Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಆಲೂ ಚಾಟ್ ರೆಸಿಪಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
ಚಾಟ್!!! ಕೇಳಿದ ಕೂಡಲೆ ಯಾರಿಗೆ ಬಾಯಲ್ಲಿ ನೀರು ಬರಲ್ಲ ಹೇಳಿ? ಅದರಲ್ಲು ಆಲೂಗಡ್ಡೆ ಇಂದ ತಯಾರಿಸಿದರೆ ಇನ್ನು ರುಚಿಕರ. ಈ ಆಲೂ ಚಾಟ್‍ನ ಆರಂಭವಾದದ್ದು ಮೂಲತಃ ದಿಲ್ಲಿಯ ಗಲ್ಲಿಗಳಲ್ಲಿ.
ದಿಲ್ಲಿಯ ರುಚಿಕರ ಹಾಗು ಬಾಯಲ್ಲಿ ನೀರು ತರಿಸುವ ಈ ಆಲೂ ಚಾಟ್ ಮಾಡಲು ತುಂಬಾ ಸುಲಭ. ಉಪ್ಪು ಸಿಹಿ ಖಾರ ಹುಳಿ ಮಿಶ್ರಿತ ಈ ಚಾಟ್ ತಿಂದ ಕೂಡಲೆ ಬಾಯಲ್ಲಿ ಕರುಮ್ ಕುರುಮ್ ಅಂದರೂ ಒಳಗಿನಿಂದ ಮೃದುವಾಗಿದ್ದು ತಿನ್ನುವವರಲ್ಲಿ ಮತ್ತಷ್ಟು ತಿನ್ನವ ಆಸೆ ಹುಟ್ಟಿಸುತ್ತದೆ. ಕಣ್ಣು ತಣಿಸುವ ಮನಸ್ಸಿಗೆ ಸಂತೋಷ ನೀಡುವ ಈ ಆಲೂ ಚಾಟ್ ಒಮ್ಮೆ ತಿನ್ನಲೇ ಬೇಕು.
ಆಲೂ ಚಾಟ್ ರೆಸಿಪಿ

