Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೊಜ್ಜು ಕರಗಿಸುವ ಇಡ್ಲಿ.. ರುಚಿಯಲ್ಲಿ ನಂಬರ್ 1, ಆರೋಗ್ಯದಲ್ಲಿ ಅದಕ್ಕಿಂತಲೂ ಮೇಲೆ! ಮಾಡೋದು ಹೇಗೆ?
ಬೊಜ್ಜು ಕರಗಿಸುವ ಇಡ್ಲಿ.. ರುಚಿಯಲ್ಲಿ ನಂಬರ್ 1, ಆರೋಗ್ಯದಲ್ಲಿ ಅದಕ್ಕಿಂತಲೂ ಮೇಲೆ! ಈ ಸ್ಪೆಷಲ್ ಇಡ್ಲಿ (Idli) ಒಮ್ಮೆ ತಿಂದ್ರೆ ಬಿಡಲ್ಲ. ಮಾಡುವ ಸುಲಭ ವಿಧಾನ ಇಲ್ಲಿದೆ. ಆರೋಗ್ಯಕರ ಜೀವನಶೈಲಿಗೆ ಬೆಳಗಿನ ಉಪಹಾರ ಬಹಳ ಮುಖ್ಯ. ರುಚಿಕರ ಮತ್ತು ಪೌಷ್ಟಿಕ ಆಯ್ಕೆಯಾದ ದಲಿಯಾ ಇಡ್ಲಿ (ಗೋಧಿ ನುಚ್ಚಿನ ಇಡ್ಲಿ - Daliya Idli) ತೂಕ ಇಳಿಸುವವರ ಆದ್ಯತೆಯಾಗಿದೆ.
ಸಾಂಪ್ರದಾಯಿಕ ಅಕ್ಕಿ ಇಡ್ಲಿಗೆ ಇದೊಂದು ಉತ್ತಮ ಪರ್ಯಾಯ. ಕಡಿಮೆ ಎಣ್ಣೆ ಬಳಕೆಯಾದರೂ, ಇದರ ರುಚಿ ಅದ್ಭುತ, ಇಡೀ ಕುಟುಂಬಕ್ಕೆ ಮೆಚ್ಚುಗೆಯಾಗುತ್ತದೆ. ಇದು ದೇಹಕ್ಕೆ ಶಕ್ತಿ ನೀಡಿ, ದೀರ್ಘಕಾಲ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಈ ಆರೋಗ್ಯಕರ ಗೋಧಿ ನುಚ್ಚಿನ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು (Daliya Idli Recipe) ಈ ಲೇಖನದಲ್ಲಿ ತಿಳಿಸಲಾಗಿದೆ.
ಆರೋಗ್ಯಕ್ಕೆ ಏನು ಲಾಭ?
ದಾಲಿಯಾ ಇಡ್ಲಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಕ್ಕಿ ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿದ್ದರೆ, ದಲಿಯಾ ಇಡ್ಲಿಯು ಫೈಬರ್, ಕಬ್ಬಿಣಾಂಶ, ಸಂಕೀರ್ಣ ಕಾರ್ಬೋಹೈಡ್ರೇಟ್ಗಳಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರೊಂದಿಗೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಠಾತ್ತಾಗಿ ಹೆಚ್ಚಿಸುವುದಿಲ್ಲ. ಇದರಿಂದ ಮಧುಮೇಹಿಗಳಿಗೂ ಇದು ಉತ್ತಮ ಆಹಾರವಾಗಿದೆ.
ಇದರ ಉತ್ತಮ ನಾರಿನಂಶ ತೂಕ ನಿರ್ವಹಣೆಗೆ ಸಹಕಾರಿ. ಹೊಟ್ಟೆ ಬೇಗ ತುಂಬುವುದರಿಂದ ಅನಗತ್ಯ ತಿನ್ನುವುದು ತಪ್ಪುತ್ತದೆ. ಫೈಬರ್ ಸಮೃದ್ಧವಾಗಿರುವುದರಿಂದ ಮಲಬದ್ಧತೆ ಸಮಸ್ಯೆ ಪರಿಹಾರವಾಗುತ್ತದೆ. ದಲಿಯಾ ದೇಹಕ್ಕೆ ನಿಧಾನವಾಗಿ ಶಕ್ತಿ ನೀಡಿ ದಿನವಿಡೀ ಲವಲವಿಕೆಯಿಂದ ಇರಲು ನೆರವಾಗುತ್ತದೆ. ಇದು ಸಂಪೂರ್ಣ ಆರೋಗ್ಯ ಪ್ಯಾಕೇಜ್ ಆಗಿದೆ.
