Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗೃಹಣಿಯರಿಗೆ ಟೆನ್ಷನ್ ಫ್ರೀ! ಮಾರ್ನಿಂಗ್ ಬ್ರೇಕ್ಫಾಸ್ಟ್ಗೆ ಈ ತಿಂಡಿ ಮಾಡಿ.. ನಿಮಿಷಗಳಲ್ಲೇ ರೆಡಿ
ನಿತ್ಯ ಒಂದೇ ರೀತಿಯ ಬ್ರೇಕ್ ಫಾಸ್ಟ್ ಬೋರ್ ಆಗಿದ್ಯಾ? ಅದೇ ತರಕಾರಿಗಳನ್ನು ಸಾಂಬಾರ್, ಪಲ್ಯದ ಜೊತೆ ಸೇವಿಸಲು ಯಾರಿಗೂ ಇಷ್ಟವಿಲ್ಲ. ನಿಮ್ಮ ಮಕ್ಕಳು ಸಹ ಹೊಸ ಉಪಹಾರಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಇಲ್ಲವೇ, ನಿಮಗೆ ಸ್ಪೆಷಲ್ ಆಗಿ ಮನೆಮಂದಿಗೆ ಬಿಸಿಬಿಸಿಯಾಗಿ ಏನನ್ನಾದರೂ ಮಾಡಿಕೊಡಬೇಕು ಅಂತ ಅನಿಸುತ್ತದೆ. ಹಾಗಾದ್ರೆ ತಡ ಮಾಡಬೇಡಿ, ಈ ಬ್ರೆಡ್ ಕಟ್ಲೆಟ್ (Bread Cutlet) ತಪ್ಪದೇ ಟ್ರೈ ಮಾಡಿ. ಇದು ಬೆಳಗ್ಗಿನ ಬ್ರೇಕ್ ಫಾಸ್ಟ್ ಟೈಮ್ಗೆ ಪರ್ಫೆಕ್ಟ್ ಆಯ್ಕೆ.
ನೀವು ವಿಭಿನ್ನವಾಗಿ ಬಾಯಿಗೆ ರುಚಿ ಎನಿಸುವ ಕಟ್ಲೆಟ್ ಮಾಡಿ, ಸೇವಿಸಿದರೆ ನಿತ್ಯ ಸೇವಿಸುವ ತರಕಾರಿಯ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚೇ ಸೇವಿಸುವುದು ಗ್ಯಾರಂಟಿ. ಅದರಲ್ಲೂ ಕಡಿಮೆ ಸಮಯದಲ್ಲಿ ರುಚಿಕರವಾದ ಮತ್ತು ಗರಿಗರಿಯಾದ ಉಪಹಾರ ಮಾಡಲು ಬಯಸಿದರೆ, ಕೇವಲ ಬ್ರೆಡ್, ಆಲೂಗಡ್ಡೆ ಮತ್ತು ತರಕಾರಿಗಳೊಂದಿಗೆ ಈ ಸುಲಭ ತಿಂಡಿಯನ್ನು ತಯಾರಿಸಬಹುದು. ಬ್ರೆಡ್ ಕಟ್ಲೆಟ್ ಒಂದು ಸುಲಭ ರೆಸಿಪಿ. ಇದನ್ನು ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಮುಖ್ಯವಾಗಿ, ಟಿಫನ್ ತಯಾರಿಸಲು ಕಡಿಮೆ ಸಮಯವಿದ್ದಾಗ, ಇದು ಅತ್ಯುತ್ತಮ ಆಯ್ಕೆ.

