Just In
Don't Miss
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಕಿ ರೊಟ್ಟಿ ರೆಸಿಪಿ
ಅಕ್ಕಿ ರೊಟ್ಟಿ ಕರ್ನಾಟಕ ಶೈಲಿಯ ಪಾಕವಿಧಾನ. ಇದು ಸಾಂಪ್ರದಾಯಿಕ ತಿಂಡಿಗಳಲ್ಲಿ ಒಂದಾಗಿದೆ. ಇದು ಮಹರಾಷ್ಟ್ರ ಶೈಲಿಯ ತಾಳಿಪಿಟ್ಟನ್ನು ಹೋಲುತ್ತದೆ. ಈ ತಿಂಡಿಯು ಅತ್ಯುತ್ತಮ ಪೋಷಕಾಂಶ ಹಾಗೂ ರುಚಿಯಿಂದ ಕೂಡಿರುತ್ತದೆ. ಅಕ್ಕಿ ಹಿಟ್ಟು, ವಿವಿಧ ಬಗೆಯ ತರಕಾರಿ ಹಾಗೂ ಜೀರಿಗೆಯ ಮಿಶ್ರಣದಲ್ಲಿ ತಯಾರಿಸಲಾಗುವ ಈ ತಿಂಡಿ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸುವ ಜೀರಿಗೆ ತಿಂಡಿಯನ್ನು ಜೀರ್ಣಿಸುವ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
ಒಮ್ಮೆ ತಿಂದರೆ ಮತ್ತೆ ಮತ್ತೆ ಸವಿಯಬೇಕು ಎನ್ನುವ ಮನಸ್ಸನ್ನು ಉಂಟುಮಾಡುವ ಶಕ್ತಿಯನ್ನು ಈ ತಿಂಡಿ ಪಡೆದುಕೊಂಡಿದೆ. ಈ ಅಕ್ಕಿರೊಟ್ಟಿಗೆ ತೆಂಗಿನಕಾಯಿ ಚಟ್ನಿ, ಉಪ್ಪಿನಕಾಯಿ, ಮೊಸರು ಮತ್ತು ಬೆಣ್ಣೆಯ ಸಂಯೋಜನೆಯೊಂದಿಗೂ ಸವಿಯಬಹುದು. ಇವು ರೊಟ್ಟಿಯ ರುಚಿಯನ್ನು ದ್ವಿಗುಣಗೊಳಿಸುತ್ತವೆ. ಮುಂಜಾನೆಯ ಉಪಹಾರಕ್ಕೆ, ಮಧ್ಯಾಹ್ನದ ಊಟದ ಪ್ರಯುಕ್ತ, ಸಂಜೆ ಟೀ ಸಮಯಕ್ಕೆ ಅಥವಾ ಸಂಜೆಯ ಊಟಕ್ಕೂ ಸಹ ಇದನ್ನು ಸವಿಯಬಹುದು.
ಕರ್ನಾಟಕದೆಲ್ಲೆಡೆ ತಯಾರಿಸುವ ಈ ತಿಂಡಿಯನ್ನು ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು. ನಿಮಗೂ ಈ ತಿಂಡಿಯನ್ನು ತಯಾರಿಸಬೇಕು ಎನ್ನುವ ಮನಸ್ಸಾದರೆ ಈ ಮುಂದೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯ ಪಾಕವಿಧಾನವನ್ನು ಅರಿಯಿರಿ.
Recipe By: ಕಾವ್ಯಶ್ರೀ ಎಸ್.
Recipe Type: ಪ್ರಮುಖ ಖಾದ್ಯ
Serves: 5
-
ಹೆಚ್ಚಿದ ಈರುಳ್ಳಿ- 2
ಎಣ್ಣೆ - ಬಳಿಯಲು (ಗ್ರೀಸಿಂಗ್)
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 1/2 ಕಪ್
ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ - 5-6
ಜೀರಿಗೆ - 3/4 ಟೇಬಲ್ ಚಮಚ
ತುರಿದ ಗಜರಿ- 3/4 ಕಪ್
ನೀರು -ಮಿಶ್ರಣಕ್ಕೆ
ಉಪ್ಪು -3/4 ಟೇಬಲ್ ಚಮಚ
-
1. ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿ.
2. ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
3. ಹೆಚ್ಚಿಕೊಂಡ ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಗಜರಿಯನ್ನು ಸೇರಿಸಿ.
4. ಒಂದು ಚಮಚದ ಸಹಾಯದಿಂದ ಎಲ್ಲವನ್ನೂ ಮಿಶ್ರಗೊಳಿಸಿ.
5. ಉಪ್ಪನ್ನು ಸೇರಿಸಿ, ಪುನಃ ಮಿಶ್ರಗೊಳಿಸಿ.
6. ನಿಧಾನವಾಗಿ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಕೈಗಳಿಂದ ಅಕ್ಕಿಹಿಟ್ಟನ್ನು ಕಲಸಿ.
