Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಡೈ ದೋಸೆ ರುಚಿಗೆ ಬಾಯಲ್ಲಿ ನೀರು ಬರೋದು ಗ್ಯಾರಂಟಿ..! ಮಾಡಿ ನೋಡಿ..!
ದೋಸೆಗಳಲ್ಲಿ ಎಷ್ಟು ವಿಧ ಇದೆ ಅಂದ್ರೆ ಅದರ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಸೆಟ್ ದೋಸೆ, ನೀರು ದೋಸೆ, ಮಸಾಲೆ ದೋಸೆ, ರವೆ ದೋಸೆ, ಎಗ್ ದೋಸೆ ಹೀಗೆ ಅನೇಕ ಬಗೆಯ ದೋಸೆಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಒಂದೊಂದು ದೋಸೆ ರುಚಿ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ನಾವು ಇದರಲ್ಲಿ ಕೆಲವು ದೋಸೆಗಳ ಹೋಟೆಲ್‌ನಲ್ಲಿ ಸವಿದರೆ ಮತ್ತೆ ಕೆಲವನ್ನು ಮನೆಯಲ್ಲಿ ಮಾಡಿ ಸವಿದಿರುತ್ತೇವೆ.
ಈ ಸಾಲಿನಲ್ಲಿ ಮತ್ತೊಂದು ಸೇರ್ಪಡೆಯಾಗಿ ಅಡೈ ದೋಸೆಯೂ ಸೇರಿದೆ. ಎಲ್ಲಾ ದೋಸೆಗಳಿಗಿಂತ ಆರೋಗ್ಯಕರ ದೋಸೆ ಸವಿಯುವ ಆಸೆ ನಿಮಗಿದ್ದರೆ ನೀವು ಸಹ ಈ ಅಡೈ ದೋಸೆ ಮಾಡಿ ಸವಿಯಬಹುದು. ಇದು ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಖಾದ್ಯದಲ್ಲಿ ಒಂದು. ರಾಜ್ಯದ ಹತ್ತಾರು ಹೋಟೆಲ್‌ನಲ್ಲಿ ಅಡೈ ದೋಸೆ ಸಿಗುತ್ತದೆ. ಕ್ರಿಸ್ಪಿ ದೋಸೆ ಇಷ್ಟ ಪಡುವವರು ಅಡೈ ದೋಸೆ ಒಮ್ಮೆಯಾದರು ಸವಿಯಲೇಬೇಕು.

ಹಾಗಾದರೆ ನಾವಿಂದು ಈ ಅಡೈ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕಾಗುತ್ತದೆ. ಅಡೈ ದೋಸೆ ಮಾಡುವುದು ಹೇಗೆ? ಅದರ ಪಾಕವಿಧಾನವೇನು ಎಂಬುದನ್ನು ವಿವರವಾಗಿ ತಿಳಿದಿಕೊಳ್ಳೋಣ.
ಅಡೈ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಉದ್ದು -ಅರ್ಧ ಕಪ್
- ಮೆಂತ್ಯೆ
- ತೊಗರಿ ಬೇಳೆ-ಅರ್ಧ ಕಪ್
- ಕಡಲೆ ಬೇಳೆ-1 ಕಪ್
- ಹೆಸರು ಬೇಳೆ-ಅರ್ಧ ಕಪ್
- ದೋಸೆ ಅಕ್ಕಿ-2 ಕಪ್
- ಈರುಳ್ಳಿ-3
- ಹಸಿಮೆಣಸು
- ಸಕ್ಕರೆ-2 ಚಮಚ
- ಮೆಣಸು
- ಜೀರಿಗೆ
- ಕರಿಮೆಣಸು
- ಶುಂಠಿ
- ಇಂಗು
- ಕೊತ್ತಂಬರಿ ಸೊಪ್ಪು
ಅಡೈ ದೋಸೆ ಮಾಡುವ ವಿಧಾನ
ಈ ಮೇಲೆ ಹೇಳಲಾಗಿರವ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿ ನೀರು ಹಾಕಿ ನೆನೆಯಲು ಇಡಬೇಕು. ಸುಮಾರು 5ರಿಂದ 6 ಗಂಟೆಗಳ ಕಾಲ ಮಸಾಲೆಯುಕ್ತ ನೀರಿನಲ್ಲಿ ನೆನೆಯಬೇಕು. ಬಳಿಕ ನೀರನ್ನು ಮಾತ್ರ ಬಸಿದುಕೊಳ್ಳಬೇಕು. ನಂತರ ಮಿಕ್ಸರ್ ಜಾರ್‌ಗೆ ನೆನೆಸಿದ್ದ ಪದಾರ್ಥಗಳ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ರುಬ್ಬಿಕೊಳ್ಳುವಾಗ ಉಪ್ಪು ಬೆರಸಿ ರುಬ್ಬಿಕೊಳ್ಳಬಹುದು ಇಲ್ಲವೆ ರುಬ್ಬಿದ ಬಳಿಕ ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಬದಿಗಿಟ್ಟುಕೊಳ್ಳಿ. ಇಷ್ಟೂ ತಯಾರಿಯನ್ನು ಹಿಂದಿನ ದಿನ ಮಾಡಿಟ್ಟುಕೊಳ್ಳಬೇಕು.
