Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರೆಸಿಪಿ: ಚೀಸ್ ಪನ್ನೀರ್ ಸ್ಯಾಂಡ್ವಿಚ್
ಸ್ಯಾಂಡ್ವಿಚ್ ಇದನ್ನು ಬೆಳಗ್ಗೆ ಮಾಡಿದರೆ ಬ್ರೇಕ್ಫಾಸ್ಟ್, ಸಂಜೆ ಮಾಡಿದರೆ ಸ್ನ್ಯಾಕ್ಸ್ , ಸ್ಯಾಂಡ್ವಿಚ್ ರುಚಿಯ ಜೊತೆಗೆ ಹೊಟ್ಟೆಯೂ ತುಂಬುವುದರಿಂದ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ನಾವಿಲ್ಲಿ ಇಂಡೋ-ಚೈನೀಸ್ ಶೈಲಿಯ ಷೆಜ್ವಾನ್ ಸ್ಯಾಂಡ್ವಿಚ್ ರೆಸಿಪಿ ನೀಡಿದ್ದೇವೆ.

ತುಂಬಾ ಟೇಸ್ಟಿಯಾಗಿರುವ ಈ ಸ್ಯಾಂಡ್ವಿಚ್ ಮಾಡುವ ವಿಧಾನ ಕೂಡ ಸುಲಭವಾಗಿದೆ. ಇದಕ್ಕೆ ಷೆಜ್ವಾನ್ ಸಾಸ್ ಬೇಕಾಗುವುದು, ನಂತರ ನಿಮಗಿಷ್ಟವಾದ ತರಕಾರಿ ಹಾಕಿ ತಯಾರಿಸಬಹುದು. ನಾವಿಲ್ಲಿ ಪನ್ನೀರ್ ಹಾಕಿ ಮಾಡಿರುವ ರೆಸಿಪಿ ಶೇರ್ ಮಾಡಿದ್ದೇವೆ ನೋಡಿ:
Recipe By: Meena Bhandari
Recipe Type: Snacks
Serves: 2
-
ಬೇಕಾಗುವ ಸಾಮಗ್ರಿ
ಪನ್ನೀರ್ 1ಕಪ್
ಮೊಜೆರೆಲ್ಲಾ ಚೀಸ್ 1/ 4 ಕಪ್
ಸ್ಪ್ರಿಂಗ್ ಆನಿಯನ್ ಅರ್ಧ ಕಪ್
ಷೆಜ್ವಾನ್ ಸಾಸ್ 2 ಚಮಚ
ಟೊಮೆಟೊ ಕೆಚಪ್ 2 ಚಮಚ
ಕಾಳು ಮೆಣಸಿನ ಪುಡಿ (ರುಚಿಗೆ ತಕ್ಕಷ್ಟು)
ಬೆಣ್ಣೆ 3 ಚಮಚ
ಬಿಳಿ ಸ್ಯಾಂಡ್ವಿಚ್ ಬ್ರೆಡ್ 4 ಪೀಸ್
-
ಮಾಡುವುದು ಹೇಗೆ?
* ಪನ್ನೀರ್ ಕ್ಯೂಬ್ಸ್ ಅನ್ನು ಒಂದು ಬೌಲ್ಗೆ ಹಾಕಿ.
* ಅದರಲ್ಲಿ ಮೊಜೆರೆಲ್ಲಾ ಚೀಸ್ ಹಾಗೂ ಸ್ಪ್ರಿಂಗ್ ಆನಿಯನ್ ಹಾಕಿ.
* ಷೆಜ್ವಾನ್ ಸಾಸ್ ಅದರಲ್ಲಿ ಹಾಕಿ.
* ಈಗ ಟೊಮೆಟೊ ಕೆಚಪ್ ಹಾಗೂ ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ.
* ಒಂದು ಚಮಚ ಬೆಣ್ಣೆ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ.
* ಈಗ ವೈಟ್ ಸ್ಯಾಂಡ್ವಿಚ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಸವರಿ.
* ಅದರ ಮೇಲೆ ಷೆಜ್ವಾನ್ ಮಿಶ್ರಣ ಹರಡಿ, ನಂತರ ಮತ್ತೊಂದು ಸ್ಯಾಂಡ್ವಿಚ್ನಿಂದ ಕವರ್ ಮಾಡಿ.
* ಈಗ ಸ್ಯಾಂಡ್ವಿಚ್ ಎರಡೂ ಬದಿ ರೋಸ್ಟ್ ಆಗುವವರೆಗೆ ಗ್ರಿಲ್ಡ್ ಮಾಡಿ.
* ಬಿಸಿ ಬಿಸಿ ಇರುವಾಗಲೇ ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಿ.
- ನೀವು ಇದಕ್ಕೆ ನಿಮಗಿಷ್ಟವಾದ ತರಕಾರಿ ಹಾಗೂ ಮಶ್ರೂಮ್ ಬಳಸಬಹುದು. ಸ್ಯಾಂಡ್ವಿಚ್ ಗ್ರಿಲ್ಡ್ ಮಾಡುವ ಮೆಷಿನ್ ಇಲ್ಲದಿದ್ದರೆ ತವಾದಲ್ಲಿಯೂ ರೋಸ್ಟ್ ಮಾಡಬಹುದು.
- ಕ್ಯಾಲೋರಿ - 212ಕ್ಯಾ
- ಕೊಬ್ಬು - 8.8ಗ್ರಾಂ
- ಪ್ರೊಟೀನ್ - 7.7ಗ್ರಾಂ
ಮಾಡುವುದು ಹೇಗೆ?
* ಪನ್ನೀರ್ ಕ್ಯೂಬ್ಸ್ ಅನ್ನು ಒಂದು ಬೌಲ್ಗೆ ಹಾಕಿ.







* ಬಿಸಿ ಬಿಸಿ ಇರುವಾಗಲೇ ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಿ.



Click it and Unblock the Notifications