For Quick Alerts
ALLOW NOTIFICATIONS  
For Daily Alerts

ಅಂಜಲ್ ಮೀನಿನ ತವಾ ಫ್ರೈ ರೆಸಿಪಿ

Posted By:
|

ಇಲ್ಲಿ ನಾವು ಅಂಜಲ್‌ ಮೀನಿನ ಫ್ರೈ ಮಾಡುವುದು ಹೇಗೆ ಎಂಬ ತುಂಬಾ ಸರಳವಾದ ರೆಸಿಪಿ ನೀಡಿದ್ದೇವೆ. ಈ ಮೀನು ರುಚಿಯಲ್ಲಿ ಸೂಪರ್‌ ಆಗಿರುತ್ತದೆ ಹಾಗೂ ಹೆಚ್ಚು ಮುಳ್ಳು ಇಲ್ಲದ ಕಾರಣ ತಿನ್ನಲು ಕೂಡ ಸುಲಭ. ಮೀನಿನ ಫ್ರೈ ಮಾಡಲು ಹೆಚ್ಚಿನ ಮಸಾಲೆ ಪದಾರ್ಥಗಳು ಬೇಕಾಗಿಲ್ಲ, ಖಾರದ ಪುಡಿ, ಉಪ್ಪು, ಅರಿಶಿಣ, ಹುಣಸೆ ಹಣ್ಣು ಇಷ್ಟು ಪ್ರಮುಖವಾದ ಸಾಮಗ್ರಿ ಇದ್ದರೆ ಸಾಕು ನೀವು ರುಚಿ ರುಚಿಯಾದ ಮೀನಿನ ಫ್ರೈ ಮಾಡಬಹುದು.

ಅಂಜಲ್‌ ಮೀನಿನ ಫ್ರೈ ಹೋಟೆಲ್‌ನಲ್ಲಿ ಕೊಂಡರೆ ಒಂದು ಪೀಸ್‌ಗೆ ಕಡಿಮೆಯೆಂದರೂ 200ರೂ ತೆಗೆದುಕೊಳ್ಳುತ್ತಾರೆ. ಅದೇ ನೀವು ಮನೆಯಲ್ಲಿಯೇ ಮಾಡಿದರೆ ಖರ್ಚು ಕಡಿಮೆ ಹಾಗೂ ಅಷ್ಟೇ ರುಚಿಯಾಗಿ ಮೀನನ್ನು ಸವಿಯಲು ಇಲ್ಲಿದೆ ನೋಡಿ ಸರಳವಾದ ರೆಸಿಪಿ.

Anjal Fish Tava Fry, ಅಂಜಲ್ ಮೀನಿನ ತವಾ ಫ್ರೈ
Anjal Fish Tava Fry, ಅಂಜಲ್ ಮೀನಿನ ತವಾ ಫ್ರೈ
Prep Time
10 Mins
Cook Time
20M
Total Time
30 Mins

Recipe By: Reena TK

Recipe Type: Non Veg

Serves: 4

Ingredients
  • ಬೇಕಾಗುವ ಸಾಮಗ್ರಿ

    * ಅಂಜಲ್‌ ಮೀನು ಅರ್ಧ ಕೆಜಿ

    * ಖಾರದ ಪುಡಿ ಒಂದೂವರೆ ಅಥವಾ ಎರಡು ಚಮಚ

    * ಅರಿಶಿಣ ಪುಡಿ ಅರ್ಧ ಚಮಚ

    * 1/4 ಚಮಚ ಜೀರಿಗೆ ಪುಡಿ

    * ದೊಡ್ಡ ನಿಂಬೆಹಣ್ಣು ಗಾತ್ರದಷ್ಟು ಹುಣಸೆ ಹಣ್ಣು

    * 1 ಚಮಚ ಉಪ್ಪು

    * ಎಣ್ಣೆ 2 ಚಮಚ

Red Rice Kanda Poha
How to Prepare
  • ಮಾಡುವ ವಿಧಾನ:

    * ಅಂಜಲ್‌ ಮೀನನ್ನು ಅರಿಸಿಣ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ.

