ವರಮಹಾಲಕ್ಷ್ಮಿ ಹಬ್ಬದ ವಿಶೇಷ: ಬೇಳೆ ಒಬ್ಬಟ್ಟು ರೆಸಿಪಿ

Posted By: Divya
Subscribe to Boldsky

ವಿಶೇಷವಾದ ಸಿಹಿ ತಿನಿಸುಗಳಲ್ಲಿ ಬೇಳೆ ಒಬ್ಬಟ್ಟು ಸಹ ಒಂದು. ಇದನ್ನು ಕರ್ನಾಟಕದ ವಿಶೇಷ ತಿನಿಸು ಎಂದು ಕರೆಯುತ್ತಾರೆ. ಬೇಳೆ ಮತ್ತು ಬೆಲ್ಲಗಳ ಮಿಶ್ರಣದಿಂದ, ಮೈದಾ ಹಿಟ್ಟಿನಲ್ಲಿ ಮೈದುಂಬಿ, ಲಟ್ಟಣಿಗೆಯಲ್ಲಿ ಚಂದ್ರನಾಕಾರ ಪಡೆದು, ಬಾಣಲಿಯಲ್ಲಿ ಕೆಂಪಾಗಿ ಬರುವ ಈ ಸಿಹಿಯನ್ನು ಹಬ್ಬದಲ್ಲಿ ವಿಶೇಷವಾಗಿ ತಯಾರಿಸುತ್ತಾರೆ.

ಇದಕ್ಕೆ ಮಹಾರಾಷ್ಟ್ರದಲ್ಲಿ ಪುರಾನ್ ಪೊಲಿ ಎಂದು ಕರೆಯುತ್ತಾರೆ. ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ಇದರ ಪಾಕವಿಧಾನ ಕೊಂಚ ಬದಲಾವಣೆಯನ್ನು ಹೊಂದಿರುತ್ತದೆ. ಹೂರಣ, ಆಕಾರ, ಪ್ರಮಾಣಗಳೆಲ್ಲವೂ ಸ್ವಲ್ಪ ವ್ಯತ್ಯಾಸದಿಂದ ಕೂಡಿರುತ್ತವೆ. ಆದರೆ ಖಾದ್ಯ ತಯಾರಿಸುವ ಪ್ರಕ್ರಿಯೆ ಒಂದೇ ರೀತಿಯದ್ದು.

ಈ ಸಿಹಿ ತಿಂಡಿಯನ್ನು ಮನೆಯಲ್ಲಿ ತಯಾರಿಸುವುದು ಎಂದರೆ ಕೊಂಚ ಬೇಸರದ ಪ್ರಕ್ರಿಯೆ ಎನ್ನಬಹುದು. ಈ ಪಾಕವಿಧಾನಕ್ಕೆ ತಾಳ್ಮೆ ಮತ್ತು ಸಮಯ ಎರಡನ್ನು ಮೀಸಲಿಡಬೇಕಾಗುತ್ತದೆ. ಹಿಟ್ಟಿನ ವಿನ್ಯಾಸ ಮತ್ತು ಸರಿಯಾದ ಸ್ಥಿರತೆಯಲ್ಲಿ ಹೂರಣವನ್ನು ತುಂಬುವುದರ ಬಗ್ಗೆ ಸರಿಯಾಗಿ ಕಾಳಜಿ ವಹಿಸಬೇಕಾಗುತ್ತದೆ. ಈ ಶ್ರೀಮಂತ ತಿನಿಸನ್ನು ನೀವು ಮನೆಯಲ್ಲಿ ಮಾಡಲು ಬಯಸುತ್ತಿದ್ದರೆ ನಿಮಗಾಗಿ ನಾವಿಲ್ಲಿ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ಬರಹದ ವಿವರಣೆಯನ್ನು ನೀಡುತ್ತಿದ್ದೇವೆ.

