Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಕ್ಯಾರೆಟ್ ಸೊಪ್ಪು ಸಿಕ್ಕರೆ ಈ ಚಟ್ನಿ ಮಿಸ್ ಮಾಡದೆ ಟ್ರೈ ಮಾಡಿ
ನೀವು ಕ್ಯಾರೆಟ್ ಸೊಪ್ಪಿನಿಂದ ಏನಾದರೂ ಪಲ್ಯ ಚಟ್ನಿ ಮಾಡಿದ್ದೀರಾ? ಕ್ಯಾರೆಟ್ ಸೊಪ್ಪು ಹೇಗಿರುತ್ತದೆ ಎಂದು ಅದು ಬೆಳೆಯುವ ಪ್ರದೇಶದವರಿಗೆ ಹೊರತು ಪಡಿಸಿ ನಗರದವರಿಗೆ ಪರಿಚಯವೇ ಕಡಿಮೆ ಎಂದು ಹೇಳಬಹುದು. ಏಕೆಂದರೆ ಮಾರುಕಟ್ಟೆಗೆ ಬರೀ ಕ್ಯಾರೆಟ್ ಬರುತ್ತೆ, ಸೊಪ್ಪು ಸಹಿತ ಬರುವುದು ಕಡಿಮೆ.

ಮೂಲಂಗಿ ಸೊಪ್ಪು ಸಹಿತ ಸಿಗುತ್ತದೆ. ಕ್ಯಾರೆಟ್ ಸೊಪ್ಪು ಸಹಿತ ಸಿಗುವುದು ತುಂಬಾ ಕಡಿಮೆ. ಒಂದು ವೇಳೆ ಸಿಕ್ಕರೆ ಅದರಿಂದ ಏನೂ ಮಾಡುವುದು ಎಂದು ತಿಳಿಯದೆ ಬಿಸಾಡು ಬದಲು ಒಂದು ರುಚಿಯಾದ ಚಟ್ನಿ ರೆಡಿ ಮಾಡಿ.
ನಾವಿಲ್ಲಿ ಕ್ಯಾರೆಟ್ ಸೊಪ್ಪಿನ ಚಟ್ನಿ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:
Recipe By: Reena TK
Recipe Type: chutney
Serves: 4
-
ಬೇಕಾಗುವ ಸಾಮಗ್ರಿ
2 ಎಸಳು ಬೆಳ್ಳುಳ್ಳಿ
ಉದ್ದಿನ ಬೇಳೆ ಅರ್ಧ ಚಮಚ
ಚಿಟಿಕೆಯಷ್ಟು ಇಂಗು (optional)
ಸ್ವಲ್ಪ ಸಾಸಿವೆ
1 ಚಮಚ ಎಣ್ಣೆ
ಒಂದು ಚಿಕ್ಕ ನೆಲ್ಲಿಕಾಯಿಯಷ್ಟು ಹುಣಸೆ ಹಣ್ಣು
1 ಈರುಳ್ಳಿ
4 ಹಸಿ ಮೆಣಸು ( ನಿಮ್ಮ ಖಾರಕ್ಕೆ ತಕ್ಕಂತೆ)
1 ಕಪ್ ಕ್ಯಾರೆಟ್ ಸೊಪ್ಪು
1 ಕಪ್ ತೆಂಗಿನ ತುರಿ
ರುಚಿಗೆ ತಕ್ಕ ಉಪ್ಪು
-
ಮಾಡುವುದು ಹೇಗೆ?
* ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ ಚಟ್‌ಪಟ್ ಶಬ್ದ ಬರುವಾಗ ಉದ್ದಿನ ಬೇಳೆ,ಇಂಗು ಹಾಕಿ.
* ನಂತರ ಬೆಳ್ಳುಳ್ಳು ಎಸಳು ಹಾಕಿ ಒಂದು ಸೆಕೆಂಡ್ ಫ್ರೈ ಮಾಡಿ ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಸೊಪ್ಪು, ಹುಣಸೆ ಹಣ್ಣು, ತೆಂಗಿನ ತುರಿ, ಹಸಿ ಮೆಣಸಿನ ಕಾಯಿ 2-3 ನಿಮಿಷ ಫ್ರೈ ಮಾಡಿ.
* ಸೊಪ್ಪಿನ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
* ನಂತರ ಉರಿಯಿಂದ ಇಳಿಸಿ.
* ತಣ್ಣಗಾದ ಮೇಲೆ ರುಚಿಗೆ ತಕ್ಕ ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿ.
ಈ ಚಟ್ನಿ, ದೋಸೆ ಅಥವಾ ಅನ್ನದ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತೆ.
- ನೀವು ಈ ಸೊಪ್ಪಿನಿಂದ ಪಲ್ಯ ಕೂಡ ಮಾಡಬಹುದು ಚಟ್ನಿ ಮಾಡಿದರೆತೆಂಗಿನ ಕಾಯಿ ಹುರಿದು ಮಾಡಿರು ಕಾರಣ ಎರಡು ದಿನ ಇಟ್ಟರೂ ಹಾಳಾಗುವುದಿಲ್ಲ.
ಮಾಡುವುದು ಹೇಗೆ?
* ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ ಚಟ್‌ಪಟ್ ಶಬ್ದ
ಬರುವಾಗ ಉದ್ದಿನ ಬೇಳೆ,ಇಂಗು ಹಾಕಿ.

* ನಂತರ ಬೆಳ್ಳುಳ್ಳು ಎಸಳು ಹಾಕಿ ಒಂದು ಸೆಕೆಂಡ್ ಫ್ರೈ ಮಾಡಿ ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಸೊಪ್ಪು, ಹುಣಸೆ ಹಣ್ಣು, ತೆಂಗಿನ ತುರಿ, ಹಸಿ ಮೆಣಸಿನ ಕಾಯಿ 2-3 ನಿಮಿಷ ಫ್ರೈ ಮಾಡಿ.

* ಸೊಪ್ಪಿನ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
* ನಂತರ ಉರಿಯಿಂದ ಇಳಿಸಿ.
* ತಣ್ಣಗಾದ ಮೇಲೆ ರುಚಿಗೆ ತಕ್ಕ ಉಪ್ಪು ಸೇರಿಸಿ ಗಟ್ಟಿಯಾಗಿ
ರುಬ್ಬಿ.

ಈ ಚಟ್ನಿ, ದೋಸೆ ಅಥವಾ ಅನ್ನದ ಜೊತೆ ಸವಿಯಲು ತುಂಬಾ
ರುಚಿಯಾಗಿರುತ್ತೆ.




Click it and Unblock the Notifications