ಬಿಸಿಬೇಳೆ ಬಾತ್ ರೆಸಿಪಿ

By: Divya
Subscribe to Boldsky

ಬಿಸಿಬೇಳೆ ಬಾತ್ ಕರ್ನಾಟಕದ ಪ್ರಸಿದ್ಧ ಭಕ್ಷ್ಯಗಳಲ್ಲಿ ಒಂದು. ಅಕ್ಕಿ, ಹುಣಸೇ ಹಣ್ಣು, ತೊಗರಿಬೇಳೆ, ವಿಶೇಷವಾದ ಮಸಾಲೆಗಳ ಸಮ್ಮಿಶ್ರಣದಿಂದ ತಯಾರಿಸಲಾಗುತ್ತದೆ. ಕನ್ನಡದಲ್ಲಿ "ಬಿಸಿ" ಎಂದರೆ "ಬಿಸಿ" ಎಂದು "ಬೇಳೆ" ಎಂದರೆ ಮಸೂರ/ತೊಗರಿಬೇಳೆ, ಬಾತ್ ಎಂದರೆ ಸ್ನಾನ ಎಂದು ಆಗುತ್ತದೆ. ಅಂದರೆ ಬೇಳೆಯಲ್ಲಿ ಅಕ್ಕಿ ಸ್ನಾನ ಮಾಡಿದ್ದು ಎನ್ನುವ ಅರ್ಥವಾಗುತ್ತದೆ.

ಕರ್ನಾಟಕ ಶೈಲಿಯ ಸಾಂಬರ್ ಅನ್ನದಂತೆ ಕಂಡರೂ ಇದು ರುಚಿ ಹಾಗೂ ಪರಿಮಳದಲ್ಲಿ ವಿಭಿನ್ನತೆಯನ್ನು ಹೊಂದಿರುತ್ತದೆ. ಅಕ್ಕಿ ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಬೇಯಿಸಿಕೊಂಡು, ನಂತರ ಬೇಳೆ ಮಸಾಲೆ ಹಾಗೂ ತರಕಾರಿ ಮಿಶ್ರಣದಿಂದ ಈ ಭಕ್ಷ್ಯವನ್ನು ತಯಾರಿಸಲಾಗುತ್ತದೆ. ವಿಶೇಷವಾದ ಮಸಾಲ ಪುಡಿಯೊಂದಿಗೆ ತುಪ್ಪದ ಸುವಾಸನೆಯು ಈ ಪಾಕವಿಧಾನದ ಶ್ರೇಷ್ಠತೆಯನ್ನು ಹೆಚ್ಚಿಸುತ್ತದೆ.

ಈ ಪಾಕವಿಧಾನ ವಿಸ್ತಾರವಾದ ಪ್ರಕ್ರಿಯೆಯನ್ನು ಒಳಗೊಂಡಿದೆ. ಆದರೆ ಕಡಿಮೆ ಸಮಯದಲ್ಲೇ ತಯಾರಿಸಬಹುದು. ಹೆಚ್ಚು ತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಈ ಊಟದ ಶ್ರೀಮಂತಿಕೆ ಹೆಚ್ಚುವುದು. ಈ ಭಕ್ಷ್ಯಕ್ಕೆ ಬೂಂಧಿ ಮತ್ತು ರೈತಾವನ್ನು ಸೇರಿಸಿಕೊಂಡು ತಿನ್ನುತ್ತಾರೆ. ಈ ಪಾಕವಿಧಾನವನ್ನು ಮಾಡಲು ಉತ್ಸುಕರಾಗಿದ್ದರೆ ಇಲ್ಲಿದೆ ನೋಡಿ ವೀಡಿಯೋ ಹಾಗೂ ಚಿತ್ರ ವಿವರಣೆಯ ಪಾಕವಿಧಾನ.

