Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬಿರಿಯಾನಿ ಮಾಡಲು ಗೊತ್ತಿಲ್ವಾ? ಈ ಸರಳ ಚಿಕನ್ ಬಿರಿಯಾನಿ ಟ್ರೈ ಮಾಡಿ
Recipes
oi-Reena TK
Posted By: Reena TK
ಚಿಕನ್ ಬಿರಿಯಾನಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಯಾರಿಸುತ್ತಾರೆ. ನಮಗೆ ಬಿರಿಯಾನಿ ಮಾಡಿ ಅಷ್ಟೊಂದು ಪರಿಚಯವಿಲ್ಲ, ಅದರ ಮಸಾಲೆ ಹದ ಗೊತ್ತಿಲ್ಲ ಎಂದಾದರೆ ಚಿಕನ್ ಬಿರಿಯಾನಿ ಮಸಾಲೆ ತಂದು ಮಾಡುವ ಸರಳ ಚಿಕನ್ ಬಿರಿಯಾನಿ ರೆಸಿಪಿ ನೀಡಿದ್ದೇವೆ ನೋಡಿ:

ಚಿಕನ್ ಫ್ರೈಗೆ ಬೇಕಾಗುವ ಸಾಮಗ್ರಿಗಳು
ಚಿಕನ್ 1 ಕೆಜಿ (ದೊಡ್ಡ ದೊಡ್ಡ ಪೀಸ್)
ಒಂದು ಚಮಚ ಖಾರದ ಪುಡಿ
ಒಂದು ಚಮಚ ಕಾಶ್ಮೀರಿ ಮೆಣಸಿನ ಪುಡಿ
ಮೊಟ್ಟೆ 1
ಉಪ್ಪು 1/2 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಸ್ವಲ್ಪ ಅರಿಶಿಣ ಪುಡಿ
1/2 ಚಮಚ ನಿಂಬೆರಸ
ಚಿಕನ್ ಮಸಾಲೆ ರೆಡಿ ಮಾಡಲು
ಟೊಮೆಟೊ 6
ಈರುಳ್ಳಿ 2-3
ಮೆಣಸಿನ ಪುಡಿ 1 ಚಮಚ
ಗರಂ ಮಸಾಲೆ ಪುಡಿ 1 ಚಮಚ
ಬಿರಿಯಾನಿ ಮಸಾಲೆ
ಮೊಸರು 1/ 2 ಕಪ್
ಪಲಾವ್ ಎಲೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಅಕ್ಕಿ 2 ಕಪ್
ಡ್ರೈ ಫ್ರೂಟ್ಸ್ ಸ್ವಲ್ಪ (ಗೋಡಂಬಿ ದ್ರಾಕ್ಷಿ)
ತುಪ್ಪ 2 ಚಮಚ
ಮಾಡುವ ವಿಧಾನ:
- ನೀವು ಚಿಕನ್ ಪೀಸ್ಗೆ ಮೇಲೆ ಹೇಳಿದ ಮಸಾಲೆ ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ
- ನಂತರ ಒಂದು ಕಪ್ ಎಣ್ಣೆ ಕಾಯಿಸಿ ಅದರಲ್ಲಿ ಸ್ವಲ್ಪ-ಸ್ವಲ್ಪ ಹಾಕಿ ಫ್ರೈ ಮಾಡಿಡಿ (ಕಬಾಬ್ ರೀತಿಯಲ್ಲಿ)
- ಈಗ ದಪ್ಪ ತಳವಿರುವ ಪಾತ್ರೆಗೆ ಎಣ್ಣೆ ಹಾಕಿ ಅದರಲ್ಲಿ ಚಕ್ಕೆ-ಲವಂಗ, ಪಲಾವ್ ಎಲೆ ಹಾಕಿ, ಈರುಳ್ಳಿ ಹಾಕಿ ಫ್ರೈ ಮಾಡಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವಾಗ , ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ನಂತರ ಟೊಮೆಟೊ ಹಾಕಿ , ಟೊಮೆಟೊ ಮೆತ್ತಗಾಗುವಾಗ ಮಸಾಲೆ, ಉಪ್ಪು, ಮೊಸರು ಹಾಕಿ ಮಿಕ್ಸ್ ಮಾಡಿ, ಆವಾಗ ಗಟ್ಟಿ ಗ್ರೇವಿ ರೆಡಿಯಾಗುತ್ತದೆ.