bele obbattu recipe
ಬೇಳೆ ಒಬ್ಬಟ್ಟು | ಪುರಾಣ ಪೋಲಿ ರೆಸಿಪಿ | ಬೇಳೆ ಒಬ್ಬಟ್ಟು ಹೋಳಿಗೆ ಮಾಡುವ ವಿಧಾನ | ಬೇಳೆ ಒಬ್ಬಟ್ಟು ಸ್ಟೆಪ್ ಬೈ ಸ್ಟೆಪ್ ಟಿಪ್ಸ್
ಬೇಳೆ ಒಬ್ಬಟ್ಟು | ಪುರಾಣ ಪೋಲಿ ರೆಸಿಪಿ | ಬೇಳೆ ಒಬ್ಬಟ್ಟು ಹೋಳಿಗೆ ಮಾಡುವ ವಿಧಾನ | ಬೇಳೆ ಒಬ್ಬಟ್ಟು ಸ್ಟೆಪ್ ಬೈ ಸ್ಟೆಪ್ ಟಿಪ್ಸ್
Prep Time
6 Hours
Cook Time
1H
Total Time
7 Hours

Recipe By: ಕಾವ್ಯಶ್ರೀ ಎಸ್.

Recipe Type: ಸಿಹಿ ತಿಂಡಿ

Serves: 5-6 ಒಬ್ಬಟ್ಟು

Ingredients
 • ಸೂಜಿ ರವೆ - 1 ಕಪ್

  ಮೈದಾ ಹಿಟ್ಟು - 1/2 ಕಪ್

  ಅರಿಶಿನ ಪುಡಿ - 1 ಟೀ ಚಮಚ

  ನೀರು - 4 ಕಪ್‌ಗಳಷ್ಟು

  ಎಣ್ಣೆ - 8 ಟೇಬಲ್ ಚಮಚ + ಜಿಡ್ಡಾಗಿರಿಸಿಕೊಳ್ಳಲು

  ತೊಗರಿಬೇಳೆ - 1ಕಪ್

  ಬೆಲ್ಲ - 1 ಕಪ್

  ತೆಂಗಿನ ತುರಿ - 1 ಕಪ್

  ಏಲಕ್ಕಿ - 2

Red Rice Kanda Poha
How to Prepare
 • 1. ಸೂಜಿ ರವೆ, ಮೈದಾ ಮತ್ತು ಒಂದು ಚಿಟಕಿ ಅರಿಶಿನವನ್ನು ಸೇರಿಸಿ.

  2. ಚೆನ್ನಾಗಿ ಮಿಶ್ರಗೊಳಿಸಿ.

  3. 3/4 ಕಪ್‍ನೀರನ್ನು ಸ್ವಲ್ಪ ಸ್ವಲ್ಪವಾಗಿಯೇ ಸೇರಿಸುತ್ತಾ, ಒಂದು ಮಧ್ಯಮ ಗಟ್ಟಿಯ ಹಿಟ್ಟಿನ ಮುದ್ದೆಯನ್ನಾಗಿ ಮಾಡಿ.

  4. 2 ಚಮಚ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ನಾದುಕೊಳ್ಳಬೇಕು.

  5. ಪುನಃ 3 ಚಮಚ ಎಣ್ಣೆಯನ್ನು ಸೇರಿಸಿ ಒಂದೆಡೆ ಮುಚ್ಚಿಡಿ.

  6. ಇದನ್ನು 4-5 ತಾಸುಗಳ ಕಾಲ ನೆನೆಯಲು ಬಿಡಬೇಕು.

  7. ಈ ಸಮಯದಲ್ಲಿ ತೊಗರಿ ಬೇಳೆಯನ್ನು ಕುಕ್ಕರ್‍ನಲ್ಲಿ ಹಾಕಿ.

  8. ಇದಕ್ಕೆ 3 ಕಪ್ ನೀರು ಮತ್ತು ಚಿಟಕೆ ಅರಿಶಿನ ಪುಡಿಯನ್ನು ಸೇರಿಸಿ.

  9. ಕುಕ್ಕರ್ 4 ಸೀಟಿ ಕೂಗಿಸಿ ಬೇಯಿಸಬೇಕು. ನಂತರ ಆರಲು ಬಿಡಿ.

