Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಬಾಳೆಹಣ್ಣಿನ ಸಿಪ್ಪೆಯಿಂದ ಮಾಡಬಹುದು ರುಚಿಯಾದ ಗೊಜ್ಜು? ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?
Recipes
oi-Reena TK
Posted By: Reena TK
ಬಾಳೆಹಣ್ಣಿನ ಸಿಪ್ಪೆಯಿಂದ ಫೇಶಿಯಲ್ ಮಾಡಿರಬಹುದು, ಆದರೆ ಗೊಜ್ಜು ಮಾಡಿದ್ದೀರಾ? ಹೌದು ನಿಮಗೆ ಆಶ್ಚರ್ಯ ಅನಿಸಹುದು, ಆದರೆ ಇದರಿಂದ ನಿಮಗೆ ರುಚಿಕರವಾದ ಗೊಜ್ಜು ತಯಾರಿಸಬಹುದು. ಒಮ್ಮೆ ಇದರ ಟೇಸ್ಟ್ ಮಾಡಿದರೆ ಇನ್ನೆಂದಿಗೂ ಬಾಳೆಹಣ್ಣಿನ ಸಿಪ್ಪೆ ಕಸದ ಬುಟ್ಟಿ ಸೇರಲ್ಲ. ಬಾಳಹಣ್ಣಿನ ಸಿಪ್ಪೆಯಿಂದ ಅನ್ನಕ್ಕೆ ಒಂದೊಳ್ಳೆಯ ಗೊಜ್ಜು ತಯಾರಿಸುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಬಾಳೆಹಣ್ಣಿನ ಸಿಪ್ಪೆ 5-6
ನಿಂಬೆ ಹಣ್ಣು 1
4 ಚಮಚ ಎಣ್ಣೆ
2 ಈರುಳ್ಳಿ ಸಾಧಾರಣ ಗಾತ್ರದ್ದು
ರುಚಿಗೆ ತಕ್ಕ ಉಪ್ಪು (ಒಂದು ಚಮಚ ಸೇರಿಸಿ, ಬೇಕಿದ್ರೆ ಇನ್ನೂ ಸ್ವಲ್ಪ
ಸೇರಿಸಬಹುದು
ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ
1 ಟೊಮೆಟೊ
1/ 4 ಕಪ್ ಟೊಮೆಟೊ ಪೇಸ್ಟ್
1 ಚಮಚ ಗರಂ ಮಸಾಲ
ಒಂದೂವರೆ ಚಮಚ ಮೆಣಸಿನ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ನೀರು
ಮಾಡುವ ವಿಧಾನ:
- ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಕತ್ತರಿಸಿ, ನಂತರ ನಿಂಬೆರಸ ಹಾಕಿ, ಇದರಿಂದ ಸಿಪ್ಪೆ ಬೇಗನೆ ಕಂದು ಬಣ್ಣಕ್ಕೆ ಬದಲಾಗಲ್ಲ
- ಈಗ ಪಾತ್ರೆಗೆ ಎಣ್ಣೆ ಹಾಕಿ ಕಾಯಿಸಿ
- ಕಾದ ಎಣ್ಣೆಗೆ ಈರುಳ್ಳಿ ಹಾಕಿ, ಉಪ್ಪು ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರ ಮಾಡಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಕತ್ತರಿಸಿದ ಟೊಮೆಟೊ ಹಾಕಿ, ಟೊಮೆಟೊ ಸ್ವಲ್ಪ ಮೆತ್ತಗಾಗುವವರೆಗೆ ಫ್ರೈ ಮಾಡಿ ನಂತರ ಟೊಮೆಟೊ ಪೇಸ್ಟ್ ಸೇರಿಸಿ , ಟೊಮೆಟೊ ಪೇಸ್ಟ್ ಕುದಿ ಬರಲಾರಭಿಸಿದಾಗ ಅದಕ್ಕೆ ಗರಂ ಮಸಾಲೆ ಕಾರದ ಪುಡಿ ಹಾಕಿ ಮಿಕ್ಸ್ ಮಾಡಿ.
