Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರೆಸಿಪಿ: ಅಡುಗೆಗೆ ಟೈಮ್ ಇಲ್ಲದಿದ್ದಾಗ ಪಟ್ ಮಾಡಬಹುದು ಈ ಮಾವಿನಕಾಯಿ ಗೊಜ್ಜು
ನಾವು ಗಡಿಬಿಡಿಯಲ್ಲಿ ಇರ್ವಾಗ ಅಡುಗೆಗೆ ಅಂತ ಹೆಚ್ಚು ಟೈಮ್ ತಗೋಳ್ಳೋಕ್ಕಾಗಲ್ಲ. ಹಾಗಂತ ಬಾಯಿ ರುಚಿ ಬಯಸದೇ ಇರತ್ತಾ? ಖಂಡಿತ ಇಲ್ಲ. ಹಾಗೆ ಅರ್ಜೆಂಟ್ನಲ್ಲಿರ್ವಾಗ್ಲೂ ಸುಲಭ್ವಾಗಿ ಮಾಡ್ಕೊಳ್ಳೋ ಟೇಸ್ಟಿ ರೆಸಿಪಿ ಇದು.
ಮಾವಿನ ಹಣ್ಣಿನ ಸೀಸನ್ ಮುಗಿದು ಹೋಗ್ತಿದೆ. ಅದಿಕ್ಕೆ ಆದಷ್ಟ್ ಬೇಗ ನೀವ್ ಮಾವಿನ್ ಕಾಯಿಯನ್ನ ತಂದು ಈ ರೀತಿ ಸ್ಟೋರ್ ಮಾಡಿಟ್ರೆ ವರ್ಷದವರೆಗೂ ಅದ್ರಿಂದ್ ರುಚಿ ರುಚಿಯಾದ ಅಡುಗೆ ಮಾಡ್ಕೊಂಡು ತಿನ್ನಬಹುದು. ಮೊದಲಿಗೆ ಮಾವಿನ ಕಾಯಿ ಕೆಡದಂತೆ ಇಟ್ಟುಕೊಳ್ಳುವುದು ಹೇಗೇ ನೋಡೋಣ.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಈ ಸಮಯದಲ್ಲಿ ಎಲ್ಲರ ಮನೆಯಲ್ಲೂ ಈ ಮಾವಿನ ಕಾಯಿ ಇರುತ್ತದೆ. ಬೇಸಿಗೆಯಲ್ಲಿ ಹದವಾಗಿ ಬಲಿತ ಮಾವಿನಕಾಯಿ ತಂದು ಅದನ್ನು ಸ್ಪಚ್ಚಗೊಳಿಸಿ. ಸ್ವಲ್ಪ ಬೇಯಿಸಿಕೊಳ್ಳಿ. ನಂತರ ಬೆಂದ ಮಾವಿನ ಕಾಯನ್ನು ಬಿಸಿ ಆರಿದ ನಂತರ ಉಪ್ಪು ನೀರಿನಲ್ಲಿ ಹಾಕಿ ಒಂದು ಗಾಜಿನ ಭರಣಿಯಲ್ಲಿ ತುಂಬಿಸಿ. ಇದನ್ನು ಹೊರಗಡೆ ಟೆಂಪ್ರೆಚರ್ನಲ್ಲಿ ಅಥವಾ ಫ್ರಿಡ್ಜ್ ನಲ್ಲಿ ಇಡಬಹುದು.
ವರ್ಷವಾದರೂ ಇದು ಕೆಡುವುದಿಲ್ಲ. ಈಗ ಈ ಮಾವಿನ ಕಾಯಿ ಗೊಜ್ಜು ಮಾಡುವುದು ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು
ಕೊರ್ಸ್ ಕಾಯಿ (ಮಾವಿನ ಕಾಯಿ) -ಒಂದರಿಂದ ಎರಡು
ಬೆಳ್ಳುಳ್ಳಿ ಎಸಳುಗಳು - 10
ಮಜ್ಜಿಗೆ ಮೆಣಸು (ಸಂಡಿಗೆ ಮೆಣಸು) - ಖಾರಕ್ಕೆ ತಕ್ಕಷ್ಟು
ಉದ್ದಿನ ಬೇಳೆ - ಒಂದು ಚಮಚ
ಜೀರಿಗೆ - ಒಂದು ಚಮಚ
ಸಾಸಿವೆ - ಅರ್ಧ ಚಮಚ
ಕರಿಬೇವು - ಒಂದು ಹತ್ತು ಎಲೆ
ಕೊಬ್ಬರಿ ಎಣ್ಣೆ - ಒಗ್ಗರಣೆಗೆ
ಸಿಹಿಮೋಸರು - ಒಂದು ಬೌಲ್
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಒಂದು ಅಥವಾ ಎರಡು ಕೊರ್ಸ್ ಗಾಯಿ ತಗೊಂಡು ಅದನ್ನು ಮ್ಯಾಶ್ ಮಾಡಿ ಇಟ್ಟುಕೊಳ್ಳಿ. ಒಂದು ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿ ಆದ ನಂತರ ಉದ್ದಿನ ಬೇಳೆ, ಜೀರಿಗೆ ಮತ್ತು ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಕರಿಬೇವು ಹಾಕಿ. ಈಗ ಬಾಣಲೆಗೆ ಜಜ್ಜಿಟ್ಟ ಬೆಳ್ಳುಳ್ಳಿ ಎಸಳನ್ನು ಹಾಕಬೇಕು. ಬೆಳ್ಳುಳ್ಳಿಯನ್ನು ಸ್ವಲ್ಪ ಜಾಸ್ತಿನೇ ಹಾಕಿ ರುಚಿ ಇನ್ನಷ್ಟು ಚೆನ್ನಾಗಿರತ್ತೆ.
ಬೆಳ್ಳುಳ್ಳಿ ಸ್ವಲ್ಪ ಬೆಂದಾಗ ಕತ್ತರಿಸಿದ ಮಜ್ಜಿಗೆ ಮೆಣಸನ್ನು ಸೇರಿಸಿ ಸ್ವಲ್ಪ ಹುರಿಯಿರಿ. (ಖಾರ ಜಾಸ್ತಿ ಬೇಕಿದ್ದಲ್ಲಿ ಗ್ರೀನ್ ಚಿಲ್ಲಿ ಸೇರಿಸಬಹುದು.) ಹುರಿದ ಒಗ್ಗರಣೆಗೆ ಮ್ಯಾಶ್ ಮಾಡಿಟ್ಟುಕೊಂಡ ಮಾವಿನಕಾಯಿಯನ್ನ ಸೇರಿಸಿ. ಚೆನ್ನಾಗಿ ಬೇಯಿಸಿ. ಇದನ್ನು ಸ್ವಲ್ಪ ಹೊತ್ತು ಆರಲು ಬಿಡಬೇಕು. ನಂತರ ಇದಕ್ಕೆ ಸಿಹಿ ಮೊಸರು ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಮಾವಿನಕಾಯಿ ಮತ್ತು ಮೊಸರು ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಶ್ರಣ ಮಾಡಿಕೊಳ್ಳಿ. ಈಗ ರುಚಿ ರುಚಿಯಾದ ಕೊರ್ಸ್ ಗಾಯಿ ಮಾವಿನ ಕಾಯಿ ಗೊಜ್ಜು ರೆಡಿ. ಇದನ್ನು ಬಿಸಿ ಬಿಸಿ ಅನ್ನಕ್ಕೆ ಅಥವಾ ಚಪಾತಿ ಜೊತೆಗೆ ತಿನ್ನಬಹುದು.



Click it and Unblock the Notifications
