Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಬ್ರೆಡ್ ಪಿಜ್ಜಾ ರೆಸಿಪಿ : ಮಾಡುವುದು ತುಂಬಾ ಸುಲಭ, ರುಚಿ ಕೂಡ ಸೂಪರ್
ಮಕ್ಕಳಿಂದ ದೊಡ್ಡವರವರೆಗೆ ಪಿಜ್ಜಾ ತುಂಬಾನೇ ಇಷ್ಟಪಡುತ್ತಾರೆ. ಮಕ್ಕಳು ಪಿಜ್ಜಾ ಬೇಕೆಂದು ಕೇಳಿದಾಗ ಅದನ್ನು ಹೊರಗಡೆಯಿಂದ ತರಿಸುವುದಕ್ಕಿಂತ ಮನೆಯಲ್ಲೇ ಟ್ರೈ ಮಾಡಬಹುದು. ನಾವಿಲ್ಲಿ ನೀವು ಸುಲಭವಾಗು ಮಾಡಬಹುದಾದ ಬ್ರೆಡ್ ಪಿಜ್ಜಾ ಮಾಡುವುದು ಹೇಗೆ ಎಂದು ಹೇಳಿದ್ದೇವೆ. ಪಿಜ್ಜಾ ಮಾಡುವಾಗ ಪಿಜ್ಜಾ ಹಿಟ್ಟು ಮಾಡುವುದೇ ದೊಡ್ಡ ಸಮಸ್ಯೆ, ಅದು ಸರಿಯಾಗಿ ಬರಬೇಕು. ಆದರೆ ಬ್ರೆಡ್ ಪಿಜ್ಜಾದಲ್ಲಿ ಆ ಚಿಂತೆ ಇಲ್ಲ. ಪಿಜ್ಜಾ ಸಾಸ್ ಹಾಗೂ ಟಾಪಿಂಗ್ ಅಷ್ಟೇ ಸಾಕು, ರುಚಿಕರವಾದ ಪಿಜ್ಜಾ ಮಾಡಬಹುದು.

ಈ ಬ್ರೆಡ್ ಪಿಜ್ಜಾವನ್ನು ನೀವು 30 ನಿಮಿಷದೊಳಗೆ ಮಾಡಬಹುದು. ಬನ್ನಿ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena
Recipe Type: Pizza
Serves: 1 slice
-
ಬೇಕಾಗುವ ಸಾಮಗ್ರಿ
- 4-5 ಬ್ರೆಡ್ ಚೂರು
- ಪಿಜ್ಜಾ ಸಾಸ್ (ರೆಸಿಪಿ ಇಲ್ಲಿದೆ)
- 3 ಮೊಟ್ಟೆ
- ತರಕಾರಿ (ಆಯ್ಕೆಯದು)
- ಚೀಸ್
- ಚಿಲ್ಲಿ ಫ್ಲೇಕ್ಸ್
-
ಪಿಜ್ಜಾ ಸಾಸ್ ಮಾಡುವುದು ಹೇಗೆ?
* 2-3 ತುಂಬಾ ಹಣ್ಣಾದ ಟೊಮೆಟೊ ತೆಗೆದು ಪೇಸ್ಟ್ ಮಾಡಿ.
* ಈಗ ಪ್ಯಾನ್ ಬಿಸಿ ಮಾಡಿ ಒಂದೂವರೆ ಚಮಚ ಎಣ್ಣೆ ಸೇರಿಸಿ, ನಂತರ ಚಿಕ್ಕದಾಗಿ ಕತ್ತರಿಸಿದ 2 ಎಸಳು ಬೆಳ್ಳುಳ್ಳಿ ಹಾಕಿ, ನಂತರ 1 ಚಮಚ ಚಿಲ್ಲಿ ಪ್ಲೇಕ್ಸ್ ಸೇರಿಸಿ.
* ಈಗ ಟೊಮೆಟೊ ಪೇಸ್ಟ್ ಹಾಕಿ ಅದಕ್ಕೆ 1/4 ಚಮಚ ಉಪ್ಪು, 1 ಚಮಚ ಸಕ್ಕರೆ ಸೇರಿಸಿ. ತಿರುಗಿಸಿ.
