Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Navaratri Recipe: ದಸರಾ ಹಬ್ಬಕ್ಕೆ ಬಾದಾಮ್ ಪುರಿ ರೆಸಿಪಿ
ಸಿಹಿ ತಿಂಡಿ ಯಾರಿಗೆ ತಾನೇ ಇಷ್ಟ ಇಲ್ಲ, ಎಂಥಾ ಖಾರದ ತಿಂಡಿ ಪ್ರಿಯರು ಕೂಡ ಆಗಾಗ್ಗೆ ಸಿಹಿ ತಿಂಡಿಯನ್ನು ಬಯಸುತ್ತಾರೆ. ಇನ್ನು ಹಬ್ಬದ ಸಮಯಗಳಲ್ಲಂತೂ ಮನೆಯಲ್ಲಿ ಸಿಹಿ ಖಾದ್ಯ ಮಾಡಲೇಬೇಕು. ಹಬ್ಬದ ಊಟದ ರುಚಿ ಹೆಚ್ಚಿಸುವುದೇ ಸಿಹಿ ಖಾದ್ಯಗಳು.

ಇನ್ನೇನು ನವರಾತ್ರಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ, ಒಂಬತ್ತು ದಿನ ನಿತ್ಯ
ಸಿಹಿಖಾದ್ಯಗಳ ನೈವೇದ್ಯ ದೇವರಿಗೆ ಅರ್ಪಿಸುವುದು ವಾಡಿಕೆ. ಅಂತೆಯೇ ಈಗಾಗಲೇ ನಾವು
ಸರಣಿಯಾಗಿ ಸಿಂಪಲ್ ಆಗಿ ತಯಾರಿಸಬಹುದಾದ ಸಿಹಿ ಖಾದ್ಯಗಳನ್ನು ನೀಡುತ್ತಿದ್ದೇವೆ.
ಇದು ಬಹುಜನರ ನೆಚ್ಚಿನ ತಿಂಡಿ ಬಾದಾಮ್ ಪುರಿ ಮಾಡುವ ವಿಧಾನವನ್ನು
ತಿಳಿಸಿಕೊಡಲಿದ್ದೇವೆ.
ಗರಿಗರಿಯಾದ ಹೊರ ಪದರ ಮತ್ತು ಒಳಗಿನ ಮೃದುವಾದ ಸಕ್ಕರೆ ನೆನೆಸಿದ ಸಿರಪ್ ಆಹಾ
ಕೇಳುತ್ತಲೇ ಬಾಯಲ್ಲಿ ನೀರು ತರಿಸುವ ತಿಂಡಿ ಬಾದಾಮ್ ಪುರಿ. ಮನೆಯಲ್ಲೇ ಹೇಗೆ
ರುಚಿಯಾಗಿ ಬಿಸಿಬಿಸಿ ಬಾದಾಮ್ ಪುರಿ ತಯಾರಿಸಬಹುದು ಬನ್ನಿ ನೋಡೋಣ:
Recipe By: Kavya
Recipe Type: Sweet
Serves: 10
-
ಬೇಕಾಗುವ ಸಾಮಾಗ್ರಿಗಳು
1. ಮೈದಾ ಹಿಟ್ಟು - 1 ಕಪ್
2. ಸಕ್ಕರೆ - ಒಂದು ಕಪ್
3. ತುಪ್ಪ - 1/4 ಕಪ್
4. ಒಣ ತೆಂಗಿನಕಾಯಿ - ಒಂದು ಕಪ್
5. ಎಣ್ಣೆ
6. ಅಕ್ಕಿ ಹಿಟ್ಟು - 2 ಚಮಚ
7. ನೀರು - 1 ಕಪ್
8. ಉಪ್ಪು - ರುಚಿಗೆ
9. ಏಲಕ್ಕಿ ಪುಡಿ - 1 ಚಮಚ
10. ಲವಂಗ - 8-10
-
ತಯಾರಿಸುವ ವಿಧಾನ
1. ಒಂದು ಬಟ್ಟಲು ತೆಗೆದುಕೊಳ್ಳಿ ಅದಕ್ಕೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ತುಪ್ಪ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
3. ನೀರನ್ನು ಸ್ವಲ್ಪಮಟ್ಟಿಗೆ ಸೇರಿಸಿ ಮತ್ತು ಮೃದುವಾದ ಹಿಟ್ಟಿನಲ್ಲಿ ಬೆರೆಸಿಕೊಳ್ಳಿ.
