ಎಲೆಕೋಸು ಪಲ್ಯ ಪಾಕವಿಧಾನ

Posted By: Lekhaka
Subscribe to Boldsky

ಎಲೆಕೋಸು ಪಲ್ಯ ಎನ್ನುವುದು ದಕ್ಷಿಣ ಭಾರತದ ಪ್ರಸಿದ್ಧ ಪಾಕವಿಧಾನದಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುತ್ತಾರೆ. ತೆಂಗಿನ ತುರಿಯ ಜೊತೆಗೆ ಬೆರೆತುಕೊಳ್ಳುವ ಎಲೆಕೂಸಿನ ಪಲ್ಯ ಅನನ್ಯವಾದ ಸುವಾಸನೆಯನ್ನು ನೀಡುತ್ತದೆ. ಇದನ್ನು ತಮಿಳುನಾಡಿನಲ್ಲಿ ಕೂಸು ಪೊರಿಯಲ್ ಎಂದು ಕರೆದರೆ, ಕೇರಳದಲ್ಲಿ ಕೇಸೇಜ್ ಥೋರನ್ ಎಂದು ಕರೆಯುತ್ತಾರೆ.

ಎಲೆಕೋಸು ಪಲ್ಯವನ್ನು ಸಾಂಬರ್ ರೈಸ್, ರಸಮ್ ರೈಸ್ ಜೊತೆಗೆ ಸೈಡ್ ಡಿಶ್ ರೀತಿಯಲ್ಲಿ ಸವಿಯಬಹುದು. ಅಲ್ಲದೆ ದೋಸೆ, ರೊಟ್ಟಿಗೆ ಕರ್ರೀಯ ರೀತಿಯಲ್ಲಿ ತಿನ್ನಬಹುದು. ಉತ್ತಮ ಮಸಾಲದೊಂದಿಗೆ ತಯಾರಿಸಲಾಗುವ ಈ ಪಾಕವಿಧಾನ ಆರೋಗ್ಯಕ್ಕೂ ಪೂರಕವಾಗಿದೆ. ಈ ಪಲ್ಯವನ್ನು ಸುಲಭವಾಗಿ ಹಾಗೂ ಅಗತ್ಯವಿದ್ದಾಗ ಬಹು ಬೇಗ ತಯಾರಿಸಬಹುದು. ಈ ರುಚಿಕರ ಪಲ್ಯವನ್ನು ತಯಾರಿಸುವ ಬಗೆಯ ಕುರಿತು ವಿಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ನಾವಿಲ್ಲಿ ನೀಡಿದ್ದೇವೆ...

ಕ್ಯಾಬೇಜ್ ಸ್ಟಿರ್ ಫ್ರೈ ವಿಡಿಯೋ ರೆಸಿಪಿ

Cabbage palya recipe
ಎಲೆಕೋಸು ಪಲ್ಯ ಪಾಕವಿಧಾನ | ಹಂತ ಹಂತವಾದ ಕೂಸು ಪಲ್ಯ ರೆಸಿಪಿ | ಕ್ಯಾಬೇಜ್ ಪೊರಿಯಲ್ ರೆಸಿಪಿ | ಕ್ಯಾಬೇಜ್ ಥೋರನ್ ರೆಸಿಪಿ | ಕ್ಯಾಬೇಜ್ ಸ್ಟಿರ್ ಫ್ರೈ ವಿಡಿಯೋ ರೆಸಿಪಿ.'
ಎಲೆಕೋಸು ಪಲ್ಯ ಪಾಕವಿಧಾನ | ಹಂತ ಹಂತವಾದ ಕೂಸು ಪಲ್ಯ ರೆಸಿಪಿ | ಕ್ಯಾಬೇಜ್ ಪೊರಿಯಲ್ ರೆಸಿಪಿ | ಕ್ಯಾಬೇಜ್ ಥೋರನ್ ರೆಸಿಪಿ | ಕ್ಯಾಬೇಜ್ ಸ್ಟಿರ್ ಫ್ರೈ ವಿಡಿಯೋ ರೆಸಿಪಿ.'
Prep Time
15 Mins
Cook Time
10M
Total Time
25 Mins

Recipe By: ಅರ್ಚನಾ ವಿ.

Recipe Type: ಪಲ್ಯ/ಸೈಡ್ ಡಿಶ್

Serves: 2 ಮಂದಿಗೆ

Ingredients
 • ಹೆಚ್ಚಿಕೊಂಡ ತೆಂಗಿನಕಾಯಿ - 1/4 ಬೌಲ್

  ಸಾಸಿವೆ ಕಾಳು - 2 ಟಿಚಮಚ

  ಬ್ಯಾಡಗಿ ಮೆಣಸು - 1 1/2

  ಹುಣಸೆ ಹಣ್ಣು - 1/2 ನಿಂಬೆ ಹಣ್ಣಿನ ಗಾತ್ರದಷ್ಟು

  ಎಣ್ಣೆ - 1 ಟೇಬಲ್ ಚಮಚ

  ಜೀರಿಗೆ - 1 ಟೀ ಚಮಚ

  ಇಂಗು - ಒಂದು ಚಿಟಕಿ

  ಕರಿ ಬೇವಿನ ಎಲೆ - 7-10

  ಹೆಚ್ಚಿಕೊಂಡ ಎಲೆಕೋಸು - 1/2 ಎಲೆಕೋಸು

  ರುಚಿಗೆ ತಕ್ಕಷ್ಟು ಉಪ್ಪು

Red Rice Kanda Poha
How to Prepare
 • 1. ತೆಂಗಿನಕಾಯಿ ಮತ್ತು 1 ಟೀ ಚಮಚ ಸಾಸಿವೆಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ.

