Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ರೆಸಿಪಿ: ನುಚ್ಚು ಗೋಧಿ ಹಲ್ವಾ
ನಮ್ಮ ದಕ್ಷಿಣ ಭಾರತದ ಕಡೆ ನುಚ್ಚು ಗೋಧಿಯಲ್ಲಿ ಸ್ವೀಟ್ ಮಾಡುವುದು ಎಂದರೆ ತಕ್ಷಣ ನೆನಪಾಗುವುದು ಗೋಧಿ ಪಾಯಸ, ಆದರೆ ಇದರಿಂದ ತುಂಬಾ ರುಚಿಕರವಾದ ಹಲ್ವಾ ಕೂಡ ಮಾಡಬಹುದು ಎಂದು ಬಹುತೇಕರಿಗೆ ಗೊತ್ತೇ ಇರಲ್ಲ.

ನುಚ್ಚು ಗೋದಿಯ ಹಲ್ವಾ ಗುಜರಾತ್ ಕಡೆ ತುಂಬಾನೇ ಫೇಮಸ್. ಇದನ್ನು ಅಲ್ಲಿ ಗರ್ ಕಿ ಲಪ್ಸಿ ಎಂದು ಕರೆಯುತ್ತಾರೆ, ಈ ಹಲ್ವಾ ಬೆಲ್ಲ ಹಾಕಿ ಮಾಡಲಾಗುವುದು, ಆರೋಗ್ಯಕ್ಕೂ ಒಳ್ಳೆಯದು. ಬನ್ನಿ ನುಚ್ಚು ಗೋಧಿ ಹಲ್ವಾ ಮಾಡುವುದು ಹೇಗೆ ಎಂದು ನೋಡೋಣ:
Recipe By: Meena Bhandari
Recipe Type: Sweet
Serves: 4
-
ಬೇಕಾಗುವ ಸಾಮಗ್ರಿ
ನುಚ್ಚು ಗೋಧಿ 1 ಕಪ್
ತುಪ್ಪ ಒಂದೂವರೆ ಚಮಚ
ಬೆಲ್ಲ 1 ಕಪ್
ಸ್ವಲ್ಪ ಬಾದಾಮಿ ಹಾಗೂ ಪಿಸ್ತಾ
ಏಲಕ್ಕಿ ಪುಡಿ 1 ಚಮಚ
ನೀರು 2 ಕಪ್
-
ತಯಾರಿಸುವುದು ಹೇಗೆ?
* ಬೆಲ್ಲವನ್ನು ನೀರಿನಲ್ಲಿ 10 ನಿಮಿಷ ನೆನೆಸಿ
* ನಂತರ ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ.
* ಈಗ ನುಚ್ಚು ಗೋಧಿ ಹಾಕಿ 2-3 ನಿಮಿಷ ತುಪ್ಪದಲ್ಲಿ ಹುರಿಯಿರಿ.
* ಅದರಿಂದ ಸುವಾಸನೆ ಬರಲಾರಂಭಿಸಿದಾಗ ನೀರು ಹಾಕಿ, ನೀರು ಕುದಿಯಲು ಆರಂಭಿಸಿದಾಗ ಕುಕ್ಕರ್ ಮುಚ್ಚಳ ಹಾಕಿ 3-4 ವಿಶಲ್ ಬರುವಷ್ಟು ಹೊತ್ತು ಬೇಯಿಸಿ.
* ನಂತರ ಮುಚ್ಚಳ ತೆಗೆದು ನೀರಿನಲ್ಲಿ ನೆನೆ ಹಾಕಿದ್ದ ಬೆಲ್ಲವನ್ನು ನೀರಿನ ಸಹಿತ ಹಾಕಿ.
* ನಂತರ ಕುಕ್ಕರ್‌ನ ಮುಚ್ಚಳ ಮುಚ್ಚಿ ಮತ್ತೆ 2 ವಿಶಲ್ ಹಾಕಿಸಿ.
* ನಂತರ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ.
* ನೀರಿದ್ದರೆ ಸ್ವಲ್ಪ ಗಟ್ಟಿಯಾಗುವರೆಗೆ ತಿರುಗಿಸುತ್ತಾ ಇರಿ.
* ನಂತರ ಬಿಸಿ-ಬಿಸಿ ಇರುವಾಗಲೇ ಸರ್ವ್ ಮಾಡಿ.
- ನುಚ್ಚು ಗೋಧಿ ನೀವು ಮನೆಯಲ್ಲೇ ಮಾಡಿದರೆ ಮತ್ತಷ್ಟು ರುಚಿಕರ.



Click it and Unblock the Notifications