  10. ಏಕಕಾಲದಲ್ಲಿ, ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ.

  11. ಇದಕ್ಕೆ 1/4 ಕಪ್ ನೀರನ್ನು ಸೇರಿಸಬೇಕು.

  12. ಬೆಲ್ಲ ಕರಗಿ, ದಪ್ಪದಾದ ಒಂದು ಪಾಕ ಬರಬೇಕು.

  13. ಕುಕ್ಕರ್‍ನಲ್ಲಿ ಬೆಂದ ಬೇಳೆಯಲ್ಲಿ ಇರುವ ಹೆಚ್ಚುವರಿ ನೀರನ್ನು ಸೋಸಿ ತೆಗೆದು, ಬೇಳೆಯನ್ನು ಮಿಕ್ಸರ್ ಪಾತ್ರೆಗೆ ಹಾಕಿ.

  14. ಇದಕ್ಕೆ ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

  15. ಒಮ್ಮೆ ಬೆಲ್ಲದ ಪಾಕ ಬಂದಮೇಲೆ, ರುಬ್ಬಿಕೊಂಡ ಬೇಳೆ ಮಿಶ್ರಣವನ್ನು ಸೇರಿಸಿ.

  16. ಮಿಶ್ರಣವನ್ನು ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು. ಮಿಶ್ರಣ ತಳ ಹಿಡಿಯುವುದು ಮತ್ತು ಗಂಟಾಗುವುದನ್ನು ತಡೆಯಬೇಕು.

  17. ಮಿಶ್ರಣವು ಸಮ್ಮಿಶ್ರಗೊಂಡು ಹೂರಣ ರೂಪಕ್ಕೆ ಬರುವಾಗ ಪಾತ್ರೆಯ ಸುತ್ತಲು ತಳ ಬಿಡುತ್ತಾ ಬರುತ್ತದೆ.

  18. ಆಗ ಉರಿಯನ್ನು ಆರಿಸಿ, ಸಂಪೂರ್ಣವಾಗಿ ತಣಿಯಲು ಬಿಡಬೇಕು.

  19. ಮಿಶ್ರಣವನ್ನು ಅಂಗೈಯಲ್ಲಿ ಮಧ್ಯಮ ಗಾತ್ರದ ಉಂಡೆಯನ್ನಾಗಿ ಮಾಡಬೇಕು.

  20. ಒಂದು ಪ್ಲ್ಯಾಸ್ಟಿಕ್ ಶೀಟ್‍ನ ಮೇಲೆ ಎಣ್ಣೆಯನ್ನು ಹಚ್ಚಿ ಲಟ್ಟಿಸಲು ಸಿದ್ಧಗೊಳಿಸಿ.

  21. ಮಧ್ಯಮ ಗಾತ್ರದ ಮೈದಾ ಹೂರಣವನ್ನು ಅಂಗೈನಲ್ಲಿ ತಟ್ಟಿಕೊಳ್ಳಿ.

  22. ಮಧ್ಯ ಭಾಗದಲ್ಲಿ ಸಿಹಿ ಹೂರಣವನ್ನು ಇಟ್ಟು, ಸುತ್ತಲೂ ಮೈದಾ ಹೂರಣದಿಂದ ಮುಚ್ಚಬೇಕು.

  23. ಮೈದಾ ಹೂರಣದಿಂದ ತೆರೆದ ತುದಿಯನ್ನು ಮುಚ್ಚಿ, ಮೇಲಿನಿಂದ ಒಂದು ಹುಂಡು ಎಣ್ಣೆಯನ್ನು ಬಿಡಬೇಕು.

  24. ನಂತರ ಎಣ್ಣೆ ಹಚ್ಚಿಕೊಂಡ ಪ್ಲ್ಯಾಸ್ಟಿಕ್ ಶೀಟ್‍ನ ಮೇಲಿಟ್ಟು, ಲಟ್ಟಣಿಗೆಯಲ್ಲಿ ತೆಳುವಾದ ಚಪಾತಿಯಂತೆ ಲಟ್ಟಿಸಬೇಕು.

