Latest Updates
-
ಮಕ್ಕಳ ಭವಿಷ್ಯ ಭದ್ರವಾಗಿರಲಿ: ಎನ್ಪಿಎಸ್ ವಾತ್ಸಲ್ಯದಿಂದ ಪಾಕೆಟ್ ಮನಿವರೆಗೆ ಪೋಷಕರಿಗೆ ಇಲ್ಲಿದೆ ಸೂಕ್ತ ಹಣಕಾಸು ಮಾರ್ಗದರ್ಶಿ -
ಇಂದಿನಿಂದ ಹಾಲು ದುಬಾರಿ: ಅಮೂಲ್, ಮದರ್ ಡೈರಿ ಬೆಲೆ ಏರಿಕೆ; ಬಜೆಟ್ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬಿಗ್ ಬಾಸ್ ಕನ್ನಡ 13: ದೊಡ್ಮನೆಯ ಹೊಸ ಕ್ಯಾಪ್ಟನ್ ಯಶಸ್ ಕೃಷ್ಣ, ಮನೆಯಲ್ಲಿ ಬದಲಾಗುತ್ತಾ ಗೇಮ್ ಪ್ಲಾನ್? -
ದಟ್ಟ ಮಂಜು ಮತ್ತು ಮಾಲಿನ್ಯ: ಬೆಳಗಿನ ವಾಕಿಂಗ್ ಮಾಡುವವರು ಈ 12 ನಿಮಿಷದ ವ್ಯಾಯಾಮ ಮಿಸ್ ಮಾಡಬೇಡಿ! -
ಮದುವೆ ಪ್ಲಾನಿಂಗ್ ಗೊಂದಲವೇ? ಕನ್ನಡಿಗ ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಮತ್ತು ಶಾಂತಿಯುತ ಮದುವೆ ಮಾರ್ಗದರ್ಶಿ! -
ವಿಶ್ವ ಮಧುಮೇಹ ದಿನ: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ₹100ರೊಳಗೆ ಸಿಗುವ ಬೆಸ್ಟ್ ಡಯಟ್ ಟಿಪ್ಸ್! -
ದೆಹಲಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆಯಾ? ವಾಟ್ಸಾಪ್ ಸುಳ್ಳು ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ! -
ತಮಿಳುನಾಡಿನಲ್ಲಿ ಮಳೆ ಅಬ್ಬರ: ಕರೆಂಟ್ ಇಲ್ಲದಿದ್ದರೂ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ವರ್ಕೌಟ್ ಟಿಪ್ಸ್! -
ಹಬ್ಬದ ಫೋಟೋ ಶೇರ್ ಮಾಡ್ತಿದ್ದೀರಾ? ಸಂಬಂಧ ಹಾಳಾಗದಂತೆ ಪ್ರೈವಸಿ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಎಫೆಕ್ಟ್: ಗಂಟಲು ಕೆರೆತ, ಕೆಮ್ಮು ತಡೆಯಲು ಇಂದೇ ಈ ಆರೋಗ್ಯಕರ ಆಹಾರಗಳನ್ನು ಟಿಫಿನ್ನಲ್ಲಿ ಪ್ಯಾಕ್ ಮಾಡಿ!
