Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಆಲೂ ಬಟಾಣಿ- ಪನ್ನೀರ್ ಟಿಕ್ಕಿ, ಮಕ್ಕಳಿಗೆ ಆರೋಗ್ಯಕರ ಸ್ನ್ಯಾಕ್ಸ್
ಸಂಜೆ ಮಕ್ಕಳು ಶಾಲೆ ಬಿಟ್ಟು ಬರುವಾಗ ಏನಾದರೂ ರುಚಿಕರವಾದ, ಆರೋಗ್ಯಕರವಾದ ಸ್ನ್ಯಾಕ್ಸ್ ಮಾಡಬೇಕೆಂದಿದ್ದರೆ ಆಲೂ ಟಿಕ್ಕಿ ಟ್ರೈ ಮಾಡಬಹುದು.
ಅಲ್ಲದೆ ಇದನ್ನು ಮಾಡಿ ಕೊಡುವುದರಿಂದ ತರಕಾರಿಯಲ್ಲಿರುವ ಪೋಷಕಾಂಶ ಕೂಡ ಮಕ್ಕಳ ಹೊಟ್ಟೆಯನ್ನು ಸೇರುತ್ತದೆ, ಅವರು ಇದನ್ನು ತುಂಬಾನೇ ಇಷ್ಟಪಟ್ಟು ತಿನ್ನುತ್ತಾರೆ ಕೂಡ, ಬನ್ನಿ ಈ ಆಲೂ-ಪನ್ನೀರ್ ಟಿಕ್ಕಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಬೇಯಿಸಿದ ಆಲೂಗಡ್ಡೆ 2 -3(1/2 ಕೆಜಿ)
2 ಚಮಚ ಎಣ್ಣೆ
1ಚಮಚ ತುರಿದ ಶುಂಠಿ
ಹಸಿಮೆಣಸು 3-4 (ಖಾರ ಹೆಚ್ಚು ಬೇಡ ಎಂದರೆ 2 ಹಾಕಬಹುದು)
ಸ್ವಲ್ಪ ಖಾರದ ಪುಡಿ 1/4 ಚಮಚ
1/4 ಚಮಚ ಗರಂ ಮಸಾಲ
1/4 ಚಮಚ ಚಾಟ್ ಮಸಾಲ
1/4 ಚಮಚ ಜೀರಿಗೆ ಪುಡಿ
1 ಕಪ್ ಬಟಾಣಿ
' ಸ್ವಲ್ಪ ಕಸೂರಿ ಮೇತಿ
ಸ್ವಲಪ್ ಕೊತ್ತಂಬರಿ ಸೊಪ್ಪು
ಸ್ವಲ್ಪ ಪನ್ನೀರ್(100ಗ್ರಾಂ)
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ಸ್ಟೆಪ್ 1
ನೀವು ಆಲೂಗಡ್ಡೆಯನ್ನು ಸಿಪ್ಪೆ ತೆಗೆಯದೆ ಬೇಯಿಸಬೇಕು, ಬೇಯಿಸುವಾಗ ಸ್ವಲ್ಪ
ಉಪ್ಪು ಹಾಕಿ ಬೇಯಿಸಿ
ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ನೀವು ಸ್ವಲ್ಪ ಗೋಡಂಬಿ
ಹಾಕಿ ಫ್ರೈ ಮಾಡಿ, ನಂತರ ತುರಿದ ಶುಂಠಿ, ಹಸಿಮೆಣಸು ಹಾಕಿ ಮತ್ತೆ 1 ನಿಮಿಷ ಫ್ರೈ
ಮಾಡಿ.
ಈಗ ಖಾರದ ಪುಡಿ, ಗರಂ ಮಸಾಲ ಪುಡಿ, ಚಾಟ್ ಮಸಾಲ ಪುಡಿ, ಜೀರಿಗೆ ಪುಡಿ ಸೇರಿಸಿ, 1/4 ಚಮಚ ಉಪ್ಪು ಕೂಡ ಸೇರಿಸಿ.
ಈಗ ಮೊದಲೇ ಬೇಯಿಸಿಟ್ಟ ಬಟಾಣಿ ಕೂಡ ಸೇರಿಸಿ, ನಂತರ 2-3 ನಿಮಿಷ ಫ್ರೈ ಮಾಡಿ.
ನಂತರ ಸೌಟು ಬಳಸಿ ಬಟಾಣಿಯನ್ನು ಚೆನ್ನಾಗಿ ಮ್ಯಾಶ್ ಮಾಡಿ
ನಂತರ ಕಸೂರಿ ಮೇತಿ, ಕೊತ್ತಂಬರಿ ಸೊಪ್ಪು, ನಂತರ ಪುಡಿ-ಪುಡಿ ಮಾಡಿದ ಪನ್ನೀರ್
ಸೇರಿಸಿ ಮಿಕ್ಸ್ ಮಾಡಿ 2 ನಿಮಿಷ ಫ್ರೈ ಮಾಡಿ, ಬಳಿಕ ಗ್ಯಾಸ್ ಉರಿ ಆಫ್
ಮಾಡಿ.
ಸ್ಟೆಪ್ 2
ಈಗ ನೀವು ಮತ್ತೊಂದು ಬೌಲ್ನಲ್ಲಿ ಬೇಯಿಸಿದ ಆಲೂಗಡ್ಡೆ, ಸ್ವಲ್ಪ ಗೋಡಂಬಿ
(ಕತ್ತರಿಸಿ ಹಾಕಿ), ಹಸಿ ಮೆಣಸು, ಗರಂ ಮಸಾಲ, ಚಾಟ್ ಮಸಾಲ, ಸ್ವಲ್ಪ ಉಪ್ಪು,
ಖಾರದ ಪುಡಿ, 1 ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಆಲೂಗಡ್ಡೆ ಮಿಶ್ರಣಕ್ಕೆ 2
ಚಮಚ ಜೋಳದ ಹಿಟ್ಟು ಸೇರಿಸಿ ಮಿಕ್ಸ್ ಮಾಡಿ.
ಈ ಆಲೂಗಡ್ಡೆಯಿಂದ ಉಂಡೆ ಕಂಡಿ, ಅದರೊಳಗಡೆ ಬಟಾಣಿ, ಪನ್ನೀರ್ ಮಿಶ್ರಣ ತುಂಬಿ ಮತ್ತೆ ಅಂಗೈಯಲ್ಲಿಯೇ ಉಂಡೆ ಕಟ್ಟಿ, ಮೆಲ್ಲನೆ ರೌಂಡಾಗಿ ತಟ್ಟಿ.
ಇದೇ ಸಮಯದಲ್ಲಿ ತವಾ ಬಿಸಿ ಮಾಡಿ ಎಣ್ಣೆ ಹಾಕಿ, ಈಗ ತಟ್ಟಿದ ಟಿಕ್ಕಿ ಹಾಕಿ ಎರಡೂ ಬದಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
ರೆಡಿಯಾದ ಆಲೂ ಟಿಕ್ಕಿಯನ್ನು ನೀವು ಚಟ್ನಿ, ಸಾಸ್ ಜೊತೆ ಸವಿಯಬಹುದು.



Click it and Unblock the Notifications