Bisi bele bath
ಬಿಸಿಬೇಳೆ ಬಾತ್ ಪಾಕವಿಧಾನ | ಹಂತ ಹಂತವಾಗಿ ಬಿಸಿ ಬೇಳೆ ಹುಳಿ ಅನ್ನಮಾಡುವ ಪಾಕವಿಧಾನ | ಕರ್ನಾಟಕ ಶೈಲಿಯ ಸಾಂಬಾರ್ ರೈಸ್ ಪಾಕವಿಧಾನ | ಬಿಸಿಬೇಳೆ ಬಾತ್ ವಿಡಿಯೋ ಪಾಕವಿಧಾನ
ಬಿಸಿಬೇಳೆ ಬಾತ್ ಪಾಕವಿಧಾನ | ಹಂತ ಹಂತವಾಗಿ ಬಿಸಿ ಬೇಳೆ ಹುಳಿ ಅನ್ನಮಾಡುವ ಪಾಕವಿಧಾನ | ಕರ್ನಾಟಕ ಶೈಲಿಯ ಸಾಂಬಾರ್ ರೈಸ್ ಪಾಕವಿಧಾನ | ಬಿಸಿಬೇಳೆ ಬಾತ್ ವಿಡಿಯೋ ಪಾಕವಿಧಾನ
Prep Time
10 Mins
Cook Time
40M
Total Time
50 Mins

Recipe By: ಅರ್ಚನಾ ವಿ.

Recipe Type: ಪ್ರಮುಖ ತಿಂಡಿ

Serves: 2 ಮಂದಿಗೆ

Ingredients
 • ಅಕ್ಕಿ - 1 ಕಪ್

  ತೊಗರಿ ಬೇಳೆ - 1 ಕಪ್

  ನೀರು - 7 ಕಪ್

  ಸಿಪ್ಪೆ ತೆಗೆದು ಹೆಚ್ಚಿದ ಕ್ಯಾರೇಟ್/ಗಜರಿ - 1

  ಹೆಚ್ಚಿದ ಬೀನ್ಸ್ - 100 ಗ್ರಾಂ.

  ರುಚಿಗೆ ತಕ್ಕಷ್ಟು ಉಪ್ಪು

  ಹುಣಸೆ ಹಣ್ಣು - 1/2 ನಿಂಬೆ ಗಾತ್ರದಷ್ಟು

  ಬಿಸಿಬೇಳೆ ಬಾತ್ ಪೌಡರ್ - 3 ಟೇಬಲ್ ಚಮಚ

  ತುಪ್ಪ - 3 ಟೇಬಲ್ ಚಮಚ

  ಬೆಲ್ಲ - 1 ಟೇಬಲ್ ಚಮಚ

  ಸಾಸಿವೆ ಕಾಳು - 1/2 ಟೀ ಚಮಚ

  ಕರಿಬೇವಿನ ಎಲೆ 7-10

  ಹುರಿದ ಗೋಡಂಬಿ - 6-7

Red Rice Kanda Poha
How to Prepare
 • 1. ಪ್ರೆಶರ್ ಕುಕ್ಕರ್‌ನಲ್ಲಿ ಅಕ್ಕಿ ಮತ್ತು ತೊಗರಿ ಬೇಳೆಯನ್ನು ಒಮ್ಮೆಲೇ ಹಾಕಿ.

  2. 3 ಕಪ್ ನೀರನ್ನು ಬೆರೆಸಿ, 2 ಸೀಟಿ ಕೂಗುವವರೆಗೆ ಬೇಯಿಸಿ.

  3. ಇದೇ ವೇಳೆಯಲ್ಲಿ ಪಾತ್ರೆಯೊಂದರಲ್ಲಿ 2 ಕಪ್ ನೀರನ್ನು ಹಾಕಿ ಕಾಯಲು ಇಡಿ.

  4. ಕ್ಯಾರೆಟ್ ಮತ್ತು ಬೀನ್ಸ್ ಅನ್ನು ಪಾತ್ರೆಗೆ ಸೇರಿಸಿ

  5. ಸ್ವಲ್ಪ ಉಪ್ಪನ್ನು ಬೆರೆಸಿ ಬೇಯಲು ಬಿಡಿ.

  6. ತರಕಾರಿಗಳು ಅರ್ಧ ಬೇಯುವಂತೆ ಮುಚ್ಚಳವನ್ನು ಮುಚ್ಚಿಡಿ.

  7. ಹುಣಸೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

  8. ಇದಲ್ಲದೆ ಬಿಸಿಬೇಳೆ ಪೌಡರ್‍ಅನ್ನು ಸೇರಿಸಿ.

  9. ಇದಕ್ಕೆ ಒಂದು ಕಪ್ ನೀರನ್ನು ಬೆರೆಸಿ, ಗಂಟಾಗದಂತೆ ಚನ್ನಾಗಿ ಕಲುಕಿ.

