Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಆಲೂ ದೋಸೆ ರೆಸಿಪಿ: ಅಕ್ಕಿ ಹಿಟ್ಟು, ಬೇಯಿಸಿದ ಆಲೂಗಡ್ಡೆ ಇದ್ದರೆ ಸಾಕು ತಕ್ಷಣ ಮಾಡಬಹುದು ರುಚಿಯಾದ ದೋಸೆ
ಇದೊಂದು ಇನ್ಸ್ಟಾಂಟ್ ದೋಸೆ ರೆಸಿಪಿ, ಬೇಯಿಸಿದ ಆಲೂಗಡ್ಡೆ, ಅಕ್ಕಿಪುಡಿ ಇದ್ದರೆ ಸಾಕು ಥಟ್ ಅಂತ ಈ ದೋಸೆ ಮಾಡಬಹುದು, ಇನ್ನು ಈ ದೋಸೆ ಹಿಟ್ಟು ತಯಾರಿಸಿದರೆ ಬೇರೆ-ಬೇರೆ ರುಚಿಯಲ್ಲಿ ಸವಿಯಬಹುದು,
ಇದಕ್ಕೆ ಚೀಸ್ ಹಾಕಿ ಸವಿಯಬಹುದು, ಇದಕ್ಕೆ ಈರುಳ್ಳಿ ಹಾಕಿ ತಿನ್ನಬಹುದು, ಪ್ಲೇನ್ ದೋಸೆ ಮಾಡಿ ಸವಿಯಬಹುದು, ನಿಮಗೆ ಹೇಗೆ ಬೇಕೋ ಆ ರುಚಿಯಲ್ಲಿ ಸವಿಯಬಹುದು. ಬನ್ನಿ ಈ ಆಲೂ ದೋಸೆಯ ರೆಸಿಪಿ ನೋಡೋಣ:
ನಾವಿಲ್ಲಿ 2 ಬಗೆಯ ಆಲೂದೋಸೆ ರೆಸಿಪಿ ನೀಡಿದ್ದೇವೆ, ಈ ದೋಸೆ ಟೇಸ್ಟ್ ಖಂಡಿತ ನಿಮಗೆ ಇಷ್ಟವಾಗುವುದು ನೋಡಿ..

ಬೇಕಾಗುವ ಸಾಮಗ್ರಿ
1 ಕಪ್ ಬೇಯಿಸಿದ ಆಲೂಗಡ್ಡೆ
1 ಕಪ್ ಅಕ್ಕಿಹಿಟ್ಟು
ಕೊತ್ತಂಬರಿ ಸೊಪ್ಪು
1 ಚಮಚ ಶುಂಠಿ- ಬೆಳ್ಳುಳ್ಲಿ ಪೇಸ್ಟ್
2-3 ಹಸಿಮೆಣಸು
2 ಚಮಚ ಮೊಸರು
ಮಾಡುವ ವಿಧಾನ:
ನೀವು ಬೇಯಿಸಿದ ಆಲೂಗಡ್ಡೆ, ಮೊಸರು ಹಾಕಿ ಚೆನ್ನಾಗಿ ಕಲೆಸಿ
ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ಮೆಣಸು ಕತ್ತರಿಸಿ ಹಾಕಿ,
ಕೊತ್ತಂಬರಿ ಸೊಪ್ಪು ಹಾಕಿ, ಅಕ್ಕಿ ಹಿಟ್ಟು ನೀರು ಹಾಕಿ ಉಪ್ಪು ಸೇರಿಸಿ ಮಿಕ್ಸ್
ಮಾಡಿ, ದೋಸೆ ಹಿಟ್ಟಿನ ಹದಕ್ಕೆ ಸೇರಿಸಿ.
ತವಾಗೆ ಎಣ್ಣೆ ಹಾಕಿ ಬಿಸಿ ಮಾಡಿ ದೋಸೆ ಹಿಟ್ಟು ಹಾಕಿ ರೌಂಡ್ ಮಾಡಿ ಮುಚ್ಚಿ,
ನಂತರ ಐದು 3-4 ನಿಮಿಷ ಬಿಟ್ಟು ದೋಸೆ ತೆಗೆಯಿರಿ.
ದೋಸೆ ತವಾದಲ್ಲಿ ಅಂಟಿದರೆ ಏನು ಮಾಡುವುದು?
ನೀವು ಅಕ್ಕಿ ಹಿಟ್ಟು ಸ್ವಲ್ಪ ಅಧಿಕ ಸೇರಿಸಿ ಮಿಕ್ಸ್ ಮಾಡಿ, ಆವಾಗ ದೋಸೆ
ಕ್ರಿಸ್ಪಿಯಾಗಿ ಬರುತ್ತದೆ.
ಈ ಆಲೂ ದೋಸೆಯನ್ನು ಯಾವುದರ ಜೊತೆ ಸೇರಿಸಿ ತುಂಬಾ
ರುಚಿಯಾಗಿರುತ್ತದೆ?
