Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಸಂಜೆ ಕಾಫಿ ಜತೆ ಸವಿಯಿರಿ ಗರಗರಿ ಬಾಕರ್‌ವಾಡಿ ಸ್ನ್ಯಾಕ್ಸ್
ಭಾರತದಾದ್ಯಂತ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶೇಷ ಹಾಗೂ ವಿಭಿನ್ನ ಆಹಾರ ಖಾದ್ಯಗಳನ್ನು ಹೊಂದಿದೆ. ಅದರಲ್ಲೂ ಕೆಲವು ಆಹಾರ ಪದಾರ್ಥಗಳು ಆ ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ದೇಶ-ವಿದೇಶಗಳಲ್ಲೂ ಜನಪ್ರಿಯವಾಗಿದೆ. ಅದರಲ್ಲೂ ಸಂಜೆಯ ಸ್ನ್ಯಾಕ್ಸ್ ವಿಷಯಕ್ಕೆ ಬಂದರೆ ಜನರು ನಿತ್ಯ ತಮ್ಮದೇ ಸ್ಥಳೀಯ ಆಹಾರಗಳಿಗಿಂತ ಭಿನ್ನ ಭಿನ್ನ ರುಚಿಯನ್ನು ಬಯಸುತ್ತಾರೆ. ಅದೇ ರೀತಿ ಹೆಚ್ಚು ಜನಪ್ರಿಯವಾದ ಸ್ನ್ಯಾಕ್ಸ್‌ಗಳಲ್ಲಿ ಮಹಾರಾಷ್ಟ್ರದ ಬಾಕರ್ವಾಡಿ ಸಹ ಒಂದು.

ಸಂಜೆಯ ಹೊತ್ತು ಒಂದು ಕಪ್ ಚಹಾ/ಕಾಫಿ ಜತೆಗೆ ಇಂತಹ ಸ್ನ್ಯಾಕ್ಸ್‌ಗಳು ಸಂಜೆಯ ಹೊತ್ತನ್ನು ಇನ್ನಷ್ಟು ಸೊಗಸಾಗಿಸುತ್ತದೆ. ಬಹಳ ಸುಲಭವಾಗಿ ಮನೆಯಲ್ಲೇ ಇರುವ ವಸ್ತುಗಳಿಂದ ತಯಾರಿಸಬಹುದಾದ ಈ ಖಾದ್ಯ ಮೈದಾ ಮತ್ತು ಒಣ ಮಸಾಲೆಗಳೊಂದಿಗೆ ಡೀಪ್ ಫ್ರೈಡ್ ಮಾಡಿ ತಯಾರಿಸುವ ರೆಸಿಪಿ. ಮೂಲತಃ ಮರಾಠಿ ಮತ್ತು ಗುಜರಾತಿಯ ಪ್ರಸಿದ್ಧವಾದ ಈ ಖಾದ್ಯ ಅಲ್ಲಿಯ ಹಬ್ಬ-ಹರಿದಿನಗಳಲ್ಲಿ ತಯಾರಿಸಲಾಗುತ್ತದೆ.