  10. ದಪ್ಪ ತಳದ ಪಾತ್ರೆಯಲ್ಲಿ 1 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ, ಬೇಯಿಸಿಕೊಂಡ ಬೇಳೆ ಮತ್ತು ಅನ್ನದ ಮಿಶ್ರಣವನ್ನು ಸೇರಿಸಿ.

  11. ನಂತರ ಬೇಯಿಸಿಕೊಂಡ ತರಕಾರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

  12. ಅರ್ಧ ಕಪ್ ನೀರು ಮತ್ತು ಬೆಲ್ಲವನ್ನು ಸೇರಿಸಬೇಕು.

  13. ಬೇಕಾದರೆ ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಬೇಕು.

  14. ಮಿಶ್ರಣವು ಸ್ವಲ್ಪ ತೆಳು/ನೀರಾಗ ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ.

  15. ಇದೇ ಸಮಯದಲ್ಲಿ ಒಂದು ಚಿಕ್ಕ ಪಾತ್ರೆಯಲ್ಲಿ ತುಪ್ಪವನ್ನು ಬೆರೆಸಿ.

  16. ಸಾಸಿವೆಯನ್ನು ಹಾಕಿ, ಸಿಡಿಯುವವರೆಗೆ ಹುರಿಯಿರಿ.

  17. ಕರಿಬೇವಿನ ಎಲೆ, ಗೋಡಂಬಿಗಳನ್ನು ಸೇರಿಸಿ ಬಿಸಿಯಾದ ಒಂದು ಒಗ್ಗರಣೆ ತಯಾರಿಸಿ.

  18. ಒಗ್ಗರಣೆ ತಯಾರಾದ ಮೇಲೆ ಅನ್ನದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲುಕಿ.

  19. ಮತ್ತೊಮ್ಮೆ ತುಪ್ಪವನ್ನು ಮಿಶ್ರಣದ ಮೇಲ್ಭಾಗಕ್ಕೆ ಹಾಕಿ.

  20. ಗೋಡಂಬಿಯಿಂದ ಅಲಂಕರಿಸಿ.

Instructions
 • 1. ಕ್ಯಾರೆಟ್/ಗಜರಿ ಎಷ್ಟು ಸಿಹಿಯಾಗಿದೆ ಎನ್ನುವುದನ್ನು ಆಧರಿಸಿ ಬೆಲ್ಲವನ್ನು ಸೇರಿಸಿ.
 • 2. ಹೆಚ್ಚು ತುಪ್ಪವನ್ನು ಬೆರೆಸಿದಷ್ಟು ರುಚಿಯು ಹೆಚ್ಚುವುದು.
 • 3. ನಿಮಗೆ ಬೇಕಾದ ತರಕಾರಿಗಳನ್ನು ಸೇರಿಸಿಕೊಳ್ಳಬಹುದು.
 • 4. ನಿಮಗೆ ಬೇಕಾದಲ್ಲಿ ತೆಂಗಿನ ತುರಿಯನ್ನು ಸೇರಿಸಬಹುದು. ಇದು ಭಿನ್ನವಾದ ರುಚಿಯನ್ನು ನೀಡುತ್ತದೆ.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರೀಸ್ - 343 ಕ್ಯಾಲ್
 • ಫ್ಯಾಟ್ - 5 ಗ್ರಾಂ.
 • ಪ್ರೋಟೀನ್ - 7 ಗ್ರಾಂ.
 • ಕಾರ್ಬೋಹೈಡ್ರೇಟ್ - 67 ಗ್ರಾಂ.
 • ಸಕ್ಕರೆ - 2 ಗ್ರಾಂ.
 • ಫೈಬರ್ - 4 ಗ್ರಾಂ.
 • ಐರನ್ - ಶೇ.20
 • ವಿಟಮಿನ್ ಎ - ಶೇ.44

ಬಿಸಿಬೇಳೆ ಬಾತ್ ಪಾಕ ವಿಧಾನ

1. ಪ್ರೆಶರ್ ಕುಕ್ಕರ್‌ನಲ್ಲಿ ಅಕ್ಕಿ ಮತ್ತು ತೊಗರಿ ಬೇಳೆಯನ್ನು ಒಮ್ಮೆಲೇ ಹಾಕಿ.

