Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ರುಚಿ ರುಚಿಯ ಬೀಟ್ರೂಟ್ ಹಲ್ವಾ..! ಮಾಡುವ ವಿಧಾನ ಇಲ್ಲಿದೆ..!
ಬೀಟ್ರೂಟ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂಬುವುದು ಗೊತ್ತು. ಬೀಟ್ ರೂಟ್ನಲ್ಲಿ ವಿಟಮಿನ್ಸ್, ಖನಿಜಾಂಶ, ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಿಹಿಯಾಗಿ ಸೇವಿಸಲು ಅತ್ಯಂತ ರುಚಿಕರವಾಗಿರುತ್ತದೆ.
ಬೀಟ್ರೂಟ್ನಿಂದ ಹಲವಾರು ಖಾದ್ಯಗಳನ್ನು ತಯಾರಿಸಬಹುದು. ಇದಕ್ಕೆ ಇದರಿಂದ ದೊರೆಯುವ ಆರೋಗ್ಯಕರವಾದ ಪ್ರಯೋಜನಗಳೆ ಕಾರಣ. ಈ ಬೀಟ್ರೂಟ್ಗಳನ್ನು ನಿಮ್ಮ ಆಹಾರದಲ್ಲಿ ನಾನಾ ಬಗೆಯಲ್ಲಿ ಸೇರಿಸಿಕೊಳ್ಳಬಹುದು. ಇದನ್ನು ಕತ್ತರಿಸಿ ಅದರ ಮೇಲೆ ನಿಂಬೆರಸವನ್ನು ಚಿಮುಕಿಸಿಕೊಂಡು ಸಲಾಡ್ ಬೇಕಾದರೆ ಮಾಡಿಕೊಳ್ಳಬಹುದು.
ಇಲ್ಲವಾದಲ್ಲಿ ಇದನ್ನು ರೋಸ್ಟ್ ಮಾಡಿ ಉಪ್ಪಿನಕಾಯಿ ಮಾಡಿಕೊಳ್ಳಬಹುದು. ಹಾಗಾದರೆ ಬೀಟ್ರೂಟನ್ನು ಮತ್ತೆ ಯಾವ ಬಗೆಯಲ್ಲಿ ಮತ್ತಷ್ಟು ರುಚಿಕರವಾಗಿ ಮಾಡಿಕೊಂಡು ತಿನ್ನಬಹುದು? ಎಂಬುದು ನಿಮ್ಮ ಪ್ರಶ್ನೆಯೇ, ಹಾಗಾದರೆ ಎಂದಾದರು ಬೀಟ್ರೂಟ್ ಹಲ್ವಾ ಮಾಡಿಕೊಂಡು ತಿಂದಿದ್ದೀರಾ? ಬೀಟ್ರೂಟ್ ಹಲ್ವಾ ಈ ತರಕಾರಿಯನ್ನು ತಿನ್ನಲು ಹೇಳಿ ಮಾಡಿಸಿದಂತಹ ಮಾರ್ಗವಾಗಿರುತ್ತದೆ. ಇದು ಹಲ್ವಾಗಳ ಪೈಕಿ ರುಚಿಕರವಾದ ಒಂದು ಹಲ್ವಾವಾಗಿ ಗುರುತಿಸಲ್ಪಟ್ಟಿದೆ.

ಜೊತೆಗೆ ಇದು ಕೂದಲು ಮತ್ತು ತ್ವಚೆಗು ಸಹ ಪ್ರಯೋಜನಕಾರಿ. ವಯಸ್ಸಾದಂತೆ ಕಾಣುವುದನ್ನು ಇದು ತಡೆಯುತ್ತದೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಹೀಗೆ ಇದರ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಈ ಎಲ್ಲಾ ಕಾರಣಗಳಿಂದ ಇದನ್ನು ನಿಮ್ಮ ಆಹಾರದಲ್ಲಿ ತಪ್ಪದೆ ಸೇರಿಸಿಕೊಳ್ಳಬೇಕಾದ ತರಕಾರಿಯಾಗಿ ಇದು ಗುರುತಿಸಲ್ಪಟ್ಟಿದೆ. ಇದರ ಪ್ರಯೋಜನಗಳನ್ನು ಗರಿಷ್ಠ ಪ್ರಮಾಣದಲ್ಲಿ ನಿಮ್ಮದನ್ನಾಗಿಸಿಕೊಳ್ಳಲು ಬೀಟ್ರೂಟ್ ಹಲ್ವಾ ರೆಸಿಪಿ ಉತ್ತಮ ಮಾರ್ಗವಾಗಿದೆ. ಹಾಗಾದರೆ ಬೀಟ್ರೂಟ್ ಹಲ್ವಾ ಮಾಡುವುದು ಹೇಗೆ? ಯಾವೆಲ್ಲಾ ಪದಾರ್ಥಗಳು ಬೇಕು, ಪಾಕ ವಿಧಾನ ನೋಡೋಣ.
ಬೀಟ್ರೂಟ್ ಹಲ್ವಾ ಮಾಡಲು ಬೇಕಾದ ಪದಾರ್ಥಗಳು
- ಬೀಟ್ರೂಟ್ - 4
- ಹಾಲು - 2 ಕಪ್
- ಸಕ್ಕರೆ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು
- ಏಲಕ್ಕಿ ಪುಡಿ - 1 ಟೀ ಚಮಚ
- ತುಪ್ಪ - 3 ಟೇಬಲ್ ಚಮಚ
- ಗೋಡಂಬಿ - ಸ್ವಲ್ಪ
- ಒಣ ದ್ರಾಕ್ಷಿ - ಸ್ವಲ್ಪ
- ಬಾದಾಮಿ - ಒಂದು ಹಿಡಿ
- ಕೋವಾ - 100 ಗ್ರಾಂ
- ಮಂದಗೊಳಿಸಿದ ಹಾಲು - ನಿಮ್ಮ ರುಚಿಗೆ ತಕ್ಕಷ್ಟು
ಬೀಟ್ರೂಟ್ ಹಲ್ವಾ ತಯಾರಿಸುವ ವಿಧಾನ
ಬೀಟ್ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ. ಬಳಿಕ ಚೆನ್ನಾಗಿ ತುರಿದುಕೊಳ್ಳಿ. ಬಳಿಕ ಪಾತ್ರೆಯೊಂದರಲ್ಲಿ ತುಪ್ಪ ಹಾಕಿ ಉರಿ ಇಟ್ಟು ಕಾಯಿಸಿ, ಅದಕ್ಕೆ ಗೋಡಂಬಿ, ಬಾದಾಮಿ ಹಾಕಿ ಹುರಿಯಿರಿ. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ. ಬಳಿಕ ಬೀಟ್ರೂಟ್ ಅನ್ನು ಅದೇ ಪಾತ್ರಯಲ್ಲಿ ಹಾಕಿ, ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನು ಕಡಿಮೆ ಉರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲಸಿ. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ. ಉರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ. ಈಗ ಬೀಟ್ರೂಟ್ ಹಲ್ವಾ ಬಡಿಸಲು ಸಿದ್ಧವಾಗಿದೆ.



Click it and Unblock the Notifications