Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಈ ಆಲ್‌ಫಹಾಮ್ (ಚಿಕನ್ ಗ್ರಿಲ್ಡ್) ಮನೆಯಲ್ಲಿಯೇ ತಯಾರಿಸುವ ವಿಧಾನ
ಆಲ್ ಫಹಾಮ್ ಚಿಕನ್‌ನ ಸುಲಭವಾದ ರೆಸಿಪಿ ನೀಡಿದ್ದೇವೆ ನೋಡಿ, ಇದನ್ನ ಮನೆಯಲ್ಲಿ ಓವನ್ ಇಲ್ಲದಿದ್ದರೂ ಮಾಡಬಹುದು, ಹಳ್ಳಿ ಕಡೆ ಕಟ್ಟಿಗೆ ಒಲೆ ಇರುತ್ತದೆ, ಅದರಲ್ಲಿ ಸುಲಭವಾಗಿ ಮಾಡಬಹುದು:

ಬೇಕಾಗುವ ಸಾಮಗ್ರಿ
ಅರ್ಧ ಕೆಜಿ ಚಕನ್ (ಚಿಕನ್ ಕಟ್ ಮಾಡುವಾಗ ಎರಡು ದೊಡ್ಡ ಪೀಸ್ ನೀಡಲು
ಹೇಳಿ)
1/4 ಕಪ್ ಮೊಸರು
2 ಚಮಚ ಶುಂಠಿ ಪೇಸ್ಟ್
2 ಚಮಚ ಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ 1 ಚಮಚ
ಕೊತ್ತಂಬರಿಪೇಸ್ಟ್ 2 ಚಮಚ
1/4 ಚಮಚಕ್ಕಿಂತ ಸ್ವಲ್ಪ ಕಡಿಮೆ ಅರಿಶಿಣ ಪುಡಿ
ಕಾಳು ಮೆಣಸಿನ ಪುಡಿ 1/2 ಚಮಚ
1/2 ಚಮಚ ಉಪ್ಪಿನ ಪುಡಿ
ಚಿಲ್ಲಿ ಫ್ಲೇಕ್ಸ್ 2 ಚಮಚ
ಗ್ಯಾಸ್ ಸ್ಟೌವ್‌ನಲ್ಲಿ ಮಾಡುವುದಾದೆ ಗ್ರಿಲ್ಡ್ ಕಂಬಿ ಬಳಸಬೇಕು, ಇದು ಒಮ್ಮೆ ಖರೀದಿಸಿಟ್ಟರೆ ಗ್ರಿಲ್ಡ್ ಸವಿಯಬೇಕೆಂದು ಮನಸಾದಾಗ ಈ ಗ್ರಿಲ್ಡ್ ಮಾಡಿ ಬಳಸಬಹುದು.
ಓವನ್‌ನಲ್ಲಿ ಮಾಡುವುದಾದರ ಓವನ್ ಪ್ರೀ ಹ್ಹೀಟ್ ಮಾಡಿ 10 ನಿಮಿಷ ಒಂದು ಬದಿ ಮತ್ತೆ 10 ನಿಮಿಷ ಮತ್ತೊಂದು ಬದಿ ಬೇಯಿಸಿದರೆ ಸಾಕು, ತುಂಬಾ ಗ್ರಿಲ್ಡ್ ಆಗಲು ಬಿಡಬೇಡಿ,ಸುಟ್ಟು ಕರಕಲಾಗುವುದು.
ಇನ್ನು ಮನೆಯಲ್ಲಿ ಒಲೆಯಿದ್ದರೆ ಕೆಂಡದಲ್ಲಿಯೂ ಬಳಸಬಹುದು. ಇದಕ್ಕೂ ಗ್ರಿಲ್ಡ್ ಸಿಗುತ್ತೆ ಅದನ್ನು ಬಳಸಿ ಮಾಡಬಹುದು.
ಮಾಡುವ ವಿಧಾನ
ಚಿಕನ್ ತೊಳೆದು ಅದರ ನೀರಿನಂಶ ಹೋಗುವಂತೆ ರಂಧ್ರವಿರುವ ಪಾತ್ರೆಯಲ್ಲಿ
ಹಾಕಿಡಿ.
ಈಗ ಒಂದು ಬೌಲ್‌ಗೆ ಮೊಸರು, ಅರಿಶಿಣ ಪುಡಿ, ಉಪ್ಪಿ, ಖಾರದ ಪುಡಿ, ಶುಂಠಿ,
ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಪೇಸ್ಟ್, ಉಪ್ಪು ಹೀಗೆ
ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ , ಚಿಲ್ಲಿ ಫ್ಲೇಕ್ಸ್ ಈಗ ಹಾಕಬೇಡಿ.
ಈಗ ಚಿಕನ್ ಅನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕಡಿಮೆಯೆಂದರೂ
2 ಗಂಟೆ ಇಡಿ. ಹೀಗೆ ಇಡುವಾಗ ನೀವು ಚಿಲ್ಲಿ ಫ್ಲೇಕ್ಸ್ ಉದುರಿಸಿ ಇಡಿ.
ಈಗ ಗ್ರಿಲ್ಡ್ ಮೇಲ್ ಚಿಕನ್ ಇಟ್ಟು ಎಣ್ಣೆ ಅಥವಾ ಬೆಣ್ಣೆ ಸವರಿ ಬೇಯಿಸಿ. ಕೆಂಡದಲ್ಲಿ ಅಥವಾ ಕಡಿಮೆ ಉರಿಯ ಗ್ಯಾಸ್‌ನಲ್ಲಿ 10 ನಿಮಿಷ ಬೇಯಿಸಿ, ನಂತರ ಮಗುಚಿ ಹಾಕಿ ಮತ್ತೆ 10 ನಿಮಿಷ ಬೇಯಿಸಿ. ಹೀಗೆ ಬೇಯಿಸುವಾಗ ನೈಫ್‌ನಿಂದ ಚುಚ್ಚಿ ನೋಡಿ, ಇನ್ನು ಬೇಯಬೇಕು ಎಂದನಿಸಿದರೆ ಇನ್ನೂ ಸ್ವಲ್ಪ ಹೊತ್ತು ಇಡಬಹುದು.
ಆಲ್ ಫಹಾಮ್ ಬೆಂದ ಮೇಲೆ ತೆಗೆದು ನಿಂಬೆರಸ ಹಾಕಿದರೆ ರುಚಿ ರುಚಿಯಾದ ಆಲ್ ಫಹಾಮ್ ಸವಿಯಲು ರೆಡಿ.
ಆಲ್ ಫಹಾಮ್‌ಗೆ ಚಟ್ನಿ
ಸ್ವಲ್ಪ ಕೊತ್ತಂಬರಿ ಸೊಪ್ಪು
2-3 ಹಸಿ ಮೆಣಸು
ಉಪ್ಪು
1 ಈರುಳ್ಳಿ
ಈ ಮಿಶ್ರಣವನ್ನು ಚೆನ್ನಾಗಿ ರುಬ್ಬಿ ಬಳಿಕ ನಿಂಬೆರಸ ಹಾಕಿದರೆ ಸವಿಯಲು ರೆಡಿ.
ಇದಕ್ಕೆ ಮಯೋನೈಸ್ ಇದ್ದರೆ ಅದನ್ನು ಕೂಡ ಸೈಡ್‌ನಲ್ಲಿ ನೆಚ್ಚಿಕೊಳ್ಳಲು ಇಡಬಹುದು.



Click it and Unblock the Notifications