ಈ ಇಡ್ಲಿಗೆ ಬೇಕಾಗುವ ಸಾಮಗ್ರಿಗಳು
• ದಪ್ಪ ಗೋಧಿ ನುಚ್ಚು (ದಾಲಿಯಾ)
• ರವೆ (ಸೂಜಿ)
• ಮೊಸರು
• ತುರಿದ ಕ್ಯಾರೆಟ್
• ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ
• ತುರಿದ ಶುಂಠಿ
• ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ
• ರುಚಿಗೆ ತಕ್ಕಷ್ಟು ಉಪ್ಪು
• ಇನೋ (Eno) ಅಥವಾ ಫ್ರೂಟ್ ಸಾಲ್ಟ್
• ಸಾಸಿವೆ
• ಕರಿಬೇವು
• ಎಣ್ಣೆ
ಗೋಧಿ ನುಚ್ಚಿನ ಇಡ್ಲಿ ಮಾಡುವ ವಿಧಾನ
- ಮೊದಲಿಗೆ ದಲಿಯಾವನ್ನು ಚೆನ್ನಾಗಿ ತೊಳೆದು, 5-7 ನಿಮಿಷ ಲಘುವಾಗಿ ಕುದಿಸಿಕೊಳ್ಳಿ. ಅದು ಸಂಪೂರ್ಣವಾಗಿ ಕರಗಬಾರದು, ಸ್ವಲ್ಪ ಮೆತ್ತಗಾದರೆ ಸಾಕು. ನೀರನ್ನು ಸೋಸಿ ತಣ್ಣಗಾಗಲು ಬಿಡಿ.
- ಒಂದು ದೊಡ್ಡ ಬಟ್ಟಲಿನಲ್ಲಿ ಬೇಯಿಸಿದ ದಲಿಯಾ, ರವೆ, ಮೊಸರು, ಉಪ್ಪು, ತುರಿದ ಕ್ಯಾರೆಟ್, ಹೆಚ್ಚಿದ ಕ್ಯಾಪ್ಸಿಕಂ, ಶುಂಠಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ಅಗತ್ಯವಿದ್ದರೆ ನೀರು ಸೇರಿಸಿ. ಹಿಟ್ಟು ಅತಿ ತೆಳುವೂ ಆಗಬಾರದು, ಅತಿ ಗಟ್ಟಿಯಾಗಿಯೂ ಇರಬಾರದು. ರವೆ ನೆನೆಯಲು 10-15 ನಿಮಿಷ ಮುಚ್ಚಿಡಿ.
- ಒಗ್ಗರಣೆಗೆ ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಮತ್ತು ಕರಿಬೇವು ಹಾಕಿ. ಚಿಟಪಟಿಸಿದಾಗ ಈ ಒಗ್ಗರಣೆಯನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಇಡ್ಲಿಯ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
- ಇಡ್ಲಿ ಪಾತ್ರೆಯ ಪ್ಲೇಟ್ಗಳಿಗೆ ಎಣ್ಣೆ ಸವರಿ ಸಿದ್ಧಪಡಿಸಿಕೊಳ್ಳಿ. ಹಿಟ್ಟಿಗೆ ಕೊನೆಯದಾಗಿ ಅರ್ಧ ಚಮಚ ಇನೋ (Eno) ಅಥವಾ ಫ್ರೂಟ್ ಸಾಲ್ಟ್ ಸೇರಿಸಿ.
- ಲಘುವಾಗಿ ಬೆರೆಸಿ ತಕ್ಷಣ ಇಡ್ಲಿ ತಟ್ಟೆಗಳಿಗೆ ಹಾಕಿ. ಮಧ್ಯಮ ಉರಿಯಲ್ಲಿ 12-15 ನಿಮಿಷ ಹಬೆಯಲ್ಲಿ ಬೇಯಿಸಿ.
- ಇಡ್ಲಿ ಬೆಂದಿದೆಯೇ ಎಂದು ಪರೀಕ್ಷಿಸಲು, ಟೂತ್ಪಿಕ್ ಚುಚ್ಚಿ ನೋಡಿ. ಅದು ಸ್ವಚ್ಛವಾಗಿ ಹೊರಬಂದರೆ ಇಡ್ಲಿಗಳು ಸಿದ್ಧವಾಗಿವೆ ಎಂದರ್ಥ.
ಬಿಸಿಬಿಸಿ ಡಾಲಿಯಾ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ, ಹಸಿರು ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ. ಇದು ಕಡಿಮೆ ಎಣ್ಣೆ ಬಳಕೆಯಾದರೂ, ಅದ್ಭುತ ರುಚಿ ನೀಡುತ್ತದೆ. ಇಡೀ ಕುಟುಂಬಕ್ಕೂ ಈ ಆರೋಗ್ಯಕರ ತಿಂಡಿ ಖಂಡಿತ ಇಷ್ಟವಾಗುತ್ತದೆ.



Click it and Unblock the Notifications