  25. ಬಿಸಿಯಾದ ಬಾಣಲೆಯ ಮೇಲೆ ಒಬ್ಬಟ್ಟನ್ನು ಹಾಕಬೇಕು. ನಿಧಾನವಾಗಿ ಪ್ಲ್ಯಾಸ್ಟಿಕ್ ಶೀಟ್‍ಅನ್ನು ಮೇಲಕ್ಕೆ ಎತ್ತಬೇಕು.

  26. ಒಂದು ಬದಿಯಲ್ಲಿ ಬೇಯುತ್ತಿರುವಾಗ, ಇನ್ನೊಂದು ಬದಿಯಲ್ಲಿ ಎಣ್ಣೆಯನ್ನು ಹಾಕಿ ಬೇಯಿಸಿ.

  27. ಎರಡು ಬದಿಯಲ್ಲೂ ಒಬ್ಬಟ್ಟು ತೆಳು ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಬೇಕು.

Instructions
 • 1. ಮೈದಾ ಹಿಟ್ಟಿನ ಮುದ್ದೆಯನ್ನು ಕಲಸಿ, ನೆನೆಯಲು ಬಿಟ್ಟಮೇಲೆ ಅದು ಬಹಳ ಮೃದುವಾದ ಹಿಟ್ಟಿನಂತೆ ಆಗಿರಬೇಕು.
 • 2. ತೊಗರಿ ಬೇಳೆ ಬೇಯಿಸಿಕೊಳ್ಳುವಾಗ ನೀರು ಮತ್ತು ಬೇಳೆಯ ಅನುಪಾತ 1:3ರಷ್ಟಿರಬೇಕು.
 • 3. ತೊಗರಿ ಬೇಳೆಯ ಬದಲಿಗೆ ಕಡ್ಲೆಬೇಳೆಯನ್ನು ಉಪಯೋಗಿಸಬಹುದು.
 • 4. ಬೆಲ್ಲದ ಪಾಕ ತರಿಸುವಾಗ ಸ್ವಲ್ಪವೇ ನೀರು ಬೆರೆಸಿದರೆ ಬಹು ಬೇಗ ಪಾಕ ತರಿಸಬಹುದು. ಇಲ್ಲವಾದರೆ ತುಂಬಾ ಸಮಯ ತೆಗೆದುಕೊಳ್ಳುವುದು.
 • 5. ಒಬ್ಬಟ್ಟನ್ನು ಲಟ್ಟಿಸುವಾಗ ಪ್ಲ್ಯಾಸ್ಟಿಕ್ ಶೀಟ್‍ಅನ್ನು ನಿಮ್ಮ ಕಡೆ ತಿರುಗಿಸಿಕೊಳ್ಳುತ್ತಾ ಲಟ್ಟಿಸಬೇಕು. ಆಗ ಆಕಾರವು ಸುಲಭವಾಗಿ ಬರುವುದು.
 • 6. ಒಬ್ಬಟ್ಟನ್ನು ಸವಿಯಲು ನೀಡುವಾಗ ತುಪ್ಪವನ್ನು ಹಾಕಿ ನೀಡಬೇಕು.
Nutritional Information
 • ಸರ್ವಿಂಗ್ ಸೈಜ್ - 1 ಒಬ್ಬಟ್ಟು
 • ಕ್ಯಾಲೋರಿ - 385 ಕ್ಯಾಲ್
 • ಫ್ಯಾಟ್ - 16 ಗ್ರಾಂ.
 • ಪ್ರೋಟೀನ್ - 10 ಗ್ರಾಂ.
 • ಕಾರ್ಬೋಹೈಡ್ರೇಟ್ - 56 ಗ್ರಾಂ.
 • ಸಕ್ಕರೆ - 11.3 ಗ್ರಾಂ.