ಬ್ರೆಡ್ ಕಟ್ಲೆಟ್ಗಳನ್ನು ತಯಾರಿಸಲು ಮುಖ್ಯವಾಗಿ ಬ್ರೆಡ್ ಚೂರುಗಳು ಮತ್ತು ಬೇಯಿಸಿದ ಆಲೂಗಡ್ಡೆಯನ್ನು ಬಳಸಲಾಗುತ್ತದೆ. ಕೆಲವು ತರಕಾರಿಗಳು ಮತ್ತು ಮಸಾಲೆಗಳನ್ನು ಸೇರಿಸುವ ಮೂಲಕ ಇದನ್ನು ಇನ್ನಷ್ಟು ರುಚಿಕರವಾಗಿ ಮಾಡಬಹುದು. ಈ ತಿಂಡಿ ಚಹಾದೊಂದಿಗೆ ಅಥವಾ ಬೆಳಗ್ಗಿನ ತಿಂಡಿಗೂ ಬಡಿಸಬಹುದು. ಬೆಳಗ್ಗಿನ ಒತ್ತಡದಲ್ಲಿ ಕೇಲವೇ ನಿಮಿಷಗಳಲ್ಲಿ ಈ ರುಚಿಕರವಾದ ತಿಂಡಿ ತಯಾರಿಸಬಹುದು. ಇದು ನಿಮಗೆ ಖುಷಿ ನೀಡುತ್ತದೆ. ಹಾಗಿದ್ರೆ, ಬ್ರೆಡ್ ಕಟ್ಲೆಟ್ (Bread Cutlet Recipe) ಅನ್ನು ತಯಾರಿಸುವ ಸುಲಭ ವಿಧಾನವನ್ನು ತಿಳಿಯೋಣ ಬನ್ನಿ.
ಬ್ರೆಡ್ ಕಟ್ಲೆಟ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಬ್ರೆಡ್ ಸ್ಲೈಸ್ಗಳು - 4 ಹೋಳುಗಳು
• ಆಲೂಗಡ್ಡೆ - 2 ಬೇಯಿಸಿ ಹಿಸುಕಿದ್ದು
• ಕಾರ್ನ್ ಹಿಟ್ಟು - 1 ಸ್ಪೂನ್
• ಕೆಂಪು ಮೆಣಸಿನ ಪುಡಿ - ಅರ್ಧ ಸ್ಪೂನ್
• ಗರಂ ಮಸಾಲ - ಅರ್ಧ ಸ್ಪೂನ್
• ಕ್ಯಾಪ್ಸಿಕಂ - ಅರ್ಧ ಚಮಚ
• ಬೇಯಿಸಿದ ಕಾರ್ನ್ - 2 ಸ್ಪೂನ್
• ಈರುಳ್ಳಿ - ಒಂದು ಸಣ್ಣಗೆ ಹೆಚ್ಚಿದ
• ಅರಿಶಿನ - ಸ್ವಲ್ಪ (ಒಂದು ಚಮಚ)
• ಶುಂಠಿ ಪೇಸ್ಟ್ - 1 ಸ್ಪೂನ್
• ಹಸಿ ಮೆಣಸಿನಕಾಯಿ - 1 ಕತ್ತರಿಸಿದ್ದು
• ಚಾಟ್ ಮಸಾಲ - ಅರ್ಧ ಸ್ಪೂನ್
• ಕರಿಮೆಣಸು - ಕಾಲು ಸ್ಪೂನ್ (ಪುಡಿಮಾಡಿದ್ದು)
• ನಿಂಬೆ ರಸ - 1 ಸ್ಪೂನ್
• ಕೊತ್ತಂಬರಿ ಸೊಪ್ಪು - 2 ಸ್ಪೂನ್ (ಹೆಚ್ಚಿದ್ದು)
• ಅಡುಗೆ ಎಣ್ಣೆ - ಸ್ವಲ್ಪ
• ರುಚಿಗೆ ತಕ್ಕಂತೆ ಉಪ್ಪು

ಬ್ರೆಡ್ ಕಟ್ಲೆಟ್ ತಯಾರಿಸುವ ವಿಧಾನ
ಮೊದಲು, ಬ್ರೆಡ್ ಹೋಳುಗಳ ಅಂಚುಗಳನ್ನು ಕತ್ತರಿಸಿ ಸಣ್ಣ ತುಂಡುಗಳಾಗಿ ಪುಡಿಮಾಡಿಕೊಳ್ಳೋಣ. ಈಗ ಪುಡಿಮಾಡಿದ ಬ್ರೆಡ್, ಹಿಸುಕಿದ ಆಲೂಗಡ್ಡೆ ಮತ್ತು ಉಳಿದ ಎಲ್ಲಾ ಕತ್ತರಿಸಿದ ತರಕಾರಿಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕೋಣ. ಅದಕ್ಕೆ ಎಲ್ಲಾ ಮಸಾಲೆಗಳು, ನಿಂಬೆ ರಸ, ಹಸಿರು ಕೊತ್ತಂಬರಿ ಸೊಪ್ಪು ಮತ್ತು ಕಾರ್ನ್ ಹಿಟ್ಟು ಸೇರಿಸೋಣ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ನಯವಾದ ಮಿಶ್ರಣವನ್ನು ತಯಾರಿಸಿಕೊಳ್ಳೋಣ. ಈಗ ಅಂಗೈಗಳಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಿ. ನಮಗೆ ಬೇಕಾದ ಆಕಾರದ ಕಟ್ಲೆಟ್ಗಳನ್ನು ಮಾಡೋಣ.
ಈಗ, ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳೋಣ. ಅದರಲ್ಲಿ ಕಟ್ಲೆಟ್ಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸೋಣ. ಕಟ್ಲೆಟ್ಗಳು ಕಂದು (ಗೋಲ್ಡ್) ಬಣ್ಣಕ್ಕೆ ತಿರುಗಿದಾಗ, ಅವುಗಳನ್ನು ಹೊರತೆಗೆಯೋಣ. ನೀವು ಇವುಗಳನ್ನು ಟಿಶ್ಯೂ ಪೇಪರ್ ಮೇಲೆ ಇಡಬಹುದು. ಹೀಗಿ ಮಾಡಿದರೆ ಹೆಚ್ಚುವರಿ ಎಣ್ಣೆ ಹೊರಗೆ ಹೋಗುತ್ತದೆ. ಇಷ್ಟು ಮಾಡಿದರೆ ಸಾಕು, ರುಚಿಕರ ಮತ್ತು ಗರಿಗರಿಯಾದ ಬ್ರೆಡ್ ಕಟ್ಲೆಟ್ಗಳು ಸಿದ್ಧವಾಗುತ್ತವೆ. ನೀವು ಟೊಮೆಟೊ ಸಾಸ್ ಅಥವಾ ಚಟ್ನಿಯೊಂದಿಗೆ ಮಕ್ಕಳಿಗೆ ನೀಡಬಹುದು.



Click it and Unblock the Notifications
