Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಬೇಸನ್ ಹಲ್ವಾ ರೆಸಿಪಿ
ಬೇಸನ್ ಹಲ್ವಾ ಪಂಜಾಬಿನಲ್ಲಿ ಹಬ್ಬ ಹರಿದಿನದೊಂದು ಮಾಡುವ ಒಂದು ಪಾರಂಪರಿಕ ವ್ಯಂಜನ. ಇದನ್ನು ತುಪ್ಪದಿಂದಲೇ ಮಾಡುವುದರಿಂದ, ಅಲ್ಲದೆ ಒಣದ್ರಾಕ್ಷಿ, ಗೋಡಂಬಿಯನ್ನು ಕೂಡ ಈ ರೆಸಿಪಿಗೆ ಬಳಸುವುದರಿಂದ ಇದರ ಸಿಹಿ ರುಚಿಯು ಇನ್ನಷ್ಟು ಹೆಚ್ಚುತ್ತದೆ. ಈ ಸಿಹಿಯು ಕಸ್ಟರ್ಡ್ ಹಾಗು ಗಟ್ಟಿಯಾದ ಹಲ್ವಾದ ಸಮಂಜಸ್ಯವಾಗಿದೆ. ಬೇಸನ್ ಹಲ್ವಾ ಕಡಿಮೆ ಸಮಯದಲ್ಲಿ ಮನೆಯಲ್ಲಿಯೇ ಮಾಡಬಹುದು. ಇದನ್ನು ತುಪ್ಪದಲ್ಲಿ ಮಾಡುವುದರಿಂದ ಇದರ ಪರಿಮಳ ಮತ್ತು ಇದರ ರುಚಿ ನಿಮ್ಮ ಸಿಹಿ ತಿನ್ನುವ ಚಪಲವನ್ನು ಇಂಗಿಸುವುದು ಅನ್ನೋದರಲ್ಲಿ ಎರಡು ಮಾತಿಲ್ಲ.
ಬೇಸನ್ ಹಲ್ವಾ ವಿಡಿಯೋ

Recipe By: ರೀಟಾ ತ್ಯಾಗಿ
Recipe Type: ಸಿಹಿ
Serves: 3 ಜನರಿಗೆ ಸಾಕಾಗುವಷ್ಟು
-
*ಕಡಲೇ ಹಿಟ್ಟು (ಬೇಸನ್)-1 ಸಣ್ಣ ಬಟ್ಟಲು
*ತುಪ್ಪ- 1/2 ಸಣ್ಣ ಬಟ್ಟಲು
*ಸಕ್ಕರೆ- 1 ಸಣ್ಣ ಬಟ್ಟಲು
*ನೀರು- 21/2 ಸಣ್ಣ ಬಟ್ಟಲು
*ಏಲಕ್ಕಿ- 2 ರಿಂದ 3
*ಗೋಡಂಬಿ (ಸಣ್ಣಗೆ ಕತ್ತರಿಸಿದ)- 1 ಟೇಬಲ್ ಸ್ಪೂನ್
* ಒಣದ್ರಾಕ್ಷಿ- ಅಲಂಕರಿಸಲು
-
1. ಒಂದು ಬಾಣಲೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೇ ಹಿಟ್ಟು (ಬೇಸನ್) ಹಾಕಿ ಕೆಂಪಗಾಗುವ ವರೆಗೆ ಹುರಿಯಿರಿ.
2. ತುಪ್ಪ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ.
3. ನಂತರ ನೀರು ಹಾಕಿ ಕಲಿಸಿ.
4. ಕುದಿಯಲು ಬಿಡಿ. ಸ್ವಲ್ಪ ಸಮಯದ ನಂತರ ಇದು ಗಟ್ಟಿಯಾಗುತ್ತಾ ಬರುತ್ತದೆ ಆಗ ಗಂಟಾಗದ ರೀತಿಯಲ್ಲಿ ಕೈ ಬಿಡದೆ ಆಡಿಸಿ.
5. ಗಟ್ಟಿಯಾದ ನಂತರ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ.
6. ಇದೇ ಸಮಯದಲ್ಲಿ ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ
7. ಇನ್ನು ಇದನ್ನು ಬೇಸನ್ ಹಲ್ವಾದ ಮೇಲೆ ಉದುರಿಸಿ.
8. ಗೋಡಂಬಿ(ಸಣ್ಣಗೆ ಕತ್ತರಿಸಿದ) ಮತ್ತು ಒಣದ್ರಾಕ್ಷಿಯೊಂದಿಗೆ ಅಲಂಕರಿಸಿರಿ.
- 1 ನೀರನ್ನು ಹಾಕುವ ಮೊದಲೇ ಸಕ್ಕರೆಯನ್ನು ಹಾಕಿದರೆ ಗಂಟಾಗುವುದಿಲ್ಲ.
- 2 ಕಡಲೇ ಹಿಟ್ಟು, ತುಪ್ಪ ಮತ್ತು ಸಕ್ಕರೆಯ ಪ್ರಮಾಣಕ್ಕೆ ಸರಿಯಾಗಿ ನೀರನ್ನು ಹಾಕುವುದು ಅಗತ್ಯ.
- 3 ಸಕ್ಕರೆಯ ಬದಲಾಗಿ ಸಿಹಿಗೆ ಬೆಲ್ಲವನ್ನೂ ಬಳಸಬಹುದು.
- 4 ಈ ಸಿಹಿಯನ್ನು ಇತರೇ ಹಿಟ್ಟುಗಳಿಂದಲೂ ಮಾಡಬಹುದು.
- ಸರ್ವಿಂಗ್ ಸೈಜ್ - 1ಸಣ್ಣ ಬೌಲ್
- ಕ್ಯಾಲೋರಿಸ್ - 210
- ಫ್ಯಾಟ್ - 9.0 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 27.3 ಗ್ರಾಂ
- ಸಕ್ಕರೆ - 26.62 ಗ್ರಾಂ
- ಫೈಬರ್ - 2.1 ಗ್ರಾಂ
1. ಒಂದು ಬಾಣಲೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೇ ಹಿಟ್ಟು (ಬೇಸನ್) ಹಾಕಿ ಕೆಂಪಗಾಗುವ ವರೆಗೆ ಹುರಿಯಿರಿ.


2. ತುಪ್ಪ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ.


3. ನಂತರ ನೀರು ಹಾಕಿ ಕಲಿಸಿ.

4. ಕುದಿಯಲು ಬಿಡಿ. ಸ್ವಲ್ಪ ಸಮಯದ ನಂತರ ಇದು ಗಟ್ಟಿಯಾಗುತ್ತಾ ಬರುತ್ತದೆ ಆಗ ಗಂಟಾಗದ ರೀತಿಯಲ್ಲಿ ಕೈ ಬಿಡದೆ ಆಡಿಸಿ.


5. ಗಟ್ಟಿಯಾದ ನಂತರ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ.

6. ಇದೇ ಸಮಯದಲ್ಲಿ ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ


7. ಇನ್ನು ಇದನ್ನು ಬೇಸನ್ ಹಲ್ವಾದ ಮೇಲೆ ಉದುರಿಸಿ.

8. ಗೋಡಂಬಿ(ಸಣ್ಣಗೆ ಕತ್ತರಿಸಿದ) ಮತ್ತು ಒಣದ್ರಾಕ್ಷಿಯೊಂದಿಗೆ ಅಲಂಕರಿಸಿರಿ.





Click it and Unblock the Notifications