- ಗ್ರೇವಿ ಸ್ವಲ್ಪ ನೀರಾಗಿದ್ದರೆ ಸ್ವಲ್ಪ ಗಟ್ಟಿಯಾಗುವವರೆಗೆ ಬಿಸಿ, ಫ್ರೈ ಮಾಡಿಟ್ಟ ಚಿಕನ್ ಕಬಾಬ್ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿಡಿ.
- ಈಗ ಒಂದು ಸ್ವಲ್ಪ ದೊಡ್ಡ ಮಡಿಕೆಯಲ್ಲಿ ನೀರು ಇಟ್ಟು ನೀರು ಕುದಿ ಬರುವಾಗ ಅಕ್ಕಿ ತೊಳೆದು ಹಾಕಿ, ಆ ನೀರಿಗೆ ಒಂದು ನಿಂಬೆ ತುಂಡು, ಚಕ್ಕೆ , ಲವಂಗ , ಸ್ವಲ್ಪ ಉಪ್ಪು ಹಾಕಿ ಬೇಯಿಸಿ( ಉಪ್ಪು ಸ್ವಲ್ಪವೇ ಹಾಕಬೇಕು, ಚಿಟಿಕೆಯಷ್ಟು), ಅಕ್ಕಿ ಅರ್ಧ ಬೆಂದಾಗ ಬಸಿಯಿರಿ.
- ಇಲ್ಲಾ ಆ ಅಕ್ಕಿಗೆ ಬೇಯಲು 2 ವಿಶಲ್ ಬೇಕೆಂದರೆ ಒಂದು ವಿಶಲ್ ಬಂದಾಗ ಅಫ್ ಮಾಡಿ, ಹೀಗೆ ಬೇಯಿಸುವಾಗ ತುಂಬಾ ನೀರು ಹಾಕಬೇಡಿ.
- ಈಗ ನೀವು ದಪ್ಪ ತಳದ ಪಾತ್ರೆಯಲ್ಲಿ ಚಿಕನ್ ಗ್ರೇವಿ ರೆಡಿ ಮಾಡಿರುತ್ತೀರಾ ಅಲ್ವಾ ಅದರಿಂದ ಅರ್ಧದಷ್ಟು ಗ್ರೇವಿ ಮತ್ತು ಚಿಕನ್ ತೆಗೆದು ಒಂದು ಬೌಲ್ನಲ್ಲಿ ಹಾಕಿಡಿ, ಈಗ ಅರ್ಧ ಬೆಂದ ಅನ್ನ ಒಂದು ಲೇಯರ್ ಅದರ ಮೇಲೆ ಸ್ವಲ್ಪ ಮೊಸರು, ನಂತರ ಚಿಕನ್ ಮಿಶ್ರಣ ಅದರ ಮೇಲೆ ಅನ್ನ ಹೀಗೆ ಲೇಯರ್ ರೀತಿ ಹಾಕಿ, ಮೇಲೆ ತಪ್ಪದಲ್ಲಿ ಫ್ರೈ ಮಾಡಿದ ಗೋಡಂಬಿ, ದ್ರಾಕ್ಷಿ ಹಾಕಿ, ತುಪ್ಪ ಹಾಕಿ ನಂತರ ಆ ಪಾತ್ರೆಯ ಬಾಯಿ ಮುಚ್ಚಿ, ಅದರ ಮೇಲೆ ಭಾರವಾದ ಕಲ್ಲು ಅಥವಾ ಪಾತ್ರೆಯಲ್ಲಿ ನೀರು ತುಂಬಿ ಇಡಿ .
- ನಂತರ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ, ಬಳಿಕ ಅನ್ನ ಬೆಂದಿದೆಯೇ ನೋಡಿ, ಬಿರಿಯಾನಿ ಅನ್ನ ಬೆಂದಿದ್ದರೆ ಸ್ಟೌವ್ ಆಫ್ ಮಾಡಿ ಸ್ವಲ್ಪ ನಿಂಬೆರಸ ಹಾಕಿ ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಬಿರಿಯಾನಿ ರೆಡಿ, ನಂತರ ಸರ್ವ್ ಮಾಡುವಾಗ ಬೇಯಿಸಿದ ಮೊಟ್ಟೆ ಇಟ್ಟು ಸರ್ವ್ ಮಾಡಿ.
Comments
[ of 5 - Users]
Story first published: Saturday, September 28, 2024, 18:15 [IST]
Other articles published on Sep 28, 2024



Click it and Unblock the Notifications
