Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
Breakfast Recipe: ಪೇಪರ್‌ನಂತೆ ನೀರ್ ದೋಸೆ ಮಾಡಿ..! ಹಿಟ್ಟು ಮಾಡೋದು ಹೇಗೆ ಗೊತ್ತಾ?
ನೀವು ಬೆಳಗ್ಗೆ ಟಿಫನ್‌ಗೆ ಬಗೆ ಬಗೆಯ ಖಾದ್ಯಗಳ ಮಾಡಿ ಸವಿಯುವುದು ಸಾಮಾನ್ಯ. ಅದ್ರಲ್ಲೂ ದೋಸೆ ಅಂದ್ರೆ ಎಲ್ಲರಿಗೂ ಇಷ್ಡವಾಗುತ್ತೆ. ಇನ್ನು ವಿಶೇಷ ದಿನದಲ್ಲಿ ಅಥವಾ ಅಥಿತಿಗಳು ಬಂದರೆ ದೋಸೆ ಮಾಡುವುದು ಕಾಮನ್. ದೋಸೆಯಲ್ಲೂ ಹತ್ತಾರು ವಿಧಗಳಿರುವುದು ನೋಡಬಹುದು. ಉದ್ದಿನ ದೋಸೆ ಎಲ್ಲರಿಗೂ ಪ್ರಿಯವಾದ ಹಾಗೆ ಬಹುತೇಕರ ಮನೆಯಲ್ಲಿ ಮಾಡುವಂತಹ ದೋಸೆ ಇದು ಎನ್ನಬಹುದು.
ಇತ್ತ ಮಸಾಲೆ ದೋಸೆ, ರವೆ ದೋಸೆ, ಈರುಳ್ಳಿ ದೋಸೆ, ಸೆಟ್ ದೋಸೆ ಸೇರಿದಂತೆ ಬಗೆ ಬಗೆಯ ದೋಸೆ ಮಾಡಿ ಸವಿಯುವುದು ನೋಡಬಹುದು. ಇನ್ನು ಬಹಳ ಇಷ್ಟಪಟ್ಟು ಸವಿಯುವ ದೋಸೆಗಳಲ್ಲಿ ಈ ನೀರ್ ದೋಸೆ ಕೂಡ ಒಂದು. ಕರಾವಳಿ, ಮಲೆನಾಡು ಭಾಗದಲ್ಲಿ ನೀರ್ ದೋಸೆ ಬಹಳ ಫೇಮಸ್ ಖಾದ್ಯ. ಬೆಳಗ್ಗೆ ತಿಂಡಿಗೆ ನೀರ್ ದೋಸೆ ಕಡಲೆ ಚಟ್ನಿ ಇದ್ದರೆ ಆ ದಿನ ಅದ್ಭುತ ಆಗಿರಲಿದೆ.

ಇನ್ನು ನೀರ್ ದೋಸೆಯನ್ನು ಕೂಡ ಬಹಳ ಅದ್ಭುತವಾಗಿ ಮಾಡಬಹುದು. ತೆಳುವಾಗಿ, ದಪ್ಪವಾಗಿ ರುಚಿ ರುಚಿಯಾಗಿಯೂ ಈ ನೀರ್ ದೋಸೆ ರೆಸಿಪಿಯನ್ನು ಮಾಡಿ ಸವಿಯಬಹುದು. ಅದ್ರಲ್ಲೂ ಪೇಪರ್‌ನಂತೆ ತೆಳುವಾಗಿ ನೀರ್ ದೋಸೆ ಮಾಡೋದು ಹೇಗೆ ಅನ್ನೋದು ನಿಮಗೆ ಗೊತ್ತಾ? ಪೇಪರ್ ರೀತಿ ದೋಸೆ ಬರಬೇಕು ಅಂದ್ರೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಪೇಪರ್‌ನಂತೆ ನೀರ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಪೇಪರ್‌ನಂತೆ ನೀರ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಎಣ್ಣೆ
- ಉಪ್ಪು
ಪೇಪರ್‌ನಂತೆ ನೀರ್ ದೋಸೆ ಮಾಡುವ ವಿಧಾನವೇನು?
