Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಚೆಟ್ಟಿನಾಡ್ ಶೈಲಿಯ ಮಟನ್ ಸಾಲ್ನಾ ರೆಸಿಪಿ
ನೀವು ಮಟನ್ ಸಾಲ್ನಾ ರುಚಿ ನೋಡಿದ್ದೀರಾ, ಮಧುರೈ ಹೋದರೆ ನಾನ್‌ವೆಜ್ ಹೋಟೆಲ್‌ಗಳಲ್ಲಿ ಇದು ನಿಮಗೆ ಸಿಗುವುದು. ಮಟನ್ ಮೂಳೆ ರಸ ಬಿಟ್ಟಿರುವ ಬೇಳೆಯ ರೆಸಿಪಿ ಇದಾಗಿದ್ದು ರುಚಿ ತುಂಬಾ ಚೆನ್ನಾಗಿರುತ್ತದೆ.
ಇದರಲ್ಲಿ ನೀವು ಯಾವ ಬೇಳೆ ಬೇಕಾದರೆ ಬಳಸಬಹುದು, ತೊಗರಿ ಬೇಳೆ, ಅಥವಾ ಕಪ್ಪು ಬೇಳೆ ಬಳಸಬಹುದು, ಬೇಳೆ ಚೆನ್ನಾಗಿ ಬೆಂದು ಕರಗಬೇಕು, ಅಂದರೆ ಮಾತ್ರ ಗ್ರೇವಿ ಟೇಸ್ಟ್ ಸೂಪರ್ ಆಗಿರುತ್ತೆ.

ಇದು ಚಪಾತಿ, ಪರೋಟ ಜೊತೆ ಸವೆಯಲು ಸೂಪರ್ ಗ್ರೇವಿ ಆಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ನೋಡೋಣ:
Recipe By: Reena TK
Recipe Type: Curry
Serves: 4
-
ಬೇಕಾಗುವ ಸಾಮಗ್ರಿ
ಮಟನ್-1/4 ಕೆಜಿ
ತೊಗರಿ ಬೇಳೆ-3 ಚಮಚ
ದೊಡ್ಡ ಈರುಳ್ಳಿ 1 (ತುಂಬಾ ಚಿಕ್ಕದಾಗ ಹೆಚ್ಚಿದ್ದು)
ಟೊಮೆಟೊ 1 (ಕತ್ತರಿಸಿದ್ದು)
ಶುಂಠಿ-ಬೆಳ್ಳುಳ್ಳಿ ಬೇಸ್ಟ್ 1 ಚಮಚ
ಸ್ವಲ್ಪ ಅರಿಶಿಣ ಪುಡಿ
ಖಾರದ ಪುಡಿ 1 ಚಮಚ
ನೀರು 1 ಕಪ್
ರುಚಿಗೆ ತಕ್ಕ ಉಪ್ಪು
ರುಬ್ಬಲು
ತೆಂಗಿನಕಾಯಿ 3 ಚಮಚ
ಮೆಂತೆ 1/2 ಚಮಚ
ಜೀರಿಗೆ 1/4 ಚಮಚ
ಕಾಳು ಮೆಣಸು 1/4 ಚಮಚ
ಒಗ್ಗರಣೆಗೆ
ಅಡುಗೆ ಎಣ್ಣೆ 2 ಚಮಚ
ಚಕ್ಕೆ 1/4 ಇಂಚಿನಷ್ಟು ದೊಡ್ಡದು
ಲವಂಗ 2
ಏಲಕ್ಕಿ 2
ಪಲಾವ್ ಎಲೆ 1
-
ಮಾಡುವ ವಿಧಾನ:
* ರುಬ್ಬಲು ಬೇಕಾಗುವ ಸಾಮಗ್ರಿ ಹಾಕಿ ರುಬ್ಬಿ.
* ಈಗ ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಒಬ್ಬಗರಣೆಗೆ ಹೇಳಿದ ಸಾಮಗ್ರಿ ಹಾಕಿ.
* ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಸೌಟ್‌ನಿಂದ ಆಡಿಸಿ, ನಂತರ ಟೊಮೆಟೊ, ಕರಿಬೇವು ಹಾಕಿ 2 ನಿಮಿಷ ಸೌಟ್‌ನಿಂದ ಆಡಿಸಿ. ನಂತರ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ, ಮಸಾಲೆ ಚೆನ್ನಾಗಿ ಮಿಶ್ರ ಮಾಡಿ.
*ತೊಗರಿ ಬೇಳೆ ತೊಳೆದು ರೆಡಿಯಾಗಿ ಇಡಿ. ಮೊದಲು ಮಟನ್ ಹಾಕಿ 2 ನಿಮಿಷ ಸೌಟ್‌ನಿಂದ ಆಡಿಸಿ, ನಂತರ ಬೇಳೆ ಸೇರಿಸಿ.
* ಬೇಕಾದ ಪ್ರಮಾಣಕ್ಕೆ ನೀರು ಹಾಕಿ, ಬೇಳೆ ನೀರಿನಲ್ಲಿ ಮುಳುಗುವಷ್ಟು ನೀರು ಹಾಕಿರಬೇಕು. ನಂತರ8-10 ವಿಶಲ್ ಹೊಡೆಸಿ. ನಂತರ ಗ್ಯಾಸ್ ಆಫ್ ಮಾಡಿ, ಕುಕ್ಕರ್‌ನ ಸ್ವಲ್ಪ ತಣ್ಣಗಾದ ಮೇಲೆ ಅದರ ಮುಚ್ಚಳ ತೆಗೆದು 2 ನಿಮಿಷ ಕುದಿಸಿ, ನಂತರ ರುಬ್ಬಿದ ಮಸಾಲೆ ಹಾಕಿ.
* ಮೇಲ್ಭಾಗದಲ್ಲಿ ಎಣ್ಣೆಯಂಶ ತೇಲುವಷ್ಟು ಹೊತ್ತು ಕುದಿಸಿ, ನಂತರ ಗ್ಯಾಸ್ ಆಫ್ ಮಾಡಿ ಚಪಾತಿ/ಪರೋಟ ಜೊತೆ ಸರ್ವ್ ಮಾಡಿ.
- ಬೇಳೆ ಚೆನ್ನಾಗಿ ಕರಗಿರಬೇಕು, ಇಲ್ಲದಿದ್ದರೆ ಮ್ಯಾಶ್ ಮಾಡಿ, ಆದ್ರೆ ಮಾತ್ರ ಗ್ರೇವಿ ನಾನ್‌ವೆಜ್ ರುಚಿಯಲ್ಲಿರುವುದು, ಇಲ್ಲದಿದ್ದರೆ ಸಾಂಬಾರ್‌ಗೆ ಮಟನ್ ಹಾಕಿದಂತೆ ಆಗುವುದು.
- ಕ್ಯಾಲೋರಿ - 197
- ಕೊಬ್ಬು - 9 ಗ್ರಾಂ
- ಪ್ರೊಟೀನ್ - 28ಗ್ರಾಂ



Click it and Unblock the Notifications