ಮಾರನೇ ದಿನ ಹಿಟ್ಟು ಚೆನ್ನಾಗಿ ಹುಳಿಯಾಗಿರುತ್ತದೆ. ಈ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಶುಂಠಿ, ಸಕ್ಕರೆ, ಇಂಗು ಹಾಕಿ ಹಿಟ್ಟನ್ನು ಚೆನ್ನಾಗಿ ಕಲಸಿ ಮಿಶ್ರಣ ಮಾಡಿಕೊಳ್ಳಬೇಕು. ಹಿಟ್ಟಿನ ಬಣ್ಣ ಬಿಳಿ ಬಣ್ಣದ ಬದಲು ಸ್ವಲ್ಪ ಕೆಂಪು ಬಣ್ಣದಲ್ಲಿ ಬರುತ್ತದೆ. ಬಳಿಕ ಒಲೆಯಲ್ಲಿ ಪಾತ್ರ ಇಟ್ಟು ಅದಕ್ಕೆ ಈರುಳ್ಳಿ ಉಜ್ಜಬೇಕು, ಬಳಿಕ ತುಪ್ಪ ಇಲ್ಲವೆ ಎಣ್ಣೆಯನ್ನು ಕಾವಲಿಗೆ ಹಚ್ಚಿಕೊಳ್ಳಬೇಕು. ಬಳಿಕ ಹಿಟ್ಟನ್ನು ಹಾಕಿ ದೋಸೆಯನ್ನು ರೆಡೂ ಕಡೆ ಕಾಯಿಸಿಕೊಳ್ಳಬೇಕು. ಎಲ್ಲಾ ಬೇಳೆ ಪದಾರ್ಥ ಸೇರಿರುವ ಕಾರಣ ಈ ದೋಸೆ ಬೇಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಇಷ್ಟಾದರೆ ಗಮಗಮಿಸುವ ಅಡೈ ದೋಸೆ ಸವಿಯಲು ಸಿದ್ದವಾಗುತ್ತದೆ. ಇದಕ್ಕೆ ಕಾಯಿ ಚಟ್ನಿ ಕಾಂಬಿನೇಷನ್ ಎಲ್ಲಿಲ್ಲದ ರುಚಿ ತರುತ್ತದೆ.
ಚಟ್ನಿ ತಯಾರಿಯ ವಿಧಾನ
ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಬೆಳ್ಳುಳ್ಳಿ, ಒಣ ಮೆಣಸು ಹಾಕಿ
ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ, ಒಣ ಮೆಣಸು ರೋಸ್ಟ್ ಆಗಬೇಕು.
ನಂತರ ತೆಂಗಿನತುರಿ ಸೇರಿಸಿ ರೋಸ್ಟ್ ಮಾಡಿ, ತೆಂಗಿನ ತುರಿ, ಹುಣಸೆ ಹಣ್ಣು ಸ್ವಲ್ಪ
ಕೆಂಪು ಬಣ್ಣಕ್ಕೆ ತಿರುಗುವಾಗ ಸ್ಟೌವ್‌ನಿಂದ ತೆಗೆಯಿರಿ
ಹುರಿದ ಮಸಾಲೆ ತಣ್ಣಗಾಗಲು ಪ್ಲೇಟ್‌ಗೆ ಹಾಕಿ.
ನಂತರ ಮಿಕ್ಸಿ ಬ್ಲೆಂಡರ್‌ಗೆ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಗಟ್ಟಿಯಾಗಿ
ಅಥವಾ ಸ್ವಲ್ಪ ನೀರು ನೀರಾಗಿ ನಿಮಗೆ ಹೇಗೆ ಬೇಕೋ ಹಾಗೆ ರುಬ್ಬಿ, ನಂತರ ಒಗ್ಗರಣೆ
ಹಾಕಿದರೆ ಇಡ್ಲಿ, ದೋಸೆ ಜೊತೆ ಸವಿಯಲು ಸೂಪರ್ ಬೆಳ್ಳುಳ್ಳಿ ಕಾಯಿ ಚಟ್ನಿ
ರೆಸಿಪಿ
ಸಲಹೆ: ಇಟ್ಲಿಗೆ ಚಟ್ನಿ ರುಬ್ಬುವಾಗ ಚಟ್ನಿ ಸ್ವಲ್ಪ -ಸ್ವಲ್ಪ ನೀರಾಗಿದ್ದರೆ
ಚೆನ್ನ
ದೋಸೆಗಾದರೆ ಗಟ್ಟಿ ಚಟ್ನಿ ರುಚಿಕರವಾಗಿರುತ್ತದೆ.



Click it and Unblock the Notifications
