Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಥಟ್ ಅಂತ ಮಾಡಬಹುದು ಆಂಧ್ರ ಶೈಲಿ ಎಗ್ ಕರಿ
ಮಳೆ ಕಾಲದಲ್ಲಿ ಖಾರ, ರುಚಿಯ ಅಡುಗೆಗಳನ್ನು ಬಾಯಿ ಕೇಳುತ್ತದೆ. ಅದಕ್ಕೆ
ಸೂಕ್ತವಾದ ರುಚಿಕರ ಖಾದ್ಯಗಳೆಂದರೆ ಆಂಧ್ರ ಪಾಕಶೈಲಿ. ಆಂಧ್ರ ಪಾಕವಿಧಾನಗಳು ಖಾರಾ
ಹಾಗೂ ಮಸಾಲೆಯುಕ್ತ ಆಹಾರಗಳಿಗೆ ಖ್ಯಾತಿ. ನೀವು ಮಸಾಲೆಯುಕ್ತ ಆಹಾರಗಳನ್ನು
ತಿನ್ನಲು ಬಯಸಿದರೆ ತೆಲುಗು ಶೈಲಿಯ ಪಾಕವಿಧಾನ ಪ್ರಯತ್ನಿಸಿ.
ಇಂದು ನಾವು ವಿಶೇಷ ಆಂಧ್ರ ಶೈಲಿಯಲ್ಲಿ ಸ್ಥಳೀಯವಾಗಿ ಕೋಡಿ ಗುಡ್ಡು ಪುಲುಸು ಎಂದು
ಕರೆಯುವ ಮೊಟ್ಟೆಯ ಕರಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿಕೊಡಲಿದ್ದೇವೆ. ಬಹಳ
ಶೀಘ್ರದಲ್ಲಿ ಮತ್ತು ಸರಳವಾಗಿ ಮಾಡಬಹುದಾದ ರೆಸಿಪಿ ಇದಾಗಿದೆ.

ಬನ್ನಿ, ಆಂಧ್ರ ಶೈಲಿಯ ಎಗ್ ಕರಿ ಅಥವಾ ಕೋಡಿ ಗುಡ್ಡು ಪುಲುಸು ಹೇಗೆ ಮಾಡೋದು ನೋಡೋಣ:
Recipe By: Meghashree
Recipe Type: Non veg
Serves: 4
-
ಬೇಕಾಗುವ ಪದಾರ್ಥಗಳು
ಬೇಯಿಸಿದ ಮೊಟ್ಟೆಗಳು- 3
ಈರುಳ್ಳಿ- 1 (ಕತ್ತರಿಸಿದ)
ಬೆಳ್ಳುಳ್ಳಿ- 2
ಹಸಿರು ಮೆಣಸಿನಕಾಯಿಗಳು - 3-4
ಟೊಮ್ಯಾಟೋಸ್- 2
ಅರಿಶಿನ ಪುಡಿ- 1 ಚಮಚ
ಕೆಂಪು ಮೆಣಸಿನ ಪುಡಿ- 2 ಚಮಚ
ಕೊತ್ತಂಬರಿ ಪುಡಿ- 1 ಚಮಚ
ಹುಣಸೆ ತಿರುಳು- 1/2 ಕಪ್
ಬೆಲ್ಲ- 1 ಚಮಚ
ಉಪ್ಪು- ರುಚಿಗೆ ಅನುಗುಣವಾಗಿ
ಸಾಸಿವೆ- 1 ಚಮಚ
ಜೀರಾ ಬೀಜಗಳು- 1 ಚಮಚ
ಕರಿಬೇವಿನ ಎಲೆಗಳು- 1 ಚಿಗುರು
ತೈಲ- 2 ಚಮಚ
ಕೊತ್ತಂಬರಿ ಸೊಪ್ಪು- 2 ಚಮಚ
-
ಮಾಡುವ ವಿಧಾನ
1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಎಲೆ ಸೇರಿಸಿ ಫ್ರೈ ಮಾಡಿ.
2. ಕತ್ತರಿಸಿದ ಬೆಳ್ಳುಳ್ಳಿ ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ 4-5 ನಿಮಿಷ ಫ್ರೈ ಮಾಡಿ.
3. ನಂತರ ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿ ಸೇರಿಸಿ. 2-3 ನಿಮಿಷ ಬೇಯಿಸಿ.
4. ಕತ್ತರಿಸಿದ ಟೊಮ್ಯಾಟೊ ಮತ್ತು ಹುಣಸೆ ತಿರುಳು ಸೇರಿಸಿ. 3-4 ನಿಮಿಷ ಬೇಯಿಸಿ.
5. ನಂತರ ಬೆಲ್ಲ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಸಾಲೆ 4-5 ನಿಮಿಷ ಬೇಯಲು ಬಿಡಿ.
6. ಈಗ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
7. ನಂತರ, ಗ್ಯಾಸ್ ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
8. ಈಗ ಬೇಯಿಸಿದ ಅನ್ನದೊಂದಿಗೆ ಈ ವಿಶೇಷ ಮೊಟ್ಟೆಯ ಮೇಲೋಗರವನ್ನು ಆನಂದಿಸಿ.
- ಬೇಯಿಸಿದ ಮೊಟ್ಟೆಗಳನ್ನು ಮಸಾಲೆಗೆ ಸೇರಿಸುವ ಮೊದಲು ಚಾಕುವಿನಿಂದ ಕತ್ತರಿಸಿ. ಇದು ಗ್ರೇವಿ ಮೊಟ್ಟೆಗಳ ಒಳಗೆ ಸೇರಲು ಸಹಾಯ ಮಾಡುತ್ತದೆ, ಇದು ಹೆಚ್ಚು ರುಚಿಕರವಾಗಿರುತ್ತದೆ.



Click it and Unblock the Notifications