Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರಾವಣ ರೆಸಿಪಿ: ಗೋಧಿ ಹಿಟ್ಟಿನ ತುಪ್ಪದ ಲಡ್ಡು
ಶ್ರಾವಣ ಮಾಸದ ಹಬ್ಬಗಳ ಸಲು ಅರಂಭವಾಗಿದೆ. ಹಬ್ಬದ ದಿನ ಬಗೆಬಗೆಯಾದ ಸಿಹಿ ತಿಂಡಿಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿಬೇಕು. ಸಿಹಿ ತಿಂಡಿಗಳು ರುಚಿಯ ಜತೆಗೆ ಆರೋಗ್ಯದ ಕಾಳಜಿಯಿಂದಲೂ ತಯಾರಿಸಬೇಕು ಎಂಬುದು ಮುಖ್ಯವಾಗುತ್ತದೆ.

ಹಬ್ಬದ ದಿನ ನೈವೇದ್ಯಕ್ಕೆ ಇಡಲು ಆರೋಗ್ಯಕರ ಹಾಗೂ ರುಚಿಯಾದ ಸಿಹಿ ಖಾದ್ಯ ಗೋಧಿಹಿಟ್ಟಿನ ಲಡ್ಡು ತಯಾರಿಸುವ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ:
Recipe By: Boldsky
Recipe Type: Sweet
Serves: 4
-
ಬೇಕಾಗುವ ಪದಾರ್ಥಗಳು
ಗೋಧಿ ಹಿಟ್ಟು- 1 ಕಪ್
ತುಪ್ಪ - ½ ಕಪ್
ನೀರು - 3 ಚಮಚ
ತೆಂಗಿನ ತುರಿ- ¼ ಕಪ್
ಬಾದಾಮಿ - ¼ ಚಮಚ
ಗೋಡಂಬಿ - ¼ ಚಮಚ
ಒಣದ್ರಾಕ್ಷಿ - 8-10
ಪಿಸ್ತಾ - ¼ ಚಮಚ
ಏಲಕ್ಕಿ ಪುಡಿ - ¼ ಚಮಚ
ಸಕ್ಕರೆ ಪುಡಿ - ¾ ಕಪ್
-
ತಯಾರಿಸುವ ವಿಧಾನ
1. ಮಿಕ್ಸಿಂಗ್ ಬೌಲ್‌ನಲ್ಲಿ ಗೋಧಿ ಹಿಟ್ಟು ತುಪ್ಪ ಸೇರಿಸಿ.
2. ಮಿಶ್ರಣಕ್ಕೆ ಬೆಚ್ಚಗಿನ ನೀರನ್ನು ಸೇರಿಸಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ.
3. ಅಂಗೈಯಲ್ಲಿ ಹಿಡಿದಾಗ ಮಿಶ್ರಣ ಒಟ್ಟಿಗೆ ಅಂಟಿಕೊಳ್ಳಬೇಕು.
4. ಮಿಶ್ರಣವನ್ನು ಜರಡಿಯಲ್ಲಿ ಸುರಿದು ಜರಡಿ ಮಾಡಿ.
5. ಬಿಸಿ ಮಾಡಿದ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಸೇರಿಸಿ ಜರಡಿ ಮಾಡಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
6. ತಳ ಕಟ್ಟುವುದನ್ನು ತಪ್ಪಿಸಲು ನಿರಂತರವಾಗಿ ಮಿಶ್ರಣ ಮಾಡುತ್ತಲೇ ಇರಿ.
7. 8-10 ನಿಮಿಷಗಳ ಕಾಲ ಹುರಿಯಿರಿ.
8. ನಂತರ ತೆಂಗಿನ ಪುಡಿ ಸೇರಿಸಿ.
9. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಟವ್ ಆಫ್ ಮಾಡಿ.
10. ಕತ್ತರಿಸಿದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಪಿಸ್ತಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
11. ಏಲಕ್ಕಿ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
12. ಪುಡಿ ಮಾಡಿದ ಸಕ್ಕರೆಯನ್ನು ಸೇರಿಸಿ ಕೈಬಳಸಿ ಚೆನ್ನಾಗಿ ಮಿಶ್ರಣ ಮಾಡಿ.
13. ಅವುಗಳನ್ನು ಸಣ್ಣ ಲಡ್ಡುಗಳಾಗಿ ಮಾಡಿ ನೈವೇದ್ಯಕ್ಕೆ ಇಡಿ.
- ಗೋಧಿ ಹಿಟ್ಟಿನ ಲಡ್ಡು ರುಚಿ ಹೆಚ್ಚಿಸಲು ನೀರಿನ ಬದಲು ಹಾಲನ್ನು ಸಹ ಬಳಸಬಹುದು. ಸಕ್ಕರೆ ಬೇಡ ಎಂದಾದರೆ ಬೆಲ್ಲದ ಪುಡಿಯನ್ನು ಸಹ ಬಳಸಬಹುದು.
- ಕ್ಯಾಲೋರಿಗಳು - - 296 ಗ್ರಾಂ
- ಕೊಬ್ಬು - - 5.5 ಗ್ರಾಂ
- ಪ್ರೋಟೀನ್ - - 5 ಗ್ರಾಂ
- ಕಾರ್ಬೋಹೈಡ್ರೇಟ್ಗಳು - - 56 ಗ್ರಾಂ
- ಸಕ್ಕರೆ - - 28 ಗ್ರಾಂ



Click it and Unblock the Notifications