ಇದನ್ನು ನೀವು ಸಿಹಿ ಕಾಂಬಿನೇಷನ್ನಲ್ಲಿ ಸವಿಯಬಹುದು, ಖಾರ ಕಾಂಬಿನೇಷನ್ನಲ್ಲಿಯೂ
ತಿನ್ನಬಹುದು
ಇದನ್ನು ಚಟ್ನಿ ಅಥವಾ ತರಕಾರಿ ಕೂರ್ಮಾ ಜೊತೆ ಸವಿಯಬಹುದು
ಇನ್ನು ಮಾವಿನ ಹಣ್ಣಿನ ರಸಾಯನ ಜೊತೆ ತಿನ್ನಲು ಕೂಡ ತುಂಬಾ
ರುಚಿಯಾಗಿರುತ್ತದೆ.
ಈ ದೋಸೆಯ ವಿಶೇಷತೆ ಏನು?
ಈ ದೋಸೆಯನ್ನು ಅಕ್ಕಿ ನೆನೆ ಹಾಕಿ ಮಾಡಬೇಕಾಗಿಲ್ಲ
ಒಂದು ಅರ್ಧ ಗಂಟೆಯ ಒಳಗಡೆ ದೋಸೆ ಹಿಟ್ಟು ರೆಡಿಯಾಗಿರುತ್ತದೆ.
ಈ ದೋಸೆ ಮಾಡಿ ಮೇಲೆ ಈರುಳ್ಳಿ ಉದುರಿಸಿದ ಸೂಪರ್ ಆಗಿರುತ್ತದೆ.
ಕ್ರಿಸ್ಪಿ ಆಲೂ ದೋಸೆ
ಇನ್ನು ನಿಮಗೆ ದೋಸೆ ಕ್ರಿಸ್ಪಿಯಾಗಿ ಬೇಕೆಂದರೆ ದೋಸೆಯನ್ನು ಈ ರೀತಿ ಮಾಡಿ, ಕ್ರಿಸ್ಪಿಯಾಗಿ ತುಂಬಾನೇ ರುಚಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿ
ಬೇಯಿಸಿದ ಆಲೂಗಡ್ಡೆ 3
ನೀರು
ಒಂದೂವರೆ ಕಪ್ ಅಕ್ಕಿ ಹಿಟ್ಟು ಹಿಟ್ಟು
1/4 ಕಪ್ ಸೂಜಿ ರವೆ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಮಾಡಿ ನೀರು ಹಾಕಿ ನುಣ್ಣನೆ ರುಬ್ಬಿ
ಅದನ್ನು ಒಂದು ದೊಡ್ಡ ಬೌಲ್ಗೆ ಹಾಕಿ
ನಂತರ ಅಕ್ಕಿ ಹಿಟ್ಟು, ಸೂಜಿ ರವೆ ಹಾಕಿ, ರುಚಿಗೆ ತಕ್ಕ ಉಪ್ಪು (ಅರ್ಧ ಚಮಚ ಹಾಕಿ,
ಬೇಕಿದ್ದರೆ ಮತ್ತೆ ಸೇರಿಸಬಹುದು)
ಹಾಕಿ ಮಿಕ್ಸ್ ಮಾಡಿ 10 ನಿಮಿಷ ಬಿಡಿ
ನಂತರ ತವಾ ಬಿಸಿ ಮಾಡಿ ದೋಸೆ ಹಾಕಿ.
ನೀವು ಇದಕ್ಕೆ ಈರುಳ್ಳಿ ಕತ್ತರಿಸಿ ಹಾಕಬಹುದು
ಇದಕ್ಕೆ ಮಿಕ್ಸ್ ವೆಜ್ ಹಾಕಬಹುದು
ಅಥವಾ ಆಲೂ ಹಾಗೂ ಇತರ ವೆಜ್ ಮಿಕ್ಸ್ ಮಾಡಿ ಹಾಕಬಹುದು
ನಂತರ ಈ ದೋಸೆಯನ್ನು ಚಟ್ನಿ ಜೊತೆ ಸರ್ವ್ ಮಾಡಿ.
ಈ ದೋಸೆಗೆ ಉದ್ದು ಬೇಕಾಗಿಲ್ಲ, ಆದರೂ ದೋಸೆ ಮೃದುವಾಗಿಯೂ ಮಾಡಬಹುದು, ಗರಿಗರಿಯಾಗಿಯೂ ಮಾಡಬಹುದು. ಈ ರೆಸಿಪಿ ಟ್ರೂ ಮಾಡಿ ಮನೆಯವರಿಗೆ ತುಂಬಾನೇ ಇಷ್ಟವಾಗುವುದು. ಇನ್ನಷ್ಟು ಹೊಸ ರುಚಿಯ ಬ್ರೇಕ್ಫಾಸ್ಟ್ ರೆಸಿಪಿಗಳನ್ನು ನೀಡಲಿದ್ದೇವೆ...



Click it and Unblock the Notifications