Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಆಹಾ! ಈ ಚಿಕನ್ ವಿಂಗ್ಸ್ ಟೇಸ್ಟ್ ಸೂಪರ್!
ಫ್ರೀ ಸಮಯದಲ್ಲಿ ತಂಪಾದ ಪಾನೀಯ ಅಥವಾ ಬಿಸಿ-ಬಿಸಿಯಾದ ಟೀ ಜೊತೆ ಸವಿಯಲು ರುಚಿಕರವಾದ ನಾನ್ವೆಜ್ ಸ್ನ್ಯಾಕ್ಸ್ ಈ ಚಿಕನ್ ವಿಂಗ್ಸ್. ಚಿಕನ್ ವಿಂಗ್ಸ್ ಅಂದರೆ ಕೋಳಿಯ ರೆಕ್ಕೆಯ ಭಾಗ. ಇದನ್ನು ಪ್ರತ್ಯೇಕವಾಗಿ ಮಸಾಲೆ ಹಾಕಿ ತಿಂದರೆ ತುಂಬಾ ರುಚಿಕರವಾಗಿರುತ್ತದೆ. ಈ ವೀಕೆಂಡ್ನಲ್ಲಿ ಚಿಕನ್ ವಿಂಗ್ಸ್ ರುಚಿ ನೋಡ ಬಯಸುವುದಾದರೆ ಇಲ್ಲಿದೆ ನೋಡಿ ಸರಳ ರೆಸಿಪಿ.

ಇದು ತುಂಬಾ ಸರಳವಾಗಿದ್ದು ರುಚಿಯಲ್ಲಿ ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಾಡುವುದು ಹೇಗೆ ಎಂದು ಸ್ಟೆಪ್ ಬೈ ಸ್ಟೆಪ್ ರೆಸಿಪಿ ನೀಡಿದ್ದೇವೆ ನೋಡಿ.
ಮಾಡುವ ವಿಧಾನ:
* ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದರಲ್ಲಿ ಹುಳಿಯಾದ ಗಟ್ಟಿ ಮೊಸರು ಹಾಕಿ, ಒಂದು ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಕದಡಿ.

* ಅದಕ್ಕೆ ಗರಂ ಮಸಾಲ. ಖಾರಪುಡಿ, ಅರಿಶಿಣ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ.

* ಈಗ ಕತ್ತರಿಸಿದ ಚಿಕನ್ ವಿಂಗ್ಸ್ ಹಾಕಿ ಮಿಶ್ರ ಮಾಡಿ, ರುಚಿಗೆ ತಕ್ಕ ಉಪ್ಪು ಹಾಕಿ, ಚೆನ್ನಾಗಿ ಮಿಶ್ರ ಮಾಡಿ ಒಂದು ಗಂಟೆ ಫ್ರಿಡ್ಜ್ನಲ್ಲಿಡಿ.

* ಒಂದು ಪಾತ್ರೆಗೆ ಎಣ್ಣೆ ಹೀರಿಕೊಳ್ಳಲು ಪೇಪರ್ ಹಾಕಿ ಸಿದ್ಧವಾಗಿಡಿ.

* ಈಗ ದಪ್ಪ ತಳವಿರುವ ಬಾಣಲೆ ತೆಗೆದುಕೊಂಡು ಅದಕ್ಕೆ ಒಂದು ಕಪ್ ಎಣ್ಣೆ ಹಾಕಿ. ಎಣ್ಣೆ ಕುದಿ ಬರುವಾಗ ಚಿಕನ್ ವಿಂಗ್ಸ್ ಹಾಕಿ ಕರಿಯಿರಿ. ಚಿಕನ್ ವಿಂಗ್ಸ್ ಸ್ವಲ್ಪ ಗರಿ-ಗರಿಯಾದಾಗ ಎಣ್ಣೆಯಿಂದ ತೆಗೆದು ಪಾತ್ರೆಗೆ ಹಾಕಿ. ನಂತರ ಆ ಚಿಕನ್ ವಿಂಗ್ಸ್ ಮೇಲೆ ಸ್ವಲ್ಪ ಚಾಟ್ ಮಸಾಲ ಉದುರಿಸಿ.




Click it and Unblock the Notifications