* ನಿಧಾನಕ್ಕೆ ತಿರುಗಿಸುತ್ತಾ ಇರಿ, ಆಗಾಗ ಉರಿ ಕಡಿಮೆ ಮಾಡಿ ತಿರುಗಿಸಿ. ಈಗ 1 ಚಮಚ ಇಟಾಲಿಯನ್ ಹರ್ಬ್ಸ್ ಮತ್ತು 1/2 ಚಮಚ ಕಾಳು ಮೆಣಸಿನ ಪುಡಿ ಮಿಕ್ಸ್ ಮಾಡಿ. ರುಚಿ ನೋಡಿ ಏನಾದರೂ ಬೇಕಿದ್ದರೆ ಸೇರಿಸು.
* ತರಕಾರಿ ರೆಡಿ ಮಾಡಿ
ಟೊಮೆಟೊ, ಕ್ಯಾಪ್ಸಿಕಂ, ಈರುಳ್ಳಿ, ಆಲೀವ್ ಕತ್ತರಿಸಿ ಇಡಿ.
ಮೊಟ್ಟೆಯನ್ನು ರೆಡಿ ಮಾಡಿ ಇಡಿ
* 3 ಮೊಟ್ಟೆಯನ್ನು ಒಡೆದು ಬೌಲ್ಗೆ ಹಾಕಿ ಅದರಲ್ಲಿ ಸ್ವಲ್ಪ ಉಪ್ಪು ಹಾಗೂ ಸ್ವಲ್ಪ ಅರಿಶಿಣ, 1 ಚಮಚ ಚಿಲ್ಲಿ ಪ್ಲೇಕ್ಸ್ ಸೇರಿಸಿ ಚೆನ್ನಾಗಿ ಕದಡಿ ಇಡಿ.
ಬ್ರೆಡ್ ಪಿಜ್ಜಾ ಮಾಡುವುದು ಹೇಗೆ?
* ಬ್ರೆಡ್ನ ಸೈಡ್ನಲ್ಲಿರುವ ಕಂದು ಬಣ್ಣವನ್ನು ತೆಗೆಯಿರಿ.
* ಈಗ ಪ್ಯಾನ್ಗೆ ಆಲೀವ್ ಎಣ್ಣೆ ಅಥವಾ ಅಡುಗೆ ಎಣ್ಣೆ ಸವರಿ, ಅದರ ಮೇಲೆ ಬ್ರೆಡ್ ಚೂರುಗಳನ್ನು ಇಡಿ. ಪ್ಯಾನ್ ಕೆಳಭಾಗ ಕವರ್ ಆಗುವಂತೆ ಬ್ರೆಡ್ ಚೂರುಗಳನ್ನು ಜೋಡಿಸಬೇಕು.
* ಈಗ ಚೆನ್ನಾಗಿ ಕದಡಿದ ಮೊಟ್ಟೆಯನ್ನು ಹಾಕಿ 5 ನಿಮಿಷ ಕಡಿಮೆ ಉರಿಯಲ್ಲಿ ಪ್ಯಾನ್ ಬಾಯಿ ಮುಚ್ಚಿ ಬೇಯಿಸಿ.
* ಈಗ ಮೊಟ್ಟೆ ಸ್ವಲ್ಪ ಗಟ್ಟಿಯಾದಾಗ ಅದರ ಮೇಲೆ ಪಿಜ್ಜಾ ಸಾಸ್ ಸವರಿ, ನಿಮ್ಮ ರುಚಿಗೆ ತಕ್ ಹಾಗೆ ಸವರಿ, ಮಂದವಾಗಿ ಬೇಕೆಂದರೆ ಮಂದವಾಗಿ, ತೆಳುವಾಗಿ ಬೇಕೆಂದರೆ ತೆಳುವಾಗಿ ಸವರಿ. ಅದರ ಮೇಲೆ ಕತ್ತರಿಸಿದ ತರಕಾರಿ ಹಾಕಿ ತುರಿದ ಚೀಸ್ ಹಾಕಿ, ಚಿಲ್ಲಿ ಫ್ಲೇಕ್ಸ್ ಉದುರಿಸಿ ಮತ್ತೆ 6-7 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
* ನಂತರ ಅದನ್ನು ತೆಗೆದು ಒಂದು ತಟ್ಟೆಗೆ ಹಾಕಿ ರೆಡಿಯಾದ ಪಿಜ್ಜಾವನ್ನು ಟೊಮೆಟೊ ಸಾಸ್ ಜೊತೆ ಸವಿಯಲು ನೀಡಿ.
- slice - 1 slice
- energy - 130 cal
- fat - 0.4 g
- protein - 5.5g
- carbs - 18g



Click it and Unblock the Notifications
