Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕಾರ್ನ್ಫ್ಲೋರ್ ಹಾಕದೆ ಮಾಡಿ ಬಾಳೆಹಣ್ಣಿನ ಹಲ್ವಾ: ಮೂರೇ ಮೂರು ಸಾಮಗ್ರಿ ಸಾಕು
ಬಾಳೆಹಣ್ಣು ತುಂಬಾ ಹಣ್ಣಾದರೆ ಕೆಲವರಿಗೆ ತಿನ್ನಲು ಇಷ್ಟ ಆಗಲ್ಲ, ಅದನ್ನು ಬಿಸಾಡುವ ಬದಲಿಗೆ ರುಚಿಯಾದ ಹಲ್ವಾ ಮಾಡಿ ತಿನ್ನಬಹುದು. ಇನ್ನೂ ಮಕ್ಕಳಿಗೆ ಈ ಹಲ್ವಾ ಮಾಡಿ ಕೊಟ್ಟರೆ ತುಂಬಾನೇ ರುಚಿಯಾಗಿರುತ್ತದೆ. ಇನ್ನು ಇದನ್ನು ಮಾಡಲು ಕೂಡ ಹೆಚ್ಚು ಸಮಯ ಬೇಕಾಗಿಲ್ಲ, ಕಾರ್ನ್ಪ್ಲೋರ್ ಇಲ್ಲದೆ ಕೂಡ ರುಚಿಯಾದ ಹಲ್ವಾ ಮಾಡಬಹುದು.
ಸೂಚನೆ: ಬೆಲ್ಲ ಹೆಚ್ಚಾಗಿ ಬಳಸಬೇಡಿ. ಹೆಚ್ಚು ಬೆಲ್ಲ ಬಳಸಿದರೆ ತುಂಬಾನೇ ಗಟ್ಟಿಯಾಗುವುದು.

ಬಾಳೆಹಣ್ಣಿನ ಹಲ್ವಾ ಮಾಡಲು ಬೇಕಾಗುವ ಸಾಮಗ್ರಿ
ಬಾಳೆಹಣ್ಣು 1/2 ಕೆಜಿ
ಬೆಲ್ಲ ಅರ್ಧ ಕೆಜಿ
ತುಪ್ಪ 2 ಚಮಚ
ಅಲಂಕಾರಕ್ಕೆ ಡ್ರೈ ಫ್ರೂಟ್ಸ್ (Optional)
ಹಲ್ವಾ ಮಾಡುವ ವಿಧಾನ
ಬಾಳಹಣ್ಣಿನ ಸಿಪ್ಪೆ ಸುಲಿದು, ಚಿಕ್ಕದಾಗಿ ಕತ್ತರಿಸಿ ನಂತರ ಮಿಕ್ಸಿಯಲ್ಲಿ ಪೇಸ್ಟ್
ಮಾಡಿ, ನೀರು ಹಾಕಬೇಡಿ
ಇದೇ ಸಮಯದಲ್ಲಿ ಬೆಲ್ಲ ಕರಗಲು ಇಡಿ
ಈಗ ನೀವು ಬಾಣಲೆಗೆ ತುಪ್ಪ ಹಾಕಿ ಬಾಳೆಹಣ್ನು ಪೇಸ್ಟ್ ಹಾಕಿ ಕಾಯಿಸಿ, ಸೌಟ್ನಿಂದ
ಆಡಿಸುತ್ತಾಲೇ ಇರಬೇಕು
ಈಗ ಬೆಲ್ಲ ಪಾಕ ಸೇರಿಸಿ ಮಿಕ್ಸ್ ಮಾಡಿ
ನಂತರ ಮಿಶ್ರಣ ಗಟ್ಟಿಯಾಗುವವರೆಗೆ ಬಿಸಿ ಮಾಡುತ್ತಲೇ ಇಡಿ.
ಮಿಶ್ರಣ ಗಟ್ಟಿಯಾದಾಗ ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಅದರಲ್ಲಿ ಗಟ್ಟಿಯಾದ
ಬಾಳೆಹಣ್ಣು-ಬೆಲ್ಲದ ಮಿಶ್ರಣ ಹಾಕಿ, ಅದರ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ, 30
ನಿಮಿಷ ಬಿಡಿ.
ನೀವು ಡ್ರೈ ಫ್ರೂಟ್ಸ್ ಹಾಕುವಾಗ ಮಿಶ್ರಣ ಸ್ವಲ್ಪ ಸುರಿದು ನಂತರ ಡ್ರೈ ಫ್ರೂಟ್ಸ್ ಹಾಕಿ, ನಂತರ ಮೇಲ್ಬಾಗದಲ್ಲಿ ಟಾಪಿಂಗ್ ಮಾಡಿದರೆ ತಿನ್ನುವಾಗ ಆ ಡ್ರೈ ಫ್ರೂಟ್ಸ್ ಬಾಯಿಗೆ ಸಿಕ್ಕಾಗ ಹಲ್ವಾ ಇನ್ನೂ ರುಚಿಯಾಗಿರುತ್ತದೆ.
ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು
ಬಾಳೆಹಣ್ಣಿನಲ್ಲಿ ನಾರಿನಂಶ ಅಧಿಕವಿರುತ್ತದೆ: ಬಾಳೆ ಹಣ್ಣಿನಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಬಾಳೆಹಣ್ಣಿನಲ್ಲಿ ಪೊಟಾಷ್ಯಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ. ಪೊಟಾಷ್ಯಿಯಂ ಮೂತ್ರದ ಮೂಲಕ ಅತ್ಯಧಿಕ ಸೋಡಿಯಂ ಅಂಶವನ್ನು ದೇಹದಿಂದ ಹೊರ ಹಾಕಲು ಸಹಕಾರಿ.
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
ಬಾಳೆಹಣ್ಣಿನಲ್ಲಿ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬಾಳೆಹಣ್ಣು ತಿಂದರೆ ಒಳ್ಳೆಯದು.
ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ
ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6, ಪೊಟಾಷ್ಯಿಯಂ ಈ ಬಗೆಯ ಪೋಷಕಾಂಶಗಳು ದೇಹಕ್ಕೆ
ಶಕ್ತಿಯನ್ನು ತುಂಬಲು ಸಹಕಾರಿ. ಇದರಿಂದ ಹಲ್ವಾ ಮಾಡಿ ಒಂದು ಪೀಸ್ ತಿಂದರೆ ಸಾಕು
ದೇಹಕ್ಕೆ ಶಕ್ತಿ ದೊರೆಯುವುದು.



Click it and Unblock the Notifications