    * ಹುಣಸೆಹಣ್ಣನ್ನು 1/4 ಕಪ್ ಬಿಸಿ ನೀರಿನಲ್ಲಿ ಹಾಕಿ ಸ್ವಲ್ಪ ಗಟ್ಟಿಯಾಗಿ ಹುಣಸೆ ಹಣ್ಣಿನ ರಸ ಮಾಡಿ.

    * ಅದನ್ನು ತಟ್ಟೆಗೆ ಹಾಕಿ ಆ ರಸಕ್ಕೆ ಅರಿಶಿಣ, ಉಪ್ಪು, ಖಾರದ ಪುಡಿ, 1/4 ಚಮಚ ಜೀರಿಗೆ ಪುಡಿ (ನಿಮ್ಮ ಆಯ್ಕೆಗೆ ಬಿಟ್ಟದ್ದು) ಹಾಕಿ ಹಾಕಿ ಮಿಶ್ರ ಮಾಡಿ ಅದಕ್ಕೆ ಮೀನನ್ನು ಹಾಕಿ ಆ ಪೇಸ್ಟ್‌ ಅನ್ನು ಮೀನಿನ ತುಂಡುಗಳ ಮೇಲೆ ಚೆನ್ನಾಗಿ ಸವರಿ.

    * ಈಗ ಮೀನು ಮಸಾಲೆಯನ್ನು ಚೆನ್ನಾಗಿ ಹೀರಿ ಕೊಳ್ಳಲು ಒಂದು ಅಥವಾ ಎರಡು ತಾಸು ಫ್ರಿಡ್ಜ್‌ನಲ್ಲಿಡಿ.

    * ತವಾ ಬಿಸಿ ಮಾಡಿ ಅದಕ್ಕೆ 2 ಚಮಚ ಎಣ್ಣೆ ಹಾಕಿ ಉರಿ ಕಡಿಮೆ ಮಾಡಿ ಮೀನು ಹಾಕಿ 10 ನಿಮಿಷ ಫ್ರೈ ಮಾಡಿ ನಂತರ ಅದರ ಮತ್ತೊಂದು ಬದಿಯನ್ನು ಕೂಡ 10 ನಿಮಿಷ ಫ್ರೈ ಮಾಡಿದರೆ ಅಂಜಲ್ ಮೀನಿನ ತವಾ ಫ್ರೈ ಮಾಡಿ ನೋಡಿ.

Instructions
  • ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೀನಿನಲ್ಲಿ ವಿಟಮಿನ್ ಡಿ ಹಾಗೂ ಒಮೆಗಾ 3 ಕೊಬ್ಬಿನಂಶವಿದೆ. ಅಂಜಲ್ ಮೀನಿನ ವಿಶೇಷತೆಯೆಂದರೆ ಇದು ರುಚಿಯ ಜೊತೆಗೆ ಮುಳ್ಳು ಕಡಿಮೆ ಇರುವುದರಿಂದ ಮಕ್ಕಳಿಗೂ ಕೂಡ ಕೊಡಬಹುದು.
Nutritional Information
ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೀನಿನಲ್ಲಿ ವಿಟಮಿನ್ ಡಿ ಹಾಗೂ ಒಮೆಗಾ 3 ಕೊಬ್ಬಿನಂಶವಿದೆ. ಅಂಜಲ್ ಮೀನಿನ ವಿಶೇಷತೆಯೆಂದರೆ ಇದು ರುಚಿಯ ಜೊತೆಗೆ ಮುಳ್ಳು ಕಡಿಮೆ ಇರುವುದರಿಂದ ಮಕ್ಕಳಿಗೂ ಕೂಡ ಕೊಡಬಹುದು.
[ 4.5 of 5 - 53 Users]
X