ಬೇಳೆ ಒಬ್ಬಟ್ಟು ಹೋಳಿಗೆ ಮಾಡುವ ವಿಧಾನ

1. ಸೂಜಿ ರವೆ, ಮೈದಾ ಮತ್ತು ಒಂದು ಚಿಟಕಿ ಅರಿಶಿನವನ್ನು ಸೇರಿಸಿ.

bele obbattu recipe
bele obbattu recipe
bele obbattu recipe
bele obbattu recipe

2. ಚೆನ್ನಾಗಿ ಮಿಶ್ರಗೊಳಿಸಿ.

bele obbattu recipe
bele obbattu recipe

3. 3/4 ಕಪ್‍ನೀರನ್ನು ಸ್ವಲ್ಪ ಸ್ವಲ್ಪವಾಗಿಯೇ ಸೇರಿಸುತ್ತಾ, ಒಂದು ಮಧ್ಯಮ ಗಟ್ಟಿಯ ಹಿಟ್ಟಿನ ಮುದ್ದೆಯನ್ನಾಗಿ ಮಾಡಿ.

bele obbattu recipe
bele obbattu recipe

4. 2 ಚಮಚ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ನಾದುಕೊಳ್ಳಬೇಕು.

bele obbattu recipe
bele obbattu recipe

5. ಪುನಃ 3 ಚಮಚ ಎಣ್ಣೆಯನ್ನು ಸೇರಿಸಿ ಒಂದೆಡೆ ಮುಚ್ಚಿಡಿ.

bele obbattu recipe

6. ಇದನ್ನು 4-5 ತಾಸುಗಳ ಕಾಲ ನೆನೆಯಲು ಬಿಡಬೇಕು.

bele obbattu recipe

7. ಈ ಸಮಯದಲ್ಲಿ ತೊಗರಿ ಬೇಳೆಯನ್ನು ಕುಕ್ಕರ್‍ನಲ್ಲಿ ಹಾಕಿ.

bele obbattu recipe
bele obbattu recipe

8. ಇದಕ್ಕೆ 3 ಕಪ್ ನೀರು ಮತ್ತು ಚಿಟಕೆ ಅರಿಶಿನ ಪುಡಿಯನ್ನು ಸೇರಿಸಿ.

bele obbattu recipe
bele obbattu recipe

9. ಕುಕ್ಕರ್ 4 ಸೀಟಿ ಕೂಗಿಸಿ ಬೇಯಿಸಬೇಕು. ನಂತರ ಆರಲು ಬಿಡಿ.

bele obbattu recipe

10. ಏಕಕಾಲದಲ್ಲಿ, ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ.

bele obbattu recipe

11. ಇದಕ್ಕೆ 1/4 ಕಪ್ ನೀರನ್ನು ಸೇರಿಸಬೇಕು.

bele obbattu recipe

12. ಬೆಲ್ಲ ಕರಗಿ, ದಪ್ಪದಾದ ಒಂದು ಪಾಕ ಬರಬೇಕು.

bele obbattu recipe

13. ಕುಕ್ಕರ್‍ನಲ್ಲಿ ಬೆಂದ ಬೇಳೆಯಲ್ಲಿ ಇರುವ ಹೆಚ್ಚುವರಿ ನೀರನ್ನು ಸೋಸಿ ತೆಗೆದು, ಬೇಳೆಯನ್ನು ಮಿಕ್ಸರ್ ಪಾತ್ರೆಗೆ ಹಾಕಿ.

bele obbattu recipe
bele obbattu recipe
bele obbattu recipe

14. ಇದಕ್ಕೆ ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

bele obbattu recipe

15. ಒಮ್ಮೆ ಬೆಲ್ಲದ ಪಾಕ ಬಂದಮೇಲೆ, ರುಬ್ಬಿಕೊಂಡ ಬೇಳೆ ಮಿಶ್ರಣವನ್ನು ಸೇರಿಸಿ.

bele obbattu recipe

16. ಮಿಶ್ರಣವನ್ನು ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು. ಮಿಶ್ರಣ ತಳ ಹಿಡಿಯುವುದು ಮತ್ತು ಗಂಟಾಗುವುದನ್ನು ತಡೆಯಬೇಕು.

