Just In
Don't Miss
- News
ಸಂಚಾರ ನಿಯಮ ಉಲ್ಲಂಘನೆ: ವಿಶೇಷ ಕಾರ್ಯಾಚರಣೆ ಹೇಗಿರಲಿದೆ ಗೊತ್ತೇ?
- Movies
ಬಾಲಿವುಡ್ ಗೆ ಎಂಟ್ರಿ ಕೊಟ್ಟ 'ದಿಯಾ' ಪೃಥ್ವಿ ಅಂಬರ್; ಯಾವ ಸಿನಿಮಾ?
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುರ್ಗಾ ಪೂಜೆಗೆ ವಿಶೇಷ ರೆಸಿಪಿ: ಬೇಗನ್ ಭಾಜಾ
ಬೇಗನ್ ಭಾಜಾ ಇದು ಉತ್ತರ ಭಾರತದ ಕಡೆಯ ಫೇಮಸ್ ಅಡುಗೆಯಾಗಿದೆ. ನಾವು ಇದನ್ನು ಬದನೆಕಾಯಿ ಫ್ರೈ ಅಂತ ಕರೆಯಬಹುದು. ಇದನ್ನು ಎಣ್ಣೆಯಲ್ಲಿ ಕರಿದು ತಿನ್ನಬಹುದು, ಇಲ್ಲಾ ತವಾದಲ್ಲಿ ಫ್ರೈ ಮಾಡಿ ತಿನ್ನಬಹುದು. ಆದರೆ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದರೆ ತುಂಬಾ ರುಚಿ.
ಇದನ್ನು ಸೈಡ್ ಡಿಶ್ ಆಗಿ ಬಳಸಬಹುದು, ಇಲ್ಲಾ ಸಂಜೆಗೆ ಮೊಸರು ಜೊತೆ ನೆಚ್ಚಿಕೊಂಡು ತಿನ್ನಲೂ ಬಳಸಬಹುದು. ಬದನೆಕಾಯಿಯನ್ನು ಕತ್ತರಿಸಿ ಅದನ್ನು ಉಪ್ಪು ನೀರಿನಲ್ಲಿ ಹಾಕಿಟ್ಟರೆ ಅದರ ಒಗರು ಇಲ್ಲವಾಗುವುದು. ಇದೊಂದು ಸುಲಭ ರೆಸಿಪಿಯಾಗಿದ್ದು ದುರ್ಗಾ ಪೂಜೆಯ ಸಮಯದಲ್ಲಿ ಮಾಡುವ ರೆಸಿಪಿಗಳಲ್ಲಿ ಇದೂ ಕೂಡ ಒಂದಾಗಿದೆ.
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Snacks
Serves: 2
-
ಬೇಕಾಗುವ ಸಾಮಗ್ರಿ
ದೊಡ್ಡ ಬದನೆಕಾಯಿ 1
ಅರಿಶಿಣ 1 ಚಮಚ
ಗರಂ ಮಸಾಲ 1 ಚಮಚ (Optional)
ಮಾವಿನಕಾಯಿ ಪುಡಿ (Optional)
ಖಾರದ ಪುಡಿ ಅರ್ಧ ಚಮಚ
ಅಕ್ಕಿ ಹಿಟ್ಟು ಅರ್ಧ ಕಪ್
ರುಚಿಗೆ ತಕ್ಕ ಉಪ್ಪು
ಸಾಸಿವೆ ಎಣ್ಣೆ/ಸೂರ್ಯಕಾಂತಿ ಎಣ್ಣೆ 2 ಚಮಚ
-
ಮಾಡುವ ವಿಧಾನ
* ಬದನೆಕಾಯಿಯನ್ನು ತೊಳೆದು, ಒರೆಸಿ ಅರ್ಧ ಇಂಚಿನಷ್ಟು ದಪ್ಪವಾಗಿ ರೌಂಡ್-ರೌಂಡಾಗಿ ಕತ್ತರಿಸಿ,
* ಕತ್ತರಿಸಿದ ಬದನೆಕಾಯಿಯನ್ನು ಉಪ್ಪು ನೀರಿನಲ್ಲಿ 15-20 ನಿಮಿಷ ನೆನೆ ಹಾಕಿ.
* ಈಗ ಬದನೆಕಾಯಿಯನ್ನು ನೀರಿನಿಂದ ತೆಗೆದು ಅದರ ಮೇಲೆ ಉಪ್ಪು ಹಾಗೂ ಮಸಾಲೆ ಪುಡಿ ಹಾಕಿ 6-7 ನಿಮಿಷ ಇಡಿ.
* ಪ್ಯಾನ್ ಬಿಸಿ ಮಾಡಿ, ಈಗ ಅಕ್ಕಿ ಹಿಟ್ಟು ತೆಗೆದುಕೊಂಡು ಅದರ ಎರಡು ಬದಿಯನ್ನು ಅಕ್ಕಿ ಹಿಟ್ಟಿನಲ್ಲಿ ಹೊರಳಾಡಿಸಿ, ಅಧಿಕ ಹುಡಿಯನ್ನು ಕೊಡವಿ ತೆಗೆಯಿರಿ.
* ನಂತರ ಕುದಿಯುತ್ತಿರುವ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಅದನ್ನು ಪೇಪರ್ ಟವಲ್ನಲ್ಲಿ ಹಾಕಿಡಿ.
ಇದನ್ನು ಬಿಸಿ ಬಿಸಿಯಾಗಿ, ತಣ್ಣನೆಯ ಮೊಸರು ಹಾಗೂ ಬ್ರೆಡ್ ಜೊತೆ ಸರ್ವ್ ಮಾಡಿ.
- *ತುಂಡುಗಳನ್ನು ತುಂಬಾ ತೆಳ್ಳಗೆ ಮಾಡಿದರೆ ಬೇಯುತ್ತದೆ. * ಬದನೆಕಾಯಿ ಬೇಯುವಾಗ ತುಂಬಾ ಎಣ್ಣೆ ಹೀರುವುದನ್ನು ತಡೆಗಟ್ಟಲು ಅಕ್ಕಿ ಹಿಟ್ಟಿನಲ್ಲಿ ಹೊರಳಾಡಿಸಿ. * ಅಕ್ಕಿ ಹಿಟ್ಟು ಬದಲಿಗೆ ಕಡಲೆ ಹಿಟ್ಟು ಕೂಡ ಬಳಸಬಹುದು.
- ಕ್ಯಾಲೋರಿ: - 193ಕ್ಯಾ
- ಕೊಬ್ಬು: - 16ಗ್ರಾಂ
- ಪ್ರೊಟೀನ್ - 1ಗ್ರಾಂ
- ಕಾರ್ಬ್ಸ್: - 12 ಗ್ರಾಂ