ಬನ್ನಿ, ಸಂಜೆಯ ವೇಳೆ ಖಾರ-ಖಾರವಾಗಿ ತಿನ್ನಲು ಸುಲಭವಾಗಿ ತಯಾರಿಸಬಹುದಾದ ಬಾಕರ್‌ವಾಡಿ ರೆಸಿಪಿ ಮಾಡುವ ವಿಧಾನವನ್ನು ತಿಳಿಯೋಣ:
Recipe By: Meghashree Devaraju
Recipe Type: Snacks
Serves: 6
-
ಬೇಕಾಗುವ ಸಾಮಾಗ್ರಿಗಳು
ಹಿಟ್ಟಿಗೆ
ಮೈದಾ 1 ಕಪ್
ಕಡಲೆ ಹಿಟ್ಟು 2 ಚಮಚ
ಅರಿಶಿನ ¼ ಚಮಚ
ಇಂಗು ಸ್ವಲ್ಪ
ಉಪ್ಪು ½ ಚಮಚ
ಬಿಸಿ ಮಾಡಿದ ಎಣ್ಣೆ 2 ಚಮಚ
ಮಿಶ್ರಣಕ್ಕೆ ನೀರು
ಒಳಗಿನ ಮಸಾಲೆಗಾಗಿ
ಒಣ ತೆಂಗಿನಕಾಯಿ ¼ ಕಪ್
ಜೀರಿಗೆ 1 ಚಮಚ
ಕೊತ್ತಂಬರಿ ಬೀಜ 1 ಚಮಚ
ಸೋಂಪು 1 ಚಮಚ
ಎಳ್ಳು 2 ಚಮಚ
ಗಸಗಸೆ 1 ಚಮಚ
ಅರಿಶಿನ ¼ ಚಮಚ
ಕೆಂಪು ಮೆಣಸಿನ ಪುಡಿ 1 ಚಮಚ
ಇಂಗು ಸ್ವಲ್ಪ
ಒಣ ಮಾವಿನ ಪುಡಿ ½ ಚಮಚ
ಸಕ್ಕರೆ 2 ಚಮಚ
ಉಪ್ಪು ½ ಚಮಚ
ಇತರ ಪದಾರ್ಥಗಳ
ಹುಣಸೆ ಚಟ್ನಿ 2 ಚಮಚ
ನೀರು
ಹುರಿಯಲು ಎಣ್ಣೆ
-
ತಯಾರಿಸುವ ವಿಧಾನ
ಹಿಟ್ಟು ತಯಾರಿಸುವ ವಿಧಾನ
ಮೊದಲು ದೊಡ್ಡ ಬಟ್ಟಲಿನಲ್ಲಿ 1 ಕಪ್ ಮೈದಾ ಮತ್ತು 2 ಚಮಚ ಕಡಲೆ ಹಿಟ್ಟು ತೆಗೆದುಕೊಳ್ಳಿ.
¼ ಚಮಚ ಅರಿಶಿನ, ಇಂಗು ಮತ್ತು ½ ಚಮಚ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
ಈಗ 2 ಚಮಚ ಬಿಸಿ ಎಣ್ಣೆಯನ್ನು ಸುರಿಯಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಹಿಟ್ಟು ತೇವವಾಗಿರಬೇಕು ಮತ್ತು ಒತ್ತಿದಾಗ ಆಕಾರ ಹೊಂದಿರಬೇಕೆಂದು ಎಂದು ಖಚಿತಪಡಿಸಿಕೊಳ್ಳಿ, ಚೆನ್ನಾಗಿ ಹಿಸುಕಿ ಮಿಶ್ರಣ ಮಾಡಿ.
ಅಗತ್ಯವಿರುವಂತೆ ನೀರನ್ನು ಸೇರಿಸಿ ನಯವಾದ ಹಿಟ್ಟಿಗೆ ನಾದಿಕೊಳ್ಳಿ.
ಹಿಟ್ಟನ್ನು ಒಂದು ಚಮಚ ಎಣ್ಣೆಯಿಂದ ಗ್ರೀಸ್ ಮಾಡಿ, 20 ನಿಮಿಷಗಳ ಕಾಲ ಮುಚ್ಚಿಡಿ.
ಮಸಾಲ ಸ್ಟಫಿಂಗ್ ಮಾಡುವ ವಿಧಾನ
ಸಣ್ಣ ಪಾತ್ರೆಯಲ್ಲಿ ¼ ಕಪ್ ಒಣ ತೆಂಗಿನಕಾಯಿ ತೆಗೆದುಕೊಳ್ಳಿ
1 ಚಮಚ ಜೀರಿಗೆ, 1 ಚಮಚ ಕೊತ್ತಂಬರಿ ಬೀಜ, 1 ಚಮಚ ಸೋಂಪು, 2 ಚಮಚ ಎಳ್ಳು ಮತ್ತು 1 ಚಮಚ ಗಸಗಸೆ ಸೇರಿಸಿ.
¼ ಚಮಚ ಅರಿಶಿನ, 1 ಚಮಚ ಮೆಣಸಿನ ಪುಡಿ, ಇಂಗು, ½ ಚಮಚ ಮಾವಿನ ಪುಡಿ, 2 ಚಮಚ ಸಕ್ಕರೆ ಮತ್ತು ½ ಚಮಚ ಉಪ್ಪು ಸೇರಿಸಿ.
ಎಲ್ಲವನ್ನು ಮಿಕ್ಸಿಗೆ ಹಾಕಿ ನೀರನ್ನು ಬೆರೆಸದೆ ಒರಟಾಗಿ ರುಬ್ಬಿ ಮಾಡಿಕೊಳ್ಳಿ.