ಒಂದು ಕಪ್ ಅಕ್ಕಿ ತೊಳೆದು ನೆನೆ ಹಾಕಬೇಕು. ಬಳಿಕ ಮಾರನೆ ದಿನ ಈ ಅಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಬೇಕು. 1 ಗ್ಲಾಸ್ ಅಕ್ಕಿಗೆ ಅರ್ಧ ಗ್ಲಾಸ್ ನೀರು ಹಾಕಿಕೊಂಡು ರುಬ್ಬಬೇಕು. ಇದಕ್ಕೆ ಸ್ವಲ್ಪ ತೆಂಗಿನಕಾಯಿ ತುರಿ ಹಾಗೆ ಉಪ್ಪು ಸಹ ಹಾಕಿಕೊಂಡು ರುಬ್ಬಿಕೊಳ್ಳುವುದು ಉತ್ತಮ. ಇದು ತುಂಬಾ ನುಣ್ಣಗೆ ಬರಬೇಕು.
ಹಿಟ್ಟನ್ನು ತೆಗೆದು ಒಂದು ಬೌಲ್‌ಗೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಮತ್ತೆ ಒಂದೂವರೆ ಗ್ಲಾಸ್ ನೀರು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಒಟ್ಟು 1 ಗ್ಲಾಸ್ ಅಕ್ಕಿಗೆ 2 ಗ್ಲಾಸ್ ನೀರು ಹಾಕಿದ ಹಾಗೆ ಆಗಲಿದೆ. ಈ ಹಿಟ್ಟನ್ನು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ 1 ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಕೂಡ ಈ ಹಿಟ್ಟಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಕಾವಲಿ ಇಟ್ಟುಕೊಂಡು ಅದಕ್ಕೆ ಎಣ್ಣೆ ಹಚ್ಚಿಕೊಂಡು ಬಿಸಿಯಾಗಲು ಬಿಡಿ. ಕಾವಲಿ ಬಿಸಿಯಾದ ಬಳಿಕ ಅದಕ್ಕೆ ಹಿಟ್ಟನ್ನು ಸುರಿದುಕೊಳ್ಳಿ. ಬಹಳ ತೆಳುವಾಗಿ ಹಿಟ್ಟು ಹಾಕಿಕೊಂಡು ಒಂದು ಕಡೆ ಮಾತ್ರವೇ ಕಾಯಲು ಬಿಡಿ. ಇದೇ ಮಾದರಿಯಲ್ಲಿ ಎಲ್ಲಾ ಹಿಟ್ಟನ್ನು ಕೂಡ ಕಾವಲಿಗೆ ಹಾಕಿಕೊಂಡು ದೋಸೆ ಮಾಡಿಕೊಳ್ಳಿ. ಅಳತೆ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಿದ್ದರೆ ಈ ದೋಸೆ ಪೇಪರ್‌ನಂತೆ ತೆಳುವಾಗಿ ಬರಲಿದೆ.
ಈ ಮಾದರಿಯಲ್ಲಿ ನೀವು ಕೂಡ ಮನೆಯಲ್ಲಿ ಅಕ್ಕಿ ಹಿಟ್ಟಿನಿಂದ ನೀರ್ ದೋಸೆ ಮಾಡಿ ನೋಡಿ. ಅದ್ರಲ್ಲೂ ನೀರ್ ದೋಸೆ ಪೇಪರ್‌ನಂತೆ ತೆಳುವಾಗಿ ಇದ್ದಷ್ಟು ಅದರ ರುಚಿ ದುಪ್ಪಟ್ಟಾಗುತ್ತೆ. ನೀವು ಸಹ ಈ ವಿಧಾನವಾಗಿ ನೀರ್ ದೋಸೆ ಮಾಡಿ ನೋಡಿ, ಇದರೊಂದಿಗೆ ತೆಂಗಿನಕಾಯಿ ಚಡ್ನಿ, ಇಲ್ಲವೆ ಶೇಂಗಾ, ಹುರಿಗಡಲೆ ಚಟ್ನಿ ಇದ್ದರೆ ರುಚಿ ಬೊಂಬಾಟ್ ಆಗಿರಲಿದೆ.



Click it and Unblock the Notifications
