Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಪೆಪ್ಪರ್ ಚಿಕನ್ ಫ್ರೈ ಹೀಗೆ ಮಾಡಿ, ಯಾವ ರೆಸ್ಟೋರೆಂಟ್ ರುಚಿಗೂ ಕಮ್ಮಿಯಿಲ್ಲ
ಚಿಕನ್ ಮಾಂಸ ಬಳಕೆ ಮಾಡಿ ಸಾಕಷ್ಟು ವಿವಿಧ ಭಕ್ಷ್ಯಗಳನ್ನು ತಯಾರಿಸಲು ಸಾಧ್ಯವಿದೆ. ಆದರೆ ಇವುಗಳನ್ನು ತಯಾರಿಸುವುದು ಕಷ್ಟ ಎಂದು ಭಾವಿಸಿ ಅನೇಕರು ಪ್ರಯತ್ನ ಮಾಡಲು ಹೋಗುವುದೇ ಇಲ್ಲ. ಚಿಕನ್ ಎಂದರೆ ಸಾಕು ಕೇವಲ ಸಾಂಬಾರು ಮಾತ್ರ ತಯಾರಿಸಿಬಿಡುತ್ತಾರೆ. ಆದರೆ ನೀವು ಮನಸ್ಸು ಮಾಡಿದರೆ ಮನೆಯಲ್ಲಿಯೇ ರೆಸ್ಟಾರೆಂಟ್ ಶೈಲಿಯ ಚಿಕನ್ ಭಕ್ಷ್ಯಗಳನ್ನು ತಯಾರಿಸಲು ಸಾಧ್ಯವಿದೆ.

ಚಿಕನ್ ಮಾಂಸದಿಂದ ತಯಾರಿಸುವ ಅತ್ಯಂತ ರುಚಿಯಾದ ಹಾಗೂ ಬಲು ಸುಲಭವಾಗಿ ತಯಾರಿಸಬಹುದಾದ ಭಕ್ಷ್ಯಗಳಲ್ಲಿ ಪೆಪ್ಪರ್ ಚಿಕನ್ ಕೂಡ ಒಂದು. ಕೆಲವೇ ಕೆಲವು ಆಹಾರ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ನೀವು ಥಟ್ ಅಂತಾ ಪೆಪ್ಪರ್ ಚಿಕನ್ ತಯಾರಿಸಬಹುದಾಗಿದೆ. ಪೆಪ್ಪರ್ ಚಿಕನ್ ಸ್ಟಾರ್ಟರ್ ಮೆನುವಿನ ಬೆಸ್ಟ್ ಆಯ್ಕೆಯಾಗಿದೆ. ಹಾಗಾದರೆ ಅತ್ಯಂತ ಸುಲಭ ವಿಧಾನದಲ್ಲಿ ಪೆಪ್ಪರ್ ಚಿಕನ್ ತಯಾರಿಸುವುದು ಹೇಗೆ..? ಇದನ್ನು ತಯಾರಿಸಲು ಬೇಕಾದ ಸಾಮಗ್ರಿಗಳು ಯಾವುದು..? ಎಂಬುದನ್ನು ತಿಳಿದುಕೊಳ್ಳೋಣ :
ಬೇಕಾಗುವ ಸಾಮಗ್ರಿಗಳು : ಚಿಕನ್ 1/2 ಕೆಜಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಅರಿಶಿಣ 1 ಚಮಚ, ಚಕ್ಕ 1 , ಲವಂಗ 2, ಕಾಳು ಮೆಣಸಿನ ಪುಡಿ 3-4 ಚಮಚ, ಕಾರದ ಪುಡಿ 1 ಚಮಚ, ಬೇವಿನಸೊಪ್ಪು 1 ಎಸಳು, ಕೊತ್ತಂಬರಿ ಸೊಪ್ಪು 1ಕಪ್, ಸೋಯಾ ಸಾಸ್ ಸ್ವಲ್ಪ, ಈರುಳ್ಳಿ ಸಣ್ಣಗೆ ಹೆಚ್ಚಿದ್ದು 1 ಕಪ್, ಟೊಮೆಟೋ 1 , ಧನಿಯಾ ಪುಡಿ 1 ಚಮಚ, ಗರಂ ಮಸಾಲಾ 1ಚಮಚ, ಹಸಿ ಮೆಣಸು 2, ಅಡುಗೆ ಎಣ್ಣೆ 2 ಚಮಚ
