ನವರಾತ್ರಿ ಸ್ಪೆಷಲ್: ಆಲೂ ಪನ್ನೀರ್ ಕೋಫ್ತಾ ರೆಸಿಪಿ

By: Divya pandith
Subscribe to Boldsky

ದಿನವೂ ಅದೇ ಅಡುಗೆ, ಅದೇ ರುಚಿಯಿಂದ ಬೇಸತ್ತಿದ್ದೀರಾ? ಹಾಗಾದರೆ ಇಂದು ಆಲೂ ಪನ್ನೀರ್ ಕೋಫ್ತಾ ಎನ್ನುವ ಹೊಸ ರುಚಿಯನ್ನು ಮಾಡಿ ನೋಡಿ. ಇದು ಉತ್ತರ ಭಾರತದ ಸಾಂಪ್ರದಾಯಿಕ ತಿಂಡಿಯಲ್ಲೊಂದು. ನಿತ್ಯದ ಚಹಾ ಸವಿಯುವಾಗ, ಬಂಧು ಬಾಂಧವರು ಬಂದಾಗ, ಉತ್ಸವ ಹಾಗೂ ಹಬ್ಬ ಹರಿದಿನಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಹಬ್ಬ ಹಾಗೂ ಉತ್ಸವದ ಸಂದರ್ಭದಲ್ಲಿ ತಯಾರಿಸುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸುವುದಿಲ್ಲವಷ್ಟೆ.

ಬೇಯಿಸಿದ ಆಲೂಗಡ್ಡೆ, ಹಿಸುಕಿದ ಪನ್ನೀರ್, ಉಪ್ಪು, ಹುಳಿ, ಮಸಾಲೆಯ ಮಿಶ್ರಣದೊಂದಿಗೆ, ಕಾರ್ನ್ ಹಿಟ್ಟಿನಲ್ಲಿ ಹೊರಳಾಡಿ, ಎಣ್ಣೆಯಲ್ಲಿ ಮುಳುಗೆದ್ದು ಬರುತ್ತದೆ. ಮನಸೆಳೆಯುವ ಪರಿಮಳ ಹಾಗೂ ನಾಲಿಗೆ ಚಪ್ಪರಿಸುವಂತಹ ರುಚಿಯನ್ನು ಹೊಂದಿರುತ್ತದೆ. ಇದನ್ನು ಟೊಮೆಟೊ ಸಾಸ್, ಪುದೀನಾ ಚೆಟ್ನಿಯೊಂದಿಗೆ ಸವಿದರೆ ಇದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಸರಳವಾದ ಹಾಗೂ ಸುಲಭವಾದ ಆಲೂ ಪನ್ನೀರ್ ಕೋಫ್ತಾ ಪಾಕವಿಧಾನವನ್ನು ಮಾಡುವ ಮನಸ್ಸಾದರೆ ಈ ಕೆಳಗೆ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಪರಿಶೀಲಿಸಿ.

aloo paneer kofta recipe
ಆಲೂ ಪನ್ನೀರ್ ಕೋಫ್ತಾ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಆಲೂ ಪನ್ನೀರ್ ಕೋಫ್ತಾ | ಆಲೂ ಪನ್ನೀರ್ ಕೋಫ್ತಾ ರೆಸಿಪಿ | ಗ್ರೇವಿ ಅಲ್ಲದ ಪನ್ನೀರ್ ಕೋಫ್ತಾ ರೆಸಿಪಿ | ಆಲೂ ಪನ್ನೀರ್ ಕೋಫ್ತಾ ವಿಡಿಯೋ ರೆಸಿಪಿ
ಆಲೂ ಪನ್ನೀರ್ ಕೋಫ್ತಾ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಆಲೂ ಪನ್ನೀರ್ ಕೋಫ್ತಾ | ಆಲೂ ಪನ್ನೀರ್ ಕೋಫ್ತಾ ರೆಸಿಪಿ | ಗ್ರೇವಿ ಅಲ್ಲದ ಪನ್ನೀರ್ ಕೋಫ್ತಾ ರೆಸಿಪಿ | ಆಲೂ ಪನ್ನೀರ್ ಕೋಫ್ತಾ ವಿಡಿಯೋ ರೆಸಿಪಿ
Prep Time
15 Mins
Cook Time
20M
Total Time
35 Mins