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ನೀವು ದಪ್ಪಗಾಗಿದ್ದೀರಾ? ಜಿಮ್ಗೆ ಹೋಗದೆ ತೂಕ ಇಳಿಸಬೇಕೆ? ಹಾಗಿದ್ದರೆ ಈ ಮ್ಯಾಜಿಕ್ ಗಂಜಿ ಟ್ರೈ ಮಾಡಿ. ಹೌದು, ದಿನಾ ಬೆಳಗ್ಗೆ 1 ಕಪ್ ಈ ಗಂಜಿ (ganji) ಕುಡಿಯಿರಿ. ಹೊಟ್ಟೆಯ ಬೊಜ್ಜು ಮತ್ತು ತೂಕ ರಾಕೆಟ್ ವೇಗದಲ್ಲಿ ಇಳಿಯುತ್ತೆ. ಕಪ್ಪು ಕವುನಿ ಅಕ್ಕಿಯ ತರಕಾರಿ ಗಂಜಿಗೆ (black rice kanji) ಬೇಕಾಗುವ ಸಾಮಗ್ರಿಗಳು ಮತ್ತು ಮನೆಯಲ್ಲೇ ತಯಾರಿಸಬಹುದಾದ ಸರಳ ವಿಧಾನವನ್ನೂ (karuppu kavuni vegetable kanji recipe) ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದ ಹೆಚ್ಚಿರುವ ತೂಕ ಹಾಗೂ ಹೊಟ್ಟೆಯ ಬೊಜ್ಜು ಇಂದಿನ ಪ್ರಮುಖ ಸವಾಲಾಗಿದೆ. ಜಿಮ್, ಕಠಿಣ ವ್ಯಾಯಾಮ ಹಾಗೂ ಡಯಟ್ ಹೊರತಾಗಿ, ನಮ್ಮ ಸಾಂಪ್ರದಾಯಿಕ ಅಡುಗೆಯಲ್ಲಿಯೇ ಇದಕ್ಕೆ ಸುಲಭ ಪರಿಹಾರವಿದೆ. ಅಂತಹ ಒಂದು ಶಕ್ತಿಶಾಲಿ ಮತ್ತು ಆರೋಗ್ಯಕರ ರೆಸಿಪಿ 'ಕಪ್ಪು ಕವುನಿ ಅಕ್ಕಿಯ ತರಕಾರಿ ಗಂಜಿ'.
ತಮಿಳುನಾಡಿನ ರಾಜಮನೆತನದಲ್ಲಿ 'ನಿಷಿದ್ಧ ಅಕ್ಕಿ' ಎಂದೇ ಹೆಸರಾಗಿದ್ದ ಈ ಕಪ್ಪು ಅಕ್ಕಿ, ತೂಕ ಇಳಿಕೆಗೆ ಅದ್ಭುತ ಫಲಿತಾಂಶ ನೀಡುತ್ತದೆ. ಕಪ್ಪು ಕವುನಿ ಅಕ್ಕಿ ಪೋಷಕಾಂಶಗಳ ಗಣಿಯಾಗಿದೆ. ಬಿಳಿ ಅಕ್ಕಿಗಿಂತ ಹೆಚ್ಚಿನ ಪ್ರಮಾಣದ ಆಂಥೋಸಯಾನಿನ್ (ಆಂಟಿ-ಆಕ್ಸಿಡೆಂಟ್) ಹೊಂದಿದ್ದು, ದೇಹದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದರ ಸಮೃದ್ಧ ನಾರಿನಂಶ ಜೀರ್ಣಕ್ರಿಯೆ ಸುಧಾರಿಸಿ, ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ. ಇದರಿಂದ ಅತಿಯಾದ ಹಸಿವು ಕಡಿಮೆಯಾಗಿ ತೂಕ ಇಳಿಕೆ (weight loss recipes) ಸುಲಭವಾಗುತ್ತದೆ.
