ಈ ಬಾರಿ ಕೃಷ್ಣ ಜನ್ಮಾಷ್ಟಮಿಗೆ ಮಾಡಿ-ಬೇಸನ್ ಲಾಡು

Posted By: Divya
Subscribe to Boldsky

ಬೇಸನ್ ಲಾಡು ಉತ್ತರ ಭಾರತೀಯರ ಜನಪ್ರಿಯವಾದ ಸಿಹಿ ತಿನಿಸು. ಇವರು ಸಾಂಪ್ರದಾಯಿಕವಾಗಿ ಬಹುತೇಕ ಹಬ್ಬಗಳಲ್ಲಿ ತಯಾರಿಸುತ್ತಾರೆ. ತುಪ್ಪದಲ್ಲಿ ಹುರಿದ ಕಡ್ಲೇ ಹಿಟ್ಟು/ಕಡಲೇ ಹಿಟ್ಟು, ಸಕ್ಕರೆ ಪುಡಿ, ಏಲಕ್ಕಿ ಪುಡಿ ಹಾಗೂ ಒಣ ಹಣ್ಣುಗಳನ್ನು ಸೇರಿಸಿ ತಯಾರಿಸುತ್ತಾರೆ.

ಬೇಸನ್ ಲಾಡನ್ನು ತಮಿಳು ಭಾಷೆಯಲ್ಲಿ ಕಡಲೈ ಮಾವು ಉರುಂಡೈ ಎಂದು ಕರೆಯುತ್ತಾರೆ. ಅಲ್ಲದೆ ಕುಟುಂಬದ ವಿಶೇಷ ಕಾರ್ಯಕ್ರಮಗಳಲ್ಲಿ ತಯಾರಿಸುತ್ತಾರೆ. ರುಚಿಕರವಾದ ಈ ಸಿಹಿ ತಿನಿಸು ತಯಾರಿಸುವುದು ಬಲು ಸರಳ ಹಾಗೂ ಸುಲಭ. ಇದನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳದು. ಹಾಗಾಗಿ ಇದನ್ನು ಮನೆಯಲ್ಲಿ ಆಗಾಗ ನಡೆಯುವ ಸಣ್ಣ ಪುಟ್ಟ ಪಾರ್ಟಿಗಳಲ್ಲಿ ಅಥವಾ ಸಮಾರಂಭಗಳಲ್ಲಿ ತಯಾರಿಸಬಹುದು.

ಈ ಲಾಡು ತುಪ್ಪ ಮತ್ತು ಕಡ್ಲೇ ಹಿಟ್ಟು/ಕಡಲೇ ಹಿಟ್ಟಿನ ಉತ್ತಮ ಪರಿಮಳ, ಆಕಾರ ಹಾಗೂ ಹೊಳಪನ್ನು ಹೊಂದಿರುತ್ತದೆ. ಇದನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಚಪ್ಪರಿಸಬೇಕೆನಿಸುತ್ತದೆ. ಈ ತಿಂಡಿಯ ಪಾಕವಿಧಾನದ ಬಗ್ಗೆ ನೀವು ಅರಿಯ ಬೇಕಾದರೆ, ಇಲ್ಲಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಅನುಸರಿಸಬಹುದು.

besan ladoo recipe
ಬೇಸನ್ ಲಾಡು ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಬೇಸನ್ ಲಾಡು ಮಾಡುವ ವಿಧಾನ | ಬೇಸನ್ ಲಾಡು ಮಾಡುವುದು ಹೇಗೆ
ಬೇಸನ್ ಲಾಡು ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಬೇಸನ್ ಲಾಡು ಮಾಡುವ ವಿಧಾನ | ಬೇಸನ್ ಲಾಡು ಮಾಡುವುದು ಹೇಗೆ
Prep Time
5 Mins
Cook Time
30M
Total Time
30 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 8 ಲಾಡು

Ingredients
 • ಪುಡಿಮಾಡಿಕೊಂಡ ಸಕ್ಕರೆ/ಸಕ್ಕರೆ ಹಿಟ್ಟು - 1 ಕಪ್

  ಕಡ್ಲೇ ಹಿಟ್ಟು/ಕಡಲೇ ಹಿಟ್ಟು - 2 ಕಪ್

  ತುಪ್ಪ - 3/4 ಕಪ್

  ನೀರು - 3 ಟಿಚಮಚ

  ಏಲಕ್ಕಿ ಪುಡಿ - ಒಂದು ಚಿಟಕಿ

  ಹೆಚ್ಚಿಕೊಂಡ ಬಾದಾಮಿ - 1 ಟೀ ಚಮಚ (ಅಲಂಕಾರಕ್ಕೆ)

  ಹೆಚ್ಚಿಕೊಂಡ ಪಿಸ್ತಾ - 1 ಟೀ ಚಮಚ (ಅಲಂಕಾರಕ್ಕೆ)

Red Rice Kanda Poha
How to Prepare
 • 1. ಒಂದು ದಪ್ಪತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ.

