Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಬ್ರೇಕ್‌ಫಾಸ್ಟ್‌ಗೆ ಸೂಪರ್ ರುಚಿಯ ಕೊತ್ತಂಬರಿ ರೈಸ್ ಮಾಡಿ..! ಇಲ್ಲಿದೆ ಸುಲಭದ ರೆಸಿಪಿ
ಬೆಳಗ್ಗೆ ತಿಂಡಿಗೆ ಅದ್ಭುತ ರುಚಿಯ ತಿಂಡಿಗಳ ಮಾಡಿ ಸವಿಯುವುದು ಕಾಮನ್. ಅದ್ರಲ್ಲೂ ರೈಸ್‌ನಿಂದ ಮಾಡುವಂತಹ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಸುಲಭವಾಗಿ ಮಾಡಬಹುದಾದ ಹಲವು ರೈಸ್ ರೆಸಿಪಿಗಳ ಮಾಡುವುದು ಅಂದ್ರೆ ಬಹಳ ಇಷ್ಟವಾಗುತ್ತೆ. ಹಾಗೆ ರೈಸ್‌ನಿಂದ ಮಾಡುವಂತಹ ಪಲಾವ್, ರೈಸ್ ಬಾತ್, ಚಿತ್ರಾನ್ನ, ಪುಳಿಯೋಗರೆ ಹೀಗೆ ಹತ್ತಾರು ಬಗೆಯ ರೈಸ್ ಮಾಡುವುದು ನೋಡಿರುತ್ತೇವೆ.
ಇನ್ನು ವಿಶೇಷ ದಿನಗಳಲ್ಲಿ ಹಾಗೆ ವಿಶೇಷ ರೀತಿಯಲ್ಲಿ ಮಾಡುವ ಹಲವು ಖಾದ್ಯಗಳಿವೆ. ರೈಸ್‌ನಲ್ಲಿ ವಿಶೇಷವಾದ ರೈಸ್ ಮಾಡಿ ಸವಿಯುವುದು ಸಹ ಇದೆ. ಹಾಗೆ ನಾವಿಂದು ವಿಶೇಷ ರೀತಿಯಲ್ಲಿ ಮಾಡುವ ಅದರಲ್ಲು ಮನೆಯಲ್ಲಿ ವಿಶೇಷ ಕ್ಷಣಗಳಿದ್ದಾಗ ಅತಿಥಿಗಳು ಬಂದಾಗ ಸ್ಪೆಷಲ್ ಆಗಿ ಮಾಡುವಂತಹ ಕೊತ್ತಂಬರಿ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಕೊತ್ತಂಬರಿ ರೈಸ್ ಬಹಳ ರುಚಿಕರ ಹಾಗೆ ಆರೋಗ್ಯಕ್ಕೂ ಬಹಳ ಉತ್ತಮ. ಮತ್ತು ಮಾಡೋದು ಕೂಡ ಬಹಳ ಸುಲಭ. ಮನೆಯಲ್ಲಿ ಎಲ್ಲರಿಗೂ ಇಷ್ಡವಾಗುವಂತಹ ಈ ಖಾದ್ಯವನ್ನು ನೀವು ಸಹ ಮಾಡಿ ಸವಿದು ನೋಡಿ. ಹಾಗಾದ್ರೆ ನಾವಿಂದು ಈ ಕೊತ್ತಂಬರಿ ರೈಸ್ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೊತ್ತಂಬರಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ
- ಬೆಳ್ಳುಳ್ಳಿ
- ಈರುಳ್ಳಿ ಟೊಮೆಟೋ
- ಶುಂಠಿ
- ಚಕ್ಕೆ
- ಲವಂಗ
- ಏಲಕ್ಕಿ
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸು
- ಉಪ್ಪು
- ಎಣ್ಣೆ ಅಥವಾ ತುಪ್ಪ
ಕೊತ್ತಂಬರಿ ರೈಸ್ ಮಾಡುವ ವಿಧಾನವೇನು?
ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಏಲಕ್ಕಿ ಹಾಕಿಕೊಳ್ಳಿ. ಅನಂತರ ಒಂದು ಕಟ್ ಕೊತ್ತಂಬರಿ ಸೊಪ್ಪು, ಹಸಿ ಮೆಣಸು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ 2 ಸ್ಪೂನ್ ತುಪ್ಪ ಅಥವಾ ಎಣ್ಣೆ ಹಾಕಿಕೊಳ್ಳಿ. ಅಥವಾ ಎರಡನ್ನೂ ಹಾಕಿಕೊಂಡು ಇದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಗೋಡಂಬಿ ಸಹ ಹಾಕಿ 2 ನಿಮಿಷ ಫ್ರೈ ಆಗಲು ಬಿಡಿ. ನಂತರ ಇದಕ್ಕೆ ಮೊದಲು ರುಬ್ಬಿಕೊಂಡಿರುವ ಮಸಾಲೆ ಪೇಸ್ಟ್ ಅನ್ನು ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 3 ನಿಮಿಷ ಚೆನ್ನಾಗಿ ಫ್ರೈ ಮಾಡಿ.
ಈಗ ಕತ್ತರಿಸಿಕೊಂಡಿರುವ 2 ಟೊಮಟೋವನ್ನು ಇದಕ್ಕೆ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಒಂದು ಗ್ಲಾಸ್ ಅಕ್ಕಿಗೆ 2 ಗ್ಲಾಸ್ ನೀರು ಬಳಸಬೇಕು. ಈಗ 2 ಗ್ಲಾಸ್ ನೀರು ಹಾಕಿಕೊಂಡು ಮಿಕ್ಸ್ ಮಾಡಿ ಕುದಿಬರಲು ಬಿಡಿ. ಒಂದು ಕುದಿಬಂದ ಬಳಿಕ 1 ಗ್ಲಾಸ್ ಅಕ್ಕಿಯನ್ನು ತೊಳೆದು ಇದಕ್ಕೆ ಹಾಕಿಕೊಳ್ಳಿ. ಅಕ್ಕಿಯನ್ನು ನೆನೆಸಿಡಬೇಕು ಎಂದೇನಿಲ್ಲ. ಅಕ್ಕಿಯನ್ನು ನೆನೆಸಿಟ್ಟರೆ ನೀರು ಸ್ವಲ್ಪ ಕಡಿಮೆ ಹಾಕಿಕೊಳ್ಳಬೇಕು.
ಅಕ್ಕಿ ಹಾಕಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ. 1 ಸೀಟಿ ಬಳಿಕ ಕುಕ್ಕರ್ ಅನ್ನು ಹಾಗೆ ತಣ್ಣಗಾಗಲು ಬಿಡಿ. ಸುಮಾರು 30 ನಿಮಿಷ ಆದರೂ ಹಾಗೆಯೇ ಬಿಡಬೇಕು. ನಂತರ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕೊತ್ತಂಬರಿ ರೈಸ್ ರೆಡಿಯಾಗುತ್ತದೆ.



Click it and Unblock the Notifications