Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ
ಮಸಾಲೆ ರುಬ್ಬುವ ಜಂಜಾಟವಿಲ್ಲದೆ ಮಾಡಿ 'ಚೆಟ್ಟಿನಾಡ್ ಚಿಕನ್'! ಹೋಟೆಲ್ ರುಚಿಯ ರಹಸ್ಯ ಇಲ್ಲಿದೆ. ಹೌದು, ಮಳೆಗಾಲದ ಚುರುಕು ಶುರುವಾದಂತೆ, ಬಿಸಿಬಿಸಿಯಾದ ಹಾಗೂ ಖಾರವಾದ ಆಹಾರದ ಬಯಕೆ ಹೆಚ್ಚುತ್ತದೆ. ರಾಜ್ಯದ ಅನೇಕ ಕಡೆಗಳಲ್ಲಿ ಸುರಿಯುತ್ತಿರುವ ಮಳೆಯು ಇಂತಹ ಹಂಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಇಂತಹ ವಾತಾವರಣದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ ಚೆಟ್ಟಿನಾಡ್ ಚಿಕನ್ (Chettinad Chicken) ಹೇಳಿ ಮಾಡಿಸಿದ ತಿನಿಸು. ಇದರ ವಿಶಿಷ್ಟ ಮಸಾಲೆ ಯಾವುದೇ ಭೋಜನಕ್ಕೆ ವಿಶೇಷ ಸ್ಪರ್ಶ ನೀಡುತ್ತದೆ.
ಚೆಟ್ಟಿನಾಡ್ ಚಿಕನ್ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಖಾದ್ಯವಾಗಿದೆ. ದಕ್ಷಿಣ ಭಾರತದಾದ್ಯಂತ ಜನಪ್ರಿಯವಾಗಿರುವ ಈ ಖಾದ್ಯವನ್ನು ಅನ್ನ, ರೊಟ್ಟಿ, ನಾನ್, ಚಪಾತಿ ಅಥವಾ ಪರೋಟಗಳೊಂದಿಗೆ ಸವಿಯಲು ಅತ್ಯುತ್ತಮ. ಈ ಮಸಾಲೆಭರಿತ ಮತ್ತು ರುಚಿಕರವಾದ ಚೆಟ್ಟಿನಾಡ್ ಚಿಕನ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಹಂತ ಹಂತದ ವಿಧಾನ (Chettinad Chicken Recipe) ಇಲ್ಲಿದೆ.

ಚೆಟ್ಟಿನಾಡ್ ಚಿಕನ್ ಮಾಡಲು ಬೇಕಾಗುವ ಸಾಮಗ್ರಿಗಳು
• ಧನಿಯಾ - 1 ಚಮಚ
• ಮೆಂತ್ಯ - 2 ಚಮಚ
• ಕಾಳುಮೆಣಸು - 1 ಚಮಚ
• ಚಕ್ಕೆ - 1 ಇಂಚು
• ಒಣ ಮೆಣಸಿನಕಾಯಿ - 3
• ಕಾಶ್ಮೀರಿ ಕೆಂಪು ಮೆಣಸಿನಕಾಯಿ - 2
• ಸ್ಟಾರ್ (ನಕ್ಷತ್ರ) - 1
• ಜೀರಿಗೆ - 1 ಚಮಚ
• ಏಲಕ್ಕಿ - 2
• ಲವಂಗ - 6
• ತೆಂಗಿನಕಾಯಿ - 2 ಚಮಚ
• ಶುಂಠಿ - ½ ಇಂಚು
• ಬೆಳ್ಳುಳ್ಳಿ - 3
• ಉಪ್ಪು - ರುಚಿಗೆ ತಕ್ಕಷ್ಟು
• ಚಿಕನ್ - 500 ಗ್ರಾಂ
• ಮೊಸರು - 1 ½ ಚಮಚ
• ನಿಂಬೆ ರಸ - 1 ಚಮಚ
• ತುಪ್ಪ - 1 ಚಮಚ
• ಈರುಳ್ಳಿ 1
• ಅರಿಶಿನ ಪುಡಿ - ½ ಚಮಚ
• ಉಪ್ಪು - 1 ಚಮಚ
• ಕರಿಬೇವು - 10
• ಕೊತ್ತಂಬರಿ ಸೊಪ್ಪು - ಸ್ವಲ್ಪ