  2. ಕಡ್ಲೇ ಹಿಟ್ಟು/ಕಡಲೇ ಹಿಟ್ಟನ್ನು ಸೇರಿಸಿ, ಮಂದ ಉರಿಯಲ್ಲಿ ಹುರಿಯಿರಿ. ತಳ ಹಿಡಿಯದಂತೆ ನೋಡಬೇಕು.

  3. ಇದನ್ನು ಹತ್ತು ನಿಮಿಷಗಳ ಕಾಲ ಹುರಿದರೆ ಹಿಟ್ಟಿನ ಬಣ್ಣ ಬದಲಾಗುವುದು. ಜೊತೆಗೆ ಹುರಿದ ಪರಿಮಳ ಬರುವುದು.

  4. ಇದರ ಮೇಲೆ ನೀರನ್ನು ಚಿಮುಕಿಸಿದಾಗ ಹಿಟ್ಟು ಗುಳ್ಳೆಯ ರೀತಿಯಲ್ಲಿ ಚಿಕ್ಕ ಉಂಡೆ ಮೇಲೆ ಬರುತ್ತದೆ.

  5. ಈ ಉಂಡೆಗಳು ಒಡೆದು ಸಮ್ಮಿಶ್ರಣ ಆಗುವವರೆಗೆ ಚೆನ್ನಾಗಿ ಹುರಿಯಿರಿ.

  6. ನಂತರ ಒಂದು ಬೌಲ್‍ಗೆ ವರ್ಗಾಯಿಸಿ. 10 ನಿಮಿಷಗಳ ಕಾಲ ಆರಲು ಬಿಡಿ.

  7. ಇದಕ್ಕೆ ಪುಡಿಮಾಡಿಕೊಂಡ ಸಕ್ಕರೆಯನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ.

  8. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

  9. ಹೆಚ್ಚಿಕೊಂಡ ಬಾದಾಮಿ ಮತ್ತು ಪಿಸ್ತವನ್ನು ಒಂದು ಟೀ ಚಮಚದಷ್ಟು ಸೇರಿಸಿ, ಚೆನ್ನಾಗಿ ತಿರುವಿ.

  10. ಈ ಮಿಶ್ರಣವನ್ನು 10 ನಿಮಿಷಗಳ ಕಾಲ ಫ್ರಿಜ್‍ನಲ್ಲಿ ಇಡಿ.

  11. ಎಲ್ಲಾ ಒಂದೇ ಅಳತೆಯ ಲಾಡುವನ್ನು ಕಟ್ಟಿರಿ.

  12. ಹೆಚ್ಚಿಕೊಂಡ ಬಾದಾಮಿ ಮತ್ತು ಪಿಸ್ತದಿಂದ ಲಾಡನ್ನು ಅಲಂಕರಿಸಿ.

Instructions
 • 1. ತುಪ್ಪ ಮತ್ತು ಕಡ್ಲೇ /ಕಡಲೇ ಹಿಟ್ಟಿನ ಪ್ರಮಾಣವು ನಿಖರವಾಗಿರಬೇಕು.
 • 2. ಏಲಕ್ಕಿ ಪುಡಿಯನ್ನು ಹಿಟ್ಟಿಗೆ ಹಾಗಿ ತಿರುವಿದ ಮೇಲೆ. ಅಂಗೈಮೇಲೆ ಸ್ವಲ್ಪ ಹಾಕಿಕೊಂಡು ಲಾಡು ತಯಾರಿಸಿ. ಆಗ ನಿಮ್ಮ ಕೈಯಲ್ಲಿರುವ ತುಪ್ಪವನ್ನು ಲಾಡು ಹೀರಿಕೊಳ್ಳುವುದು.
Nutritional Information
 • ಸರ್ವಿಂಗ್ ಸೈಜ್ - 1 ಲಾಡು
 • ಕ್ಯಾಲೋರಿ - 135 ಕ್ಯಾಲ್
 • ಫ್ಯಾಟ್ - 7 ಗ್ರಾಂ.
 • ಪ್ರೋಟೀನ್ - 7 ಗ್ರಾಂ.
 • ಕಾರ್ಬೋಹೈಡ್ರೇಟ್ - 29 ಗ್ರಾಂ.
 • ಸಕ್ಕರೆ - 12 ಗ್ರಾಂ.
 • ಫೈಬರ್ - 6 ಗ್ರಾಂ.
 • ಕಬ್ಬಿಣ - ಶೇ.13
 • ವಿಟಮಿನ್ ಎ - ಶೇ.3

