For Quick Alerts
ALLOW NOTIFICATIONS  
For Daily Alerts

ಬೇಸನ್ ಹಲ್ವಾ ರೆಸಿಪಿ

Posted By: Roopa Shenoy
|

ಬೇಸನ್ ಹಲ್ವಾ ಪಂಜಾಬಿನಲ್ಲಿ ಹಬ್ಬ ಹರಿದಿನದೊಂದು ಮಾಡುವ ಒಂದು ಪಾರಂಪರಿಕ ವ್ಯಂಜನ. ಇದನ್ನು ತುಪ್ಪದಿಂದಲೇ ಮಾಡುವುದರಿಂದ, ಅಲ್ಲದೆ ಒಣದ್ರಾಕ್ಷಿ, ಗೋಡಂಬಿಯನ್ನು ಕೂಡ ಈ ರೆಸಿಪಿಗೆ ಬಳಸುವುದರಿಂದ ಇದರ ಸಿಹಿ ರುಚಿಯು ಇನ್ನಷ್ಟು ಹೆಚ್ಚುತ್ತದೆ. ಈ ಸಿಹಿಯು ಕಸ್ಟರ್ಡ್ ಹಾಗು ಗಟ್ಟಿಯಾದ ಹಲ್ವಾದ ಸಮಂಜಸ್ಯವಾಗಿದೆ. ಬೇಸನ್ ಹಲ್ವಾ ಕಡಿಮೆ ಸಮಯದಲ್ಲಿ ಮನೆಯಲ್ಲಿಯೇ ಮಾಡಬಹುದು. ಇದನ್ನು ತುಪ್ಪದಲ್ಲಿ ಮಾಡುವುದರಿಂದ ಇದರ ಪರಿಮಳ ಮತ್ತು ಇದರ ರುಚಿ ನಿಮ್ಮ ಸಿಹಿ ತಿನ್ನುವ ಚಪಲವನ್ನು ಇಂಗಿಸುವುದು ಅನ್ನೋದರಲ್ಲಿ ಎರಡು ಮಾತಿಲ್ಲ.

ಬೇಸನ್ ಹಲ್ವಾ ವಿಡಿಯೋ

ಬೇಸನ್ ಹಲ್ವಾ ರೆಸಿಪಿ
Besan Ka Halwa Recipe
besan ka halwa recipe
Prep Time
5 Mins
Cook Time
30M
Total Time
35 Mins

Recipe By: ರೀಟಾ ತ್ಯಾಗಿ

Recipe Type: ಸಿಹಿ

Serves: 3 ಜನರಿಗೆ ಸಾಕಾಗುವಷ್ಟು

Ingredients
  • *ಕಡಲೇ ಹಿಟ್ಟು (ಬೇಸನ್)-1 ಸಣ್ಣ ಬಟ್ಟಲು

    *ತುಪ್ಪ- 1/2 ಸಣ್ಣ ಬಟ್ಟಲು

    *ಸಕ್ಕರೆ- 1 ಸಣ್ಣ ಬಟ್ಟಲು

    *ನೀರು- 21/2 ಸಣ್ಣ ಬಟ್ಟಲು

    *ಏಲಕ್ಕಿ- 2 ರಿಂದ 3

    *ಗೋಡಂಬಿ (ಸಣ್ಣಗೆ ಕತ್ತರಿಸಿದ)- 1 ಟೇಬಲ್ ಸ್ಪೂನ್

    * ಒಣದ್ರಾಕ್ಷಿ- ಅಲಂಕರಿಸಲು

Red Rice Kanda Poha
How to Prepare
  • 1. ಒಂದು ಬಾಣಲೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೇ ಹಿಟ್ಟು (ಬೇಸನ್) ಹಾಕಿ ಕೆಂಪಗಾಗುವ ವರೆಗೆ ಹುರಿಯಿರಿ.

    2. ತುಪ್ಪ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ.

    3. ನಂತರ ನೀರು ಹಾಕಿ ಕಲಿಸಿ.

    4. ಕುದಿಯಲು ಬಿಡಿ. ಸ್ವಲ್ಪ ಸಮಯದ ನಂತರ ಇದು ಗಟ್ಟಿಯಾಗುತ್ತಾ ಬರುತ್ತದೆ ಆಗ ಗಂಟಾಗದ ರೀತಿಯಲ್ಲಿ ಕೈ ಬಿಡದೆ ಆಡಿಸಿ.

    5. ಗಟ್ಟಿಯಾದ ನಂತರ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ.

    6. ಇದೇ ಸಮಯದಲ್ಲಿ ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ

    7. ಇನ್ನು ಇದನ್ನು ಬೇಸನ್ ಹಲ್ವಾದ ಮೇಲೆ ಉದುರಿಸಿ.

