIFICATIONS  
For Daily Alerts

ಆಹಾ! ಈ ಚಿಕನ್ ವಿಂಗ್ಸ್ ಟೇಸ್ಟ್ ಸೂಪರ್‌!

Posted By:
|

ಫ್ರೀ ಸಮಯದಲ್ಲಿ ತಂಪಾದ ಪಾನೀಯ ಅಥವಾ ಬಿಸಿ-ಬಿಸಿಯಾದ ಟೀ ಜೊತೆ ಸವಿಯಲು ರುಚಿಕರವಾದ ನಾನ್‌ವೆಜ್‌ ಸ್ನ್ಯಾಕ್ಸ್ ಈ ಚಿಕನ್ ವಿಂಗ್ಸ್. ಚಿಕನ್ ವಿಂಗ್ಸ್‌ ಅಂದರೆ ಕೋಳಿಯ ರೆಕ್ಕೆಯ ಭಾಗ. ಇದನ್ನು ಪ್ರತ್ಯೇಕವಾಗಿ ಮಸಾಲೆ ಹಾಕಿ ತಿಂದರೆ ತುಂಬಾ ರುಚಿಕರವಾಗಿರುತ್ತದೆ. ಈ ವೀಕೆಂಡ್‌ನಲ್ಲಿ ಚಿಕನ್‌ ವಿಂಗ್ಸ್ ರುಚಿ ನೋಡ ಬಯಸುವುದಾದರೆ ಇಲ್ಲಿದೆ ನೋಡಿ ಸರಳ ರೆಸಿಪಿ.

ಇದು ತುಂಬಾ ಸರಳವಾಗಿದ್ದು ರುಚಿಯಲ್ಲಿ ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಾಡುವುದು ಹೇಗೆ ಎಂದು ಸ್ಟೆಪ್ ಬೈ ಸ್ಟೆಪ್ ರೆಸಿಪಿ ನೀಡಿದ್ದೇವೆ ನೋಡಿ.

ಮಾಡುವ ವಿಧಾನ:

* ಒಂದು ದೊಡ್ಡ ಬೌಲ್‌ ತೆಗೆದುಕೊಂಡು ಅದರಲ್ಲಿ ಹುಳಿಯಾದ ಗಟ್ಟಿ ಮೊಸರು ಹಾಕಿ, ಒಂದು ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಕದಡಿ.

* ಅದಕ್ಕೆ ಗರಂ ಮಸಾಲ. ಖಾರಪುಡಿ, ಅರಿಶಿಣ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ.

* ಈಗ ಕತ್ತರಿಸಿದ ಚಿಕನ್ ವಿಂಗ್ಸ್ ಹಾಕಿ ಮಿಶ್ರ ಮಾಡಿ, ರುಚಿಗೆ ತಕ್ಕ ಉಪ್ಪು ಹಾಕಿ, ಚೆನ್ನಾಗಿ ಮಿಶ್ರ ಮಾಡಿ ಒಂದು ಗಂಟೆ ಫ್ರಿಡ್ಜ್‌ನಲ್ಲಿಡಿ.

* ಒಂದು ಗಂಟೆಯ ಬಳಿಕ ಫ್ರಿಡ್ಜ್‌ನಿಂದ ತೆಗೆದು ಮೊಟ್ಟೆಯನ್ನು ಒಡೆದು ಹಾಕಿ. ಅದಕ್ಕೆ ಮೈದಾ , ಜೋಳದ ಹಿಟ್ಟು ಹಾಕಿ ಮಿಶ್ರ ಮಾಡಿ ಇಡಿ.

* ಒಂದು ಪಾತ್ರೆಗೆ ಎಣ್ಣೆ ಹೀರಿಕೊಳ್ಳಲು ಪೇಪರ್ ಹಾಕಿ ಸಿದ್ಧವಾಗಿಡಿ.

* ಈಗ ದಪ್ಪ ತಳವಿರುವ ಬಾಣಲೆ ತೆಗೆದುಕೊಂಡು ಅದಕ್ಕೆ ಒಂದು ಕಪ್ ಎಣ್ಣೆ ಹಾಕಿ. ಎಣ್ಣೆ ಕುದಿ ಬರುವಾಗ ಚಿಕನ್ ವಿಂಗ್ಸ್‌ ಹಾಕಿ ಕರಿಯಿರಿ. ಚಿಕನ್ ವಿಂಗ್ಸ್‌ ಸ್ವಲ್ಪ ಗರಿ-ಗರಿಯಾದಾಗ ಎಣ್ಣೆಯಿಂದ ತೆಗೆದು ಪಾತ್ರೆಗೆ ಹಾಕಿ. ನಂತರ ಆ ಚಿಕನ್‌ ವಿಂಗ್ಸ್ ಮೇಲೆ ಸ್ವಲ್ಪ ಚಾಟ್ ಮಸಾಲ ಉದುರಿಸಿ.

ಇದೀಗ ರೆಡಿಯಾದ ಚಿಕನ್ ವಿಂಗ್ಸ್ ಅನ್ನು ತಂಪಾದ ಪಾನೀಯ ಅಥವಾ ಟೀ ಜೊತೆ ಸರ್ವ್ ಮಾಡಿ.

[ of 5 - Users]
Story first published: Friday, January 31, 2020, 16:27 [IST]
X