bele obbattu recipe

17. ಮಿಶ್ರಣವು ಸಮ್ಮಿಶ್ರಗೊಂಡು ಹೂರಣ ರೂಪಕ್ಕೆ ಬರುವಾಗ ಪಾತ್ರೆಯ ಸುತ್ತಲು ತಳ ಬಿಡುತ್ತಾ ಬರುತ್ತದೆ.

bele obbattu recipe

18. ಆಗ ಉರಿಯನ್ನು ಆರಿಸಿ, ಸಂಪೂರ್ಣವಾಗಿ ತಣಿಯಲು ಬಿಡಬೇಕು.

bele obbattu recipe

19. ಮಿಶ್ರಣವನ್ನು ಅಂಗೈಯಲ್ಲಿ ಮಧ್ಯಮ ಗಾತ್ರದ ಉಂಡೆಯನ್ನಾಗಿ ಮಾಡಬೇಕು.

bele obbattu recipe
bele obbattu recipe

20. ಒಂದು ಪ್ಲ್ಯಾಸ್ಟಿಕ್ ಶೀಟ್‍ನ ಮೇಲೆ ಎಣ್ಣೆಯನ್ನು ಹಚ್ಚಿ ಲಟ್ಟಿಸಲು ಸಿದ್ಧಗೊಳಿಸಿ.

bele obbattu recipe
bele obbattu recipe

21. ಮಧ್ಯಮ ಗಾತ್ರದ ಮೈದಾ ಹೂರಣವನ್ನು ಅಂಗೈನಲ್ಲಿ ತಟ್ಟಿಕೊಳ್ಳಿ.

bele obbattu recipe
bele obbattu recipe

22. ಮಧ್ಯ ಭಾಗದಲ್ಲಿ ಸಿಹಿ ಹೂರಣವನ್ನು ಇಟ್ಟು, ಸುತ್ತಲೂ ಮೈದಾ ಹೂರಣದಿಂದ ಮುಚ್ಚಬೇಕು.

bele obbattu recipe
bele obbattu recipe

23. ಮೈದಾ ಹೂರಣದಿಂದ ತೆರೆದ ತುದಿಯನ್ನು ಮುಚ್ಚಿ, ಮೇಲಿನಿಂದ ಒಂದು ಹುಂಡು ಎಣ್ಣೆಯನ್ನು ಬಿಡಬೇಕು.

bele obbattu recipe
bele obbattu recipe

24. ನಂತರ ಎಣ್ಣೆ ಹಚ್ಚಿಕೊಂಡ ಪ್ಲ್ಯಾಸ್ಟಿಕ್ ಶೀಟ್‍ನ ಮೇಲಿಟ್ಟು, ಲಟ್ಟಣಿಗೆಯಲ್ಲಿ ತೆಳುವಾದ ಚಪಾತಿಯಂತೆ ಲಟ್ಟಿಸಬೇಕು.

bele obbattu recipe
bele obbattu recipe

25. ಬಿಸಿಯಾದ ಬಾಣಲೆಯ ಮೇಲೆ ಒಬ್ಬಟ್ಟನ್ನು ಹಾಕಬೇಕು. ನಿಧಾನವಾಗಿ ಪ್ಲ್ಯಾಸ್ಟಿಕ್ ಶೀಟ್‍ಅನ್ನು ಮೇಲಕ್ಕೆ ಎತ್ತಬೇಕು.

bele obbattu recipe

26. ಒಂದು ಬದಿಯಲ್ಲಿ ಬೇಯುತ್ತಿರುವಾಗ, ಇನ್ನೊಂದು ಬದಿಯಲ್ಲಿ ಎಣ್ಣೆಯನ್ನು ಹಾಕಿ ಬೇಯಿಸಿ.

bele obbattu recipe

27. ಎರಡು ಬದಿಯಲ್ಲೂ ಒಬ್ಬಟ್ಟು ತೆಳು ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಬೇಕು.

bele obbattu recipe
[ 3.5 of 5 - 43 Users]