Bisi bele bath
Bisi bele bath

2. 3 ಕಪ್ ನೀರನ್ನು ಬೆರೆಸಿ, 2 ಸೀಟಿ ಕೂಗುವವರೆಗೆ ಬೇಯಿಸಿ.

Bisi bele bath
Bisi bele bath

3. ಇದೇ ವೇಳೆಯಲ್ಲಿ ಪಾತ್ರೆಯೊಂದರಲ್ಲಿ 2 ಕಪ್ ನೀರನ್ನು ಹಾಕಿ ಕಾಯಲು ಇಡಿ.

Bisi bele bath

4. ಕ್ಯಾರೆಟ್ ಮತ್ತು ಬೀನ್ಸ್ ಅನ್ನು ಪಾತ್ರೆಗೆ ಸೇರಿಸಿ.

Bisi bele bath

5. ಸ್ವಲ್ಪ ಉಪ್ಪನ್ನು ಬೆರೆಸಿ ಬೇಯಲು ಬಿಡಿ.

Bisi bele bath

6. ತರಕಾರಿಗಳು ಅರ್ಧ ಬೇಯುವಂತೆ ಮುಚ್ಚಳವನ್ನು ಮುಚ್ಚಿಡಿ.

Bisi bele bath
Bisi bele bath

7. ಹುಣಸೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

Bisi bele bath
Bisi bele bath

8. ಇದಲ್ಲದೆ ಬಿಸಿಬೇಳೆ ಪೌಡರ್‍ಅನ್ನು ಸೇರಿಸಿ.

Bisi bele bath

9. ಇದಕ್ಕೆ ಒಂದು ಕಪ್ ನೀರನ್ನು ಬೆರೆಸಿ, ಗಂಟಾಗದಂತೆ ಚನ್ನಾಗಿ ಕಲುಕಿ.

Bisi bele bath
Bisi bele bath

10. ದಪ್ಪ ತಳದ ಪಾತ್ರೆಯಲ್ಲಿ 1 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ, ಬೇಯಿಸಿಕೊಂಡ ಬೇಳೆ ಮತ್ತು ಅನ್ನದ ಮಿಶ್ರಣವನ್ನು ಸೇರಿಸಿ.

Bisi bele bath
Bisi bele bath

11. ನಂತರ ಬೇಯಿಸಿಕೊಂಡ ತರಕಾರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

Bisi bele bath
Bisi bele bath

12. ಅರ್ಧ ಕಪ್ ನೀರು ಮತ್ತು ಬೆಲ್ಲವನ್ನು ಸೇರಿಸಬೇಕು.

Bisi bele bath
Bisi bele bath

13. ಬೇಕಾದರೆ ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಬೇಕು.

Bisi bele bath
Bisi bele bath

14. ಮಿಶ್ರಣವು ಸ್ವಲ್ಪ ತೆಳು/ನೀರಾಗ ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ.

Bisi bele bath

15. ಇದೇ ಸಮಯದಲ್ಲಿ ಒಂದು ಚಿಕ್ಕ ಪಾತ್ರೆಯಲ್ಲಿ ತುಪ್ಪವನ್ನು ಬೆರೆಸಿ.

Bisi bele bath

16. ಸಾಸಿವೆಯನ್ನು ಹಾಕಿ, ಸಿಡಿಯುವವರೆಗೆ ಹುರಿಯಿರಿ.

Bisi bele bath
Bisi bele bath

17. ಕರಿಬೇವಿನ ಎಲೆ, ಗೋಡಂಬಿಗಳನ್ನು ಸೇರಿಸಿ ಬಿಸಿಯಾದ ಒಂದು ಒಗ್ಗರಣೆ ತಯಾರಿಸಿ.

Bisi bele bath
Bisi bele bath

18. ಒಗ್ಗರಣೆ ತಯಾರಾದ ಮೇಲೆ ಅನ್ನದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲುಕಿ.

Bisi bele bath
Bisi bele bath

19. ಮತ್ತೊಮ್ಮೆ ತುಪ್ಪವನ್ನು ಮಿಶ್ರಣದ ಮೇಲ್ಭಾಗಕ್ಕೆ ಹಾಕಿ.

Bisi bele bath

20. ಗೋಡಂಬಿಯಿಂದ ಅಲಂಕರಿಸಿ.

Bisi bele bath
[ 4.5 of 5 - 50 Users]
Please Wait while comments are loading...
Subscribe Newsletter