For Quick Alerts
ALLOW NOTIFICATIONS  
For Daily Alerts

ಶ್ರಾವಣ ರೆಸಿಪಿ: ಗೋಧಿ ಹಿಟ್ಟಿನ ತುಪ್ಪದ ಲಡ್ಡು

|

ಶ್ರಾವಣ ಮಾಸದ ಹಬ್ಬಗಳ ಸಲು ಅರಂಭವಾಗಿದೆ. ಹಬ್ಬದ ದಿನ ಬಗೆಬಗೆಯಾದ ಸಿಹಿ ತಿಂಡಿಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿಬೇಕು. ಸಿಹಿ ತಿಂಡಿಗಳು ರುಚಿಯ ಜತೆಗೆ ಆರೋಗ್ಯದ ಕಾಳಜಿಯಿಂದಲೂ ತಯಾರಿಸಬೇಕು ಎಂಬುದು ಮುಖ್ಯವಾಗುತ್ತದೆ.


ಹಬ್ಬದ ದಿನ ನೈವೇದ್ಯಕ್ಕೆ ಇಡಲು ಆರೋಗ್ಯಕರ ಹಾಗೂ ರುಚಿಯಾದ ಸಿಹಿ ಖಾದ್ಯ ಗೋಧಿಹಿಟ್ಟಿನ ಲಡ್ಡು ತಯಾರಿಸುವ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ:
Atta Ladoo Recipe/ಗೋಧಿ ಹಿಟ್ಟಿನ ತುಪ್ಪದ ಲಡ್ಡು
Atta Ladoo Recipe/ಗೋಧಿ ಹಿಟ್ಟಿನ ತುಪ್ಪದ ಲಡ್ಡು
Prep Time
10 Mins
Cook Time
20M
Total Time
30 Mins

Recipe By: Boldsky

Recipe Type: Sweet

Serves: 4

Ingredients
  • ಬೇಕಾಗುವ ಪದಾರ್ಥಗಳು

    ಗೋಧಿ ಹಿಟ್ಟು- 1 ಕಪ್

    ತುಪ್ಪ - ½ ಕಪ್

    ನೀರು - 3 ಚಮಚ

    ತೆಂಗಿನ ತುರಿ- ¼ ಕಪ್

    ಬಾದಾಮಿ - ¼ ಚಮಚ

    ಗೋಡಂಬಿ - ¼ ಚಮಚ

    ಒಣದ್ರಾಕ್ಷಿ - 8-10

    ಪಿಸ್ತಾ - ¼ ಚಮಚ

    ಏಲಕ್ಕಿ ಪುಡಿ - ¼ ಚಮಚ

    ಸಕ್ಕರೆ ಪುಡಿ - ¾ ಕಪ್

Red Rice Kanda Poha
How to Prepare
  • ತಯಾರಿಸುವ ವಿಧಾನ

    1. ಮಿಕ್ಸಿಂಗ್ ಬೌಲ್‌ನಲ್ಲಿ ಗೋಧಿ ಹಿಟ್ಟು ತುಪ್ಪ ಸೇರಿಸಿ.

    2. ಮಿಶ್ರಣಕ್ಕೆ ಬೆಚ್ಚಗಿನ ನೀರನ್ನು ಸೇರಿಸಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ.

    3. ಅಂಗೈಯಲ್ಲಿ ಹಿಡಿದಾಗ ಮಿಶ್ರಣ ಒಟ್ಟಿಗೆ ಅಂಟಿಕೊಳ್ಳಬೇಕು.

    4. ಮಿಶ್ರಣವನ್ನು ಜರಡಿಯಲ್ಲಿ ಸುರಿದು ಜರಡಿ ಮಾಡಿ.

    5. ಬಿಸಿ ಮಾಡಿದ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಸೇರಿಸಿ ಜರಡಿ ಮಾಡಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    6. ತಳ ಕಟ್ಟುವುದನ್ನು ತಪ್ಪಿಸಲು ನಿರಂತರವಾಗಿ ಮಿಶ್ರಣ ಮಾಡುತ್ತಲೇ ಇರಿ.

    7. 8-10 ನಿಮಿಷಗಳ ಕಾಲ ಹುರಿಯಿರಿ.

    8. ನಂತರ ತೆಂಗಿನ ಪುಡಿ ಸೇರಿಸಿ.

    9. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಟವ್ ಆಫ್ ಮಾಡಿ.

    10. ಕತ್ತರಿಸಿದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಪಿಸ್ತಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    11. ಏಲಕ್ಕಿ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.

    12. ಪುಡಿ ಮಾಡಿದ ಸಕ್ಕರೆಯನ್ನು ಸೇರಿಸಿ ಕೈಬಳಸಿ ಚೆನ್ನಾಗಿ ಮಿಶ್ರಣ ಮಾಡಿ.

    13. ಅವುಗಳನ್ನು ಸಣ್ಣ ಲಡ್ಡುಗಳಾಗಿ ಮಾಡಿ ನೈವೇದ್ಯಕ್ಕೆ ಇಡಿ.

Instructions
  • ಗೋಧಿ ಹಿಟ್ಟಿನ ಲಡ್ಡು ರುಚಿ ಹೆಚ್ಚಿಸಲು ನೀರಿನ ಬದಲು ಹಾಲನ್ನು ಸಹ ಬಳಸಬಹುದು. ಸಕ್ಕರೆ ಬೇಡ ಎಂದಾದರೆ ಬೆಲ್ಲದ ಪುಡಿಯನ್ನು ಸಹ ಬಳಸಬಹುದು.
Nutritional Information
  • ಕ್ಯಾಲೋರಿಗಳು - - 296 ಗ್ರಾಂ
  • ಕೊಬ್ಬು - - 5.5 ಗ್ರಾಂ
  • ಪ್ರೋಟೀನ್ - - 5 ಗ್ರಾಂ
  • ಕಾರ್ಬೋಹೈಡ್ರೇಟ್ಗಳು - - 56 ಗ್ರಾಂ
  • ಸಕ್ಕರೆ - - 28 ಗ್ರಾಂ
[ 4.5 of 5 - 78 Users]
Story first published: Friday, August 13, 2021, 10:30 [IST]
X