Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾರ್ಲಿ ಬಳಸಿ ಈ ರೀತಿ ಉಪ್ಮಾ ಮಾಡಿ! ತೂಕ ಇಳಿಕೆಗೆ ಸಹಕಾರಿ.. ಸಕ್ಕರೆ ಕಾಯಿಲೆ ನಿಯಂತ್ರಣ.. ಒಮ್ಮೆ ಟ್ರೈ ಮಾಡಿ
ಎಲುಬುಗಳ ಬಲವರ್ಧನೆಗೆ ಮತ್ತು ತೂಕ ಇಳಿಕೆಗೆ ಸಹಕಾರಿ ಈ ಬಾರ್ಲಿ ಉಪ್ಪಿಟ್ಟು! ತೂಕ ಇಳಿಸಬೇಕೇ? ಹಾಗಿದ್ರೆ ರವೆ ಉಪ್ಪಿಟ್ಟು ಬಿಟ್ಟು ಈ 'ಬಾರ್ಲಿ ಉಪ್ಪಿಟ್ಟು' ಟ್ರೈ ಮಾಡಿ. ಹೌದು, ಪ್ರತಿದಿನ ಒಂದೇ ತೆರನಾದ ಆಹಾರ ಸೇವಿಸಿ ಬೇಸರವಾಗಿದೆಯಾ? ಹಾಗಿದ್ದರೆ, ಆರೋಗ್ಯ ಮತ್ತು ರುಚಿಯ ಅದ್ಭುತ ಸಂಗಮವಾದ 'ಜೌ ಉಪ್ಪಿಟ್ಟು' (Jau Ka Upma Recipe) ಅಥವಾ ಬಾರ್ಲಿ ಉಪ್ಮಾ ಪ್ರಯತ್ನಿಸಿ.
ಇತ್ತೀಚಿನ ವೇಗದ ಬದುಕಿನಲ್ಲಿ ಬೆಳಗಿನ ಉಪಾಹಾರ ಕೇವಲ ಹಸಿವು ನೀಗಿಸುವುದಕ್ಕೆ ಸೀಮಿತಗೊಳ್ಳದೆ, ಪೌಷ್ಟಿಕಾಂಶಗಳ ಆಗರವಾಗಿರುವುದು ಅತಿ ಮುಖ್ಯ. ನಾವು ಸಾಮಾನ್ಯವಾಗಿ ರವೆ ಅಥವಾ ಅವಲಕ್ಕಿ ಉಪ್ಪಿಟ್ಟನ್ನು ಸೇವಿಸುತ್ತೇವೆ. ಆದರೆ ಜೌ (ಬಾರ್ಲಿ / ಜವೆಗೋಧಿ) ಉಪ್ಪಿಟ್ಟು ಹಲವರಿಗೆ ಹೊಸತೆನಿಸಬಹುದು. ಮೂಳೆಗಳ ಬಲವರ್ಧನೆಗೆ ಮತ್ತು ತೂಕ ಇಳಿಕೆಗೆ ಅತ್ಯಂತ ಸಹಕಾರಿಯಾದ ಈ ಪೌಷ್ಟಿಕ ತಿಂಡಿಯನ್ನು (Weight Loss Breakfast) ಸುಲಭವಾಗಿ ಮನೆಯಲ್ಲೇ ತಯಾರಿಸುವ ವಿಧಾನ (Barley Upma Recipe) ಇಲ್ಲಿದೆ.

ಕೆಲವರು ಜವಾರಿ ಗೋಧಿಯ ರೊಟ್ಟಿಗಳನ್ನು ಸವಿದಿರಬಹುದು. ಆದರೆ, ಜೌದಿಂದ ತಯಾರಿಸುವ ಉಪ್ಪಿಟ್ಟು ಅತಿ ರುಚಿಕರವಾಗಿದ್ದು, ಆರೋಗ್ಯ ದೃಷ್ಟಿಯಿಂದಲೂ ಬಹಳ ಪ್ರಯೋಜನಕಾರಿ. ಇದು ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಮ್ಯಾಗ್ನೀಸಿಯಮ್ಗಳಂತಹ ಹಲವು ಅಗತ್ಯ ಖನಿಜಾಂಶಗಳನ್ನು ಯಥೇಚ್ಛವಾಗಿ ಒಳಗೊಂಡಿದೆ.
ಜೌ ಅಥವಾ ಬಾರ್ಲಿಯು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯಿಂದ ಸಮೃದ್ಧವಾಗಿದ್ದು, ಎಲುಬುಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಲ್ಲಿರುವ ಸತು (Zinc) ಮತ್ತು ಪೊಟ್ಯಾಸಿಯಮ್ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ನೆರವಾಗುತ್ತವೆ. ತೂಕ ಇಳಿಸಲು ಬಯಸುವವರಿಗೆ ಜೌ ಉತ್ತಮ ಡಯೆಟ್ ಆಹಾರವಾಗಬಲ್ಲದು.