ಚೆಟ್ಟಿನಾಡ್ ಚಿಕನ್ ತಯಾರಿಸುವ ವಿಧಾನ
ಚಿಕನ್ ಅನ್ನು ಮೊದಲು ಚೆನ್ನಾಗಿ ತೊಳೆದು, ನಂತರ ಅರಿಶಿನ ಮತ್ತು ಉಪ್ಪು ಬಳಸಿ ಮತ್ತೊಮ್ಮೆ ಸ್ವಚ್ಛಗೊಳಿಸಿ. ಚೆಟ್ಟಿನಾಡ್ ಮಸಾಲಾ ತಯಾರಿಸಲು, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹೊರತುಪಡಿಸಿ ಧನಿಯಾ, ಮೆಂತ್ಯ, ಸ್ಟಾರ್, ಒಣ ಮೆಣಸಿನಕಾಯಿ, ಕಾಶ್ಮೀರಿ ಮೆಣಸಿನಕಾಯಿ, ಏಲಕ್ಕಿ, ತೆಂಗಿನಕಾಯಿ ಚೂರು ಸೇರಿದಂತೆ ಉಳಿದ ಪದಾರ್ಥಗಳನ್ನು ಹುರಿದು ತಣ್ಣಗಾಗಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಹುರಿದ ಮಸಾಲೆ ಪದಾರ್ಥಗಳೊಂದಿಗೆ ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ತೆಂಗಿನಕಾಯಿ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಚಿಕನ್‌ಗೆ ಹಾಕಿ, ನಿಂಬೆ ರಸ, ಮೊಸರು ಸೇರಿಸಿ 60 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ. ನಂತರ ಗ್ಯಾಸ್ ಆನ್ ಮಾಡಿ ಬಾಣಲೆಯಲ್ಲಿ 1 ಚಮಚ ತುಪ್ಪ ಬಿಸಿ ಮಾಡಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಅರಿಶಿನ ಪುಡಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಹುರಿದ ಈರುಳ್ಳಿಗೆ ಈಗ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ ಚೆನ್ನಾಗಿ ತಿರುಗಿಸಿ. ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಚೆಟ್ಟಿನಾಡ್ ಮಸಾಲೆ ಚಿಕನ್‌ನೊಂದಿಗೆ ಪೂರ್ತಿಯಾಗಿ ಬೇಯುವವರೆಗೆ ಮುಚ್ಚಿ ಬೇಯಿಸಿ. ಅಡುಗೆ ಪೂರ್ಣಗೊಂಡ ನಂತರ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ ಅಲಂಕರಿಸಿ. ಈ ರುಚಿಕರವಾದ ಚೆಟ್ಟಿನಾಡ್ ಚಿಕನ್ ಸಿದ್ಧ.
ಈಗ ಸಿದ್ಧವಾದ ಚೆಟ್ಟಿನಾಡ್ ಚಿಕನ್ ಅನ್ನು ಬಿಸಿಬಿಸಿ ಅನ್ನ, ರೊಟ್ಟಿ, ನಾನ್, ಚಪಾತಿ, ಪರೋಟ ಅಥವಾ ಇಡ್ಲಿಯೊಂದಿಗೆ ಆನಂದಿಸಿ. ಮಧ್ಯಾಹ್ನದ ಊಟವಾಗಲಿ, ರಾತ್ರಿಯ ಭೋಜನವಾಗಲಿ ಈ ಖಾದ್ಯವು ನಿಮ್ಮ ಮನತಣಿಸುತ್ತದೆ.



Click it and Unblock the Notifications