- ಈಗ ಮಿಶ್ರಣ ಕುದಿ ಬರಲಾರಂಭಿಸಿದಾಗ ಕತ್ತರಿಸಿಟ್ಟ ಬಾಳೆಹಣ್ಣಿನ ಸಿಪ್ಪೆ ಸೇರಿಸಿ, ನೀರು ಹಾಕಿ, ನಂತರ ಕಡಿಮೆ ಉರಿಯಲ್ಲಿ 20-25 ನಿಮಿಷ ಬೇಯಿಸಿ.
- ನಂತರ ಟೇಸ್ಟ್ ಮಾಡಿ ನೋಡಿ ರಚಿ ಸೂಪರ್ ಆಗಿರುತ್ತದೆ.
ಬಾಳೆಹಣ್ಣಿನ ಸಿಪ್ಪೆಯಲ್ಲಿದೆ ಇಷ್ಟೆಲ್ಲಾ ಪ್ರಯೋಜನಗಳು
- ಕ್ಯಾನ್ಸರ್ ಕಣಗಳು ಉಂಟಾಗುವುದನ್ನು ತಡೆಗಟ್ಟುತ್ತದೆ:
- ಬಾಳೆಹಣ್ಣಿನ ಸಿಪ್ಪೆಯಲ್ಲಿ ಕ್ಯಾನ್ಸರ್ ಕಣಗಳ ಉತ್ಪತ್ತಿಯನ್ನು ತಡೆಗಟ್ಟುವ ಗುಣವಿದೆ. .
- ಖಿನ್ನತೆಯನ್ನು ದೂರ ಮಾಡುತ್ತದೆ
- ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಇರುವುದರಿಂದ ಖಿನ್ನತೆಯನ್ನು ದೂರ ಮಾಡುವ ಗುಣವಿದೆ, ಅಲ್ಲದೆ ವಿಟಮಿನ್ ಬಿ6 ಕಣ್ಣಿಗೆ ಳ್ಳೆಯ ನಿದ್ದೆಯನ್ನು ನೀಡುತ್ತದೆ. ಹೀಗಾಗಿ ನಿದ್ರಾಹೀನತೆ ಸಮಸ್ಯೆ ಇರುವವರಿಗೂ ತುಂಬಾನೇ ಒಳ್ಳೆಯದು.
- ಮೊಡವೆ ಸಮಸ್ಯೆ ಕಡಿಮೆ ಮಾಡುತ್ತದೆ, ತ್ವಚೆ ಆರೋಗ್ಯ ವೃದ್ಧಿಸುತ್ತದೆ
- ಬಾಳೆಹಣ್ಣಿನ ಸಿಪ್ಪೆ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು, ಇದು ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ. ಸಿಪ್ಪೆಯಿಂದ ಮುಖವನ್ನು ಸ್ಕ್ರಬ್ ಮಾಡಿದರೆ ಫೇಶಿಯಲ್ ಮಾಡಿದಂತೆ ಮುಖ ಫಳ ಫಳ ಹೊಳೆಯುತ್ತದೆ.
- ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ:
- ಬಾಳೆಹಣ್ಣಿನ ಸಿಪ್ಪೆ ಸೇವನೆಯಿಂದ ಕಡಿಮೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ಹೃದಯ ಸಂಬಮಧಿ ಸಮಸ್ಯೆಯನ್ನು ತಡೆಗಟ್ಟುತ್ತದೆ.
- ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು
- ಕಣ್ಣುಗಳು ಒಣಗುವುದು, ಕಣ್ಣುಗಳಲ್ಲಿ ಊತ ಈ ಬಗೆಯ ಮಸ್ಯೆ ತಡೆಗಟ್ಟುತ್ತದೆ.
- ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ
- ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಲೆಯದು, ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ.
Comments
[ of 5 - Users]
Story first published: Sunday, September 22, 2024, 17:30 [IST]
Other articles published on Sep 22, 2024



Click it and Unblock the Notifications