Recipe By: ಮೀನಾ ಭಂಡಾರಿ

Recipe Type: ಕುರುಕಲು ತಿಂಡಿ

Serves: 6 ಕೋಫ್ತಾ

Ingredients
 • ಬೇಯಿಸಿ, ಸಿಪ್ಪೆ ತೆಗೆದ ಆಲೂಗಡ್ಡೆ -2

  ಪನ್ನೀರ್ - 100 ಗ್ರಾಂ.

  ಕಲ್ಲುಪ್ಪು - 2 ಟೀ ಚಮಚ

  ಹಾಲಿನ ಹಿಟ್ಟು - 1 ಟೇಬಲ್ ಚಮಚ.

  ಕಪ್ಪು ಕಾಳ ಮೆಣಸಿನ ಪುಡಿ/ಬ್ಲ್ಯಾಕ್ ಪೆಪ್ಪರ್ - 2 ಟೀ ಚಮಚ

  ಮೆಣಸಿನ ಪುಡಿ - 1 ಟೀ ಚಮಚ

  ಹೆಚ್ಚಿಕೊಂಡ ಹಸಿ ಮೆಣಸಿನಕಾಯಿ - 1 ಟೀ ಚಮಚ

  ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 1 ಟೇಬಲ್ ಚಮಚ

  ಕಾರ್ನ್ ಹಿಟ್ಟು - 2 ಟೇಬಲ್ ಚಮಚ + ಲೇಪನಕ್ಕೆ

  ಹೆಚ್ಚಿಕೊಂಡ ಮಿಶ್ರ ಒಣ ಹಣ್ಣು(ಡ್ರೈ ಪ್ರೂಟ್ಸ್) - 1/4 ಕಪ್

  ಎಣ್ಣೆ - ಕರಿಯಲು

Red Rice Kanda Poha
How to Prepare
 • 1. ಒಂದು ದೊಡ್ಡ ಬೌಲ್‍ನಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ.

  2. ಪನ್ನೀರ್‍ಅನ್ನು ಬೆರೆಸಿ, ಗಂಟಾಗದಂತೆ ಚೆನ್ನಾಗಿ ಕಲಸಿ.

  3. ಕಲ್ಲುಪ್ಪು ಮತ್ತು ಹಾಲಿನ ಪುಡಿಯನ್ನು ಬೆರೆಸಿ.

  4. ಕರಿ ಮೆಣಸಿನ ಪುಡಿ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ.

  5. ಹೆಚ್ಚಿಕೊಂಡ ಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ.

  6. 2 ಟೇಬಲ್ ಚಮಚ ಕಾರ್ನ್ ಹಿಟ್ಟನ್ನು ಸೇರಿಸಿ.

  7. ಮಿಶ್ರಣದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿಯೇ ತೆಗೆದುಕೊಳ್ಳಿ. ಅಂಗೈನಲ್ಲಿ ಒಂದು ರೋಲ್‍ನಂತೆ ಮಾಡಿ.

  8. ಮಾಡಿಕೊಂಡ ರೋಲ್‍ನ ಮಧ್ಯ ಭಾಗದಲ್ಲಿ ಹೆಬ್ಬೆರಳಿನಿಂದ ಚಿಕ್ಕ ಹೊಂಡವನ್ನು ಮಾಡಿ.

  9. ಅದರಲ್ಲಿ ಒಂದು ಚಮಚ ಒಣ ಗಣ್ಣುಗಳ ಮಿಶ್ರಣವನ್ನು ಸೇರಿಸಿ.