4. ಹಿಟ್ಟನ್ನು 10 ನಿಮಿಷಗಳ ಕಾಲ ಹಾಗೇ ಇಡಿ.
5. ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸಕ್ಕರೆ ಮತ್ತು ನೀರು ಸೇರಿಸಿ.
6. ಪಾಕದಲ್ಲಿ ಸಕ್ಕರೆ ಕರಗುವ ತನಕ ನೀರನ್ನು ಬೆರೆಸಿ ಒಂದು ಎಳೆ ಪಾಕ ಸಿದ್ಧ ಮಾಡಿಕೊಳ್ಳಿ.
7. ಪಾಕಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ತಣ್ಣಗಾಗಲು ಬಿಡಿ.
8. ಹಿಟ್ಟನ್ನು ಸಣ್ಣ ಭಾಗಗಳಾಗಿ ಮಾಡಿ ಚೆಂಡುಗಳಾಗಿ ಸುತ್ತಿಕೊಳ್ಳಿ.
9. ಹಿಟ್ಟನ್ನು ಚಪಾತಿ ರೀತಿ ಹೊಸೆದು ಅವುಗಳನ್ನು ತ್ರಿಕೋನದ ರೀತಿ ಸುತ್ತಿಕೊಳ್ಳಿ ಮತ್ತು ಪೂರಿಯ ಎಲ್ಲಾ ಪದರಗಳನ್ನು ಸುರಕ್ಷಿತಗೊಳಿಸಲು ಲವಂಗವನ್ನು ಪಿನ್ ಮಾಡಿ.
10. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ನಿಧಾನವಾಗಿ ಒಂದೊಂದೆ ಬಾದಾಮ್ ಪುರಿಯನ್ನು ಎಣ್ಣೆಗೆ ಬಿಟ್ಟು ಡೀಪ್ ಫ್ರೈ ಮಾಡಿ.
11. ಗರಿಗರಿಯಾದ ಬಾದಾಮ್ ಪುರಿಯನ್ನು ಸಕ್ಕರೆ ಪಾಕದಲ್ಲಿ ಹಾಕಿ 2 ನಿಮಿಷದ ನಂತರ ತೆಗೆಯಿರಿ.
12. ಕೂಡಲೇ ಬಾದಾಮ್ ಪುರಿ ಮೇಲೆ ತುರಿದ ತೆಂಗಿನಕಾಯಿಂದ ಅಲಂಕರಿಸಿ.
- 1. ಸಿರಪ್ ಅನ್ನು ವೇಗವಾಗಿ ಮಾಡಲು, ಪ್ಯಾನ್ ಅನ್ನು ಪೂರ್ವಭಾವಿಯಾಗಿ ಕಾಯಿಸಿ ಮತ್ತು ನೀವು ಬಯಸಿದ ಪಾಕದ ಎಳೆ ಪಡೆಯುವವರೆಗೆ ಬೆರೆಸಿ. 2. ಪಾಕದಲ್ಲಿ ಬಾದಾಮ್ ಪುರಿಯನ್ನು ಹಾಕಿದ ಕೂಡಲೇ ತ್ವರಿತವಾಗಿ ದಪ್ಪವಾಗುವುದು. ಆದ್ದರಿಂದ ಪಾಕ ತಣ್ಣಗಾಗಲು ಬಿಡಿ.
- ಕ್ಯಾಲೋರಿಗಳು - - 140 ಕ್ಯಾಲೊರಿ



Click it and Unblock the Notifications