7. ಮಧ್ಯಮ ಪ್ರಮಾಣದಲ್ಲಿ ಮೃದುವಾಗುವಂತೆ ಹಿಟ್ಟನ್ನು ನಾದಿ.
8. ಒಂದು ಹಿಡಿಯಷ್ಟು ಹಿಟ್ಟನ್ನು ತೆಗೆದುಕೊಂಡು ವೃತ್ತಾಕಾರದ ಉಂಡೆಯನ್ನು ಮಾಡಿ.
9. ಒಂದೆಡೆ ಇಡಿ.
10. ಬೇಕಿಂಗ್ ಪೇಪರ್ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಸವರಿ.
11. ಕಟ್ಟಿಕೊಂಡ ಹಿಟ್ಟಿನ ಉಂಡೆಯೊಂದನ್ನು ಪೇಪರ್ ಮೇಲೆ ಇಟ್ಟು, ಕೈಯಲ್ಲಿ ತಟ್ಟಿ.
12. ತಟ್ಟಿಕೊಂಡ ಹಿಟ್ಟಿನ ಮೇಲೆ ಮೂರು ರಂಧ್ರವನ್ನು ಮಾಡಿ. ಇದು ಎಲ್ಲಾ ಭಾಗದಲ್ಲೂ ಚೆನ್ನಾಗಿ ಬೇಯಲು ಸಹಾಯವಾಗುವುದು.
13. ಬಂಡಿಯ ಮೇಲೆ ಅಥವಾ ತವಾದ ಮೇಲೆ ಒಂದು ಟೇಬಲ್ ಚಮಚ ಎಣ್ಣೆಯನ್ನು ಹಾಕಿ.
14. ತಟ್ಟಿಕೊಂಡ ರೊಟ್ಟಿಯನ್ನು ಕೈಗಳ ಸಹಾಯದಿಂದ ತವಾದ ಮೇಲೆ ಹಾಕಿ ಅಥವಾ ವರ್ಗಾಯಿಸಿ.
15. ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ.
16. 3-4 ನಿಮಿಷಗಳ ಕಾಲ ಬೇಯಿಸಿ.
17. ರೊಟ್ಟಿಯನ್ನು ತಿರುವಿ ಎರಡು ನಿಮಿಷಗಳ ಕಾಲ ಬೇಯಿಸಿ. ತಿಳಿಯಾದ ಹೊಂಬಣ್ಣಕ್ಕೆ ತಿರುಗಬೇಕು.
18. ಇನ್ನೊಮ್ಮೆ ತಿರುವಿ, ಬೆಂದಿದೆಯೇ ಎಂದು ಪರೀಕ್ಷಿಸಿ.
19. ಬೆಂದ ನಂತರ ಒಂದು ಪ್ಲೇಟ್ಗೆ ವರ್ಗಾಯಿಸಿ.
- 1. ಗಜರಿ ಮತ್ತು ಈರುಳ್ಳಿ ನೀರು ಬಿಡುವುದರಿಂದ ಬಹಳ ಮೃದುವಾಗಿ ಹಿಟ್ಟನ್ನು ಕಲಸಬೇಡಿ.
- 2. ಇತರ ರೊಟ್ಟಿಗಳಿಗೆ ಹೋಲಿಸಿದರೆ ಅಕ್ಕಿ ರೊಟ್ಟಿ ಎಣ್ಣೆಯನ್ನು ಹೆಚ್ಚು ಹೀರಿಕೊಳ್ಳುತ್ತದೆ.
- 3. ರೊಟ್ಟಿ ತಟ್ಟಲು ಒಂದು ಫಾಯಿಲ್ ಅಥವಾ ಅಂಟಿಕೊಳ್ಳದ ಕಾಗದಗಳನ್ನು ಬಳಸಬಹುದು.
- 4. ರೊಟ್ಟಿಯನ್ನು ನೇರವಾಗಿ ಬಾಣಲೆಯ ಮೇಲೆ ಹಾಕಬಹುದು.
- 5. ರೊಟ್ಟಿ ಬೇಯಿಸುವುದನ್ನು ಸಾಂಪ್ರದಾಯಿಕ ವಿಧಾನ ಎಂದು ಪರಿಗಣಿಸಲಾಗುವುದು.
- 6. ರೊಟ್ಟಿ ತಟ್ಟುವಾಗ ಕೈಗೆ ಎಣ್ಣೆಯನ್ನು ಸವರಿಕೊಳ್ಳಿ.
- ಬಡಿಸುವ ಪ್ರಮಾಣ - 1
- ಕ್ಯಾಲೋರಿ - 152 ಕ್ಯಾಲ್
- ಕೊಬ್ಬು - 2.4 ಗ್ರಾಂ.
- ಪ್ರೋಟೀನ್ - 2.9 ಗ್ರಾಂ.
- ಕಾರ್ಬೋಹೈಡ್ರೇಟ್ - 29.3ಗ್ರಾಂ.
- ಸಕ್ಕರೆ - 0.9 ಗ್ರಾಂ
- ಫೈಬರ್ - 1.8 ಗ್ರಾಂ.
ಚಿತ್ರ ಬರಹ: