Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಚಿಲ್ಕರುವೆ ಸೊಪ್ಪಿನ ಪಲ್ಯ ಮಾಡಿದ್ದೀರಾ? ಇಲ್ಲಿದೆ ಸಿಂಪಲ್ ಪಲ್ಯ ರೆಸಿಪಿ
ಊಟದ ಜೊತೆಗೆ ನೀವು ಪಲ್ಯ ಮಾಡುವುದು ಸಾಮಾನ್ಯ. ಹಾಗೆ ಹಲವು ತರಕಾರಿಗಳ ಬಳಸಿ ಬಗೆ ಬಗೆಯ ಪಲ್ಯ ಮಾಡುತ್ತೇವೆ. ಈ ಪಲ್ಯಗಳೆಲ್ಲವು ಊಟದ ಜೊತೆಗೆ ಸವಿಯುತ್ತೇವೆ. ಹೀಗೆ ಹಲವು ಪಲ್ಯಗಳ ನಡುವೆ ನಾವಿಂದು ಚಿಲ್ಕರುವೆ ಸೊಪ್ಪಿನಲ್ಲಿ ಮಾಡುವಂತಹ ಅಧ್ಬುತ ರುಚಿಯ ಈ ಪಲ್ಯ ಮಾಡುವುದನ್ನು ನಾವು ತಿಳಿದುಕೊಳ್ಳೋಣ.
ಚಿಲ್ಕರುವೆ ಸೊಪ್ಪು ಆರೋಗ್ಯಕ್ಕೂ ಬಹಳ ಉತ್ತಮ. ರುಚಿ ಕೂಡ ಬಹಳ ಚೆನ್ನಾಗಿರುತ್ತದೆ. ಚಪಾತಿ, ದೋಸೆ, ಇಡ್ಲಿ, ಊಟದ ಜೊತೆಗೆ ಈ ಚಿಲ್ಕರುವೆ ಸೊಪ್ಪು ಬಹಳ ರುಚಿ ನೀಡಲಿದೆ. ಈ ಸೊಪ್ಪನ್ನು ಉಪ್ಪು ಹಾಗೂ ತೆಂಗಿನ ತುರಿ ಹಾಕಿ ಮಾಡಿ ಸವಿಯುತ್ತಾರೆ. ಹಾಗೆ ಈ ಸೊಪ್ಪಿನ ಪಲ್ಯ ಬಹಳ ರುಚಿಕರವಾಗಿರುವ ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮವಿದು.

ಇನ್ನು ಈ ಚಿಲ್ಕರುವೆ ಸೊಪ್ಪಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ರುಚಿ ಹೇಗಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಿಲ್ಕರುವೆ ಸೊಪ್ಪಿನ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಎಣ್ಣೆ
- ಕಡಲೆ ಬೇಳೆ
- ಉದ್ದಿನಬೇಳೆ - 1 tbs
- ಈರುಳ್ಳಿ - 2
- ಕೆಂಪು ಮೆಣಸಿನಕಾಯಿ - 5
- ಚಿಲಕವರೆ ಸೊಪ್ಪು
- ರುಚಿಗೆ ಉಪ್ಪು
ಚಿಲ್ಕರುವೆ ಸೊಪ್ಪಿನ ಪಲ್ಯ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ ಹುರಿಯಿರಿ. ಈಗ ಈರುಳ್ಳಿ, ಒಣ ಮೆಣಸು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳುತ್ತಾ ಫ್ರೈ ಮಾಡಿ. ಒಟ್ಟು 2 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಇದಕ್ಕೆ ಚಿಲ್ಕರುವೆ ಸೊಪ್ಪನ್ನು ಚೆನ್ನಾಗಿ ತೊಳೆದು ದೊಡ್ಡದಾಗಿಯೇ ಕತ್ತರಿಸಿಕೊಳ್ಳಿ. ಇದನ್ನು ಪಾತ್ರೆಗೆ ಹಾಕಿ ಮಿಕ್ ಮಾಡಿಕೊಳ್ಳಿ. 2 ಕಟ್ ಸೊಪ್ಪು ಬಳಸಿಕೊಳ್ಳಿ. ಈಗ ತಳ ಹಿಡಿಯದಂತೆ ಮಿಕ್ಸ್ ಮಾಡುತ್ತಾ ಇರಿ. ಹಾಗೆ ಅರ್ಧ ಕಪ್ ನೀರನ್ನು ಚಿಮುಕಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈ ಪಲ್ಯ ಬೆಂದ ಬಳಿಕ ಸ್ವಲ್ಪವೇ ಆಗಿ ಬದಲಾಗುತ್ತದೆ. ಮತ್ತೆ 1 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಂದರೆ ನಿಮ್ಮ ಮುಂದೆ ಈ ಚಿಲ್ಕರುವೆ ಸೊಪ್ಪಿನ ಪಲ್ಯ ರೆಡಿಯಾಗುತ್ತದೆ. ಇದು ಚಪಾತಿ, ಊಟಕ್ಕೆ ಹೇಳಿ ಮಾಡಿಸಿದ ಖಾದ್ಯ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಇದು ಊಟ ಚಪಾತಿ ಜೊತೆಗಂತು ಅದ್ಭುತ ರುಚಿ ನೀಡಲಿದೆ.
ಸೊಪ್ಪಿನಲ್ಲಿ ಅತೀ ಹೆಚ್ಚು ಕಬ್ಬಿಣಾಂಶ ನೀವು ಪಡೆಯಬಹುದು. ಮಕ್ಕಳು ಕೂಡ ಈ ಪಲ್ಯವನ್ನು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಇದರಿಂದ ಅವರ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ.



Click it and Unblock the Notifications
