Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
WOW: ತುಂಬಾ ಟೇಸ್ಟಿ.. ಕೆಲವೇ ನಿಮಿಷಗಳಲ್ಲಿ ರುಚಿಕರವಾದ 'ಆಲೂ ಕರಿ' ಮಾಡಿ! ಇಲ್ಲಿದೆ ವಿಧಾನ
ಎಂದಾದರೂ ಆಲೂಗಡ್ಡೆ ಬಳಸಿ ಕರಿ ಮಾಡಿದ್ದೀರಾ? ತುಂಬಾ ರುಚಿಕರವಾಗಿರುತ್ತದೆ. ಬೆಳಗ್ಗಿನ ಉಪಾಹಾರಕ್ಕೂ ಸೈ. ಮನೆಗೆ ಅತಿಥಿಗಳು ಬಂದಾಗ ಬಡಿಸುವುದಕ್ಕೂ ಬೆಸ್ಟ್. ಒಮ್ಮೆ ಮಾಡಿ ನೋಡಿ. ಹೌದು, ಸದ್ಯ ಮಳೆಗಾಲ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ರುಚಿಕರವಾದ ಮತ್ತು ರಸಭರಿತವಾದ ಆಲೂಗಡ್ಡೆ ಕರಿ (aloo sabzi) ಮಾಡಬಹುದು. ವಿಶೇಷವೆಂದರೆ, ಇದನ್ನು ತಯಾರಿಸಲು ನಿಮಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದು ಪೂರಿ, ರೊಟ್ಟಿ ಅಥವಾ ಚಪಾತಿಯೊಂದಿಗೆ ಸವಿಯಲು ಬಾಯಲ್ಲಿ ನೀರೂರಿಸುವಂತ ಅನುಭವ ನೀಡುತ್ತದೆ. ಹಾಗಿದ್ರೆ, ಆಲೂಗಡ್ಡೆ ಕರಿಯನ್ನು (Aloo Curry) ಹೇಗೆ ತಯಾರಿಸಬಹುದು? ಎಂಬುವುದನ್ನು ತಿಳಿಯಲು ಮುಂದೆ ಓದಿ.
ಸಾಮಾನ್ಯವಾಗಿ ಬೆಳಗಿನ ಉಪಾಹಾರದ ಸಮಯದಲ್ಲಿ ಅಥವಾ ಇದ್ದಕ್ಕಿದ್ದಂತೆ ಮನೆಗೆ ಅತಿಥಿಗಳು ಬಂದಾಗ, ನೀವು ಆಲೂಗಡ್ಡೆ ಕರಿ ಅನ್ನು ಬಿಸಿ ಪೂರಿ ಅಥವಾ ಪುಲಾವ್ನೊಂದಿಗೆ ಬಡಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಆಲೂಗಡ್ಡೆ (Potato) ರಸವನ್ನು ಬೇಗನೆ ತಯಾರಿಸಬಹುದು. ಮೊದಲೇ ಹೇಳಿದಂತೆ, ಈ ಸಬ್ಜಿ ತಯಾರಿಸಲು ನಿಮಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದು ಬಾಯಲ್ಲಿ ನೀರೂರಿಸುವುದು ಖಚಿತ. ಮುಖ್ಯವಾಗಿ ಅತಿಥಿಗಳನ್ನು ಹೆಚ್ಚು ಕಾಯಿಸುವುದು ತಪ್ಪುತ್ತದೆ. ಆಲೂಗಡ್ಡೆ ವಿಟಮಿನ್ ಬಿ, ಸಿ, ಸತು ಮತ್ತು ಕಬ್ಬಿಣವನ್ನು ಹೊಂದಿದ್ದು, ಆರೋಗ್ಯಕ್ಕೂ ಒಳ್ಳೆಯದು.

