Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮಕ್ಕಳ ಲಂಚ್ ಬಾಕ್ಸ್‌ನಲ್ಲಿ ಪರಾಟದ್ದೇ ಕಾರುಬಾರು, ವೈರಲ್ ಆಯ್ತು ವೀಡಿಯೋ: ಈ ಪರಾಟ ಮಾಡುವುದು ಹೇಗೆ?
ಸ್ಕೂಲ್‌ಗೆ ಹೋಗುವ ಮಕ್ಕಳಿದ್ದರೆ ಸ್ನ್ಯಾಕ್ಸ್ ಬಾಕ್ಸ್‌ಗ ಏನು ತುಂಬುವುದು ಎಂಬುವುದೇ ಅಮ್ಮಂದಿರಿಗೆ ದೊಡ್ಡ ತಲೆನೋವು, ಮಕ್ಕಳಂತೂ ವೆರೈಟಿ ವೆರೈಟಿ ಕೇಳುತ್ತಾರೆ, ಫ್ರೂಟ್ಸ್ ಹಾಕಿದರೆ ದಿನಾ ಫ್ರೂಟ್ಸ್ ಬೇಡ ಅಂತಾರೆ, ಆದರೆ ಮಕ್ಕಳ ಸ್ನ್ಯಾಕ್ಸ್ ವಿಚಾರದಲ್ಲಿ ಅಗ್ರ ಸ್ಥಾನದಲ್ಲಿರುವುದು ಪರಾಟ...
ಇದು ಉತ್ತರ ಭಾರತದ ಕಡೆಯ ವೀಡಿಯೋ ಒಂದು ಮಗು ಇವತ್ತು ನಾವು ಏನು ತಂದಿದ್ದೇವೆ ನೋಡೋಣ ಎಂಬರ್ಥದಲ್ಲಿ ಶುರುವಾಗುವ ವೀಡಿಯೋದಲ್ಲಿ ಬಹುತೇಕರ ಲಂಚ್ ಬಾಕ್ಸ್‌ನಲ್ಲಿ ಇರುವುದು ಪರಾಟ.. ಪರಾಟ. ಅದರಲ್ಲಿ ಒಂದು ಮಗುವಿನ ತಾಯಿ ಇನ್ನೂ ಸೂಪರ್ ಲಂಚ್ ಬಾಕ್ಸ್‌ಗೆ ಜಿಲೇಬಿ ಹಾಕಿ ಕಳುಹಿಸಿದ್ದಾರೆ, ಕೆಲವರು ಫ್ರೂಟ್ಸ್ ಹಾಕಿ ಕಳುಹಿಸಿರೆ ಅಲ್ಲಿ ಬಹುಮತ ಬಿದ್ದಿರುವುದು ಪರಾಟಕ್ಕೆ.

ಈ ಪರಾಟ ಏನು? ಎಂದು ನಮ್ಮಲ್ಲಿ ಅನೇಕರಿಗೆ ಪರಿಚಯವಿರಲ್ಲಿ, ನಾವು ಚಪಾತಿ ಮಾಡುತ್ತೇವೆ ಅಲ್ವಾ? ಅದರಲ್ಲಿ ಸ್ವಲ್ಪ ಭಿನ್ನ, ನೀವು ಆಲೂ ಪರಾಟ, ಗೋಬಿ ಪರಾಟ ಅಂತ ವಿಧ ವಿಧದ ಪರಾಟ ಟ್ರೈ ಮಾಡಬಹುದು. ಈ ಪರಾಟ ರುಚಿ ಕೂಡ ಚೆನ್ನಾಗಿರುತ್ತದೆ, ಅಲ್ಲದೆ ಇದನ್ನು ತಿನ್ನಲು ಸಾರುಯ, ಗ್ರೇವಿ ಏನೂ ಇಲ್ಲದಿದ್ದರೂ ನಡೆಯುತ್ತೆ.
ನಾವಿಲ್ಲಿ ಆಲೂ ಪರಾಟ ರೆಸಿಪಿ ನಿಮ್ಮೊಂದಿಗೆ ಶೇರ್
ಮಾಡಿದ್ದೇವೆ
ಗೋಧಿ
ಆಲೂಗಡ್ಡೆ 2
ಈರುಳ್ಳಿ 1
ಹಸಿ ಮೆಣಸು 2
ಸ್ವಲ್ಪ ಕೊತ್ತಂಬರಿ ಸೊಪ್ಪು
ಅರ್ಧ ಚಮಚ ನಿಂಬೆರಸ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ನೀವು ಆಲೂ ಪರಾಟ ಮಾಡಬಯಸುವುದಾದರೆ 10 ಚಪಾತಿಗೆ ಎಷ್ಟು ಹಿಟ್ಟು ಬೇಕೋ ಅಷ್ಟು ಹಾಕಿ , ನೀರು, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ.
- ಈಗ ಆಲೂಗಡ್ಡೆ ಬೇಯಿಸಿ, ಅದರ ಸಿಪ್ಪೆ ಸುಲಿಯಿರಿ.
- ಈಗ ಆಲೂಗಡ್ಡೆ ಮ್ಯಾಶ್ ಮಾಡಿ,ಅದರಲ್ಲಿ ಸ್ವಲ್ಪ ಉಪ್ಪು, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, 1/4 ಚಮಚ ನಿಂಬೆರಸ ಹಾಕಿ ಹಾಕಿ ಮಿಕ್ಸ್ ಮಾಡಿ.
- ಈಗ ಇದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ(ನಿಂಬೆಹಣ್ಣು ಗಾತ್ರದಷ್ಟು).
ಈಗ ಒಂದು ಚಪಾತಿ ತೆಳುವಾಗಿ ಲಟ್ಟಿಸಿ ಅದರೊಳಗೆ ಈ ಆಲೂಗಡ್ಡೆ ಉಂಡೆ ಇಟ್ಟು ಉಂಡೆಕಟ್ಟಿ, ಮತ್ತೊಂದು ಚಪಾತಿ ಲಟ್ಟಿ ಆದನ್ನು ಅದರ ಜೊತೆ ಮೆಲ್ಲನೆ ಉಂಡೆ ಮಾಡಿ ಲಟ್ಟಿಸಿ, ತುಂಬಾ ಪ್ರೆಸ್ ಮಾಡಬೇಡಿ, ಈಗ ಚಪಾತಿ ಆಕಾರಕ್ಕೆ ಬಂದ ಪರಾಟವನ್ನು ತುಪ್ಪ ಸವರಿ ಬೇಯಿಸಿದರೆ ಪರಾಟ ರೆಡಿ.
ಇದನ್ನು ಆಲೂಗಡ್ಡೆ ಪಲ್ಯ ಮಾಡಿ ಕೂಡ ಉಂಡೆ ಕಟ್ಟಿ
ಇಡಬಹುದು.
ಇನ್ನು ಗೋಬಿ, ಮತ್ತಿತರ ಪದಾರ್ಥಗಳನ್ನು ಹಾಕಿಯೂ ಮಾಡಬಹುದು.
ಈ ಪರಾಟ ಬೆಂಗಳೂರಿಲ್ಲಿ ಬಹುತೇಕ ಹೋಟೆಲ್‌ಗಳಲ್ಲಿ ಸಿಗುತ್ತೆ, ಉತ್ತರ ಭಾರತದ
ಕಡೆಗೆ ನಮಗೆ ಅನ್ನ, ಇಡ್ಲಿ ಹೇಗೆಯೋ ಹಾಗೆ ಅವರಿಗೆ ಈ ಆಲೂ ಪರಾಟ.



Click it and Unblock the Notifications