  10. ನಂತರ ಅದನ್ನು ಮತ್ತೆ ಸರಿಯಾಗಿ ಮುಚ್ಚಿ, ಅಂಡಾಕೃತಿಗೆ ತಿರುಗಿಸಿ.

  11. ಒಂದು ಪ್ಲೇಟ್‍ನಲ್ಲಿ ಕಾರ್ನ್ ಹಿಟ್ಟನ್ನು ಹಾಕಿ, ಲೇಪನಕ್ಕೆ ಹರಡಿಕೊಳ್ಳಿ.

  12. ಕೋಫ್ತಾದ ಸುತ್ತಲೂ ಸರಿಯಾಗಿ ಹಿಟ್ಟಿನ ಲೇಪನ ಮಾಡಿ.

  13. ನಂತರ ಫ್ರಿಜ್‍ನಲ್ಲಿ ಅರ್ಧಗಂಟೆಗಳ ಕಾಲ ಇಡಿ.

  14. ನಂತರ ಕರಿಯಲು ಎಣ್ಣೆಯನ್ನು ಬಿಸಿ ಮಾಡಿ.

  15. ಕಾದಿರುವ ಎಣ್ಣೆಯಲ್ಲಿ ಕೋಫ್ತಾವನ್ನು ಬಿಡಿ.

  16. ಕೋಫ್ತಾ ಎಲ್ಲಾ ಭಾಗದಲ್ಲೂ ಸರಿಯಾಗಿ ಬೇಯುವಂತೆ ತಿರುಗಿಸಿ.

  17. ಸರಿಯಾಗಿ ಬೆಂದು, ಹೊಂಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆಯಿಂದ ತೆಗೆಯಿರಿ.

  18. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Instructions
 • 1. ಕೋಫ್ತಾ ರುಚಿಯನ್ನು ಹೆಚ್ಚಿಸಲು ಹಾಲಿನ ಪುಡಿಯ ಬದಲಿಗೆ ಖೋಯಾವನ್ನು ಸೇರಿಸಬಹುದು.
 • 2. ನಿಮಗೆ ಇಷ್ಟವಾಗುವ ಯಾವುದೇ ಡ್ರೈಫ್ರೂಟ್ಸ್‌ಗಳನ್ನು ಸೇರಿಸಬಹುದು.
 • 3. ಹಬ್ಬ ಮತ್ತು ಉತ್ಸವಗಳನ್ನು ಹೊರತು ಪಡಿಸಿದ ದಿನದಲ್ಲಿ ನೀವು ತಯಾರಿಸುವುದಾಗಿದ್ದರೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಬಹುದು.
Nutritional Information
 • ಸರ್ವಿಂಗ್ ಸೈಜ್ - 1 ಕೋಫ್ತಾ
 • ಕ್ಯಾಲೋರಿ - 208 ಕ್ಯಾಲ್
 • ಫ್ಯಾಟ್ - 30 ಗ್ರಾಂ.
 • ಪ್ರೋಟೀನ್ - 10 ಗ್ರಾಂ.
 • ಕಾರ್ಬೋಹೈಡ್ರೇಟ್ - 40 ಗ್ರಾಂ.
 • ಫೈಬರ್ - 3 ಗ್ರಾಂ.

ಸ್ಟೆಪ್ ಬೈ ಸ್ಟೆಪ್ ಆಲೂ ಪನ್ನೀರ್ ಕೋಫ್ತಾ

1. ಒಂದು ದೊಡ್ಡ ಬೌಲ್‍ನಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ.

aloo paneer kofta recipe

2. ಪನ್ನೀರ್‍ಅನ್ನು ಬೆರೆಸಿ ಗಂಟಾಗದಂತೆ ಚೆನ್ನಾಗಿ ಕಲಸಿ.

aloo paneer kofta recipe
aloo paneer kofta recipe

3. ಕಲ್ಲುಪ್ಪು ಮತ್ತು ಹಾಲಿನ ಪುಡಿಯನ್ನು ಬೆರೆಸಿ.