ಖಾದ್ಯ ತಯಾರಿಸುವ ವಿಧಾನ
ಹಿಟ್ಟನ್ನು ಸ್ವಲ್ಪ ನಾದಿ ಚಪಾತಿಯಂತೆ ಹೊಸೆದುಕೊಳ್ಳಿ. ಈಗ ಮೇಲೆ ಎಣ್ಣೆಯಿಂದ ಗ್ರೀಸ್ ಮಾಡಿ.
ಅದರ ಮೇಲೆ ಹುಣಸೆ ಚಟ್ನಿಯನ್ನು ಒಂದು ಚಮಚ ಹರಡಿ. ಇದು ಮಸಾಲವನ್ನು ಹಿಡಿದಿಡಲು ಹಾಗೂ ಸಿಹಿ ಮತ್ತು ಹುಳಿ ರುಚಿಯನ್ನು ನೀಡುತ್ತದೆ.
ಅಂಚುಗಳನ್ನು ಬಿಟ್ಟು ಈಗ ಮಸಾಲಾ ಸ್ಟಫಿಂಗ್ ಅನ್ನು ಸಮವಾಗಿ ಹರಡಿ.
ಈಗ ಹೊಸೆದ ಹಿಟ್ಟನ್ನು ನಿಧಾನವಾಗಿ ರೋಲ್ ಮಾಡಿ. ತುದಿಗಳನ್ನು ಮುಚ್ಚಲು ಎರಡೂ ಬದಿಗಳಲ್ಲಿ ನೀರಿನಿಂದ ಗ್ರೀಸ್ ಮಾಡಿ.
ನಂತರ ರೋಲ್ ಅನ್ನು ಕನಿಷ್ಠ 2 ಸೆಂ.ಮೀ ಉದ್ದವಾಗಿ ಅಥವಾ ನಿಮಗೆ ಬೇಕಾದ ಆಕೃತಿಗೆ ಕತ್ತರಿಸಿ.
ಕತ್ತರಿಸಿದ ನಂತರ ಸ್ವಲ್ಪ ಚಪ್ಪಟೆ ಮಾಡಿ. ಇದು ಪದರಗಳಲ್ಲಿ ಮಸಾಲವನ್ನು ಹಾಗೇ ಇರಿಸಲು ಸಹಾಯ ಮಾಡುತ್ತದೆ.
ಈಗ ಗ್ಯಾಸ್‌ನಲ್ಲಿ ಇಟ್ಟದ್ದ ಎಣ್ಣೆ ಹದವಾಗಿ ಮಧ್ಯಮ ಶಾಖಕ್ಕೆ ಬಿಸಿಯಾಗಿದೆಯೇ ನೋಡಿಕೊಳ್ಳಿ, ಕಡಿಮೆ ಉರಿಯಲ್ಲಿ ರೋಲ್‌ಗಳನ್ನು ಆಳವಾಗಿ ಫ್ರೈ ಮಾಡಿ.
ಅವುಗಳು ಚಿನ್ನದ ಬಣ್ಣ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿ.
ನಂತರ ಎಣ್ಣೆಯಿಂದ ಹೊರತೆಗೆದು ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಬಾಕರ್ವಾಡಿಯನ್ನು ಟಿಶ್ಯು ಅಥವಾ ಕಾಟನ್ ಬಟ್ಟೆಯ ಮೇಲೆ ಹರಡಿ.
ಇದೀಗ ಗರಿ ಗರಿಯಾದ ಬಾಕರ್ವಾಡಿ ಚಹಾದೊಂದಿಗೆ ಸವಿಯಲು ಸಿದ್ಧ.
- * ಅನ್ನು ಎಣ್ಣೆಗೆ ಹಾಕುವ ಮುನ್ನ ಎಣ್ಣೆ ತುಂಬಾ ಬಿಸಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಇಲ್ಲವಾದಲ್ಲಿ ಸುಟ್ಟು ಕರಕಲಾಗಬಹುದು. * ಬಾಕರ್‌ವಾಡಿ ಸಂಪೂರ್ಣವಾಗಿ ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಒಂದು ತಿಂಗಳವರೆಗೆ ಸಂಗ್ರಹಿಸಬಹುದು.
- Fat - 5.2 g
- Protein - 3.8 g
- Carbohydrates - 15.3 g



Click it and Unblock the Notifications