  2. ಅದೇ ರೀತಿ ಬ್ಯಾಡಗಿ ಮೆಣಸು, ಮತ್ತು ಹುಣಸೆ ಹಣ್ಣನ್ನು ಸೇರಿಸಿ.

  3. ಹಾಗೇ ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಅಗತ್ಯಬಿದ್ದರೆ ಒಂದು ಟೇಬಲ್ ಚಮಚ ನೀರನ್ನು ಸೇರಿಸಿ ರುಬ್ಬಿ.

  4. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

  5. ಸಾಸಿವೆ ಕಾಳು, ಜೀರಿಗೆ, ಇಂಗು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.

  6. ನಂತರ ಎಲೆಕೋಸನ್ನು ಬೆರೆಸಿ ಚೆನ್ನಾಗಿ ಕಲುಕಿರಿ.

  7. ಈ ಮಿಶ್ರಣವು ಬೇಯಲು 4-5 ನಿಮಿಷಗಳ ಕಾಲ ಬಿಡಿ.

  8. ಮುಚ್ಚಳನ್ನು ಮುಚ್ಚಿ ಬೇಯಿಸಿದರೆ ಅದು ನೀರನ್ನು ಬಿಟ್ಟುಕೊಂಡು ಅರ್ಧ ಬೇಯುತ್ತದೆ.

  9. ಇದಕ್ಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

  10. ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ.

  11. ಪುನಃ ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಲು ಬಿಡಿ.

  12. ಚೆನ್ನಾಗಿ ಮಿಶ್ರಗೊಳಿಸಿ ನಂತರ ಸವಿಯಲು ನೀಡಿ.

Instructions
 • 1. ಎಲೆಕೋಸನ್ನು ತುಂಬಾ ಮೃದುವಾಗಿ ಬೇಯಿಸಿಕೊಳ್ಳಬಾರದು. ಇದು ಬಹುಬೇಗ ಬೇಯುವ ಸಾಧ್ಯತೆ ಇರುತ್ತದೆ.
 • 2. ಬ್ಯಾಡಗಿ ಮೆಣಸು ಬಳಸುವುದರಿಂದ ಹೆಚ್ಚುವರಿ ಪರಿಮಳ ಹಾಗೂ ರುಚಿಯನ್ನು ನೀಡುತ್ತದೆ. ಇಲ್ಲದಿದ್ದರೆ ಯಾವುದಾದರೂ ಒಣ ಮೆಣಸನ್ನು ಬಳಸಬಹುದು.
 • 3. ಮಸಾಲ ರುಬ್ಬಿಕೊಳ್ಳುವಾಗ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಬಳಸಬಹುದು.
 • 4. ಎಲೆಕೋಸನ್ನು ಅರ್ಧ ಬೇಯಿಸಿಕೊಂಡರೆ ಹೆಚ್ಚು ರುಚಿಯಾಗಿರುತ್ತದೆ.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರಿ - 80 ಕ್ಯಾಲ್
 • ಫ್ಯಾಟ್ - 5 ಗ್ರಾಂ.
 • ಪ್ರೋಟೀನ್ - 2 ಗ್ರಾಂ.
 • ಕಾರ್ಬೋಹೈಡ್ರೇಟ್ - 7 ಗ್ರಾಂ.
 • ಫೈಬರ್ - 3 ಗ್ರಾಂ.

ಎಲೆಕೋಸು ಪಲ್ಯ ಪಾಕವಿಧಾನ

1. ತೆಂಗಿನಕಾಯಿ ಮತ್ತು 1 ಟೀ ಚಮಚ ಸಾಸಿವೆಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ.

Cabbage palya recipe
Cabbage palya recipe

2. ಅದೇ ರೀತಿ ಬ್ಯಾಡಗಿ ಮೆಣಸು, ಮತ್ತು ಹುಣಸೆ ಹಣ್ಣನ್ನು ಸೇರಿಸಿ.

Cabbage palya recipe
Cabbage palya recipe

3. ಹಾಗೇ ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಅಗತ್ಯಬಿದ್ದರೆ ಒಂದು ಟೇಬಲ್ ಚಮಚ ನೀರನ್ನು ಸೇರಿಸಿ ರುಬ್ಬಿ.

Cabbage palya recipe

4. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

Cabbage palya recipe

5. ಸಾಸಿವೆ ಕಾಳು, ಜೀರಿಗೆ, ಇಂಗು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.

Cabbage palya recipe
Cabbage palya recipe
Cabbage palya recipe
Cabbage palya recipe

6. ನಂತರ ಎಲೆಕೋಸನ್ನು ಬೆರೆಸಿ ಚೆನ್ನಾಗಿ ಕಲುಕಿರಿ.

Cabbage palya recipe
Cabbage palya recipe

7. ಈ ಮಿಶ್ರಣವು ಬೇಯಲು 4-5 ನಿಮಿಷಗಳ ಕಾಲ ಬಿಡಿ.

Cabbage palya recipe

8. ಮುಚ್ಚಳನ್ನು ಮುಚ್ಚಿ ಬೇಯಿಸಿದರೆ ಅದು ನೀರನ್ನು ಬಿಟ್ಟುಕೊಂಡು ಅರ್ಧ ಬೇಯುತ್ತದೆ.

Cabbage palya recipe

9. ಇದಕ್ಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

Cabbage palya recipe

10. ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ.

Cabbage palya recipe
Cabbage palya recipe

11. ಪುನಃ ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಲು ಬಿಡಿ.

Cabbage palya recipe

12. ಚೆನ್ನಾಗಿ ಮಿಶ್ರಗೊಳಿಸಿ ನಂತರ ಸವಿಯಲು ನೀಡಿ.

Cabbage palya recipe
Cabbage palya recipe
[ 3.5 of 5 - 44 Users]