ಬಾರ್ಲಿ ಉಪ್ಪಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಜೌ ರವೆ (ಬಾರ್ಲಿ ದಲಿಯಾ) - ಒಂದು ಕಪ್
• ಈರುಳ್ಳಿ - ಅರ್ಧ ಕಪ್
• ಕ್ಯಾರೆಟ್
• ಹಸಿರು ಕ್ಯಾಪ್ಸಿಕಂ
• ಉದ್ದಿನಬೇಳೆ - ಒಂದು ಚಮಚ (ಒಗ್ಗರಣೆಗೆ)
• ಸಾಸಿವೆ - ಒಂದು ಚಿಟಿಕೆ
• ಹುರಿದ ಶೇಂಗಾ ಬೀಜ - ಅರ್ಧ ಕಪ್
• ಕೊತ್ತಂಬರಿ ಸೊಪ್ಪು - ಎರಡು ಚಮಚ
• ನಿಂಬೆ (ಲಿಂಬೆ) ರಸ - ಒಂದು ಚಮಚ
• ರುಚಿಗೆ ತಕ್ಕಷ್ಟು ಉಪ್ಪು
• ಎಣ್ಣೆ - ಅಡುಗೆಗೆ ಬೇಕಾದಷ್ಟು
ಬಾರ್ಲಿ ಉಪ್ಪಿಟ್ಟು ತಯಾರಿಸುವ ಸರಳ ವಿಧಾನ
- ಮೊದಲಿಗೆ, ಜೌ ರವೆಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಸಮಯ ನೆನೆಸಿ, ನೀರನ್ನು ಬಸಿಯಿರಿ.
- ನಂತರ ಕುಕ್ಕರ್ನಲ್ಲಿ ಹಾಕಿ ಒಂದು ಅಥವಾ ಎರಡು ಸೀಟಿ ಬರುವವರೆಗೆ ಬೇಯಿಸಿ, ಇದು ಉಪ್ಪಿಟ್ಟು ಮೃದುವಾಗಲು ಸಹಾಯ ಮಾಡುತ್ತದೆ.
- ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಸಿಡಿಸಿ. ಉದ್ದಿನಬೇಳೆ ಮತ್ತು ಹುರಿದ ಶೇಂಗಾ ಬೀಜಗಳನ್ನು ಸೇರಿಸಿ ಕೆಂಪಾಗುವವರೆಗೆ ಹುರಿಯಿರಿ.
- ನಂತರ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ತರಕಾರಿಗಳು ಮೃದುವಾಗುವವರೆಗೆ ಬೇಯಿಸಿ.
- ತರಕಾರಿಗಳು ಬೆಂದ ನಂತರ, ಈಗಾಗಲೇ ಬೇಯಿಸಿದ ಜೌ ರವೆಯನ್ನು ಸೇರಿಸಿ. ಮಸಾಲೆಯೊಂದಿಗೆ ರವೆಯು ಚೆನ್ನಾಗಿ ಬೆರೆಯುವಂತೆ ಮೂರು ನಿಮಿಷ ಕೈಯಾಡಿಸಿ.
- ಅಂತಿಮವಾಗಿ ಲಿಂಬೆರಸ ಮತ್ತು ಹಸಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಬಿಸಿಬಿಸಿಯಾದ ಮತ್ತು ಪೌಷ್ಟಿಕ ಜೌ ಉಪ್ಪಿಟ್ಟು ಸವಿಯಲು ಸಿದ್ಧ.
ಬಾರ್ಲಿ ಉಪ್ಪಿಟ್ಟಿನ ಆರೋಗ್ಯ ಲಾಭಗಳು
- ಬಾರ್ಲಿಯಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸಿ ಗಟ್ಟಿಯಾಗಿಸಲು ಸಹಕಾರಿ.
- ಹೆಚ್ಚಿನ ನಾರಿನಂಶವನ್ನು (Fiber) ಹೊಂದಿರುವ ಕಾರಣ, ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಇದರಿಂದ ಅನಗತ್ಯ ಆಹಾರ ಸೇವನೆಯನ್ನು ತಡೆಯಬಹುದು.
- ಬಾರ್ಲಿಯು ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವುದರಿಂದ ಮಧುಮೇಹಿಗಳಿಗೆ ಸೂಕ್ತ ಆಹಾರವಾಗಿದೆ.
ಒಟ್ಟಾರೆ, ಬೆಳಗಿನ ಆಹಾರದಲ್ಲಿ ಹೊಸತನ ಬಯಸುವವರು, ತ್ವರಿತವಾಗಿ ತಯಾರಿಸಬಹುದಾದ ಈ 'ಜೌ ಉಪ್ಪಿಟ್ಟು' ಖಂಡಿತ ಟ್ರೈ ಮಾಡಬಹುದು. ಇದು ರುಚಿಯಲ್ಲಿ ಅಷ್ಟೇ ಅಲ್ಲದೆ, ಪೌಷ್ಟಿಕಾಂಶಗಳ ದೃಷ್ಟಿಯಿಂದಲೂ ಉತ್ತಮ ಆಯ್ಕೆ.



Click it and Unblock the Notifications