ಆಲೂ ಕರಿ ತಯಾರಿಸಲು ಬೇಕಾಗುವ ಪದಾರ್ಥಗಳು
ಆಲೂಗಡ್ಡೆ - 2
ಟೊಮೆಟೊ ಪ್ಯೂರಿ - 1 ಕಪ್ (ಸಣ್ಣಗೆ ಕತ್ತರಿಸಿದ ಟೊಮ್ಯಾಟೊ ಸಹ ಬಳಸಬಹುದು)
ಕೆಂಪು ಮೆಣಸಿನ ಪುಡಿ - 1 ಚಮಚ (ಟೀಚಮಚ)
ಕೊತ್ತಂಬರಿ ಪುಡಿ - 1 ಚಮಚ
ಗರಂ ಮಸಾಲ - 1 ಚಮಚ
ಮಸಾಲೆಗಳು (ಸಂಪೂರ್ಣ) - 1 ಸ್ಪೂನ್
ಜೀರಿಗೆ - ½ ಚಮಚ
ಹಿಂಗ್ - ½ ಚಮಚ
ಅರಿಶಿನ 1 ಸ್ಪೂನ್
ಅಡುಗೆ ಎಣ್ಣೆ - 1 ಚಮಚ
ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಬೇಕು)
ರುಚಿಗೆ ತಕ್ಕಷ್ಟು ಉಪ್ಪು
ಪುಡಿಮಾಡಿದ ಶುಂಠಿ, ಹಸಿರು ಮೆಣಸಿನಕಾಯಿ
ಆಲೂ ಕರಿ ತಯಾರಿಸುವ ವಿಧಾನ
ಆಲೂಗಡ್ಡೆ ಕರಿ (ಆಲೂಗಡ್ಡೆ ಸಬ್ಜಿ) ಮಾಡುವ ಮೊದಲು, ಆಲೂಗಡ್ಡೆಯನ್ನು ಬೇಯಿಸಬೇಕು. ಇದಾದ ನಂತರ, ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಜೀರಿಗೆ ಮತ್ತು ಇಂಗು ಸೇರಿಸಿ. ಇದಾದ ಬಳಿಕ, ಅದಕ್ಕೆ ಟೊಮೆಟೊ ಪ್ಯೂರಿ ಮಿಶ್ರಣ ಮಾಡಿ. ಎಲ್ಲಾ ಪುಡಿ ಮಾಡಿದ ಮಸಾಲೆಗಳನ್ನು ಸೇರಿಸಬೇಕು. ಮತ್ತು ಪುಡಿಮಾಡಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಹಾಕಬೇಕು. ಇದಾದ ಬಳಿಕ, ನೀವು ಅದನ್ನು ಚೆನ್ನಾಗಿ ಬೇಯಿಸಬೇಕು. ಅಂದರೆ, ಈ ಮಸಾಲಾ ಎಣ್ಣೆಯನ್ನು ಸಂಪೂರ್ಣವಾಗಿ ಬಿಡುಗಡೆ ಮಾಡುವವರೆಗೆ ಬೇಯಿಸಿ.
ನಂತರ, ಬೇಯಿಸಿದ ಆಲೂಗಡ್ಡೆಯನ್ನು ಇದಕ್ಕೆ ಸೇರಿಸಿ, ಸ್ವಲ್ಪ ಸಮಯ ಮಿಶ್ರಣ ಮಾಡಿ. ಇದಾದ ಬಳಿಕ, ನೀವು ಇದಕ್ಕೆ ನೀರು ಸೇರಿಸಿ, ಗರಂ ಮಸಾಲ ಹಾಕಿ ಮತ್ತು ಸ್ವಲ್ಪ ಸಮಯ ಚೆನ್ನಾಗಿ ಬೆರಸಿ. ಈಗ ಗ್ಯಾಸ್ ಆಫ್ ಮಾಡಿ. ಜೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ. ಇಷ್ಟು ಮಾಡಿದರೆ ಸಾಕು ರುಚಿಕರವಾದ ಆಲೂಗಡ್ಡೆ ಕರಿ ತಯಾರಾಗುತ್ತದೆ. ಇದನ್ನು ಬಿಸಿ ಪೂರಿ ಅಥವಾ ಪುಲಾವ್ ಜೊತೆ ಬಡಿಸಬಹುದು.
ಬಿಳಿ ಕೂದಲು ಕಪ್ಪಾಗುತ್ತೆ, ತಲೆಹೊಟ್ಟು ನಿವಾರಣೆ!
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಗೂ ಬಿಳಿ ಕೂದಲು ಸಾಮಾನ್ಯ ಸಮಸ್ಯೆಯಾಗಿದೆ. ಬಿಳಿ ಕೂದಲು ಕಪ್ಪಾಗಿಸಲು ಕೆಲವು ಮನೆಮದ್ದುಗಳಿವೆ. ಅದರಂತೆ ಆಲೂಗಡ್ಡೆ ರಸ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಕಾರಿಯಾಗಿದೆ. ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾದ ಆಲೂಗಡ್ಡೆ ರಸ ನೆತ್ತಿಯನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಆಲೂಗೆಡ್ಡೆ ರಸವನ್ನು ಹಿಂಡಿ ತೆಗೆದು 2 ರಿಂದ 3 ಚಮಚ ಮೊಸರು ಹಾಕಿ ಚೆನ್ನಾಗಿ ಬೆರಸಿ. ಈ ಮಿಶ್ರಣಕ್ಕೆ ಸ್ವಲ್ಪ ಕಾಫಿ ಪುಡಿ ಹಾಕಿ. ಈ ಪೇಸ್ಟ್ ಅನ್ನು ಕೂದಲಿನ ಬುಡ ಮತ್ತು ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆ ಬಳಿಕ ಶಾಂಪಿನಿಂದ ತೊಳೆಯಿರಿ. ಇದನ್ನು ತಿಂಗಳಿಗೆ 3 ಬಾರಿ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ ಮತ್ತು ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ.



Click it and Unblock the Notifications
