Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ರೆಸ್ಟೋರೆಂಟ್ ರುಚಿಯ ಚಿಕನ್ ಟಿಕ್ಕಿಯನ್ನು ಮನೆಯಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಬಹುದು
Recipes
oi-Reena TK
Posted By: Reena TK
ರೆಸ್ಟೋರೆಂಟ್‌ಗಳಲ್ಲಿ ಸಿಗುವಂತೆ ರುಚಿ-ರುಚಿಯಾದ ಚಿಕನ್ ಕಟ್ಲೇಟ್ ಮನೆಯಲ್ಲಿಯೇ ಮಾಡಬಹುದು, ರೆಸ್ಟೋರೆಂಟ್‌ನಲ್ಲಾದರೆ ದುಬಾರಿ ಹಣಕ್ಕೆ 3-4 ಪೀಸ್ ಕಟ್ಲೇಟ್ ಸಿಗುವುದು.
ಅದೇ ಮನೆಯಲ್ಲಿ ಮಾಡುವುದಕ್ಕೆ ಅದರ ಅರ್ಧದಷ್ಟು ದುಡ್ಡು ಖರ್ಚು ಮಾಡಿದರೆ ಸಾಕು, ಮನೆಮಂದಿಯೆಲ್ಲಾ ಸೇರಿ ಸವಿಯಬಹುದು, ಅಲ್ಲದೆ ಇದನ್ನು ಮಾಡುವುದು ಕೂಡ ದೊಡ್ಡ ಟಾಸ್ಕ್ ಕೂಡ ಅಲ್ಲ, ಅಲ್ಲದೆ ಡಯಟ್ ಮಾಡುವವರಿಗೂ ಇದು ತುಂಬಾ ಒಳ್ಳೆಯದು.

ಮಾಡುವ ವಿಧಾನ:
300 ಗ್ರಾಂ ಬೋನ್‌ಲೆಸ್ ಚಿಕನ್
1/2 ಕಪ್ ಈರುಳ್ಳಿ (ಚಿಕ್ಕದಾಗಿ ಕತ್ತರಿಸಿ)
ಒಂದೂವರೆ ಚಮಚ ತುರಿದ ಶುಂಠಿ ಅಥವಾ ಪೇಸ್ಟ್
1-2 ಹಸಿ ಮೆಣಸು ಚಿಕ್ಕದಾಗಿ ಕತ್ತರಿಸಿದ್ದು
ಸ್ವಲ್ಪ ಕೊತ್ತಂಬರಿ ಸೊಪ್ಪು
ಕಾಶ್ಮೀರಿ ಚಿಲ್ಲಿ ಪ್ಲೇಕ್ಸ್
1/4 ಚಮಚ ಅರಿಶಿಣ ಪುಡಿ
ಒಂದೂವರೆ ಚಮಚ ಗರಂ ಮಸಾಲೆ
1/4 ರಿಂದ 1/2 ಕಪ್ ಬ್ರೆಡ್ ಚೂರುಗಳು
1/4 ಕಪ್‌ಕಡ್ಲೆ ಹಿಟ್ಟು ಅಥವಾ 1 ಮೊಟ್ಟೆ
3/4 ಚಮಚ (ರುಚಿಗೆ ತಕ್ಕ ಉಪ್ಪು)
2 ಚಮಚ ಎಣ್ಣೆ
ಮಾಡುವ ವಿಧಾನ:
- ನೀವು ಪ್ಯಾನ್‌ಗೆ 2 ಚಮಚ ಮೊಸರು, 1/2 ಕಪ್ ನೀರು ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಚಿಕನ್ ಹಾಕಿ 2 ಗಂಟೆಗಳ ಕಾಲ ಇಡಿ.
- ನಂತರ ಪ್ಯಾನ್ ಅನ್ನು ಉರಿ ಮೇಲಿಟ್ಟು ಕಡಿಮೆ ಉರಿಯಲ್ಲಿ ಬೇಯಿಸಿ, ನೀರು ಸೇರಿಸಬೇಡಿ, ಆ ಮಜ್ಜಿಗೆ ನೀರಿನಲ್ಲಿಯೇ ಬೇಯಿಸಿ.
- ಆ ನೀರು ಸಂಪೂರ್ಣ ಬತ್ತಿ ಹೋದ ಮೇಲೆ ಆ ಚಿಕನ್ ಪೀಸ್‌ಗಳನ್ನು ಒಂದು ಪಾತ್ರೆಗೆ ಹಾಕಿ, ಕೈಯಿಂದಲೇ ಪುಡಿ-ಪುಡಿ ಮಾಡಿ, ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು, ಗರಂ ಮಸಾಲ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ, ನೀವು ಬೇಯಿಸಿದ ಒಂದು ಆಲೂಗಡ್ಡೆ ಬಳಸಿದರೂ ತುಂಬಾ ಒಳ್ಳೆಯದು. ಇನ್ನು ಕ್ಯಾಬೇಜ್, ಕ್ಯಾರೆಟ್ ಬೇಕಾದರೂ ಸೇರಿಸಬಹುದು.
- ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಸ್ವಲ್ಪ ಅಕ್ಕಿಹಿಟ್ಟು ಅಥವಾ ಬ್ರೆಡ್ ಚೂರುಗಳನ್ನು ಸೇರಿಸಿ.
- ಚೆನ್ನಾಗಿ ಮಿಕ್ಸ್ ಮಾಡಿ ಉಂಡೆಗಳನ್ನು ಕಟ್ಟಿ, ಈ ಹಿಟ್ಟಿನಿಂದ 8-9 ಉಂಡೆಗಳನ್ನು ಮಾಡಬಹುದು.
- ನಂತರ ಉಂಡೆಯನ್ನು ಕೈಯಿಂದಲೇ ತಟ್ಟಿ, ನಂತರ ಬ್ರೆಡ್ ಚೂರ್‌ನಲ್ಲಿ ಹೊರಳಾಡಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿದ ಮೊಟ್ಟೆಯಲ್ಲಿ ಅದ್ದಿ ಇದೇ ಸಮಯದಲ್ಲಿ ಪ್ಯಾನ್ ಬಿಸಿ ಮಾಡಿ ನಂತರ ಪ್ಯಾನ್‌ಗೆ ತಟ್ಟಿದ ಕಟ್ಲೇಟ್ ಹಾಕಿ, ಎರಡೂ ಬದಿ ಚೆನ್ನಾಗಿ ಫ್ರೈ ಮಾಡಿ.
- ನಂತರ ಬಿಸಿ ಬಿಸಿಯಾದ ಕಟ್ಲೇಟ್ ಅನ್ನು ಟೊಮೆಟೊ ಕೆಚಪ್ ಅಥವಾ ಪುದೀನಾ ಚಟ್ನಿಯೊಂದಿಗೆ ಸರ್ವ್ ಮಾಡಿ.
Comments
[ of 5 - Users]



Click it and Unblock the Notifications