ಮಾಡುವ ವಿಧಾನ : ಮೊದಲಿಗೆ ಚಿಕನ್ನ್ನು ಚೆನ್ನಾಗಿ ತೊಳೆದುಕೊಂಡು ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅರಿಶಿಣ ಹಾಕಿ ಕಲಿಸಿ 1 ಗಂಟೆಗಳ ಕಾಲ ಮ್ಯಾರಿನೇಟ್ ಮಾಡಲು ಇಡಿ. ಈಗ ಇನ್ನೊಂದು ಬಾಣಲೆ ತೆಗೆದುಕೊಂಡು ಇದಕ್ಕೆ ಅಡುಗೆ ಎಣ್ಣೆಯನ್ನು ಹಾಕಿ. ಅಡುಗೆ ಎಣ್ಣೆ ಬಿಸಿಯಾಗುತ್ತಿದ್ದಂತೆಯೇ ಇದಕ್ಕೆ ಚಕ್ಕೆ ಹಾಗೂ ದಾಲ್ಚಿನ್ನಿಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಈಗ ಇದೇ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದ ಈರುಳ್ಳಿಯನ್ನು ಹಾಕಿ ಸ್ವಲ್ಪ ಅರಿಶಿಣ ಸೇರಿಸಿ ಹುರಿದುಕೊಳ್ಳಲು ಆರಂಭಿಸಿ. ಗಮನಿಸಿ ನಿಮಗೆ ಗ್ರೇವಿ ಜಾಸ್ತಿ ಬೇಕು ಎಂದರೆ ಈರುಳ್ಳಿ ಪ್ರಮಾಣ ಜಾಸ್ತಿ ಮಾಡಿಕೊಳ್ಳಬಹುದು. ಆದರೆ ಈರುಳ್ಳಿ ಪ್ರಮಾಣ ಅತಿಯಾದರೆ ಪದಾರ್ಥಕ್ಕೆ ಸಿಹಿ ರುಚಿ ಬಂದುಬಿಡುವ ಸಾಧ್ಯತೆ ಇರುತ್ತದೆ ಎಂಬುದು ಗಮನದಲ್ಲಿರಲಿ.
ಈರುಳ್ಳಿ ಹೊಂಬಣ್ಣಕ್ಕೆ ಬರುತ್ತಿದ್ದಂತೆಯೇ ಇದಕ್ಕೆ ಟೊಮೆಟೋ , ಬೇವಿನಸೊಪ್ಪು ಸೇರಿಸಿಕೊಳ್ಳಿ. ಟೊಮೆಟೋ ನೀರು ಬಿಡುವವರೆಗೂ ಹುರಿಯತ್ತಲೇ ಇರಿ. ಈಗ ಧನಿಯಾಪುಡಿ, ಹಸಿಮೆಣಸು, ಕಾರದಪುಡಿ, ಒಣಮೆಣಸಿನ ಪುಡಿ ಹಾಗೂ ಗರಂ ಮಸಾಲವನ್ನು ಸೇರಿಸಿಕೊಂಡು ಹುರಿದುಕೊಳ್ಳಿ. ನಿಮಗೆ ಎಷ್ಟು ಕಾರ ಬೇಕು ಎಂಬುದನ್ನು ಆಧರಿಸಿ ಇವುಗಳನ್ನು ಸೇರಿಸಿಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಸೋಸಾ ಸಾಸ್ ಸೇರಿಸಿಕೊಳ್ಳಿ. ನಿಮಗೆ ಇಷ್ಟವಿಲ್ಲದಿದ್ದಲ್ಲಿ ಸೋಯಾ ಸಾಸ್ ಸೇರಿಸದಿಲ್ಲದ್ದರೂ ನಡೆಯುತ್ತದೆ.
ಈಗ ನಿಮ್ಮ ಗ್ರೇವಿ ರೆಡಿಯಾಗಿದೆ. ಇದಕ್ಕೆ ನೀವು ಮ್ಯಾರಿನೇಟ್ ಮಾಡಿಟ್ಟುಕೊಂಡಿದ್ದ ಚಿಕನ್ನ್ನು ಸೇರಿಸಿ ಸುಮಾರು 15 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಬೇಕಿದ್ದಲ್ಲಿ ನೀವು ಉಪ್ಪು ಹಾಗೂ ಖಾರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಚಿಕನ್ ಬೆಂದ ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿ ಬಿಸಿಯಾದ ಸವಿ ಸವಿಯಾದ ಪೆಪ್ಪರ್ ಚಿಕನ್ ಸವಿಯಲು ಸಿದ್ಧ. ಮಳೆಗಾಲದಲ್ಲಂತೂ ಬಿಸಿ ಬಿಸಿ ಅನ್ನದೊಂದಿಗೆ ಪೆಪ್ಪರ್ ಚಿಕನ್ ಸಖತ್ ಖುಷಿ ನೀಡುತ್ತದೆ.



Click it and Unblock the Notifications