ಸ್ಟೆಪ್ ಬೈ ಸ್ಟೆಪ್ ಬೇಸನ್ ಲಾಡು ಮಾಡುವ ವಿಧಾನ

1. ಒಂದು ದಪ್ಪತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ.

besan ladoo recipe

2. ಕಡ್ಲೇ ಹಿಟ್ಟು/ಕಡಲೇ ಹಿಟ್ಟನ್ನು ಸೇರಿಸಿ, ಮಂದ ಉರಿಯಲ್ಲಿ ಹುರಿಯಿರಿ. ತಳ ಹಿಡಿಯದಂತೆ ನೋಡಬೇಕು.

besan ladoo recipe
besan ladoo recipe

3. ಇದನ್ನು ಹತ್ತು ನಿಮಿಷಗಳ ಕಾಲ ಹುರಿದರೆ ಹಿಟ್ಟಿನ ಬಣ್ಣ ಬದಲಾಗುವುದು. ಜೊತೆಗೆ ಹುರಿದ ಪರಿಮಳ ಬರುವುದು.

besan ladoo recipe

4. ಇದರ ಮೇಲೆ ನೀರನ್ನು ಚಿಮುಕಿಸಿದಾಗ ಹಿಟ್ಟು ಗುಳ್ಳೆಯ ರೀತಿಯಲ್ಲಿ ಚಿಕ್ಕ ಉಂಡೆ ಮೇಲೆ ಬರುತ್ತದೆ.

besan ladoo recipe

5. ಈ ಉಂಡೆಗಳು ಒಡೆದು ಸಮ್ಮಿಶ್ರಣ ಆಗುವವರೆಗೆ ಚೆನ್ನಾಗಿ ಹುರಿಯಿರಿ.

besan ladoo recipe

6. ನಂತರ ಒಂದು ಬೌಲ್‍ಗೆ ವರ್ಗಾಯಿಸಿ. 10 ನಿಮಿಷಗಳ ಕಾಲ ಆರಲು ಬಿಡಿ.

besan ladoo recipe
besan ladoo recipe

7. ಇದಕ್ಕೆ ಪುಡಿಮಾಡಿಕೊಂಡ ಸಕ್ಕರೆಯನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ.

besan ladoo recipe
besan ladoo recipe

8. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

besan ladoo recipe

9. ಹೆಚ್ಚಿಕೊಂಡ ಬಾದಾಮಿ ಮತ್ತು ಪಿಸ್ತವನ್ನು ಒಂದು ಟೀ ಚಮಚದಷ್ಟು ಸೇರಿಸಿ, ಚೆನ್ನಾಗಿ ತಿರುವಿ.

besan ladoo recipe
besan ladoo recipe

10. ಈ ಮಿಶ್ರಣವನ್ನು 10 ನಿಮಿಷಗಳ ಕಾಲ ಫ್ರಿಜ್‍ನಲ್ಲಿ ಇಡಿ.

besan ladoo recipe

11. ಎಲ್ಲಾ ಒಂದೇ ಅಳತೆಯ ಲಾಡುವನ್ನು ಕಟ್ಟಿರಿ.

besan ladoo recipe

12. ಹೆಚ್ಚಿಕೊಂಡ ಬಾದಾಮಿ ಮತ್ತು ಪಿಸ್ತದಿಂದ ಲಾಡನ್ನು ಅಲಂಕರಿಸಿ.

besan ladoo recipe
besan ladoo recipe
[ 4.5 of 5 - 76 Users]
Story first published: Wednesday, August 9, 2017, 11:51 [IST]