Latest Updates
-
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ?
10 ನಿಮಿಷದೊಳಗೆ ಮಾಡಬಹುದು ರುಚಿಯಾದ ಬ್ರೆಡ್ ಉಪ್ಪಿಟ್ಟು, ರವೆ ಉಪ್ಪಿಟ್ಟು ಇಷ್ಟವಿಲ್ಲದವರು ಇದನ್ನು ಇಷ್ಟಪಡುತ್ತಾರೆ
ಪಟ್ ಅಂತ ಮಾಡಬಹುದಾದ ರೆಸಿಪಿಯಲ್ಲೊಂದು ಬ್ರೆಡ್ ಉಪ್ಪಿಟ್ಟು. ಇದನ್ನು ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ ಪಟ್ ಅಂತ ಮಾಡಬಹುದು, ಅಲ್ಲದೆ ರವೆ ಉಪ್ಪಿಟ್ಟು ಇಷ್ಟಪಡದವರು ಕೂಡ ಈ ಬ್ರೆಡ್ ಉಪ್ಪಿಟ್ಟು ಇಷ್ಟಪಟ್ಟು ಸವಿಯುತ್ತಾರೆ.
ಈ ಉಪ್ಪಿಟ್ಟು ಮಾಡಲು ವೈಟ್ ಬ್ರೆಡ್ ಬಳಸಬಹುದು ಅಥವಾ ಡಯಟ್ ಬಗ್ಗೆ ತುಂಬಾ ಗಮನಹರಿಸುವವರು ವ್ಹೀಟ್ ಬ್ರೆಡ್ ಕೂಡ ಬಳಸಬಹುದು, ಅಲ್ಲದೆ ಈ ಉಪ್ಪಿಟ್ಟು ಪಟ್ ಪಟ್ ಅಂತ ಮಾಡಿ ಮುಗಿಸಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಬ್ರೆಡ್ 10-15 ಪೀಸ್
ಅರಿಶಿಇಣ 1/ 2 ಚಮಚ
ರುಚಿಗೆ ತಕ್ಕ ಉಪ್ಪು
ಜೀರಿಗೆ 1/ 2 ಚಮಚ
ಹಸಿ ಮೆಣಸು 3(ನಿಮ್ಮ ರುಚಿಗೆ ತಕ್ಕಷ್ಟು)
ಸ್ವಲ್ಪ ಸಾಸಿವೆ
ಚಿಟಿಕೆಯಷ್ಟು ಇಂಗು (ಬಳಸದೆ ಇದ್ದರೂ ಆಗುತ್ತೆ)
ಟೊಮೆಟೊ 2
ಈರುಳ್ಳಿ 1
ನೆಲಗಡಲೆ ( ಹಾಕಿದರೆ ಇನ್ನೂ ರುಚಿ ಅನಿಸುವುದು)
ನಿಂಬೆರಸ
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
- ಬ್ರೆಡ್‌ನ ತುದಿ ಭಾಗವನ್ನು ಕತ್ತರಿಸಿ ನಂತರ ಎಲ್ಲಾ ಬ್ರೆಡ್ ಸೇರಿಸಿ ಚಿಕ್ಕ ತುಂಡುಗಳಾಗಿ ಕತ್ತರಿಸಿ
- ನೀವು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಇಂಗು ಹಾಕಿ, ನಂತರ ಸಾಸಿವೆ ಹಾಕಿ, ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ನೆಲಗಡಲೆ ಹಾಕಿ ಫ್ರೈ ಮಾಡಿ
- ನಂತರ ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ, ಹಸಿ ಮೆಣಸು ಸೇರಿಸಿ ಫ್ರೈ ಮಾಡಿ
- ಬಳಿಕ ಟೊಮೆಟೊ ಹಾಕಿ 2 ನಿಮಿಷ ಫ್ರೈ ಮಾಡಿ, ಅರಿಶಿಣ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ
- ಈಗ ಬ್ರೆಡ್ ಸೇರಿಸಿ ಮಿಕ್ಸ್ ಮಾಡಿ, ನಿಂಬೆ ರಸ ಹಿಂಡಿ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬ್ರೆಡ್ ಉಪ್ಪಿಟ್ಟು ಸೇರಿಸಿ.
ಇತರ ಸಲಹೆ: ನೀವು ಇದಕ್ಕೆ ಬೇಕಾದರೆ ಬಟಾಣಿ, ಆಲೂಗಡ್ಡೆ,
ಬೀನ್ಸ್, ಕ್ಯಾರೆಟ್ ಈ ಬಗೆಯ ತರಕಾರಿ ಕೂಡ ಸೇರಿಸಬಹುದು
ಬ್ರೆಡ್ ಸ್ವಲ್ಪ ಟೋಸ್ಟ್ ಮಾಡಿ ನಂತರ ಕತ್ತರಿಸಿದರೆ ಉಪ್ಪಿಟ್ಟು ಇನ್ನೂ ರುಚಿ
ಅನಿಸುವುದು.
ಈ ಬ್ರೆಡ್ ಉಪ್ಪಿಟ್ಟು ತರಕಾರಿ ಎಲ್ಲಾ ಕತ್ತರಿಸಿಟ್ಟರೆ 5 ನಿಮಿಷದಲ್ಲಿ ರೆಡಿಯಾಗುತ್ತೆ.



Click it and Unblock the Notifications
