Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ದಿಢೀರ್ ಅಂತಾ ಮಾಡಿ ಬ್ರೆಡ್ ರಸ್ಮಲೈ ರೆಸಿಪಿ
ಮೂಲತಃ ಉತ್ತರ ಭಾರತದ ಸಿಹಿ ಖಾದ್ಯ ರಸ್ಮಲೈ ದಕ್ಷಿಣ ಭಾರತದ ಸಾಕಷ್ಟು ಆಹಾರ
ಪ್ರಿಯರ ನೆಚ್ಚಿನ ಸಿಹಿ ಖಾದ್ಯವಾಗಿದೆ. ಸಾಮಾನ್ಯವಾಗಿ ರಸ್ಮಲೈ ಅನ್ನು ಹೊಡೆದ
ಹಾಲಿನ ಕೆನೆಯಿಂದ ತಯಾರಿಸುತ್ತಾರೆ. ಇದು ಹುದುಗುವಿಕೆಗೆ ಸಾಕಷ್ಟು ಸಮಯ
ತೆಗೆದುಕೊಳ್ಳುತ್ತದೆ.
ಅದಕ್ಕಾಗಿ ದಿಢೀರ್ ಎಂದು ಮಾಡುವ ಬ್ರೆಡ್ ರಸ್ಮಲೈ ಬಹಳ ಸುಲಭ ಮತ್ತು ರುಷಿಕರ
ಪಾಕವಿಧಾನವಾಗಿದೆ. ಇದನ್ನು ಮನೆಯಲ್ಲಿಯೇ ತಯಾರಿಸಬಹುದು ಮತ್ತು ಹಬ್ಬದ ಸಮಯದಲ್ಲಿ,
ವಿಶೇಷ ಅತಿಥಿಗಳನ್ನು ಆಹ್ವಾನಿಸಿದಾಗ ತಯಾರಿಸಲು ಇದು ಬೆಸ್ಟ್ ರೆಸಿಪಿ
ಆಗಿದೆ.

ಶೀಘ್ರದಲ್ಲೇ ತಯಾರಾಗುವ ಬ್ರೆಡ್ ರಸ್ಮಲೈ ಮಾಡುವುದು ಹೇಗೆ, ಅದಕ್ಕೆ ಬೇಕಾಗುವ ಸಾಮಾಗ್ರಿಗಳೇನು ಬನ್ನಿ ಮುಂದೆ ತಿಳಿಯೋಣ:
Recipe By: Meena Bhandari
Recipe Type: Sweet
Serves: 4
-
ಬೇಕಾಗುವ ಸಾಮಾಗ್ರಿಗಳು
ಬಿಳಿ ಬ್ರೆಡ್ - 4 ಸ್ಲೈಸ್
ಸಕ್ಕರೆ - ಒಂದು ಕಪ್
ಒಣದ್ರಾಕ್ಷಿ - 8-10
ಪಿಸ್ತಾ - 8-10
ನೆನೆಸಿದ ಬಾದಾಮಿ - 8-10
ಪುಡಿಮಾಡಿದ ಗೋಡಂಬಿ - 8-10
ಕೊಬ್ಬಿನ ಹಾಲು ಹಾಲು - 1 ಲೀಟರ್
ಕೇಸರಿ - 1 ಪಿಂಚ್
-
ತಯಾರಿಸುವ ವಿಧಾನ
1. ಬಿಳಿ ಬ್ರೆಡ್ ಅನ್ನು ಗಾಜಿನ ಅಥವಾ ಯಾವುದೇ ವೃತ್ತಾಕಾರದ ವಸ್ತುವಿನ ಸಹಾಯದಿಂದ ಗುಂಡಾಗಿ ಕತ್ತರಿಸಿ, ಬ್ರೆಡ್ ಅಂಚುಗಳನ್ನು ಕತ್ತರಿಸಿ. ಎಲ್ಲಾ ಬ್ರೆಡ್ ಹೋಳುಗಳನ್ನು ಒಂದೇ ಆಕೃತಿಗೆ ಕತ್ತರಿಸಿಕೊಳ್ಳಿ.
2. ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ
3. ಹಾಲು ಚೆನ್ನಾಗಿ ಕುದ್ದಿ ಅರ್ಧ ಮಟ್ಟಕ್ಕೆ ಬಂದಾಗ ಸಕ್ಕರೆ, ಕೇಸರಿ, ಪುಡಿಮಾಡಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ಸೇರಿಸಿ.
4. ಹಾಲು ಇನ್ನು ಕುದ್ದು ಗಟ್ಟಿ ಆಗುವವರೆಗೆ ಮತ್ತು ಸ್ವಲ್ಪ ಹಳದಿ ಬಣ್ಣ ಬರುವವರೆಗೆ ಕುದಿಸಿ.
5. ಕತ್ತರಿಸಿದ ಬ್ರೆಡ್ ಚೂರುಗಳನ್ನು ಒಂದು ತಟ್ಟೆಯಲ್ಲಿ ಇಡಿ.
6. ಹಾಲಿನ ಮಿಶ್ರಣಕ್ಕೆ ಬ್ರೆಡ್ ಚೂರುಗಳನ್ನು ಹಾಕಿ.
7. ಇದೀಗ ಉಳಿದ ಡ್ರೈ ಫ್ರೂಟ್ಸ್‌ಗಳಿಂದ ಅಲಂಕರಿಸಿ.
8. ಇದನ್ನು ಬಿಸಿ ಅಥವಾ ಫ್ರಿಡ್ಜ್‌ನಲ್ಲಿಟ್ಟು ಕೆಲವು ಸಮಯದ ನಂತರ ತಣ್ಣಗೆ ಸೇವಿಸಬಹುದು.
- ಹಾಲನ್ನು ಕುದಿಸುವಾಗ ನಿರಂತರವಾಗಿ ಕಲಸುತ್ತಾ ಇರಿ. ತಯಾರಿಸಿದ ಅರ್ಧ ಘಂಟೆಯೊಳಗೆ ಇದನ್ನು ಸೇವಿಸಿ, ಇಲ್ಲದಿದ್ದರೆ ಬ್ರೆಡ್ ಪೂರ್ಣ ಮೆತ್ತಗೆ ಆಗುತ್ತದೆ.
- ಫೈಬರ್ - - 8.9 ಗ್ರಾಂ
- ಕ್ಯಾಲ್ಸಿಯಂ - ಕ್ಯಾಲ್ - 1157
- ಪ್ರೋಟೀನ್ - - 33.3 ಗ್ರಾಂ



Click it and Unblock the Notifications