aloo paneer kofta recipe
aloo paneer kofta recipe

4. ಕರಿ ಮೆಣಸಿನ ಪುಡಿ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ.

aloo paneer kofta recipe
aloo paneer kofta recipe

5. ಹೆಚ್ಚಿಕೊಂಡ ಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ.

aloo paneer kofta recipe
aloo paneer kofta recipe

6. 2 ಟೇಬಲ್ ಚಮಚ ಕಾರ್ನ್ ಹಿಟ್ಟನ್ನು ಸೇರಿಸಿ.

aloo paneer kofta recipe
aloo paneer kofta recipe

7. ಮಿಶ್ರಣದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿಯೇ ತೆಗೆದುಕೊಳ್ಳಿ. ಅಂಗೈನಲ್ಲಿ ಒಂದು ರೋಲ್‍ನಂತೆ ಮಾಡಿ.

aloo paneer kofta recipe
aloo paneer kofta recipe

8. ಮಾಡಿಕೊಂಡ ರೋಲ್‍ನ ಮಧ್ಯ ಭಾಗದಲ್ಲಿ ಹೆಬ್ಬೆರಳಿನಿಂದ ಚಿಕ್ಕ ಹೊಂಡವನ್ನು ಮಾಡಿ.

aloo paneer kofta recipe

9. ಅದರಲ್ಲಿ ಒಂದು ಚಮಚ ಒಣ ಗಣ್ಣುಗಳ ಮಿಶ್ರಣವನ್ನು ಸೇರಿಸಿ.

aloo paneer kofta recipe

10. ನಂತರ ಅದನ್ನು ಮತ್ತೆ ಸರಿಯಾಗಿ ಮುಚ್ಚಿ ಅಂಡಾಕೃತಿಗೆ ತಿರುಗಿಸಿ.

aloo paneer kofta recipe

11. ಒಂದು ಪ್ಲೇಟ್‍ನಲ್ಲಿ ಕಾರ್ನ್ ಹಿಟ್ಟನ್ನು ಹಾಕಿ ಲೇಪನಕ್ಕೆ ಹರಡಿಕೊಳ್ಳಿ.

aloo paneer kofta recipe
aloo paneer kofta recipe

12. ಕೋಫ್ತಾದ ಸುತ್ತಲೂ ಸರಿಯಾಗಿ ಹಿಟ್ಟಿನ ಲೇಪನ ಮಾಡಿ.

aloo paneer kofta recipe

13. ನಂತರ ಫ್ರಿಜ್‍ನಲ್ಲಿ ಅರ್ಧಗಂಟೆಗಳ ಕಾಲ ಇಡಿ.

aloo paneer kofta recipe

14. ನಂತರ ಕರಿಯಲು ಎಣ್ಣೆಯನ್ನು ಬಿಸಿ ಮಾಡಿ.

aloo paneer kofta recipe

15. ಕಾದಿರುವ ಎಣ್ಣೆಯಲ್ಲಿ ಕೋಫ್ತಾವನ್ನು ಬಿಡಿ.

aloo paneer kofta recipe

16. ಕೋಫ್ತಾ ಎಲ್ಲಾ ಭಾಗದಲ್ಲೂ ಸರಿಯಾಗಿ ಬೇಯುವಂತೆ ತಿರುಗಿಸಿ.

aloo paneer kofta recipe
aloo paneer kofta recipe

17. ಸರಿಯಾಗಿ ಬೆಂದು, ಹೊಂಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆಯಿಂದ ತೆಗೆಯಿರಿ.

aloo paneer kofta recipe
aloo paneer kofta recipe

18. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

aloo paneer kofta recipe
aloo paneer kofta recipe
[ 4 of 5 - 96 Users]
Story first published: Saturday, September 9, 2017, 23:30 [IST]
Subscribe Newsletter