Recipe By: ಪ್ರಿಯಾಂಕಾ ತ್ಯಾಗಿ
Recipe Type: ಸ್ನಾಕ್ಸ್
Serves: 3-4 ಜನಕ್ಕೆ ಬೇಕಾಗುವಷ್ಟು
-
ಆಲುಗಡ್ಡೆ - (ಸಿಪ್ಪೆ ತೆಗೆದ,ಚೌಕಾಗಿ ಕತ್ತರಿಸಿದ)-500ಗ್ರಾ
ಎಣ್ಣೆ- ಕರಿಯಲು
ಉಪ್ಪು- 1/2 ಟೀ ಸ್ಪೂನ್
ಕಾಶ್ಮೀರಿ ಅಚ್ಚ ಖಾರದ ಪುಡಿ- 1/2 ಟೀ ಸ್ಪೂನ್
ಡ್ರಯ್ ಮ್ಯಾಂಗೋ ಪೌಡರ್ (ಆಮ್ಚೂರ್) -1/2 ಟೀ ಸ್ಪೂನ್
ಹುರಿದ ಜೀರಿಗೆ ಪುಡಿ(ಜೀರಾ ಪೌಡರ್)- 1/2 ಟೀ ಸ್ಪೂನ್
ಚಾಟ್ ಪುಡಿ - 1/2 ಟೀ ಸ್ಪೂನ್
ನಿಂಬೆ ಹುಳಿ - 1 ಟೇಬಲ್ ಸ್ಪೂನ್
ಹುಣಸೆ ಹಣ್ಣಿನ ಚಟ್ನಿ- 1 ಟೇಬಲ್ ಸ್ಪೂನ್
ಕೊತ್ತಂಬರಿ ಮತ್ತು ಪುದೀನಾ ಚಟ್ನಿ-1/2 ಟೀ ಸ್ಪೂನ್
ಸೇವ್- 1 ಸಣ್ಣ ಬಟ್ಟಲು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗು ದಾಳಂಬರೇ ಕಾಳುಗಳು-ಅಲಂಕಾರಕ್ಕೆ
-
1. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಆಲುಗಡ್ಡೆ (ಸಿಪ್ಪೆ ತೆಗೆದ,ಚೌಕಾಗಿ ಕತ್ತರಿಸಿದ)ಯನ್ನು ಹುರಿದುಕೊಳ್ಳಿ.
2. ಸ್ವಲ್ಪ ಕೆಂಪು ಬಣ್ಣ ಬಂದ ನಂತರ ಬಾಣಲೆಯಿಂದ ತೆಗೆಯಿರಿ.
3. ಇದಕ್ಕೆ ಉಪ್ಪು ಮತ್ತು ಅಚ್ಚ ಖಾರದ ಪುಡಿಯನ್ನು ಹಾಕಿ.
4. ಡ್ರಯ್ ಮ್ಯಾಂಗೋ ಪೌಡರ್(ಆಮ್ಚೂರ್),ಹುರಿದ ಜೀರಿಗೆ ಪುಡಿ(ಜೀರಾ ಪೌಡರ್),ಚಾಟ್ ಪುಡಿಯನ್ನು ಹಾಕಿ.
5. ನಂತರ ನಿಂಬೆ ಹುಳಿಯನ್ನು ಹಾಕಿ ಮಿಕ್ಸ್ ಮಾಡಿ.
6. ಹುಣಸೆ ಹಣ್ಣಿನ ಚಟ್ನಿ ಮತ್ತು ಕೊತ್ತಂಬರಿ,ಪುದೀನಾ ಚಟ್ನಿ ಹಾಕಿ ಮಿಕ್ಸ್ ಮಾಡಿ.
7. ಸೇವ್,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗು ದಾಳಿಂಬೆ ಕಾಳಿನಿಂದ ಅಲಂಕರಿಸಿ.
8. ಕೊನೆಯಲ್ಲಿ ಹುಣಸೆ ಹಣ್ಣಿನ ಚಟ್ನಿ ಮತ್ತು ಕೊತ್ತಂಬರಿ,ಪುದೀನಾ ಚಟ್ನಿ ಹಾಕಿ ಅಲಂಕರಿಸಿ.
- 1. ನಿಮ್ಮ ರುಚಿಯ ತಕ್ಕಂತೆ ಉಪ್ಪು ಹುಳಿ ಖಾರವನ್ನು ಹಾಕಬಹದು.
- 2. ಡಯಟ್ ಮಾಡುವವರು ಆಲೂಗಡ್ಡೆಯನ್ನು ಹುರಿಯುವ ಬದಲು ಬೇಕ್ ಮಾಡಬಹುದು.
- ಕ್ಯಾಲೋರಿಸ್ - 334
- ಫ್ಯಾಟ್ - 27.4ಗ್ರಾಂ
- ಪ್ರೋಟೀನ್ಸ್ - 3.2 ಗ್ರಾಂ
- ಕಾರ್ಬೋಹೈಡ್ರೇಟ್ - 18.7 ಗ್ರಾಂ
- ಫೈಬರ್ - 3.6 ಗ್ರಾಂ
1. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಆಲುಗಡ್ಡೆ (ಸಿಪ್ಪೆ ತೆಗೆದ,ಚೌಕಾಗಿ ಕತ್ತರಿಸಿದ)ಯನ್ನು ಹುರಿದುಕೊಳ್ಳಿ.

2. ಸ್ವಲ್ಪ ಕೆಂಪು ಬಣ್ಣ ಬಂದ ನಂತರ ಬಾಣಲೆಯಿಂದ ತೆಗೆಯಿರಿ.

3. ಇದಕ್ಕೆ ಉಪ್ಪು ಮತ್ತು ಅಚ್ಚ ಖಾರದ ಪುಡಿಯನ್ನು ಹಾಕಿ.

4. ಡ್ರಯ್ ಮ್ಯಾಂಗೋ ಪೌಡರ್(ಆಮ್ಚೂರ್),ಹುರಿದ ಜೀರಿಗೆ ಪುಡಿ(ಜೀರಾ ಪೌಡರ್),ಚಾಟ್ ಪುಡಿಯನ್ನು ಹಾಕಿ.

5. ನಂತರ ನಿಂಬೆ ಹುಳಿಯನ್ನು ಹಾಕಿ ಮಿಕ್ಸ್ ಮಾಡಿ.

6. ಹುಣಸೆ ಹಣ್ಣಿನ ಚಟ್ನಿ ಮತ್ತು ಕೊತ್ತಂಬರಿ,ಪುದೀನಾ ಚಟ್ನಿ ಹಾಕಿ ಮಿಕ್ಸ್ ಮಾಡಿ.

7. ಸೇವ್,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗು ದಾಳಿಂಬೆ ಕಾಳಿನಿಂದ ಅಲಂಕರಿಸಿ.

8. ಕೊನೆಯಲ್ಲಿ ಹುಣಸೆ ಹಣ್ಣಿನ ಚಟ್ನಿ ಮತ್ತು ಕೊತ್ತಂಬರಿ,ಪುದೀನಾ ಚಟ್ನಿ ಹಾಕಿ ಅಲಂಕರಿಸಿ.

Click it and Unblock the Notifications