Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಶಬರಿಮಲೆಯಲ್ಲಿ ದೊರೆಯುವ ಅರವಣ ಪಾಯಸವನ್ನು ನಾವೂ ತಯಾರಿಸಬಹುದೇ?
ಸ್ವಾಮಿಯೇ ಶರಣಂ ಅಯ್ಯಪ್ಪ.... ಶಬರಿಮಲೆಗೆ ಹೋಗಿ ಬರುವವರು ಅಲ್ಲಿಯ ಪ್ರಸಾದವನ್ನು ತರುತ್ತಾರೆ, ಬೆಲ್ಲದಿಂದ ಮಾಡುವ ಆ ಪಾಯಸದ ರುಚಿ ಅದ್ಭುತವಾಗಿರುತ್ತದೆ, ಒಂದು ಚಮಚ ಪಾಯಸ ತಿಂದರೆ ಸಾಕು ಒಂದು ಬೌಲ್ ಪಾಯಸ ಕುಡಿದ ತೃಪ್ತಿ ಸಿಗುವುದು. ಈಗ ಮಲೆಗೆ ಮಾಲೆ ಹಾಕಿದ ಸ್ವಾಮಿಗಳು ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ, ಹೀಗೆ ತೆರಳುವಾಗ ಒಂದಿಷ್ಟು ಜನರಿಗೆ ಅನ್ನದಾನ ಮಾಡಿ ಹೋಗುತ್ತಾರೆ, ಅಯ್ಯಪ್ಪಸ್ವಾಮಿ ಪೂಜೆಯಲ್ಲಿ ಅರವಣ ಪಾಯಸದಷ್ಟೇ ರುಚಿಯಾದ ಪಾಯಸ ಮಾಡಬಯಸುವುದಾದರೆ ಇಲ್ಲಿದೆ ರೆಸಿಪಿ:

ಬೇಕಾಗುವ ಸಾಮಗ್ರಿ
1/4 ಕಪ್ ಮಟ್ಟಾ ರೈಸ್
1/4 ಕಪ್ ತುಪ್ಪ
3/4 ಕಪ್ ಓಲೆ ಬೆಲ್ಲ
2 ಕಪ್ ನೀರು
1.5 ಕಪ್ ತುಪ್ಪ
2 ಚಮಚ ತೆಂಗಿನಕಾಯಿ ಚೂರುಗಳು
1/4 ಚಮಚ ಶುಂಠಿ ಪುಡಿ
3-4 ಏಲಕ್ಕಿ
ಮಾಡುವ ವಿಧಾನ
* ದಪ್ಪ ತಳವಿರುವ ತಾಮ್ರದ ಕಡಾಯಿಯನ್ನು ಬಿಸಿ ಮಾಡಿ, ಮೀಡಿಯಂ ಉರಿಯಲ್ಲಿಟ್ಟು 1/4
ಕಪ್ ತುಪ್ಪ ಹಾಕಿ.
* ಈಗ ತೆಂಗಿನಕಾಯಿ ಹಾಕಿ ಅದರ ಬಣ್ಣ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ
ಮಾಡಿ
* ನಂತರ ಫ್ರೈ ಮಾಡಿದ ತೆಂಗಿನಕಾಯಿಯನ್ನು ಸೌಟ್‌ನಿಂದ ತೆಗೆದು ಒಂದು ತಟ್ಟೆಯಲ್ಲಿ
ಇಡಿ.
* ನಂತರ ಅದೇ ತುಪ್ಪದಲ್ಲಿ ಮಟ್ಟಾ ರೈಸ್ ಹಾಕಿ 5 ನಿಮಿಷ ಫ್ರೈ ಮಾಡಿ.
* ನಂತರ 2 ಕಪ್ ನೀರು ಹಾಕಿ ಪಾತ್ರೆಯ ಬಾಯಿಯನ್ನು ಮುಚ್ಚಳದಿಂದ ಮುಚ್ಚಿ
ಬೇಯಿಸಿ.
* ನಂತರ ಬೆಲ್ಲವನ್ನು ತುರಿದು ಸೇರಿಸಿ.
* 3-4 ಏಲಕ್ಕಿಯನ್ನು ಕೈಯಿಂದಲೇ ಹಿಸುಕಿ ಹಾಕಿ, ಶುಂಠಿ ಪುಡಿ ಸೇರಿಸಿ.
* ಅಕ್ಕಿ ಬೆಂದ ರೀತಿಯಲ್ಲಿ ಅನಿಸಿದಾಗ ಉರಿ ಆಫ್ ಮಾಡಿ.
* ನಂತರ ಫ್ರೈ ಮಾಡಿದ ತೆಂಗಿನಕಾಯಿ ಪೀಸ್ ಹಾಕಿ.
ತಯಾರಿಸಿದ ಪಾಯಸವನ್ನು ದೇವರಿಗೆ ನೈವೇದ್ಯ ಅರ್ಪಿಸಿ.
ಮಟ್ಟಾ ರೈಸ್ ಬಿಟ್ಟು ಯಾವ ಅಕ್ಕಿ ಬಳಸಬಹುದು?
* ಕೆಂಪು ಕುಚಲಕ್ಕಿ ಬಳಸಬಹುದು, ಆದರೆ ಬೆಂದಾಗ ಸ್ವಲ್ಪ ಗಟ್ಟಿಯಾಗಿರಬೇಕು
* ಪಾಯಸ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ಫ್ರೈ ಮಾಡಬೇಕು.
* ಈ ಪಾಯಸ ಮಾಡುವಾಗ ಹಾಲು ಬಳಸುವುದಿಲ್ಲ.
* ಈ ಪಾಯಸ ಮಾಡಲು ನೀವು ಓಲೆ ಬೆಲ್ಲವನ್ನೇ ಬಳಸಬೇಕು.
* ಒಣ ಶುಂಠಿ ಪುಡಿ ಬಳಸಲೇಬೇಕು.
* ಈ ಪಾಯಸವನ್ನು ನೀವು ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ ತುಂಬಾ ಸಮಯ
ಬಳಸಬಹುದು, ಫ್ರಿಡ್ಜ್‌ನಲ್ಲಿ ಇಡಬೇಡಿ.



Click it and Unblock the Notifications