ಕಪ್ಪು ಕವುನಿ ಅಕ್ಕಿಯ ತರಕಾರಿ ಗಂಜಿಗೆ ಬೇಕಾಗುವ ಸಾಮಗ್ರಿಗಳು
• ಕಪ್ಪು ಕವುನಿ ಅಕ್ಕಿ - 1 ಕಪ್
• ನೀರು - 4 ಕಪ್
• ಈರುಳ್ಳಿ - 1 (ಉದ್ದಕ್ಕೆ ಸಣ್ಣದಾಗಿ ಹೆಚ್ಚಿದ್ದು)
• ಹಸಿ ಮೆಣಸಿನಕಾಯಿ - 3
• ಕ್ಯಾರೆಟ್ - 1
• ಬೆಳ್ಳುಳ್ಳಿ - 6 ಎಸಳು (ಜಜ್ಜಿದ್ದು)
• ಜೀರಿಗೆ - 1 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ತುರಿದ ತೆಂಗಿನಕಾಯಿ - 1 ಹಿಡಿ
• ಕೊತ್ತಂಬರಿ ಸೊಪ್ಪು - ಸ್ವಲ್ಪ (ಸಣ್ಣದಾಗಿ ಹೆಚ್ಚಿದ್ದು)
ಕಪ್ಪು ಕವುನಿ ಅಕ್ಕಿಯ ತರಕಾರಿ ಗಂಜಿ ತಯಾರಿಸುವ ವಿಧಾನ
- ಮೊದಲು, ಕಪ್ಪು ಕವುನಿ ಅಕ್ಕಿಯನ್ನು ಎರಡು ಬಾರಿ ತೊಳೆದು, 8 ಗಂಟೆಗಳ ಕಾಲ ೪ ಕಪ್ ನೀರಿನಲ್ಲಿ ನೆನೆಸಿ. ಮರುದಿನ, ಆ ನೀರನ್ನು ಪ್ರತ್ಯೇಕವಾಗಿ ಬಸಿದಿಟ್ಟು, ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
- ಪ್ರೆಶರ್ ಕುಕ್ಕರ್ಗೆ ರುಬ್ಬಿದ ಅಕ್ಕಿ, ಬಸಿದಿಟ್ಟ ನೀರು, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ತುರಿದ ಕ್ಯಾರೆಟ್ ಹಾಗೂ ಜಜ್ಜಿದ ಬೆಳ್ಳುಳ್ಳಿ ಸೇರಿಸಿ. ನಂತರ ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ.
- ಕುಕ್ಕರ್ ಮುಚ್ಚಳ ಮುಚ್ಚಿ, ಮಧ್ಯಮ ಉರಿಯಲ್ಲಿ 3 ರಿಂದ 4 ವಿಸಲ್ ಕೂಗಿಸಿ. ಅಕ್ಕಿ ಮತ್ತು ತರಕಾರಿಗಳು ಚೆನ್ನಾಗಿ ಬೆಂದು ಗಂಜಿಯಾಗಲು ಬಿಡಿ, ನಂತರ ಹಬೆ ಆರಲು ಕಾಯಿರಿ.
- ಹಬೆ ಸಂಪೂರ್ಣವಾಗಿ ಆರಿದ ಮೇಲೆ, ಕುಕ್ಕರ್ ಮುಚ್ಚಳ ತೆಗೆದು, ಅದಕ್ಕೆ ತಾಜಾ ತುರಿದ ತೆಂಗಿನಕಾಯಿ ಮತ್ತು ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಇಷ್ಟು ಮಾಡಿದರೆ ಸಾಕು, ಈಗ ಬಿಸಿಬಿಸಿಯಾದ ಪೌಷ್ಟಿಕ 'ಕಪ್ಪು ಕವುನಿ ತರಕಾರಿ ಗಂಜಿ' ಸವಿಯಲು ಸಿದ್ಧ.
ಆರೋಗ್ಯ ಪ್ರಯೋಜನಗಳು
* ವೇಗವಾಗಿ ತೂಕ ಇಳಿಕೆ: ಈ ಗಂಜಿ ಸೇವಿಸುವುದರಿಂದ ದೇಹದ ಚಯಾಪಚಯ ಕ್ರಿಯೆ (ಮೆಟಾಬಾಲಿಸಮ್) ಹೆಚ್ಚಿ, ಕೊಬ್ಬು ಕರಗಿಸಲು ನೆರವಾಗುತ್ತದೆ.
* ಶುಗರ್ ಕಂಟ್ರೋಲ್ (ಮಧುಮೇಹ ನಿಯಂತ್ರಣ) ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಕರಿಸುತ್ತದೆ.
* ಹೃದಯದ ಆರೋಗ್ಯ: ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ರಕ್ತನಾಳಗಳಲ್ಲಿನ ಕಲ್ಮಶಗಳನ್ನು ನಿವಾರಿಸಿ ಹೃದಯವನ್ನು ಆರೋಗ್ಯವಾಗಿಡುತ್ತವೆ.
* ಶಕ್ತಿ ವರ್ಧಕ: ದೇಹಕ್ಕೆ ದಿನವಿಡೀ ಬೇಕಾಗುವ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಪೂರೈಸಿ, ನಿಮ್ಮನ್ನು ಚಟುವಟಿಕೆಯಿಂದ ಇಡುತ್ತದೆ.



Click it and Unblock the Notifications