    8. ಗೋಡಂಬಿ(ಸಣ್ಣಗೆ ಕತ್ತರಿಸಿದ) ಮತ್ತು ಒಣದ್ರಾಕ್ಷಿಯೊಂದಿಗೆ ಅಲಂಕರಿಸಿರಿ.

Instructions
  • 1 ನೀರನ್ನು ಹಾಕುವ ಮೊದಲೇ ಸಕ್ಕರೆಯನ್ನು ಹಾಕಿದರೆ ಗಂಟಾಗುವುದಿಲ್ಲ.
  • 2 ಕಡಲೇ ಹಿಟ್ಟು, ತುಪ್ಪ ಮತ್ತು ಸಕ್ಕರೆಯ ಪ್ರಮಾಣಕ್ಕೆ ಸರಿಯಾಗಿ ನೀರನ್ನು ಹಾಕುವುದು ಅಗತ್ಯ.
  • 3 ಸಕ್ಕರೆಯ ಬದಲಾಗಿ ಸಿಹಿಗೆ ಬೆಲ್ಲವನ್ನೂ ಬಳಸಬಹುದು.
  • 4 ಈ ಸಿಹಿಯನ್ನು ಇತರೇ ಹಿಟ್ಟುಗಳಿಂದಲೂ ಮಾಡಬಹುದು.
Nutritional Information
  • ಸರ್ವಿಂಗ್ ಸೈಜ್ - 1ಸಣ್ಣ ಬೌಲ್
  • ಕ್ಯಾಲೋರಿಸ್ - 210
  • ಫ್ಯಾಟ್ - 9.0 ಗ್ರಾಂ
  • ಕಾರ್ಬೋಹೈಡ್ರೇಟ್‌ಗಳು - 27.3 ಗ್ರಾಂ
  • ಸಕ್ಕರೆ - 26.62 ಗ್ರಾಂ
  • ಫೈಬರ್ - 2.1 ಗ್ರಾಂ

1. ಒಂದು ಬಾಣಲೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೇ ಹಿಟ್ಟು (ಬೇಸನ್) ಹಾಕಿ ಕೆಂಪಗಾಗುವ ವರೆಗೆ ಹುರಿಯಿರಿ.

ಬೇಸನ್ ಹಲ್ವಾ ರೆಸಿಪಿ
ಬೇಸನ್ ಹಲ್ವಾ ರೆಸಿಪಿ

2. ತುಪ್ಪ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ.

ಬೇಸನ್ ಹಲ್ವಾ ರೆಸಿಪಿ
ಬೇಸನ್ ಹಲ್ವಾ ರೆಸಿಪಿ

3. ನಂತರ ನೀರು ಹಾಕಿ ಕಲಿಸಿ.

ಬೇಸನ್ ಹಲ್ವಾ ರೆಸಿಪಿ

4. ಕುದಿಯಲು ಬಿಡಿ. ಸ್ವಲ್ಪ ಸಮಯದ ನಂತರ ಇದು ಗಟ್ಟಿಯಾಗುತ್ತಾ ಬರುತ್ತದೆ ಆಗ ಗಂಟಾಗದ ರೀತಿಯಲ್ಲಿ ಕೈ ಬಿಡದೆ ಆಡಿಸಿ.

ಬೇಸನ್ ಹಲ್ವಾ ರೆಸಿಪಿ
ಬೇಸನ್ ಹಲ್ವಾ ರೆಸಿಪಿ

5. ಗಟ್ಟಿಯಾದ ನಂತರ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ.

ಬೇಸನ್ ಹಲ್ವಾ ರೆಸಿಪಿ

6. ಇದೇ ಸಮಯದಲ್ಲಿ ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ

ಬೇಸನ್ ಹಲ್ವಾ ರೆಸಿಪಿ
ಬೇಸನ್ ಹಲ್ವಾ ರೆಸಿಪಿ

7. ಇನ್ನು ಇದನ್ನು ಬೇಸನ್ ಹಲ್ವಾದ ಮೇಲೆ ಉದುರಿಸಿ.

ಬೇಸನ್ ಹಲ್ವಾ ರೆಸಿಪಿ

8. ಗೋಡಂಬಿ(ಸಣ್ಣಗೆ ಕತ್ತರಿಸಿದ) ಮತ್ತು ಒಣದ್ರಾಕ್ಷಿಯೊಂದಿಗೆ ಅಲಂಕರಿಸಿರಿ.

ಬೇಸನ್ ಹಲ್ವಾ ರೆಸಿಪಿ
ಬೇಸನ್ ಹಲ್ವಾ ರೆಸಿಪಿ
[ 3.5 of 5 - 43 Users]
X
Desktop Bottom Promotion