For Quick Alerts
ALLOW NOTIFICATIONS  
For Daily Alerts

ರೆಸಿಪಿ: ಟೇಸ್ಟಿ ಟೇಸ್ಟಿ ಆಲೂ ಟಿಕ್ಕಿ

Posted By:
|

ಸಂಜೆ ಟೀ ಜೊತೆ ಸವಿಯಲು ರುಚಿಕರವಾದ ಆಲೂ ಟಿಕ್ಕಿ ರೆಸಿಪಿ ನೀಡಲಾಗಿದೆ. ಈ ಆಲೂ ಟಿಕ್ಕಿ ಹೊಟ್ಟೆ ತುಂಬುವುದರ ಜೊತೆಗೆ ರುಚಿಯೂ ಹೆಚ್ಚಿರುತ್ತದೆ. ಈ ಆಲೂ ಟಿಕ್ಕಿ ಮಾಡುವುದು ಬಲು ಸುಲಭ, ಅಲ್ಲದೆ ಮಕ್ಕಳಿಗೆ ನೀಡಬಹುದಾದ ಆರೋಗ್ಯಕರವಾದ ಸ್ನ್ಯಾಕ್ಸ್ ಇದಾಗಿದೆ.

Aloo Tikki Recipe

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Aloo Tikki Recipe, ಆಲೂ ಟಿಕ್ಕಿ ರೆಸಿಪಿ
Aloo Tikki Recipe, ಆಲೂ ಟಿಕ್ಕಿ ರೆಸಿಪಿ
Prep Time
10 Mins
Cook Time
10M
Total Time
20 Mins

Recipe By: Reena TK

Recipe Type: Cutlet

Serves: 4

Ingredients
  • ಬೇಕಾಗುವ ಸಾಮಗ್ರಿ

    4 ಆಲೂಗಡ್ಡೆ

    1-2 ಹಸಿ ಮೆಣಸಿನಕಾಯಿ

    1 ಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್

    1/4 ಚಮಚ ಅರಿಶಿಣ ಪುಡಿ

    1/2 ಖಾರದ ಪುಡಿ

    1/2 ಚಮಚ ಜೀರಿಗೆ ಪುಡಿ

    1/2 ಒಣ ಮಾವಿನ ಪುಡಿ

    ಅರ್ಧ ಚಮಚ ಚಾಟ್ ಮಸಾಲ

    1/2 ಚಮಚ ಪುದೀನಾ

    2 ಚಮಚ ಕೊತ್ತಂಬರಿ ಸೊಪ್ಪು

    2 ಚಮಚ ಜೋಳದ ಹಿಟ್ಟು

    ಎಣ್ಣೆ

Red Rice Kanda Poha
How to Prepare
  • ಮಾಡುವ ವಿಧಾನ

    * ಆಲೂಗಡ್ಡೆಯನ್ನು ತೊಳೆದು ಉಪ್ಪು ಹಾಕಿ ಬೇಯಿಸಿ. ನಂತರ ನೀರನ್ನು ಸೋಸಿ, ಸಿಪ್ಪೆ ಸುಲಿಯಿರಿ.

    * ಅದರಲ್ಲಿ ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ, ಶುಂಠಿ ಪೇಸ್ಟ್, ಅರಿಶಿಣ ಪುಡಿ, ಖಾರದ ಪುಡಿ ಹಾಕಿ.

    * ಅರ್ಧ ಚಮಚ ಜೀರಿಗೆ ಪುಡಿ, 1/2 ಚಮಚ ಆಮ್‌ಚೂರ್ (ಒಣ ಮಾವಿನಕಾಯಿ ಪುಡಿ) 1/2 ಚಮಚ ಚಾಟ್ ಮಸಾಲ, 1/2 ಚಮಚ ಉಪ್ಪು ಹಾಕಿ.

    * ನಂತರ ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರ ಮಾಡಿ.

    * ಈ 2 ಚಮಚ ಜೋಳದ ಹಿಟ್ಟು, ಅಕ್ಕಿ ಹಿಟ್ಟು ಹಾಕಿ ಮಿಶ್ರ ಮಾಡಿ.

    * ಈಗ ಹಿಟ್ಟನ್ನು ಮೃದುವಾಗಿ ಗಟ್ಟಿ.

    * ತವಾ ಬಿಸಿ ಮಾಡಿ ಎಣ್ಣೆ ಹಾಕಿ, ಎರಡೂ ಬದಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

    * ಈಗ ರೆಡಿಯಾದ ಟಿಕ್ಕಿಯನ್ನು ಪುದೀನಾ ಚಟ್ನಿ ಅಥವಾ ಹುಣಸೆಹಣ್ಣಿನ ಚಟ್ನಿ ಅಥವಾ ಕೆಚಪ್ ಜೊತೆ ಸರ್ವ್ ಮಾಡಿ.

Instructions
  • ಆಲೂ ಟಿಕ್ಕಿಗೆ ಬಟಾಣಿ, ಬೀನ್ಸ್, ಕ್ಯಾರೆಟ್ ಕೂಡ ಸೇರಿಸಿದರೆ ರುಚಿ ಹೆಚ್ಚುವುದು.
Nutritional Information
  • ಸರ್ವ್ - 1 ಟಿಕ್ಕಿ
  • ಕ್ಯಾಲೋರಿ - 77 ಕ್ಯಾ
  • ಕೊಬ್ಬು - 1 ಗ್ರಾಂ
  • ಪ್ರೊಟೀನ್ - 1 ಗ್ರಾಂ
  • ಕಾರ್ಬ್ಸ್ - 9 ಗ್ರಾಂ
[ 4.5 of 5 - 23 Users]
X
Desktop Bottom Promotion